
ಈಗೀಗಂತೂ ಅತ್ತೆ ಮನೆಯಿಲ್ಲದ ಬೇಕು ಅಂತಾರೆ ಮದುವೆಯಾಗೋ ಹುಡುಗೀಯರು. ಅದೇನೋ ಅತ್ತೆ-ಸೊಸೆ ಅಂದ್ರೆ ಜಗಳ ಅಂತಾಗಿಬಿಟ್ಟಿದೆ. ಹಾಗಂಥ ಭೂಮಿಯಲ್ಲಿ ತಾಯಿ-ಮಗಳಂತೆ ಇರೋ ಅತ್ತೆ-ಸೊಸೆಯರೇ ಇಲ್ವಾ? ಇದಾರೆ. ಆದರೆ, ಪ್ರಬುದ್ಧತೆ ಎನ್ನುವುದು ಎರಡೂ ಕಡೆಯಿಂದಲೂ ಬರಬೇಕು. ಎರಡು ಕೈ ಸೇರಿದರೆ ಚಪ್ಪಾಳೆ ಎನ್ನುವಂತೆ ಅತ್ತೆ-ಸೊಸೆ ಅನೂನ್ಯವಾಗಿರಬೇಕೆಂದು ಅಂದ್ರೆ ಇಬ್ಬರೂ ಕೆಲವು ವಿಷಯಗಳ ಕಡೆ ಗಮನ ಕೊಡಬೇಕು. ಇನ್ಫೋಸಿಸ್ ಸಂಸ್ಥಾಪಕಿ ಸುಧಾ ಮೂರ್ತಿ ಈ ಸೂಕ್ಷ್ಮ ಸಂಬಂಧವನ್ನು ಕಾಪಾಡೋ ಟಿಪ್ಸ್ ಕೊಟ್ಟಿದ್ದಾರೆ ನೋಡಿ.
- ಕೆಟ್ಟೆ ಸೊಸೆ ಅಂತೇನೂ ಇರೋಲ್ಲ.
ಆದ್ಯಾಕೋ ಗೊತ್ತಿಲ್ಲ ಎಲ್ಲ ಅತ್ತಯಂದಿರೆಗ ತಮ್ಮ ಮಗಳು ಮಾಡಿದರೆ ಸರಿ. ಆದರೆ, ಸೊಸೆ ಮಾಡಿದ್ದು ಮಾತ್ರ ಅಕ್ಷಮ್ಯ ಅಪರಾಧ. ಈ ತಾರತಮ್ಯದಿಂದಲೇ (Descrimination) ಅತ್ತೆ-ಸೊಸೆ ಸಂಬಂಧ ಕ್ಲಿಷ್ಟವಾಗೋದು. ಅತ್ತೆಗೆ ಬೆಲೆ ಕೊಡಬೇಕು, ಸೇವೆ ಮಾಡಬೇಕು ಎನ್ನುವ ನಿರೀಕ್ಷೆಗಳಿದ್ದರೆ, ಬಿಟ್ಟು ಬಿಡಿ. ಬದಲಾಗಿ ನಿಮ್ಮ ಮಗಳಂತೆ ಆಕೆಯೂ ಒಂದು ಹೆಣ್ಣು. ಅವಳಿಗೂ ಭಾವನೆಗಳಿರುತ್ತೆ ಎಂಬುವುದು ನೆನಪಿರಲಿ. ಪ್ರೀತಿಸಿ, ಗೌರವಿಸಿ. ಆಗ ಅವಳು ಅದೇ ರೀತಿ ನಿಮ್ಮನ್ನು ಟ್ರೀಟ್ ಮಾಡದೇ ಇದ್ದರೆ ಕೇಳಿ? ಸೊಸೆ ಮೇಲೆ ಅಧಿಕಾರ ಚಲಾಯಿಸೋ ಬದಲು, ಪ್ರೀತಿಯ ಮಳೆಗೈದರೆ, ಸೊಸೆ ಕೆಟ್ಟವಳಾಗುವುದೇ ಇಲ್ಲ.
ಮಕ್ಕಳ ಕೈಯಲ್ಲಿ ಮೊಬೈಲ್, ಸುಧಾಮೂರ್ತಿಯವರು ಪೋಷಕರಿಗೆ ಹೇಳುವ ಕಿವಿಮಾತೇನು ?
-ಜವಾಬ್ದಾರಿ (Responsibility) ಕೊಡಿ
ಅತ್ತೆಯಂದಿರಿಗೆ ಸದಾ ತಮ್ಮ ಕಾಲ ಮುಗಿಯುವ ಆತಂಕ ಕಾಡುತ್ತಲೇ ಇರುತ್ತದೆ. ಈ ಅಭದ್ರತಾ ಭಾವನೆಯಿಂದಾನೇ ಸೊಸೆ ಜೊತೆ ಜಗಳ ತೆಗೆಯುತ್ತಾರೆ. ಮಗ ಸೊಸೆಗೆ ಅಧಿಕಾರ ಬಿಟ್ಟು ಕೊಡಲು ಹೆದರುತ್ತಾರೆ. ಯಾವುದೇ ಜವಾಬ್ದಾರಿಯನ್ನು ಬಿಟ್ಟು ಕೊಡೋಲ್ಲ. ಮೊದ ಮೊದಲ ತಮ್ಮ ತಲೆ ಮೇಲೆ ಹೊತ್ತು ತಿರುಗುತ್ತಾರೆ. ಆಮೇಲೆ ಸೊಸೆ ಏನೂ ಜವಾಬ್ದಾರಿ ತೆಗೆದುಕೊಳ್ಳೋಲ್ಲ ಅಂತ ಬ್ಲೇಮ್ ಮಾಡುತ್ತಾರೆ. ಸಾಕು ಜೀವನದ ಹಲವು ವರ್ಷಗಳ ಕಾಲ ಮನೆಗಾಗಿ ಜೀವ ತೇದಿದ್ದೀರಿ. ಇನ್ನು ಮಗ-ಸೊಸೆ ಕುಟುಂಬದ ಹೊಣೆ ಹೊತ್ತು ಕೊಳ್ಳಲಿ ಬಿಡಿ. ಅವರೂ ಜವಾಬ್ದಾರಿ ನಿಭಾಯಿಸೋದು ಕಲಿಯಲಿ. ಅವರಿಷ್ಟದ ಹಾಗೆ ಅವರು ಬದುಕು (Life) ಕಟ್ಟಿಕೊಂಡು ಬೆಳೆಯಲು ಅವಕಾಶ ಕೊಟ್ಟರೆ, ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ.
-ಅಡ್ಜೆಸ್ಟ್ ಮಾಡ್ಕೊಬೇಡಿ
ಜನರೇಷನ್ ಗ್ಯಾಪ್ ಹೆಚ್ಚಾದಂತೆ ಸಂಬಂಧಗಳು ವೀಕ್ ಆಗೋದು ಕಾಮನ್. ಯೋಚನಾಶೈಲಿ (Thinking Power), ಬದುಕುವ ಶೈಲಿಯೇ ವಿನ್ನವಾಗಿರೋದ್ರಿಂದ ಇಂಥ ಸಮಸ್ಯೆ ಕಾಣಿಸಿಕೊಳ್ಳುತ್ತೆ. ನಮ್ಮಂತೆ ಸೊಸೆ ಅಡ್ಜಸ್ಟ್ ಆಗಲಿ ಅನ್ನುವ ಬದಲು, ಕಾಲಕ್ಕೆ ತಕ್ಕಂತೆ ಅತ್ತೆಯೇ ಬದಲಾದರೆ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬಹುದು. ಹಳೆ ಕಟ್ಟು ಪಾಡುಗಳನ್ನು ಗಾಳಿಗೆ ತೂರಿ. ಅತ್ತೆಯಂತೆ ಸೊಸೆ ಮನೆಗೆ ಸೀಮಿತವಾಗದಿರಲಿ. ಮನೆಯಿಂದ ಹೊರ ಹೋಗಿ ಆರ್ಥಿಕವಾಗಿ (Economic Independence) ಸ್ವಾತಂತ್ರ್ಯವಾಗಲಿ. ಆ ಮೂಲಕ ಅತ್ತೆಗೆ ಏನೆಲ್ಲಾ ಸಪೋರ್ಟ್ ಮಾಡಲು ಸಾಧ್ಯವೋ ಅದನ್ನು ಮಾಡಬೇಕು.
Life Management: ಅತ್ತೆ-ಮಾವ ನಿಮ್ಮ ಬದುಕಿನಲ್ಲಿ ಹಸ್ತಕ್ಷೇಪ ಮಾಡ್ತಾರಾ?
- ನಿರೀಕ್ಷೆಯ (Expecations) ಭಾರ ಬೇಕಾ?
ನನ್ನ ಸೊಸೆ ಹಾಗಿರಬೇಕು, ಹೀಗಿರಬೇಕು ಅಂತ ಸಾವಿರ ಕನಸು ಕಾಣುತ್ತಾರೆ ಅತ್ತೆ. ಮಗನ ಭವಿಷ್ಯದ ಬಗ್ಗೆ ಕನಸು ಕಾಣೋದೇನೂ ತಪ್ಪಲ್ಲ ಬಿಡಿ. ಹಾಗಂಥ ನಿರೀಕ್ಷೆಗಳು ಮೂಟೆಯನ್ನು ಹೊತ್ತು ತಿರುಕೋದೇನೂ ಬೇಡ. ಮನೆಗೆ ಹೊಸದಾಗಿ ಬಂದ ಸೊಸೆಯಿಂದ ಬಹಳವಾಗಿ ಏನೂ ನಿರೀಕ್ಷಿಸಲು ಹೋಗಬೇಡಿ. ನಮ್ಮ ಲೈಫ್ (Life) ನಮಗೆ. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು. ಮಿತಿ ಮೀರಿ ನಿರೀಕ್ಷಿಸುವಕ್ಕೆ ಜೀವವನ್ನಲ್ಲಿ ಏನೂ ಅರೋಲ್ಲ. ಆಗ ನೋಡಿ ಜೀವನದಲ್ಲಿ ಖುಷಿ ತರುತ್ತೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.