ಮಾವಿನ ಹಣ್ಣು ಯಾರಿಗೆ ಇಷ್ಟವಿಲ್ಲ ಹೇಳಿ. ಮಕ್ಕಳಿಂದ ಮುದುಕರವರೆಗೆ ಎಲ್ಲರೂ ಇದನ್ನು ತಿನ್ನಲು ಇಷ್ಟಪಡ್ತಾರೆ. ಆದ್ರೆ ವರ್ಷದಲ್ಲಿ ಕೆಲವೇ ದಿನ ಮಾತ್ರ ಸಿಗುವು ಈ ಮಾವಿನ ಹಣ್ಣಿನ ರುಚಿಯನ್ನು ವರ್ಷವಿಡಿ ಸವಿಬೇಕು ಎನ್ನುವವರು ಈ ಟಿಪ್ಸ್ ಫಾಲೋ ಮಾಡಿ.
ಮಳೆಗಾಲ (Rainy Season ) ಶುರುವಾಗ್ತಿದೆ. ಮಾವಿನ (Mango) ಹಣ್ಣಿನ ಪ್ರಿಯರಿಗೆ ಮಾವಿನ ರುಚಿ ಸವಿಯೋಕೆ ಇನ್ನು ಕೆಲವೇ ದಿನ ಅವಕಾಶವಿದೆ. ವಿಪರೀತ ಮಳೆಯಾದ್ರೆ ಮಾವಿನ ಹಣ್ಣು ಕೊಳೆತು ಹೋಗುವ ಸಾಧ್ಯತೆಯಿರುತ್ತದೆ. ಹಾಗೆ ಮತ್ತೆ ತಾಜಾ ಮಾವಿನ ಹಣ್ಣು ತಿನ್ಬೇಕೆಂದ್ರೆ ಒಂದು ವರ್ಷ ಕಾಯ್ಬೇಕು. ಈಗ್ಲೇ ಒಂದಿಷ್ಟು ಹಣ್ಣು ಖರೀದಿ ಮಾಡಿ, ಒಂದಷ್ಟು ದಿನ ಸಂಗ್ರಹಿಸಿ, ಆರಾಮವಾಗಿ ರುಚಿ ಸವಿಯಲು ಪ್ಲಾನ್ ಮಾಡಿದೋರಿರ್ತಾರೆ. ಆದ್ರೆ ಮಾವಿನ ಹಣ್ಣನ್ನು ಹೊರಗೆ ಬಹಳ ದಿನ ಇಡೋದು ಕಷ್ಟದ ಕೆಲಸ. ಹಣ್ಣು ಬೇಗ ಕೊಳೆತು ಹೋಗುತ್ತದೆ. ಮಾರುಕಟ್ಟೆಯಿಂದ ತಂದ ಮಾವಿನ ಹಣ್ಣನ್ನು ಹೆಚ್ಚೆಂದ್ರೆ ನಾಲ್ಕು ದಿನ ಇಡಬಹುದು. ನಂತ್ರ ಹುಳು ಶುರುವಾಗಿರುತ್ತದೆ. ನೀವೂ ಮಾವಿನ ಪ್ರೇಮಿಗಳಾಗಿದ್ದು, ಮಾವಿನ ಹಣ್ಣನ್ನು ಹೇಗೆ ಕೆಡದಂತೆ ಸ್ವಲ್ಪ ದಿನ ಇಡೋದು ಎನ್ನುವ ಚಿಂತೆಯಲ್ಲಿದ್ದರೆ ನಿಮಗೊಂದು ಕಿವಿಮಾತಿದೆ. ನಾವಿಂದು ಮಾವಿನ ಹಣ್ಣು ಕೆಡದಂತೆ ಹೇಗೆ ಇಡಬಹುದು ಎಂಬ ಟಿಪ್ಸ್ ಹೇಳ್ತೇವೆ. ಅದನ್ನು ಫಾಲೋ ಮಾಡಿ, ನೀವೂ ಹಣ್ಣಿನ ರುಚಿ ಸವಿಯಿರಿ.
ಮಾವಿನ ಹಣ್ಣಿನ ರಕ್ಷಣೆ ಹೀಗಿರಲಿ :
ಮಾವಿನ ಕಾಯಿಯನ್ನು ಇಲ್ಲಿಡಿ : ಅನೇಕರು ಮಾವಿನ ಕಾಯಿಯನ್ನೇ ಮನೆಗೆ ತಂದು ಅದನ್ನು ಮನೆಯಲ್ಲಿ ನೈಸರ್ಗಿಕವಾಗಿ ಹಣ್ಣಾಗಲು ಬಿಡ್ತಾರೆ. ಕೆಲ ಮಂಡಿಗಳಲ್ಲಿ ಕ್ವಿಂಟಲ್ ಗಟ್ಟಲೆ ಮಾವಿನ ಕಾಯಿ ಸಿಗುತ್ತದೆ. ದೊಡ್ಡ ಪ್ರಮಾಣದಲ್ಲಿ ಕಾಯಿ ತಂದ ನಂತ್ರ ಅದನ್ನು ಹಣ್ಣಾಗಲು ಬಿಟ್ಟರೆ ಎಲ್ಲವೂ ಒಂದೇ ಬಾರಿ ಹಣ್ಣಾಗುತ್ತದೆ. ಆಗ ಅದನ್ನು ತಿಂದು ಪೂರೈಸಲು ಸಾಧ್ಯವಿಲ್ಲ. ಹಾಗೆಯೇ ಅದ್ರ ವಾಸನೆ ಕೂಡ ನಿಧಾನವಾಗಿ ಹೋಗಲು ಶುರುವಾಗುತ್ತದೆ. ಮಾವಿನ ಹಣ್ಣಿನ ವಾಸನೆ ಹೋಗ್ಬಾರದು ಎನ್ನುವವರು ಮಾವಿನ ಕಾಯಿಯನ್ನು ಕತ್ತಲೆಯ ಜಾಗದಲ್ಲಿ ಇಡಿ. ಇದ್ರಿಂದ ಹಣ್ಣಿನ ಫ್ಲೇವರ್ ಹೋಗೋದಿಲ್ಲ.
ರಾಷ್ಟ್ರೀಯ ಆಹಾರ ಗುಣಮಟ್ಟ ಸೂಚ್ಯಂಕ; ಅಗ್ರಸ್ಥಾನಕ್ಕೇರಿದ ತಮಿಳುನಾಡು, ಆಂಧ್ರಕ್ಕೆ ಕೊನೆಯ ಸ್ಥಾನ
ಈ ಹಣ್ಣಿನ ಪಕ್ಕದಲ್ಲಿಡಿ : ನಿಮಗೆ ಬೇಗ ಬೇಗ ಮಾವಿನ ಕಾಯಿ ಹಣ್ಣಾಗ್ಬೇಕು ಅಂತಿದ್ರೆ ನೀವು ಸೇಬು ಹಣ್ಣು ಅಥವಾ ಬಾಳೆ ಹಣ್ಣಿನ ಪಕ್ಕದಲ್ಲಿ ಮಾವಿನ ಕಾಯಿಯನ್ನು ಇಡಿ. ಆಗ ಮಾವಿನ ಕಾಯಿ ಬೇಗ ಬಲಿಯುತ್ತದೆ. ಬೇಗ ನೀವು ಹಣ್ಣನ್ನು ತಿನ್ನಬಹುದು.
ತಣ್ಣನೆಯ ಜಾಗ : ಬಲಿತ ಹಣ್ಣು ಬೇಗ ಹಾಳಾಗಬಾರದು ಎನ್ನುವವರು ಹಣ್ಣನ್ನು ತಣ್ಣನೆಯ ವಾತಾವರಣದಲ್ಲಿ ಇಡಬೇಕು. ಮನೆಯಲ್ಲಿ ಫ್ರಿಜ್ ಇದ್ರೆ ಹಣ್ಣನ್ನು ಫ್ರಿಜ್ ನಲ್ಲಿ ಸಂಗ್ರಹಿಸುವುದು ಒಳ್ಳೆಯ ಮಾರ್ಗ.
ಕತ್ತರಿಸಿ ಹಣ್ಣನ್ನು ಇಡಿ : ಹಣ್ಣನ್ನು ಹಾಗೆಯೇ ಫ್ರಿಜ್ ನಲ್ಲಿ ಇಡೋದು ಕಷ್ಟ ಎನ್ನುವವರು ಮೊದಲು ಹಣ್ಣಿನ ಸಿಪ್ಪೆಯನ್ನು ತೆಗೆಯಬೇಕು. ನಂತ್ರ ಅದನ್ನು ಕತ್ತರಿಸಬೇಕು. ಈ ಸಣ್ಣ ಹೋಳುಗಳನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ, ಅದನ್ನು ಫ್ರಿಜ್ ನಲ್ಲಿ ಇಡಬೇಕು. ನೀವು ಸೀಲ್ ಆಗಿರುವ ಜಿಪ್ ಲಾಕ್ ನಲ್ಲಿ ಕೂಡ ಹಣ್ಣನ್ನು ಕತ್ತರಿಸಿ ಸಂಗ್ರಹಿಸಿಡಬಹುದು. ಇದಕ್ಕೆ ಫ್ರಿಜ್ ಅವಶ್ಯಕತೆಯಿರುತ್ತದೆ.
ಬೇಸಿಗೆಯಲ್ಲಿ ಆರೋಗ್ಯ ಚೆನ್ನಾಗಿರಬೇಕಾ? ನೇರಳೆ ತಿನ್ನೋದ ಮರೀಬೇಡಿ
ಫ್ರಿಜ್ ತಾಪಮಾನ : ಮಾವಿನ ಹಣ್ಣು ತುಂಬಾ ದಿನ ಸರಿಯಾಗಿ ಇರಬೇಕೆಂದ್ರೆ ಮೇಲೆ ಹೇಳಿದಂತೆಯೇ ಅದನ್ನು ಕತ್ತರಿಸಿ ಸಂಗ್ರಹಿಸುವುದು ಮುಖ್ಯ. ಅದ್ರ ಜೊತೆಯಲ್ಲಿ ನೀವು ಫ್ರಿಜ್ ತಾಪಮಾನವನ್ನು ಸೆಟ್ ಮಾಡ್ಬೇಕು. ಫ್ರಿಜ್ ನ ಫ್ರೀಜರ್ ತಾಪಮಾನ 18 ಡಿಗ್ರಿ ಇರುವಂತೆ ನೋಡಿಕೊಳ್ಳಿ. ಈ ತಾಪಮಾನದಲ್ಲಿ ಹಣ್ಣು ಅನೇಕ ದಿನಗಳ ಕಾಲ ತಾಜಾ ಇರುತ್ತದೆ.
ವರ್ಷಪೂರ್ತಿ ಮಾವಿನ ಹಣ್ಣು ಸೇವಿಸಿ : ವರ್ಷಪೂರ್ತಿ ಮಾವಿನ ಹಣ್ಣಿನ ಜ್ಯೂಸ್ ಬೇಕು ಎನ್ನುವವರು, ಮೊದಲು ಮಾವಿನ ಹಣ್ಣಿನ ಸಿಪ್ಪೆ ತೆಗೆಯಬೇಕು. ನಂತ್ರ ಅದನ್ನು ಕತ್ತರಿಸಬೇಕು. ಕತ್ತರಿಸಿದ ಮಾವಿನ ಹಣ್ಣನ್ನು ಮಿಕ್ಸಿಗೆ ಹಾಕಿ ಜ್ಯೂಸ್ ಮಾಡಿ. ಅದಕ್ಕೆ ನೀರು ಅಥವಾ ಹಾಲನ್ನು ಹಾಕ್ಬೇಡಿ. ನಂತ್ರ ಈ ರಸವನ್ನು ಗ್ಲಾಸ್ ಬಾಟಲಿಯಲ್ಲಿ ಹಾಕಿ ಫ್ರಿಜ್ ನ ಫ್ರೀಜರ್ ನಲ್ಲಿಡಿ. ನಿಮಗೆ ಅಗತ್ಯವೆನಿಸಿದಾಗ ಅದನ್ನು ತೆಗೆದು, ಅದಕ್ಕೆ ಸಕ್ಕರೆ ಮಿಕ್ಸ್ ಮಾಡಿ, ಜ್ಯೂಸ್ ಮಾಡಿ ಸೇವನೆ ಮಾಡಿ.