1,000 ಬಾಯ್‌ಫ್ರೆಂಡ್ಸ್ ಹೊಂದಿರೋ ಯುವತಿ, ಒಂದು ಗಂಟೆ ಡೇಟ್ ಮಾಡೋಕೆ ಭರ್ತಿ 5,000!

By Vinutha Perla  |  First Published May 12, 2023, 12:15 PM IST

ಬಾಯ್‌ಫ್ರೆಂಡ್‌, ಗರ್ಲ್‌ಫ್ರೆಂಡ್‌ ಇಲ್ಲಾಂದ್ರೆ ಸಾಕು ಇವತ್ತಿನ ಕಾಲದಲ್ಲಿ ಜನ್ರು ಕಣ್‌, ಬಾಯಿ ಬಿಟ್ಜೊಂಡು ನೋಡ್ತಾರೆ. ಅದರಲ್ಲೂ ಕೆಲವೊಬ್ಬರು ನಾಲ್ಕೈದು ಮಂದಿ ಬಾಯ್‌ಫ್ರೆಂಡ್‌, ಗರ್ಲ್‌ಫ್ರೆಂಡ್‌ನ್ನು ಹೊಂದಿರ್ತಾರೆ. ಈಕೆ ಮಾತ್ರ ಎಲ್ಲರೂ ನಿಬ್ಬೆರಗಾಗುವಂತೆ 1,000 ಬಾಯ್‌ಫ್ರೆಂಡ್ಸ್‌ನ್ನು ಹೊಂದಿದ್ದಾಳೆ. ಅಷ್ಟೇ ಅಲ್ಲ, ಈಕೆಯನ್ನು ಡೇಟ್ ಮಾಡೋಕೆ ಒಂದು ಗಂಟೆಗೆ ಭರ್ತಿ ಐದು ಸಾವಿರ ರೂ. ಕೊಡ್ಬೇಕಂತೆ.


ಹುಡುಗರು ಒಬ್ಬ ಗರ್ಲ್‌ಫ್ರೆಂಡ್‌ನ್ನು ಮೈಂಟೇನ್ ಮಾಡುವುದೇ ಕಷ್ಟ. ಹೀಗಿರುವಾಗ ಇಲ್ಲೊಬ್ಬಾಕೆಗೆ ಭರ್ತಿ 1,000 ಬಾಯ್‌ಫ್ರೆಂಡ್ಸ್‌ ಇದ್ದಾರೆ. AI ಕ್ಲೋನ್ ಎಂಬ ಆಪ್​​ ರಚಿಸಿಕೊಂಡು ಹೀಗೆ ಬಾಯ್‌ಫ್ರೆಂಡ್‌ಗಳನ್ನು ಮಾಡಿಕೊಳ್ಳುತ್ತಿದ್ದಾಳೆ. ಮಾತ್ರವಲ್ಲ ಹೊಸದಾಗಿ ಬಾಯ್‌ಫ್ರೆಂಡ್ ಆಗುವವರು ಇವಳ ಜೊತೆ ಒಂದು ಗಂಟೆ ಡೇಟ್ ಮಾಡೋಕೆ ಭರ್ತಿ 5,000 ರೂ. ಕೊಡ್ಬೇಕು. ಸದ್ಯ ಈ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಎಲ್ಲರೂ ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.  ಜಾರ್ಜಿಯಾದ ಕಮ್ಮಿಂಗ್‌ನ 23 ವರ್ಷದ  ಯುವತಿ ಕ್ಯಾರಿನ್ ಮಾರ್ಜೋರಿ ಈ ರೀತಿ ಸಾವಿರಕ್ಕೂ ಹೆಚ್ಚು ಬಾಯ್‌ಫ್ರೆಂಡ್‌ಗಳನ್ನು ಹೊಂದಿರುವಾಕೆ.

ಕ್ಯಾರಿನ್ ಮಾರ್ಜೋರಿ, ಸೋಷಿಯಲ್ ಮೀಡಿಯಾದಲ್ಲಿ 1.8 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳೊಂದಿಗೆ ಸ್ನ್ಯಾಪ್‌ಚಾಟ್ ಪ್ರಭಾವಶಾಲಿಯಾಗಿದ್ದಾರೆ. ಹಲವಾರು ಅಭಿಮಾನಿಗಳು ಅವಳೊಂದಿಗೆ ಇರಲು ಬಯಸುತ್ತಾರೆ, ಆದರೆ ಇದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಹೀಗಾಗಿ ಕ್ಯಾರಿನ್‌ ಇದಕ್ಕಾಗಿ  AI ಕ್ಲೋನ್ ಅನ್ನು ರಚಿಸಿದಳು, ಅದು ತನ್ನ ಅನುಯಾಯಿಗಳು ಅವಳೊಂದಿಗೆ ಡೇಟಿಂಗ್ ಮಾಡಲು ಅವಕಾಶ ನೀಡುತ್ತದೆ.

Tap to resize

Latest Videos

ಕೃತಕ ಬುದ್ಧಿಮತ್ತೆಯಿಂದ ಉದ್ಯೋಗ, ಮಾನವೀಯತೆಗೆ ಡೇಂಜರ್‌ : ಗೂಗಲ್‌ನಿಂದ ಹೊರಬಂದ AI ಜನಕ

ಕೃತಕ ಬುದ್ಧಿಮತ್ತೆಯಿಂದ ಸಾವಿರಾರು ಗಂಟೆಗಳ ಸಂಭಾಷಣೆ
ಆಕೆ CarynAIನ ಬೀಟಾ ಆವೃತ್ತಿಯನ್ನು ಬಿಡುಗಡೆ ಮಾಡಿದ್ದಾಳೆ. ಕ್ಯಾರಿನ್ ಆಪ್​​ ಬಗ್ಗೆ ತಿಳಿಸಲು ಸಾವಿರಾರು ಗಂಟೆಗಳ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿದ್ದಾಳೆ. Caryn AI ಬಳಕೆದಾರರಿಗೆ (Users) ಆಕೆ ಇರುವ ಪ್ರದೇಶವನ್ನು ಗುರುತಿಸಲು, ಆಕೆಯೊಂದಿಗೆ ಸಂಭಾಷಣೆ (Conversation) ನಡೆಸಲು, ಪಿಸು ಮಾತನ್ನಾಡಲು, ಲೈಂಗಿಕ ಸಂಭೋಗವನ್ನು ನಡೆಸಲು ಇನ್ನೂ ಅನೇಕ ರೀತಿ ಆಯ್ಕೆಗಳನ್ನು ಇದರಲ್ಲಿ ನೀಡಲಾಗಿದೆ.

ನಿಮಗೆ ಅಗತ್ಯವಿರುವಾಗ ನಿಮ್ಮನ್ನು ಜತೆಗಿರಲು ಮತ್ತು ಪ್ರೀತಿಸಲು AI ಬೋಟ್ ಸಹಾಯ ಮಾಡುತ್ತದೆ. ಪ್ರತಿ ನಿಮಿಷಕ್ಕೆ 1.8 ಮಿಲಿಯನ್​​ ಪಾವತಿಸುವ ಮೂಲಕ ಸುಮಾರು 1,000 ಗೆಳೆಯರು ಕ್ಯಾರಿನ್‌ನ AI ಕ್ಲೋನ್‌ನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಈ ಆಪ್​​ ಇನ್ನೊಂದು ವಿಶೇಷವೇಂದರೆ ಯಾರಿಗಾದರೂ ನಿಮ್ಮ ಪ್ರೀತಿ (Love)ಯನ್ನು ವ್ಯಕ್ತಪಡಿಸಬೇಕಾದರೆ ಅಥವಾ ಕಾಲೇಜಿನಲ್ಲಿ ಮತ್ತು ಕೆಲಸದ ಸ್ಥಳದಲ್ಲಿ ಜಗಳವಾಡಲು ಬಯಸಿದರೆ CarynAI ನಿಮಗೆ ಸಹಾಯ (Help) ಮಾಡುತ್ತದೆ ಎಂದು ಕ್ಯಾರಿನ್ ಫಾರ್ಚೂನ್‌ಗೆ ತಿಳಿಸಿದ್ದಾರೆ.

5 ವರ್ಷದ ಹುಡುಗಿಗೆ 95 ವರ್ಷವಾದ್ರೆ ಹೇಗೆ ಕಾಣ್ತಾಳೆ: AI ವೈರಲ್‌ ವಿಡಿಯೋ ಶೇರ್‌ ಮಾಡಿದ ಆನಂದ್‌ ಮಹೀಂದ್ರಾ

20,000 ಮಂದಿಯೊಂದಿಗೆ ಯುವತಿಯ ಒಪ್ಪಂದ
ತೊಂಬತ್ತೊಂಬತ್ತು ಪ್ರತಿಶತ ಪುರುಷರು ಈ ಆಪ್​​ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ ಈ AI ಬೋಟ್ 58.7 ಲಕ್ಷ ರೂ. ಗಳಿಸಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಕ್ಯಾರಿನ್ ಮಾರ್ಜೋರಿ 1.8 ಮಿಲಿಯನ್ ಫಾಲೋವರ್ಸ್​​ ಇದ್ದು, 20,000 ಮಂದಿಯೊಂದಿಗೆ ಒಪ್ಪಂದ (Agreement) ಮಾಡಿಕೊಂಡಿದ್ದಾರೆ. AI ಡೊಪ್ಪೆಲ್‌ಗ್ಯಾಂಗರ್ ತಿಂಗಳಿಗೆ 5 ಮಿಲಿಯನ್ ಡಾಲರ್ ಗಳಿಸಲು ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ.

ಕ್ಯಾರಿನ್ ತನ್ನ AI ಬೋಟ್ ಅನ್ನು ಫಾರೆವರ್ ವಾಯ್ಸ್ ನ್ನು ಬಳಸಿಕೊಂಡು ಮಾಡಿದಳು. ಫಾರೆವರ್ ವಾಯ್ಸ್‌ನ ಸಿಇಒ ಜಾನ್ ಮೇಯರ್, 2017 ರಲ್ಲಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ ತನ್ನ ತಂದೆಯನ್ನು ಅನುಕರಿಸಲು ಮೊದಲು AI ಬೋಟ್‌ನ್ನು ತಯಾರಿಸಿದರು. ಬೋಟ್ ರೂಪದಲ್ಲಿ ಅವರ ತಂದೆಯೊಂದಿಗೆ ಸಂವಹನ ಮಾಡುವುದು ಅದ್ಭುತ ಅನುಭವವಾಗಿದೆ ಎಂದು ಅವರು ಹೇಳಿದ್ದರು. ಆದರೆ ಜಾರ್ಜಿಯಾ ಟೆಕ್‌ನ AI ಪರಿಣಿತರಾದ ಡಾ ಜೇಸನ್ ಬೊರೆನ್‌ಸ್ಟೈನ್ ಅವರು ಟೆಕ್ನಾಲಜಿಯನ್ನು ಈ ರೀತಿ ಬಳಸುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

click me!