
ಸಾಮಾನ್ಯವಾಗಿ ಒಂದು ಮಗು ಜನಿಸಿದ ನಂತರ ತಾಯಂದಿರಿಗೆ ಮತ್ತೊಂದು ಮಗು ಆಗದಂತೆ ತಡೆಯುವುದಕ್ಕೆ ಕಾಪರ್ ಟೀಯನ್ನು ಅಳವಡಿಸಲಾಗುತ್ತದೆ. ಹಾಲುಣಿಸುವ ಪುಟ್ಟ ಮಗುವಿರುವ ಕಾರಣಕ್ಕೆ ಗರ್ಭ ನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಮಗು ಹಾಗೂ ತಾಯಿ ಇಬ್ಬರ ಮೇಲೆಯೂ ಅಡ್ಡ ಪರಿಣಾಮಗಳು ಬೀರುವ ಸಾಧ್ಯತೆ ಇರುವುದರಿಂದ ಒಂದು ಮಗು ಜನಿಸಿದ ನಂತರ ಮತ್ತೊಮ್ಮೆ ಹಠಾತ್ ಗರ್ಭಧಾರಣೆ ಆಗದಂತೆ ಕಾಪರ್ ಟೀಯನ್ನು ತಾಯಿಯ ಗರ್ಭಕೋಶಕ್ಕೆ ಅಳವಡಿಸಲಾಗುತ್ತದೆ. ಮಹಿಳೆಯ ಗರ್ಭಕೋಶಕ್ಕೆ ಅಳವಡಿಸುವ ಟೀ ಆಕಾರದಲ್ಲಿರುವ ಈ ಗರ್ಭ ನಿರೋಧಕ ಸಾಧನ ಶೇಕಡಾ 99 ಗರ್ಭಧಾರಣೆಯನ್ನು ತಡೆಯುವಲ್ಲಿ ಯಶಸ್ವಿಯಾಗಿದೆ. ಆದರೆ ಇಲ್ಲೊಂದು ಕಡೆ ಗರ್ಭ ನಿರೋಧಕ ಸಾಧನ ಅಳವಡಿಸಿದ ನಂತರವೂ ಮಗುವೊಂದು ಜನಿಸಿದೆ. ಮಾತ್ರವಲ್ಲ, ಈ ಮಗು ಜನನದ ವೇಳೆ ಈ ಕಾಪರ್ ಟೀಯನ್ನು ಕೈಯಲ್ಲಿ ಹಿಡಿದು ಜನಿಸಿದ್ದು, ವೈದ್ಯರು, ದಾದಿಯರನ್ನು ಅಚ್ಚರಿಗೀಡು ಮಾಡಿತ್ತು. ಬ್ರೆಜಿಲ್‌ನಲ್ಲಿ ಈ ಘಟನೆ ನಡೆದಿದ್ದು, ವೈದ್ಯಕೀಯ ಸಿಬ್ಬಂದಿಯೇ ಮಗುವನ್ನು ನೋಡಿ ಅಚ್ಚರಿಪಟ್ಟಿದ್ದಾರೆ.
ತಾಮ್ರದ ಸುರುಳಿ ಎಂದೂ ಕರೆಯಲ್ಪಡುವ ಐಯುಡಿ (ಗರ್ಭಾಶಯದೊಳಗಿನ ಸಾಧನ) ಗರ್ಭಧಾರಣೆಯನ್ನು ತಡೆಗಟ್ಟುವಲ್ಲಿ 99% ಪರಿಣಾಮಕಾರಿಯಾಗಿದೆ, ಆದರೆ ಈ ಮಗು ಆ ಅಸಾಧ್ಯವನ್ನು ಮೀರಿಸಿ ಜನಿಸಿದ್ದು ಕೈಯಲ್ಲಿ ಕಾಪರ್ ಟೀಯನ್ನು ಹಿಡಿದಿರುವ ದೃಶ್ಯದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮ್ಯಾಥ್ಯೂಸ್ ಗೇಬ್ರಿಯಲ್ ಎಂಬ ಮಗುವೇ ಹೀಗೆ ತಾಯಿ ಕಾಪರ್ ಟೀ ಅಳವಡಿಸಿದ ನಂತರವೂ ಭೂಮಿಗೆ ಬಂದ ಮಗು. ಗೇಬ್ರಿಯಲ್ ತಾಯಿ ಕ್ವಿಡಿ ಅರೌಜೊ ಡಿ ಒಲಿವೇರಾ ಸುಮಾರು ಎರಡು ವರ್ಷಗಳಿಂದ ಈ ತಾಮ್ರದ ಸುರುಳಿಯನ್ನು ಗರ್ಭಧಾರಣೆಯಾಗದಂತೆ ಬಳಸುತ್ತಿದ್ದರು, ಆದರೆ ಅನಿರೀಕ್ಷಿತವಾಗಿ ಅವರು ಗರ್ಭಿಣಿಯಾದರು.
ಗರ್ಭಾವಸ್ಥೆಯುದ್ಧಕ್ಕೂ ಗರ್ಭದಲ್ಲೇ ಇದ್ದ ಐಯುಡಿ
ತಾಯಿ ಕ್ವಿಡಿ ಅವರ ಪ್ರಕಾರ ಈ ಗರ್ಭ ನಿರೋಧಕ ಯಾವಾಗಲೂ ಪರಿಣಾಮಕಾರಿ ಎಂದು ಹೇಳಲಾಗದು. ಹೀಗಾಗಿಯೇ ತಪಾಸಣೆಯ ಸಮಯದಲ್ಲಿ ಅವರು ಗರ್ಭಿಣಿಯಾಗಿದ್ದು ತಿಳಿದು ಬಂತು. ಆದರೆ ಈ ಕಾಪರ್ ಟೀ ಇನ್ನೂ ತಾಯಿಯ ಗರ್ಭದಲ್ಲೇ ಇದ್ದಿದ್ದರಿಂದ ಜೊತೆಗೆ ಮಗುವೂ ಇದ್ದಿದ್ದರಿಮದ ಅದನ್ನು ತೆಗೆದುಹಾಕುವುದು ತುಂಬಾ ಅಪಾಯಕಾರಿ ಎಂದು ವೈದ್ಯರು ಹೇಳಿದರು ಹೀಗಾಗಿ ಗೇಬ್ರಿಯಲ್ ಜನಿಸುವವರೆಗೂ ಈ ಗರ್ಭ ನಿರೋಧಕ ತಾಯಿಯ ಗರ್ಭದಲ್ಲೇ ಇತ್ತು. ಇತ್ತ ಗರ್ಭಾವಸ್ಥೆಯಲ್ಲಿ, ತಾಯಿ ಕ್ವಿಡಿ ರಕ್ತಸ್ರಾವವೂ ಸೇರಿದಂತೆ ಹಲವು ಆರೋಗ್ಯ ತೊಂದರೆಗಳನ್ನು ಇದರಿಂದಾಗಿ ಅನುಭವಿಸಬೇಕಾಯ್ತು. ಆದರೂ ಅದೃಷ್ಟವಶಾತ್ ಅವರ ಗಂಡು ಮಗು ಬ್ರೆಜಿಲ್‌ನ ನೆರೋಪೊಲಿಸ್‌ನಲ್ಲಿರುವ ಸಗ್ರಾಡೊ ಕೊರಾಕಾವೊ ಡಿ ಜೀಸಸ್ ಆಸ್ಪತ್ರೆಯಲ್ಲಿ ಆರೋಗ್ಯಕರವಾಗಿಯೇ ಜನಿಸಿ ಅಚ್ಚರಿ ಮೂಡಿಸಿತು.
ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್
ಕ್ವಿಡಿ ಅವರಿಗೆ ಹೆರಿಗೆ ಮಾಡಿಸಿದ ಡಾ. ನಟಾಲಿಯಾ ರೊಡ್ರಿಗಸ್ ಅವರು ಆಗಷ್ಟೇ ಜನಿಸಿದ ಗೇಬ್ರಿಯಲ್ ತನ್ನ ಕೈಯಲ್ಲಿ ಐಯುಡಿಯನ್ನು ಹಿಡಿದಿರುವ ಫೋಟೋವನ್ನು ಕ್ಲಿಕ್ಕಿಸಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗ್ತಿದೆ. ಮಗು ಮ್ಯಾಥ್ಯೂಸ್ ಗೇಬ್ರಿಯಲ್ ತನ್ನ ಪುಟ್ಟ ಕೈಗಳಲ್ಲಿ ಗರ್ಭನಿರೋಧಕ ಸಾಧನವನ್ನು ಹಿಡಿದುಕೊಂಡಿರುವುದನ್ನು ಫೋಟೋಗಳಲ್ಲಿ ಕಾಣಬಹುದು. 'ನನ್ನ ವಿಜಯ ಟ್ರೋಫಿಯನ್ನು ಹಿಡಿದುಕೊಂಡಿದ್ದೇನೆ ನನ್ನನ್ನು ನಿಭಾಯಿಸಲು ಸಾಧ್ಯವಾಗದ ಐಯುಡಿ' ಎಂದು ತಮಾಷೆಯ ಶೀರ್ಷಿಕೆ ನೀಡಿ ಈ ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ಇತ್ತ ಸಂತಾನಹರಣ ಶಸ್ತ್ರಚಿಕಿತ್ಸೆಗಾಗಿ ಕಾಯುತ್ತಿದ್ದ ಮಗುವಿನ ತಂದೆ ಈ ಫೋಟೋಗೆ ಕಾರ್ಖಾನೆ ಈಗ ಮುಚ್ಚಲ್ಪಟ್ಟಿದೆ ಹಾಸ್ಯಮಯವಾಗಿ ಕಾಮೆಂಟ್ ಮಾಡಿದ್ದಾರೆ.
ಇಂತಹ ಘಟನೆ ಇದೇ ಮೊದಲಲ್ಲ, ಕೆಲವು ವರ್ಷಗಳ ಹಿಂದೆ, ಉತ್ತರ ವಿಯೆಟ್ನಾಂನ ಹೈ ಫೋಂಗ್ ನಗರದ ಹೈ ಫೋಂಗ್ ಅಂತಾರಾಷ್ಟ್ರೀಯ ಆಸ್ಪತ್ರೆಯಲ್ಲಿ ಗಂಡು ಮಗುವೊಂದು ತನ್ನ ತಾಯಿಯ ಐಯುಡಿಯನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಘಟನೆ ನಡೆದಿತ್ತು. ಮಗು ಜನಿಸಿದ ವೇಳೆಯೇ ಈ ಗರ್ಭನಿರೋಧಕ ಸಾಧನ ಹೊರ ಬಂದಿತ್ತು ಎಂದು ಪ್ರಸೂತಿ ತಜ್ಞ ಟ್ರಾನ್ ವಿಯೆಟ್ ಫುವಾಂಗ್ ಹೇಳಿದ್ದಾರೆ. ಹೆರಿಗೆಯ ನಂತರ, ಅವರು ಆ ಸಾಧನವನ್ನು ಹಿಡಿದಿರುವುದು ಆಸಕ್ತಿದಾಯಕವಾಗಿದೆ ಎಂದು ನಾನು ಭಾವಿಸಿದೆ, ಹಾಗಾಗಿ ನಾನು ಒಂದು ಚಿತ್ರವನ್ನು ತೆಗೆದುಕೊಂಡೆ. ಅದು ಇಷ್ಟೊಂದು ಗಮನ ಸೆಳೆಯುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ ಎಂದು ಫುವಾಂಗ್ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದರು.
ಐಯುಡಿ ಎನ್ನುವುದು ಗರ್ಭಾಶಯದೊಳಗೆ (ಗರ್ಭಾಶಯ) ಸೇರಿಸಲಾದ ಸಣ್ಣ Tಆಕಾರದ ಗರ್ಭನಿರೋಧಕವಾಗಿದ್ದು ಅದು ತಕ್ಷಣವೇ ಕಾರ್ಯನಿರ್ವಹಿಸುತ್ತದೆ. ಇದು ಗರ್ಭಾಶಯಕ್ಕೆ ತಾಮ್ರವನ್ನು ಬಿಡುಗಡೆ ಮಾಡುವ ಮೂಲಕ ಗರ್ಭಧಾರಣೆಯನ್ನು ತಡೆಯುತ್ತದೆ ಎಂದು ನ್ಯಾಷನಲ್ ಹೆಲ್ತ್ ಸರ್ವಿಸ್ ಹೇಳುತ್ತದೆ. ಐದರಿಂದ ಅಥವಾ 10 ವರ್ಷಗಳವರೆಗೆ ಇದನ್ನು ಗರ್ಭದಲ್ಲಿ ಇಡಲಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.