ಶ್ರೇಯಸಿ ನಿಶಾಂಕ್: ಮಿಲಿಟರಿ ಸೇರಿದ ಮಂತ್ರಿಯ ಮಗಳು

By Bhavani BhatFirst Published Mar 25, 2022, 4:15 PM IST
Highlights

ಸಾಮಾನ್ಯವಾಗಿ ರಾಜಕಾರಣಿ (Politician)ಗಳ ಮಕ್ಕಳು ರಾಜಕಾರಣಿಗಳೋ, ತಪ್ಪಿದರೆ ಡಾಕ್ಟರ್ (Doctor), ಎಂಜಿನಿಯರ್ ಆಗಿ ವಿದೇಶ ಸೇರುವುದು ವಾಡಿಕೆ. ಆದರೆ ಇಲ್ಲೊಬ್ಬರು ಆ ರೂಢಿಯನ್ನು ಮುರಿದು ಮಿಲಿಟರಿ (Military)ಗೆ ಜಾಯಿನ್ ಆಗಿದ್ದಾಳೆ. ಯಾರಾಕೆ ? ಎಲ್ಲಿಯವರು ತಿಳಿಯೋಣ ?

ರಾಜಕಾರಣಿಗಳು ಅಂದ್ರೆ ಸಾಕು ಸಾಕಷ್ಟು ದುಡ್ಡು ಮಾಡಿರ್ತಾರೆ. ಹೀಗಾಗಿ ತಮ್ಮ ಮಕ್ಕಳನ್ನು ಸಹ ಲಕ್ಷಗಟ್ಟಲೆ ವ್ಯಯಿಸಿ ವಿದೇಶಕ್ಕೆ ವಿದ್ಯಾಭ್ಯಾಸಕ್ಕೆ ಕಳುಹಿಸುತ್ತಾರೆ. ಅಲ್ಲೇ ತಿಂಗಳಿಗೆ ಲಕ್ಷಗಟ್ಟಲೆ ದುಡಿಯೋ ಡಾಕ್ಟರ್‌, ಎಂಜಿನಿಯರ್ ಕೆಲಸಕ್ಕೆ ಸೇರಿಸುತ್ತಾರೆ. ಆದ್ರೆ ಈ ರಾಜಕಾರಣಿ ಅದಕ್ಕೆಲ್ಲಾ ಅಪವಾದ ಎಂಬಂತಿದ್ದಾರೆ. ರಾಜಕಾರಣಿಯ ಮಗಳು ಮಿಲಿಟರಿ ಸೇರಿ ಡಾಕ್ಟರ್‌ ಆಗಿ ದೇಶ ಸೇವೆ ಮಾಡ್ತಿದ್ದಾರೆ

ಈಕೆಯ ಹೆಸರು ಶ್ರೇಯಸಿ ನಿಶಾಂಕ್ (Shreyashi Nishank). ಕಳೆದ ವರ್ಷ ಈಕೆ ಎಂಬಿಬಿಎಸ್ (MBBS) ಮುಗಿಸಿದಳು. ಈಕೆ ಸುಲಭವಾಗಿ ಲಂಡನ್‌ಗೋ, ಅಮೆರಿಕಕ್ಕೋ ಹೋಗಿ ಸೆಟಲ್ ಆಗಬಹುದಿತ್ತು. ಯಾಕೆಂದರೆ ತಂದೆ ಪ್ರಭಾವಿ ಹಾಗೂ ಶ್ರೀಮಂತ. ಆದರೆ ಆಕೆ ಮಿಲಿಟರಿ ಸೇರುವುದನ್ನು ಆಯ್ಕೆ ಮಾಡಿಕೊಂಡಳು. ಇವಳೀಗ ಭಾರತೀಯ ಸೈನ್ಯದಲ್ಲಿ ಡಾಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾಳೆ. ಶ್ರೇಯಸಿ ನಿಶಾಂಕ್ ರ್ಯಾಂಕ್ ಕ್ಯಾಪ್ಟನ್ (Captain). 

ಶ್ರೇಯಸಿ ಡೆಹ್ರಾಡೂನ್‌ನ ಸ್ಕಾಲರ್ಸ್ ಹೋಮ್ ಸೀನಿಯರ್ ಸೆಕೆಂಡರಿ ಸ್ಕೂಲ್‌ನಲ್ಲಿ 12ನೇ ತರಗತಿಯವರೆಗೆ, ಜಾಲಿ ಗ್ರಾಂಟ್‌ನ ಹಿಮಾಲಯನ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ (Medical) ಸೈನ್ಸ್‌ನಿಂದ MBBS ಮಾಡಿದರು. ನಂತರ ಮಾರಿಷಸ್‌ನ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು. ಸೇನೆಗೆ ಸೇರಿ ದೇಶಸೇವೆ ಮಾಡಬೇಕು ಎಂಬ ಕನಸು ಶ್ರೇಯಸಿಗೆ ಆಗಲೇ ಇತ್ತು. ಆದ್ದರಿಂದ ಆಕೆ ಆರ್ಮಿ ಮೆಡಿಕಲ್ ಕಾರ್ಪ್ಸ್ (AMC) ಸೇರಿಕೊಂಡರು. ಮಿಲಿಟರಿಗೆ ಸೇರಿದ್ದು ಮಾತ್ರವಲ್ಲ, ಅಲ್ಲಿಯೇ ಡಾಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ಮೇಜರ್ ದೇವಲ್ ಬಾಜಪೇಯಿ ಅವರನ್ನು ಪ್ರೀತಿಸಿ ಮದುವೆಯಾದರು. ಈಗ ಇಡೀ ಕುಟುಂಬ ಸೈನ್ಯಕ್ಕೆ ಸೇವೆ ಸಲ್ಲಿಸುತ್ತಿದೆ.

ವಿದೇಶದಲ್ಲಿ ಲಕ್ಷಗಟ್ಟಲೆ ಸಂಪಾದನೆಯ ಕೆಲಸ ಬಿಟ್ಟು ದೇಶ ಸೇವೆಗಾಗಿ ಪೊಲೀಸ್‌ ಆದ Neha Pachisia

ಅಂದ ಹಾಗೆ ಇವರ ತಂದೆ ಯಾರೆಂದು ಕೇಳಿದ್ದೀರಾ ? ಅವರು ಬಿಜೆಪಿ ನಾಯಕ, ಕೇಂದ್ರದ ಮಾಜಿ ಸಚಿವ, ಹರಿದ್ವಾರದ ಸಂಸತ್‌ ಸದಸ್ಯ ರಮೇಶ್ ಪೋಖ್ರಿಯಾಲ್ ನಿಶಾಂಕ್ (Ramesh Pokhriyal Nishank). ಇವರು ಉತ್ತರಾಖಂಡದ ಮುಖ್ಯಮಂತ್ರಿಯೂ ಆಗಿದ್ದರು. 

ಶ್ರೇಯಸಿ ಸೇನೆಗೆ ಸೇರಿದಾಗ ಅವರ ತಂದೆ ಡಾ.ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ''ನನ್ನ ಮಗಳು ನಮ್ಮ ಕುಟುಂಬದಿಂದ ಮೊದಲ ಸೇನಾ ಅಧಿಕಾರಿಯಾಗಿರುವುದು ನನಗೆ ಹೆಮ್ಮೆ ತಂದಿದೆ. ನಮ್ಮ ಕುಟುಂಬದಿಂದ ಯಾರಾದರೂ ಸೇನೆಯಲ್ಲಿರಬೇಕು ಎಂಬುದು ನನ್ನ ಆಶೆಯಾಗಿತ್ತು. ಇಂದು ನನ್ನ ಮಗಳು ಈ ಆಸೆಯನ್ನು ಪೂರೈಸಿದ್ದಾಳೆ' ಎಂದಿದ್ದರು. ಚೆನ್ನಾಗಿ ಕಲಿತ, ಒಳ್ಳೆಯ ಕೌಟುಂಬಿಕ ಹಿನ್ನೆಲೆ ಇರುವ ಪ್ರತಿಯೊಬ್ಬ ಪ್ರತಿಭಾವಂತನೂ ಇಂದು ವಿದೇಶದಲ್ಲಿ ಉತ್ತಮ ಕೆಲಸ, ಭಾರಿ ಸಂಬಳದ ಪ್ಯಾಕೇಜ್ ಬಯಸುತ್ತಾರೆ. ಆದರೆ ಅದನ್ನು ತಿರಸ್ಕರಿಸಿ ದೇಶಸೇವೆ ಮಾಡುವವರು ವಿರಳ. ಶ್ರೇಯಸಿಗೂ ವಿದೇಶಿ ಕಂಪನಿಗಳಿಂದ ತುಂಬ ಆಫರ್ ಬಂದಿತ್ತು. ಆದರೆ ಶ್ರೇಯಸಿ ಅವನ್ನೆಲ್ಲ ನಿರಾಕರಿಸಿ, ಸೈನ್ಯದ ಸೇವೆಯನ್ನು ಆಯ್ಕೆ ಮಾಡಿಕೊಂಡರು. 

ತೂಕ ಇಳಿಸಿಕೊಂಡ Smriti Irani, ಈಕೆಯ ಬಹುಮುಖ ಪ್ರತಿಭೆ ಇಲ್ಲಿದೆ ನೋಡಿ!

ಶ್ರೇಯಸಿಗೆ ಇನ್ನೂ ಇಬ್ಬರು ಸೋದರಿಯರಿದ್ದಾರೆ. ಅವರೂ ಪ್ರತಿಭಾವಂತರು. ರಮೇಶ್ ಪೋಖ್ರಿಯಾಲ್ ಅವರಿಗೆ ಗಂಡುಮಕ್ಕಳಿಲ್ಲ. ಅವರ ಪತ್ನಿ ತುಂಬ ಹಿಂದೆಯೇ ತೀರಿಕೊಂಡಿದ್ದಾರೆ. ಮೂವರೂ ಮಕ್ಕಳನ್ನು ಮುದ್ದಿನಿಂದ ಬೆಳೆಸಿರುವ ಅವರಿಗೆ ಮಕ್ಕಳೇ ಎಲ್ಲ. ಶ್ರೇಯಸಿ ಅವರ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಅಕೌಟ್‌ನಲ್ಲೂ ತಂದೆಯ ಜೊತೆಗೆ ತೆಗೆಸಿಕೊಂಡಿರುವ ಫೋಟೋಗಳೇ ಹೆಚ್ಚಾಗಿ ಕಾಣಿಸುತ್ತವೆ.

ತಂದೆ ಎಂದರೆ  ಶ್ರೇಯಸಿಗೆ ಪಂಚಪ್ರಾಣ. ಶ್ರೇಯಸಿಯ ಮದುವೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಗಣ್ಯರು ಬಂದು ಭಾಗವಹಿಸಿದ್ದರು. ರಮೇಶ್ ಅವರ ದೊಡ್ಡ ಮಗಳು ಆರುಷಿ ಪೋಖ್ರಿಯಾಲ್ ಅಂತಾರಾಷ್ಟ್ರೀಯ ಖ್ಯಾತಿಯ ಕಥಕ್ ನಾಟ್ಯಗಾತಿ, ಫಿಲಂ ನಿರ್ಮಾಪಕಿ, ಸಾಮಾಜಿಕ ಹೋರಾಟಗಾರ್ತಿ, ಪರಿಸರವಾದಿ ಆಗಿದ್ದಾರೆ 

click me!