ಹೊಟ್ಟೆಯಿಂದ ಹೇಗೆ ಹೊರಗೆ ಬಂದೆ ಎಂದು ಕೇಳಿದ ಮಗು: ಅಮ್ಮನ ಉತ್ತರ ಕೇಳಿದ ಪುಟಾಣಿ ಹೇಳಿದ್ದೇನು?

Published : Oct 09, 2025, 07:07 PM IST
Kid's Reaction to Mom's Truth About Childbirth is Priceless

ಸಾರಾಂಶ

Birth secret: ಪುಟ್ಟ ಮಕ್ಕಳಿಗಿರುವ ಸಾಮಾನ್ಯ ಡೌಟ್ ಎಂದರೆ ಅಮ್ಮನ ಹೊಟ್ಟೆಯಿಂದಹೊರಗೆ ಬಂದಿದ್ದು ಹೇಗೆ ಎಂಬುದು? ಈ ಪ್ರಶ್ನೆಯನ್ನು ಬಹುತೇಕ ಮಕ್ಕಳು ಕೇಳಿಯೇ ಕೇಳಿರುತ್ತಾರೆ. ಪೋಷಕರು ಇದಕ್ಕೆ ಏನೇನೋ ಸುಳ್ಳು ಹೇಳುತ್ತಾರೆ. ಇಲ್ಲೊಬ್ಬರು ತಾಯಿ ಸತ್ಯ ಹೇಳಿದ್ದಾಳೆ ಇದಕ್ಕೆ ಮಗುವಿನ ರಿಯಾಕ್ಷನ್ ಹೇಗಿತ್ತು?

ಪುಟ್ಟ ಮಕ್ಕಳಿಗೆ ಪ್ರತಿ ವಿಚಾರವೂ ಕುತೂಹಲಕಾರಿ: ಹಲವು ಪ್ರಶ್ನೆ ಕೇಳಿ ತಲೆತಿನ್ನುವ ಮಕ್ಕಳು!

ಬಹುತೇಕ ಪುಟ್ಟ ಮಕ್ಕಳಿಗಿರುವ ಸಾಮಾನ್ಯ ಡೌಟ್ ಎಂದರೆ ಅಮ್ಮನ ಹೊಟ್ಟೆಯಿಂದ ನಾವು ಹೊರಗೆ ಬಂದಿದ್ದು ಹೇಗೆ ಎಂಬುದು? ಈ ಪ್ರಶ್ನೆಯನ್ನು ಬಹುತೇಕ ಮಕ್ಕಳು ತಮ್ಮ ತಾಯಂದಿರಿಗೆ ತಂದೆಗೆ ಕೇಳಿಯೇ ಕೇಳಿರುತ್ತಾರೆ. ಬಹುತೇಕ ತಾಯಂದಿರು ಇದಕ್ಕೆ ಏನೇನೋ ಸುಳ್ಳು ಹೇಳುತ್ತಾರೆ. ಪುಟ್ಟ ಮಕ್ಕಳಾಗಿರುವ ಕಾರಣ ಅವರಿಗೆ ಸತ್ಯ ಹೇಳುವಷ್ಟು ಆ ಸತ್ಯವನ್ನು ಅರಗಿಸಿಕೊಳ್ಳುವಷ್ಟು ಪ್ರಬುದ್ಧತೆ ಮಕ್ಕಳಿಗಿರುವುದಿಲ್ಲ ಎಂಬುದು ಪೋಷಕರ ಚಿಂತನೆ. ಹೀಗಾಗಿ ಅನೇಕರು ನೀನು ರಸ್ತೆಯಲ್ಲಿ ಬಿದ್ದು ಸಿಕ್ಕಿದೆ, ಆಸ್ಪತ್ರೆಯಿಂದ ಕರೆತಂದೆವು, ವಾಂತಿ ಮಾಡಿದಾಗ ಬಂದೆ, ಕ* ಮಾಡಿದಾಗ ಬಂದೆ ಹೀಗೆ ಹಲವು ರೀತಿಯ ಸುಳ್ಳುಗಳನ್ನು ಪುಟ್ಟ ಕಂದಮ್ಮಗಳಿಗೆ ಹೇಳಿರ್ತಾರೆ. ಇನ್ನೂ ಕೆಲವು ಮಕ್ಕಳು ಅಪ್ಪ ಅಮ್ಮನ ಮದುವೆ ಆಲ್ಬಂ ನೋಡಿ ನಾನೆಲ್ಲಿ ನನ್ನ ಏಕೆ ಮದುವೆಗೆ ಕರೆದಿಲ್ಲ ಎಂದೆಲ್ಲಾ ಅಳುವುದುಂಟು ಇದೆಲ್ಲಾ ಕೇಳುವುದಕ್ಕೆ ತಮಾಷೆಯಾಗಿರುತ್ತದೆ. ಬೆಳೆಯುತ್ತಾ ಬೆಳೆಯುತ್ತಾ ಸೃಷ್ಟಿ ಕ್ರಿಯೆಯ ಬಗ್ಗೆ ಮಕ್ಕಳಿಗೂ ತಿಳಿಯುತ್ತಾ ಹೋಗುತ್ತದೆ. ತಮ್ಮ ಅಮ್ಮ ಇಷ್ಟು ದಿನ ನಮಗೆ ಹೇಳಿದ್ದು, ಸುಳ್ಳು ಎಂದು ಅರಿವಾಗುತ್ತದೆ. ಆದರೂ ಯಾವ ಮಕ್ಕಳು ಪೋಷಕರ ಬಳಿ ಪ್ರಬುದ್ಧರಾದ ನಂತರ ಇದನ್ನು ಪ್ರಶ್ನಿಸಲು ಹೋಗುವುದಿಲ್ಲ.

ಅಮ್ಮನ ಬಳಿ ಹೊಟ್ಟೆಯಿಂದ ಹೊರಗೆ ಬಂದಿದ್ದು ಹೇಗೆ ಎಂದು ಕೇಳಿದ ಮಗು

ಆದರೆ ಇಲ್ಲೊಂದು ಕಡೆ ಪುಟ್ಟ ಮಗುವಿಗೆ ತಾಯಿಯೊಬ್ಬಳು ನಿಜ ಹೇಳಿದ್ದು, ಆಘಾತಗೊಳ್ಳುವ ಸರದಿ ಮಗುವಿನದ್ದಾಗಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. lovequotes_lovestory ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಮಾಡಲಾಗಿದೆ. ವೀಡಿಯೋದ ಮೇಲೆ ಹೀಗೆ ಬರೆಯಲಾಗಿದೆ. ಮೊದಲ ಬಾರಿಗೆ ಒಬ್ಬರು ತಮ್ಮ ಮಗುವಿಗೆ ಸತ್ಯ ಹೇಳಿದ್ದನ್ನು ನೋಡುತ್ತಿದ್ದೇನೆ ಎಂದು ಬರೆದು ವೀಡಿಯೋ ಪೋಸ್ಟ್ ಮಾಡಲಾಗಿದೆ.

ನಿಜ ತಿಳಿಸಿದರೂ ಒಪ್ಪಲು ಸಿದ್ದಳಿಲ್ಲದ ಪುಟಾಣಿ

ವೀಡಿಯೋದ ಆರಂಭದಲ್ಲಿ ಮಗು ನಾನು ಹೇಗೆ ಬಂದೆ ಎಂದು ಕೇಳುತ್ತದೆ. ಅದಕ್ಕೆ ತಾಯಿ ನೀನು ನನ್ನ ಯೋನಿ(ವಜಿನಾ)ದಿಂದ ಹೊರೆಗೆ ಬಂದೆ ಹೇಳುತ್ತಾಳೆ. ಈ ಮಾತು ಕೇಳಿದ ಕೂಡಲೇ ಮಗು ಮುಖವನ್ನು ಒಂಥರಾ ಮಾಡಿಕೊಂಡು, ಅದು ಅಸಹ್ಯಕರ ಎಂದು ಮುಖ ಕಿವುಚಿಕೊಳ್ಳುತ್ತಾಳೆ. ಮಗುವಿನ ರಿಯಾಕ್ಷನ್ ನೋಡಿ ಇತ್ತ ತಾಯಿ ನಗುವುದನ್ನು ವೀಡಿಯೋದಲ್ಲಿ ಕೇಳಬಹುದು. ಆದರೂ ಮಗುವಿಗೆ ಇನ್ನೂ ತನ್ನ ಜನ್ಮ ರಹಸ್ಯವನ್ನು ತಿಳಿಯುವ ಕುತೂಹಲ ಹಾಗೂ ತಾಯಿ ಹೇಳಿದ ಮಾತಿನ ಬಗ್ಗೆ ಸಂಶಯ ಮೂಡಿದ್ದು, ನಾನು ತುಂಬಾ ದೊಡ್ಡ ಇದ್ದೇನೆ ಎಂದು ಹೇಳುತ್ತಾಳೆ. ಅದಕ್ಕೆ ಪ್ರತಿಕ್ರಿಯಿಸಿದ ತಾಯಿ ಹೌದು ಈಗ ನೀನು ತುಂಬಾ ದೊಡ್ಡ ಇದ್ದಿಯಾ ಆದರೆ ಜನಿಸುವ ವೇಳೆ ತುಂಬಾ ಚಿಕ್ಕ ಇದ್ದೆ ಎಂದು ಹೇಳುತ್ತಾಳೆ.

ಅಮ್ಮನ ಮಾತು ಕೇಳಿದ ಮಗುವಿನ ರಿಯಾಕ್ಷನ್ ಹೇಗಿತ್ತು?

ಇದಕ್ಕೆ ಮತ್ತೆ ಸಂಶಯದಿಂದಲೇ ಕೇಳುವ ಮಗು ನಾನು ನಿನ್ನ ಹೊಟ್ಟೆಯಲ್ಲಿದೆ, ನಂತರ ಯೋನಿ ಮೂಲಕ ಹೊರಬಂದೆ ನಾ ಎಂದು ತಾಯಿಯನ್ನು ಕೇಳುತ್ತಾಳೆ. ಇದಕ್ಕೆ ಉತ್ತರಿಸಿದ ತಾಯಿ ಹೌದು ಎನ್ನುತ್ತಾಳೆ. ಇದರಿಂದ ಸಮಾಧಾನಗೊಳ್ಳದ ಹಾಗೂ ತುಂಬಾ ಇರಿಸುಮುರಿಸುಗೊಳ್ಳುವ ಮಗು ನಾನು ನಿನ್ನ ವಜೀನಾದಲ್ಲಿ ಬಂದಿದ್ದಲ್ಲ ಅದು ತುಂಬಾ ಅಸಹ್ಯಕರ ಎಂದು ಹೇಳುತ್ತಾ ಅಲ್ಲಿಂದ ಓಡುತ್ತಾಳೆ.

ವೀಡಿಯೋ ನೋಡಿ ಬಿದ್ದು ಬಿದ್ದು ನಕ್ಕ ನೆಟ್ಟಿಗರು

ಈ ವೀಡಿಯೋ ಇಂಟರ್‌ನೆಟ್‌ನಲ್ಲಿ ಸಾಕಷ್ಟು ವೈರಲ್ ಆಗಿದ್ದು, ಮಗುವಿನ ರಿಯಾಕ್ಷನ್ ನೋಡುಗರನ್ನು ಬಿದ್ದು ಬಿದ್ದು ನಗುವಂತೆ ಮಾಡಿದೆ. ಅನೇಕರು ಈ ವೀಡಿಯೋಗೆ ಹಲವು ತಮಾಷೆಯ ಕಾಮೆಂಟ್ ಮಾಡಿದ್ದಾರೆ. ಇನ್ನೂ ಈ ವಿಚಾರ ಆಕೆಯ ಇಡೀ ಕ್ಲಾಸ್‌ಗೆ ತಿಳಿಯುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮಗುವಿಗೆ ಸತ್ಯ ಬೇಕು ಆದರೆ ಅದೇ ಮಗುವಿಗೆ ಸತ್ಯ ಅರಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಅನೇಕರು ತಮ್ಮ ಪ್ರಶ್ನೆಗೆ ತಮ್ಮ ಪೋಷಕರು ಯಾವ ರೀತಿ ಸುಳ್ಲು ಹೇಳಿದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ. ಇವರು ಸತ್ಯ ಹೇಳಿದ್ದಾರೆ ನನ್ನ ಪೋಷಕರು ನಾನು ಡಸ್ಟ್‌ಬಿನ್‌ ಅಲ್ಲಿ ಸಿಕ್ಕಿದೆ ಎಂದರು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಾನು ನನ್ನ ಮಕ್ಕಳಿಗೆ ನನ್ನ ಸಿ-ಸೆಕ್ಷನ್ ಕಲೆಯನ್ನು ತೋರಿಸಿದೆ. ಈಗ ನನ್ನ ಮಕ್ಕಳು ನಮಗೆ ಮಕ್ಕಳು ಬೇಡ ಅಂತಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ವಿಷಯ ತಿಳಿದ ಆಕೆ ಮತ್ತೆ ಸ್ನಾನ ಮಾಡಲು ಹೋದಳು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮಗುವಿನ ಪ್ರಶ್ನೆ ಹಾಗೂ ಉತ್ತರ ತಿಳಿದ ನಂತರ ಆಕೆಯ ರಿಆಕ್ಷನ್ ಎರಡು ಮಜವಾಗಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅದೇನೆ ಇರಲಿ ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.

ಮಗುವಿನ ಮುದ್ದಾದ ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: ಇಂಗ್ಲೆಂಡ್‌ನ ಹಿಂದೂ ಶಾಲೆಗೆ ಅತ್ಯುತ್ತಮ ರೇಟಿಂಗ್ ನೀಡಿದ ಯುಕೆ ಶಿಕ್ಷಣ ಇಲಾಖೆ
ಇದನ್ನೂ ಓದಿ: ಕಾಡಿನ ಮಧ್ಯೆ ಭೂಮಿಗಾಗಿ ಅಮ್ಮ ಮಗಳ ಭೀಕರ ಕಾಳಗ: ಅಪರೂಪದ ದೃಶ್ಯ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!