
ಮಹಿಳೆ(Woman)ಯರ ಜನನಾಂಗವನ್ನು ಯೋನಿ(Vagina) ಎಂದೂ ಕರೆಯುತ್ತಾರೆ. ಯೋನಿಯು ಗರ್ಭಾಶಯ(Uterus)ವನ್ನು ಬಾಹ್ಯ ದೇಹಕ್ಕೆ ಸಂಪರ್ಕಿಸುತ್ತದೆ. ದೇಹದ ಉಳಿದ ಭಾಗಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಎಷ್ಟು ಮುಖ್ಯವೋ ಯೋನಿಯ ಸ್ವಚ್ಛತೆಯೂ (Clean) ಅಷ್ಟೇ ಮುಖ್ಯ. ಮಹಿಳೆಯರು ಜನನಾಂಗದ ಅನೇಕ ಸಮಸ್ಯೆ (Problem)ಗಳನ್ನು ಎದುರಿಸುತ್ತಾರೆ. ತುರಿಕೆ, ಹಠಾತ್ ಸ್ರಾವ, ಬಿಳಿ ಸ್ರಾವ, ದುರ್ವಾಸನೆ, ಜನನಾಂಗದ ನೋವು ಹೀಗೆ ಅನೇಕ ಸಮಸ್ಯೆ ಕಾಡುತ್ತದೆ. ಯೋನಿ ಸ್ವಚ್ಛವಾಗಿದ್ದರೆ ಇದ್ಯಾವ ಸಮಸ್ಯೆಯಿರುವುದಿಲ್ಲ. ಯೋನಿಯ ಚರ್ಮವು ನೈಸರ್ಗಿಕವಾಗಿ ಲ್ಯಾಕ್ಟಿಕ್ ಆಮ್ಲವನ್ನು ಉತ್ಪಾದಿಸುತ್ತದೆ. ಇದು ಯೋನಿಯನ್ನು ಆರೋಗ್ಯ (Health)ವಾಗಿಡುತ್ತದೆ.
ಯೋನಿಯ ಸೋಂಕಿನಿಂದಾಗಿ, ಮಹಿಳೆಯರು ಮಾತ್ರವಲ್ಲದೆ ಅವರ ಲೈಂಗಿಕ ಪಾಲುದಾರರೂ ಅಪಾಯಕ್ಕೆ ಒಳಗಾಗಬಹುದು. ಅನೇಕ ಮಹಿಳೆಯರಿಗೆ ಯೋನಿ ನೈರ್ಮಲ್ಯದ ಪ್ರಾಮುಖ್ಯತೆ ತಿಳಿದಿಲ್ಲ. ಯೋನಿಯನ್ನು ಸ್ವಚ್ಛಗೊಳಿಸಲು ಸೋಪ್ (Soap) ಅನ್ನು ಬಳಸುವುದು ಹಾನಿಕಾರಕವಾಗಿದೆ. ಯೋನಿಯ ಆರೋಗ್ಯಕ್ಕೆ ಸ್ವಚ್ಛತೆ ಹೇಗೆ ಮುಖ್ಯವೋ ಹಾಗೆಯೇ, ಆಹಾರಕ್ರಮ ಸರಿಯಾಗಿರಬೇಕಾದುದು ಮುಖ್ಯ.
Vaginal Swelling : ಮುಜುಗರ ತರಿಸುವ ಯೋನಿಯ ಊತ, ತುರಿಕೆಗೆ ಇವು ಕಾರಣ
ಬೆಳ್ಳುಳ್ಳಿ ಯೋನಿ ಸೋಂಕುಗಳನ್ನು ನಿವಾರಿಸುತ್ತದೆ
ಬೆಳ್ಳುಳ್ಳಿ (Garlic) ಸೇವನೆ ಯೋನಿಯ ಆರೋಗ್ಯಕ್ಕೆ ಉತ್ತಮವಾಗಿದೆ, ಯೀಸ್ಟ್ ಸೋಂಕುಗಳು, ಬ್ಯಾಕ್ಟೀರಿಯಲ್ ವಜಿನೋಸಿಸ್, ಮತ್ತು ಅಟ್ರೋಫಿಕ್ ಯೋನಿ ನಾಳದ ಉರಿಯೂತದಂತಹ ಸೋಂಕನ್ನು ತಡೆಯಲು ಉತ್ತಮ ಮಾರ್ಗವಾಗಿದೆ ಯೋನಿಯ ಪಿಹೆಚ್ ಮಟ್ಟವನ್ನು ಸಮತೋಲನದಲ್ಲಿ ಇಡುತ್ತದೆ. ಬೆಳ್ಳುಳ್ಳಿಯಲ್ಲಿರುವ ಆಲಿಸಿನ್ ಯಾವುದೇ ಸಂಭವನೀಯ ತುರಿಕೆ ಅಥವಾ ಕಿರಿಕಿರಿಯನ್ನು ನಿವಾರಿಸುತ್ತದೆ.
ಸೋಯಾ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ
ಆರೋಗ್ಯಕರ ಅಥವಾ ಅನಾರೋಗ್ಯಕರವೆಂದು ಪರಿಗಣಿಸಲಾದ ಆಹಾರಗಳ ವಿಷಯಕ್ಕೆ ಬಂದಾಗ, ಸೋಯಾದಲ್ಲಿ ಎರಡೂ ರೀತಿಯ ಗುಣಗಳಿವೆ. ಸೋಯಾ (Soya) ಒಂದು ಫೈಟೊಸ್ಟ್ರೊಜೆನ್ ರೀತಿಯ ಆಹಾರವಾಗಿದೆ ಎಂಬುದಕ್ಕೆ ಒಂದು ಕಾರಣ. ಇದರರ್ಥ ಇದು ಸಸ್ಯ ಆಧಾರಿತವಾಗಿದೆ ಮತ್ತು ಈಸ್ಟ್ರೊಜೆನ್ ತರಹದ ಪರಿಣಾಮಗಳನ್ನು ಉಂಟುಮಾಡಬಹುದು. ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಪ್ರಕಾರ, ಇದು ಮಹಿಳೆಯರ ಆರೋಗ್ಯಕ್ಕೆ ಬಂದಾಗ, ಸೋಯಾ ಸ್ತನ ಕ್ಯಾನ್ಸರ್‌ನಂತಹ ಹಾರ್ಮೋನ್ ಆಧಾರಿತ ಕ್ಯಾನ್ಸರ್‌ಗಳನ್ನು ತಡೆಯಲು ಸಹಾಯ ಮಾಡುತ್ತದೆ.
ದಾಲ್ಚಿನಿ, ಯೋನಿಯ ಆಮ್ಲವನ್ನು ಸಮತೋಲನಗೊಳಿಸುತ್ತದೆ
ಯೋನಿಯ ಆಮ್ಲವನ್ನು ಸಮತೋಲನಗೊಳಿಸಲು ದಾಲ್ಚಿನಿ (Cinnamon ಅದ್ಭುತವಾಗಿದೆ.ಏಕೆಂದರೆ ಇದು ಒಂದು ಕ್ಷಾರೀಯ ಮಸಾಲೆಯಾಗಿದ್ದು ಯಾವುದೇ ಹೆಚ್ಚುವರಿ ಆಮ್ಲತೆಯನ್ನು ತಟಸ್ಥ ಗೊಳಿಸಲು ಸಹಾಯ ಮಾಡುತ್ತದೆ. ಜೊತೆಗೆ ಇದು ಸೌಮ್ಯವಾದ ಪ್ರತಿಜೀವಕ ಬಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಯಿಸ್ಟ್ ಸೋಂಕನ್ನು ತಡೆಯುತ್ತದೆ.
ಯೋನಿ ಇನ್ಫೆಕ್ಷನ್ , ಕ್ಯಾನ್ಸರ್ ಸಮಸ್ಯೆ ತಡೆಯಲು ನೀವೇನು ಮಾಡಬೇಕು?
ಪುದೀನಾ ಯೋನಿಗೆ ಉತ್ತಮ ಸುವಾಸನೆ ನೀಡುತ್ತದೆ
ಪುದಿನಾ ಯೋನಿಯ ವಾಸನೆಯಲ್ಲಿ ಬದಲಾವಣೆಯನ್ನು ತರುತ್ತದೆ. ಆದ್ದರಿಂದ ಪುದಿನಾ (Pudina) ಚಹಾ ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಪುದೀನಾವನ್ನು ಸೇವಿಸಿದ ನಂತರ ನಿಮ್ಮ ಯೋನಿಯ ವಾಸನೆಯಲ್ಲಿನ ವ್ಯತ್ಯಾಸವನ್ನು ನೀವೇ ಗಮನಿಸಿ.ಪುದಿನವು ಅದು ಹೊಂದಿರುವ ಉತ್ತಮ ಸುವಾಸನೆಗೆ ಹೆಸರುವಾಸಿಯಾಗಿದೆ
ಮೊಸರು, ಯೋನಿಯ ಬ್ಯಾಕ್ಟೀರಿಯಾವನ್ನು ಸಮತೋಲನಗೊಳಿಸುತ್ತದೆ
ಹೆಚ್ಚಿನ ಡೈರಿ ಉತ್ಪನ್ನಗಳು ನಿಮ್ಮ ಯೋನಿಯ ವಾಸನೆಗೆ ಕಾರಣವೆಂದು ಹೇಳಲಾಗುತ್ತದೆ. ಆದರೆ ಮೊಸರು (Curd) ಇದಕ್ಕೆ ಹೊರತಾಗಿದೆ. ಮೊಸರಿನಲ್ಲಿ ಕಂಡುಬರುವ ಉತ್ತಮ ಬ್ಯಾಕ್ಟೀರಿಯಾಗಳು ಮತ್ತು ಪ್ರೋಬಯಾಟಿಕ್ ಗಳು ನಿಮ್ಮ ಯೋನಿಯ ಬ್ಯಾಕ್ಟೀರಿಯಾದ ಸಮತೋಲನವನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ. ಆದರೆ ಮೊಸರನ್ನು ಸೇವಿಸುವಾಗ ಅದಕ್ಕೆ ಸಕ್ಕರೆ ಸೇರಿಸುವುದನ್ನು ತಪ್ಪಿಸಿ. ಏಕೆಂದರೆ ಸಕ್ಕರೆಯು ನಿಮ್ಮ ಯೋನಿಯ ವಾಸನೆಯನ್ನು ಮತ್ತಷ್ಟು ಹದಗೆಡಿಸುತ್ತದೆ.
ಬೆರ್ರಿ ರಸದಿಂದ ಮೂತ್ರದ ಸೋಂಕಿನ ಅಪಾಯವಿಲ್ಲ
ಬೆರ್ರಿ ರಸವನ್ನು ಕುಡಿಯುವುದರಿಂದ ಮೂತ್ರದ ಸೋಂಕು ಬರುವ ಸಾಧ್ಯತೆಗಳು ಕಡಿಮೆಯಾಗುತ್ತವೆ ಎಂದು ನೀವು ಬಹುಶಃ ಈಗಾಗಲೇ ಕೇಳಿರಬಹುದು. ಆದ್ದರಿಂದ ಇದು ಯೋನಿಯ ಸೋಂಕನ್ನು ಕೂಡ ನಿವಾರಿಸುತ್ತದೆ. ಮೂತ್ರದಲ್ಲಿರುವ ಪಿಎಚ್ ಮಟ್ಟವನ್ನು ಇದು ಸುಧಾರಿಸುತ್ತದೆ. ಮೂತ್ರದಲ್ಲಿ ಪಿಎಚ್ ಮಟ್ಟ ಹೆಚ್ಚಾಗಿದ್ದರೆ ಇದರಿಂದ ಸೋಂಕುಗಳು ಅಧಿಕ. ಆದ್ದರಿಂದ ಮೂತ್ರದ ಪಿಎಚ್ ಸರಿ ಮಾಡಲು ಬೆರಿಹಣ್ಣುಗಳು ಸಹಾಯ ಮಾಡುತ್ತದೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.