Ramanagaraದಲ್ಲಿ ಬಾಣಂತಿ-ಋತುಮತಿಯರಿಗೆ 30ದಿನ ಊರ ಹೊರಗೆ ವಾಸ್ತವ್ಯ!

By Suvarna News  |  First Published May 29, 2022, 5:11 PM IST
  • ದೇವರದೊಡ್ಡಿ ಗ್ರಾಮದಲ್ಲಿ ಜೀವಂತವಾಗಿದೆ ಮೌಢ್ಯ ಆಚರಣೆ
  • ಬಾಣಂತಿ, ಋತುಮತಿಯರಿಗೆ, ಮೂವತ್ತು ದಿನ ಊರ ಹೊರಗೆ ವಾಸ್ತವ್ಯ 
  • ಕೃಷ್ಣಗೊಲ್ಲ ಸಮುದಾಯಕ್ಕೆ ಸೇರಿರುವ ಜನಾಂಗದವರಿಂದ ಆಚರಣೆ

ವರದಿ: ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್ 

ರಾಮನಗರ (ಮೇ.29): ಇಷ್ಟೆಲ್ಲಾ ಆಧುನಿಕತೆ, ಟೆಕ್ನಾಲಜಿ ಮುಂದುವರಿದ ಕಾಲದಲ್ಲಿ ನಾವಿದ್ದೇವೆ. ಆದ್ರೆ ಈಗೀನ ಸಮಾಜದಲ್ಲಿ ಇನ್ನೂ ಕೂಡ ಮೌಡ್ಯತೆ ಮುಂದುವರಿದಿದೆ. ಬಾಣಂತಿ ಆದ್ರೆ ಊರಿನ ಹೊರಗಡೆ ಗುಡಿಸಲಿನಲ್ಲಿ ಇರಬೇಕು. ಇನ್ನೂ ಈ ಎಲ್ಲ ದೃಶ್ಯಗಳು ನಡೆಯುತ್ತಿರೋದು ನೋಡಿದ್ರೆ ವಿಷಾಧನೀಯ.

Tap to resize

Latest Videos

ರಾಮನಗರ (Ramanagara) ಜಿಲ್ಲೆಯ ದೇವರದೊಡ್ಡಿ (Devaradoddi) ಗ್ರಾಮವೇ ಇನ್ನು ಜೀವಂತವಾಗಿರುವ ಮೌಢ್ಯತೆಗೆ (Silliness) ಸಾಕ್ಷಿಯಾಗಿದೆ. ಈ ಗ್ರಾಮದಲ್ಲಿ ಕೃಷ್ಣಗೊಲ್ಲ ಸಮುದಾಯಕ್ಕೆ ಸೇರಿರುವ ಜನಾಂಗದವರೆ ಹೆಚ್ಚಾಗಿರುವ ಈ ಗ್ರಾಮ150ಕ್ಕೂ ಹೆಚ್ಚು ಮನೆಗಳಿವೆ. ಕೃಷ್ಣ ಗೊಲ್ಲ ಸಮುದಾಯದಲ್ಲಿ ಇಂದಿಗೂ ಋತುಮತಿಯಾದ (Menstruation) ಯುವತಿ ಹಾಗೂ ಬಾಣಂತಿ ( Bananti )ಯರನ್ನು ಅತೀ ಮೈಲಿಗೆ ಎಂದು ಪರಿಗಣಿಸಲಾಗುತ್ತದೆ. ಅವರಿಗೆ ಗ್ರಾಮದೊಳಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಮಳೆಗಾಲದಲ್ಲಿ ಹಾನಿ ಮಾಡೋ ರಾಜಕಾಲುವೆಗಳ ಪಟ್ಟಿ ಮಾಡಿದ BBMP

ಗ್ರಾಮದ ಹೊರ ಭಾಗದಲ್ಲಿ ಒಂದು ಜೋಪಡಿಯಲ್ಲಿ ಮಳೆ, ಬಿಸಿಲು, ಗಾಳಿ, ಯಾವುದೇ ರಕ್ಷಣೆ ಇಲ್ಲದೇ ಮಹಿಳೆಯರು ಗುಡಿಸಿಲಿನಲ್ಲಿ ತಂಗಬೇಕಾಗಿದೆ. ಮಗು ಜನಿಸಿದ 30 ದಿನಗಳವರೆಗೆ ಇಲ್ಲೇ ತಂಗಬೇಕು. ಶೌಚ, ಸ್ನಾನ, ಊಟ, ನಿದ್ರೆ ಎಲ್ಲವೂ ಈ ಜೋಪಡಿಯಲ್ಲೇ ನಡೆಯುತ್ತದೆ.

 ಇನ್ನು ಈ ವಿಚಾರ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದರು. ಆದರೆ ಅಧಿಕಾರಿಗಳ ಮಾತಿಗೆ ಮೊದಲು ಯಾವುದೇ ಮನ್ನಣೆ ನೀಡಲಿಲ್ಲ ನಂತರ 30 ದಿನ ಗುಡಿಸಿಲಿನಲ್ಲಿ ಕಲಿಯಬೇಕಾದ ಬಾಣಂತಿಯನ್ನು ಇಂದು ಅವರ ಸಂಪ್ರದಾಯದ ಪ್ರಕಾರ ಸೂತಕ ಹಾಗೂ ಮಗುವಿಗೆ ಹೆಸರಿಟ್ಟು ಇಂದು ಮನೆಗೆ ಕರೆತರಲಾಯಿತು.

Udupi; ಕಡಲಿನ ಒಡಲಿಂದ ಬರುತ್ತಿದೆ ಜಿಡ್ಡು,ಮತ್ಸ್ಯ ಸಂತತಿ ನಾಶದ ಭೀತಿ

ಸ್ಥಳಕ್ಕೆ ರಾಮನಗರ ತಹಸೀಲ್ದಾರ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (women and child welfare department) ಅಧಿಕಾರಿಗಳು ಸಿ ವಿ ರಾಮನ್ ನೇತೃತ್ವದಲ್ಲಿ 20 ದಿನಕ್ಕೆ ತವರು ಮನೆ ಸೇರಿದ ಬಾಣಂತಿ ಸಂತಸ ಹಾಗೂ ಭಯ ವ್ಯಕ್ತಪಡಿಸಿದರು. ನನಗೆ ಹಾಗೂ ಮಗುವಿಗೆ ದೇವರು ಯಾವುದೇ ರೀತಿಯ ತೊಂದರೆ ನೀಡದಿದ್ದರೆ ಮುಂದಿನ ದಿನಗಳಲ್ಲಿ ಮಹಿಳೆಯರು (Womens) ಈ ರೀತಿಯ ಆಚರಣೆಯನ್ನು ನಿಲ್ಲಿಸಲು ಸಾಧ್ಯವಾಗುತ್ತದೆ.

Udupiಯಲ್ಲಿ ಇಮ್ಮಡಿ ದೇವರಾಯನ ಚಗ್ರಿಬೆಟ್ಟು ಶಾಸನ ಪತ್ತೆ

ಸರಕಾರ ಹಾಗೂ ಸಮಾಜಮುಖಿ ಸಂಘಟನೆಗಳು ಪ್ರಯತ್ನಪಟ್ಟರೂ ಮೌಢ್ಯಾಚರಣೆಯಿಂದ ಸಮುದಾಯವನ್ನು ಹೊರ ತರಲು ಇನ್ನು ಸಾಧ್ಯವಾಗದೇ ಇರುವುದು ವಿಪರ್ಯಾಸ.

click me!