Love Story: ಮೂರನೇಯನೊಂದಿಗೆ ಪತ್ನಿ ಪರಾರಿ, ದೂರು ಸಲ್ಲಿಸಿದ ಗಂಡಂದಿರು!

Published : Jun 10, 2022, 01:07 PM IST
Love Story: ಮೂರನೇಯನೊಂದಿಗೆ ಪತ್ನಿ ಪರಾರಿ, ದೂರು ಸಲ್ಲಿಸಿದ ಗಂಡಂದಿರು!

ಸಾರಾಂಶ

ಈಕೆಗೆ ಮದುವೆ ಆಟದಂತಿದೆ. ನಾವೆಲ್ಲ ಬಟ್ಟೆ ಬದಲಿಸಿದಂತೆ ಈಕೆ ಗಂಡಂದಿರನ್ನು ಬದಲಿಸ್ತಾಳೆ. ಒಂದಲ್ಲ, ಎರಡಲ್ಲ, ಮೂರನೇಯವನ ಜೊತೆ ಈಗ ಮದುವೆಯಾಗಿದ್ದಾಳೆ. ಹಳೆ ಗಂಡಂದಿರುವ ಪೊಲೀಸ್ ಠಾಣೆಗೆ ಬಂದಿದ್ದಾರೆ.   

ಜಗತ್ತಿ (World) ನಲ್ಲಿ ಚಿತ್ರ – ವಿಚಿತ್ರ ಜನರಿದ್ದಾರೆ. ಜೀವನದಲ್ಲಿ ಏನ್ಮಾಡ್ಬೇಕು ಎಂಬ ಜ್ಞಾನ (Knowledge) ಅವರಿಗಿರೋರಿಲ್ಲ. ಎಲ್ಲರ ಬಾಳಲ್ಲಿ ಆಟವಾಡ್ತಾ, ಪ್ರೀತಿ (LOVE) ನಾಟಕವಾಡ್ತಾ ಕಾಲ ಕಳೆಯುತ್ತಾರೆ. ಅವರ ಪ್ರೀತಿ ಆಟಗಳು ಪೊಲೀಸರ (Police) ಸಮಯ ಹಾಳು ಮಾಡುತ್ವೆ. ಅನೇಕ ಬಾರಿ ಪೊಲೀಸರಿಗೆ ಏನು ಮಾಡ್ಬೇಕೆಂಬುದು ತಿಳಿಯೋದಿಲ್ಲ. ಪ್ರೀತಿ ಗಲಾಟೆಯಲ್ಲಿ ಪೊಲೀಸರು ಇಕ್ಕಟ್ಟಿಗೆ ಸಿಲುಕ್ತಾರೆ. ಮನುಷ್ಯನಿಗೆ ಯಾವಾಗ, ಯಾರ ಮೇಲೆ ಪ್ರೀತಿ ಹುಟ್ಟುತ್ತೆ ಅನ್ನೋದನ್ನು ಹೇಳಲು ಸಾಧ್ಯವೇ ಇಲ್ಲ. ಒಬ್ಬರಾದ್ಮೇಲೆ ಒಬ್ಬರಂತೆ ಪ್ರೀತಿಸಿ ಇಬ್ಬರನ್ನು ಮದುವೆ (Marriage) ಯಾಗ್ಬಹುದು. ಆದ್ರೆ ಈ ಸಂಖ್ಯೆ ಮೂರು – ನಾಲ್ಕು ಆದ್ರೆ ಅದಕ್ಕೆ ಏನು ಹೆಸರಿಡೋದು ಗೊತ್ತಿಲ್ಲ. ಪ್ರೀತಿ ಹೆಸರಿನಲ್ಲಿ ಮಹಿಳೆಯೊಬ್ಬಳು ಮಾಡಿದ ಕೆಲಸ (Work) ಈಗ ಇಬ್ಬರು ಪುರುಷರು ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಮಾಡಿದೆ. ಪತ್ನಿ (Wife)  ಇನ್ನೊಬ್ಬನ ಜೊತೆ ಓಡಿ ಹೋಗಿದ್ದಾಳೆ ಎಂದು ದೂರು ನೀಡೋದು ಮಾತ್ರವಲ್ಲ, ಪತ್ನಿ ತನಗೇ ಬೇಕು ಎಂಬ ಹಠ ಮಾಡ್ತಿದ್ದಾರೆ ಇಬ್ಬರು ಗಂಡಂದಿರು. 

ಘಟನೆ ನಡೆದಿರೋದು ಮಹಾರಾಷ್ಟ್ರ (Maharashtra)ದ ನಾಗ್ಪುರ (Nagpur) ದಲ್ಲಿ. ನಾಗ್ಪುರ ಪೊಲೀಸರಿಗೆ ಎರಡು ದೂರು (Complaint) ಬಂದಿತ್ತು. ಪತ್ನಿ ಕಾಣೆಯಾಗಿದ್ದಾಳೆ ಹುಡುಕಿಕೊಡಿ ಎಂದು ಅದ್ರಲ್ಲಿ ಬರೆಯಲಾಗಿದೆ. ಎರಡೂ ದೂರನ್ನು ಪರಿಶೀಲಿಸಿ ನೋಡಿದಾಗ ಪೊಲೀಸರು ದಂಗಾಗಿದ್ದಾರೆ. ಯಾಕೆಂದ್ರೆ ಎರಡೂ ದೂರಿನಲ್ಲಿ ಒಂದೇ ಮಹಿಳೆ (Woman) ಹೆಸರಿತ್ತು. ಹಾಗೆಯೇ ಎರಡೂ ಒಂದಕ್ಕೊಂದು ಹೋಲುತ್ತಿತ್ತು. 

ಇಬ್ಬರು ಸಾಲಲಿಲ್ಲ, ಮೂರನೇಯವನ ಜೊತೆ ಪರಾರಿ : ಪೊಲೀಸರಿಗೆ ಬಂದ ಪ್ರತ್ಯೇಕವಾದ ಎರಡು ದೂರಿನಲ್ಲಿ ಇಬ್ಬರು ಪುರುಷರು ತಮ್ಮ ಪತ್ನಿ ಹುಡುಕಿ ಕೊಡುವಂತೆ ವಿನಂತಿ ಮಾಡಿದ್ದರು. ದೂರು ದಾಖಲಿಸಿಕೊಂಡು ವಿಚಾರಣೆ ಶುರು ಮಾಡಿದ ಪೊಲೀಸರಿಗೆ ಒಂದೊಂದೇ ಮಾಹಿತಿ ಲಭ್ಯವಾಗಿದೆ.  ಮಹಿಳೆ ಮೊದಲು ಪ್ರೀತಿಸಿ ಮದುವೆಯಾಗಿದ್ದಾಳೆ. ಮೊದಲ ಗಂಡನಿಗೆ ಇಬ್ಬರು ಮಕ್ಕಳು. ಮೊದಲ ಮದುವೆಯಾಗಿ ನಾಲ್ಕು ವರ್ಷಗಳ ಬಳಿಕ ಮಹಿಳೆ ಮತ್ತೊಬ್ಬ ಪುರುಷನೊಂದಿಗೆ ದೇವಸ್ಥಾನದಲ್ಲಿ ವಿವಾಹವಾಗಿದ್ದಾಳೆ. ಇಷ್ಟಕ್ಕೆ ಮುಗಿದಿಲ್ಲ, ಆಕೆ ಈಗ ಮೂರನೇಯವನ ಜೊತೆ ಓಡಿ ಹೋಗಿದ್ದಾಳೆ. ಮೊದಲ ಪತಿ ಮೆಸ್ತ್ರಿಯಾಗಿದ್ದರೆ, ಎರಡನೇ ಪತಿ ಆಪ್ಟಿಕ್ ಫೈಬರ್ ಅಂಗಡಿ ಇಟ್ಟುಕೊಂಡಿದ್ದಾನೆ ಎನ್ನುತ್ತಾರೆ ಪೊಲೀಸರು. 

ಕಾರಿನಲ್ಲಿ ರೊಮ್ಯಾನ್ಸ್‌ ಮಾಡಿದ ಯುವತಿಗೆ ಸಿಕ್ತು ಬರೋಬ್ಬರಿ 40 ಕೋಟಿ!, ಹೇಗೆ? ಇಲ್ಲಿದೆ ವಿವರ

ಪತ್ನಿ ಓಡಿ ಹೋದ ಮೂರನೇ ವ್ಯಕ್ತಿ ಏನು ಮಾಡ್ತಿದ್ದಾನೆ ಎಂಬುದು ಇನ್ನೂ ತಿಳಿದಿಲ್ಲ. ಫೇಸ್ಬುಕ್ ಮೂಲಕ ಮಹಿಳೆಗೆ ಆತ ಪರಿಚಯವಾಗಿದ್ದನಂತೆ.  ಆತನನ್ನು ಪ್ರೀತಿಸಿ, ಈಗ ಆತನ ಜೊತೆ ಓಡಿ ಹೋಗಿದ್ದಾಳೆ. ಈ ಇಬ್ಬರು ಗಂಡಂದಿರಿಗೆ ಕೈ ಕೊಟ್ಟಿದ್ದಾಳೆ. ದೂರು ನೀಡಿರುವ ಇಬ್ಬರು ವ್ಯಕ್ತಿಗಳ ಬಳಿಯೂ ಕಾನೂನುಬದ್ಧ ಪತಿ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಆದರೆ ಮೊದಲ ಪ್ರಕರಣದಲ್ಲಿ ವಿಚ್ಛೇದನವಾಗಿಲ್ಲದ ಕಾರಣ ಇನ್ನೊಬ್ಬನ ಜೊತೆ ನಡೆದ ಮದುವೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಪತ್ನಿ ಮೂರನೇಯವನ ಜೊತೆ ಓಡಿ ಹೋದ್ರೂ ಈ ಇಬ್ಬರು ಪುರುಷರು ಪತ್ನಿಯನ್ನು ಬಿಡಲು ಸಿದ್ಧರಿಲ್ಲ. ಎರಡನೇಯವನು ಪತ್ನಿಯನ್ನು ತಾನಿಟ್ಟುಕೊಳ್ತೇನೆ ಎನ್ನುತ್ತಿದ್ದಾನೆ. ಆದ್ರೆ ಇದಕ್ಕೆ ಮೊದಲನೇಯ ಪತಿ ಸಿದ್ಧರಿಲ್ಲ. ಈ ಗಂಡಂದಿರ ಜಗಳ ಪೊಲೀಸರಿಗೆ ತಲೆನೋವಾಗಿದೆ.

ದೇಶದ ಮೊದಲ ಸೋಲೋಗಮಿ: ಎರಡು ದಿನ ಮೊದಲೇ ಸ್ವಯಂ ವಿವಾಹವಾದ ಕ್ಷಮಾ ಬಿಂದು

ಮತ್ತೊಂದು ಶಾಕ್ ನೀಡಿದ ಪತ್ನಿ : ಪೊಲೀಸರು ಇದೀಗ ಮೂರನೇ ವ್ಯಕ್ತಿಯ ಬಗ್ಗೆ ಮಾಹಿತಿಗಾಗಿ ಹುಡುಕುತ್ತಿದ್ದಾರೆ. ಆದರೆ  ಈ ನಡುವೆ ಮತ್ತೊಂದು ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.  ಪೊಲೀಸರು ಮಹಿಳೆಗೆ ಕರೆ ಮಾಡಿದಾಗ ಮೂರನೇ ಪತಿಯೊಂದಿಗೆ ಸುಖವಾಗಿದ್ದೇನೆ, ಜೀವನ ಚೆನ್ನಾಗಿದೆ ಎಂದು ಹೇಳಿದ್ದಾಳಂತೆ. ಪೊಲೀಸರಿಗೆ ಈಗ ಗೊಂದಲ ಶುರುವಾಗಿದೆ. ಮಹಿಳೆಯನ್ನು ಯಾರಿಗೆ ನೀಡ್ಬೇಕು ಎಂಬುದು ಅವರಿಗೆ ತಿಳಿಯುತ್ತಿಲ್ಲ. 

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!