ಸ್ನೇಹಿತರ (Friends) ಮಧ್ಯೆ ಗುಟ್ಟಿರುವುದಿಲ್ಲ. ಹಾಗೆ ಸ್ನೇಹಿತರಿಬ್ಬರು ಸಿಕ್ಕಾಗ ಜಗತ್ತು ಮರೆಯುತ್ತಾರೆ. ಅಪರೂಪಕ್ಕೆ ಸಿಕ್ಕರಂತೂ ಮುಗಿದೇ ಹೋಯ್ತು. ಆದ್ರೆ ಸ್ನೇಹಿತೆ ಜೊತೆ ಕಳೆಯಬೇಕಾದ ಮಧುರ ಕ್ಷಣಗಳು ಆಕೆಯ ಪತಿ (Husband)ಯಿಂದ ಹಾಳಾದ್ರೆ ಏನು ಮಾಡೋದು?
ಹೊಸ (New) ಸಂಬಂಧವಿರಲಿ, ಹಳೆ (Old) ಬಾಂಧವ್ಯವಿರಲಿ ಪ್ರತಿಯೊಂದಕ್ಕೂ ಅದರದೆ ಆದ ಸೂಕ್ಷ್ಮ ಎಳೆಯಿರುತ್ತದೆ. ಅದು ತುಂಡಾದ್ರೆ ಮತ್ತೆ ಜೋಡಿಸಲು ಸಾಧ್ಯವಿಲ್ಲ. ಹಾಗಾಗಿ ಸಂಬಂಧ ಎಂಬ ವಿಷ್ಯ ಬಂದಾಗ ಅದನ್ನು ನಾಜೂಕಾಗಿ ನೋಡಬೇಕು. ಸ್ನೇಹಿತ (Friend)ರ ವಿಷ್ಯದಲ್ಲೂ ಇದು ನೂರಕ್ಕೆ ನೂರು ಸತ್ಯ. ಆತುರದಲ್ಲಿ ನಾವು ಮಾಡುವ ತಪ್ಪು ಸ್ನೇಹಕ್ಕೆ ಕುತ್ತು ತರಬಹುದು. ಇಲ್ಲವೆ ಸ್ನೇಹಿತರ ಬಾಳಲ್ಲಿ ಬಿರುಗಾಳಿ ಎಬ್ಬಿಸಬಹುದು. ಹಾಗಾಗಿ ಸ್ನೇಹಿತರ ಜೊತೆ ಅವರ ಕುಟುಂಬ ಎಂಬುದು ಬಂದಾಗ ನೂರಾರು ಬಾರಿ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಮಹಿಳೆಯೊಬ್ಬಳು ಸ್ನೇಹಿತೆ ಹಾಗೂ ಆಕೆ ಪತಿಯ ಮಧ್ಯೆ ಸಿಕ್ಕಿಬಿದ್ದಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ಸಮಸ್ಯೆ ಹೇಳಿಕೊಂಡ ಅವಳು ಪರಿಹಾರ ಬಯಸಿದ್ದಾಳೆ.
ಮಹಿಳೆಗೆ ಆಗಿದ್ದೇನು ? : ಮಹಿಳೆಯ ವಯಸ್ಸು 35 ವರ್ಷ. ವಿವಾಹಿತ ಮಹಿಳೆ ಜೀವನ ಸುಖಕರವಾಗಿ ನಡೆಯುತ್ತಿದೆ. ಪತಿ-ಪತ್ನಿ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದ್ರೆ ಜೀವನದಲ್ಲಿ ಮತ್ತೆ ಬಂದ ಸ್ನೇಹಿತೆಯ ಕುಟುಂಬ ಆಕೆಗೆ ಸಮಸ್ಯೆ ತಂದೊಡ್ಡಿದೆ.
ಅನೇಕ ವರ್ಷಗಳ ನಂತರ ಸ್ನೇಹಿತೆಯ ಭೇಟಿ : ಕಾಲೇಜಿನಲ್ಲಿದ್ದಾಗ ಬೆಸ್ಟ್ ಫ್ರೆಂಡ್ ಆಗಿದ್ದವರು ಮದುವೆ ನಂತ್ರ ದೂರವಾಗಿದ್ದರಂತೆ. ಇಬ್ಬರ ಮಧ್ಯೆ ಸಂಪರ್ಕವಿರಲಿಲ್ಲವಂತೆ. ಆದ್ರೆ ಕೆಲ ವರ್ಷಗಳ ನಂತ್ರ ಸ್ನೇಹಿತೆಯರಿಬ್ಬರು ಒಂದೇ ನಗರದಲ್ಲಿ ವಾಸ ಶುರು ಮಾಡಿದ್ದಾರೆ. ಹಾಗಾಗಿ ಇಬ್ಬರ ಮಧ್ಯೆ ಮತ್ತೆ ಹಳೆಯ ಬಾಂಧವ್ಯ ಬೆಳೆದಿದೆ. ಇಬ್ಬರು ಪರಸ್ಪರ ಭೇಟಿ ಶುರು ಮಾಡಿದ್ದಾರೆ. ಆಗಾಗ ಪರಸ್ಪರ ಮನೆಗಳಿಗೆ ಹೋಗ್ತಿದ್ದವರು ಸಿನಿಮಾ, ಪಾರ್ಟಿ ಹೀಗೆ ಜೀವನ ಎಂಜಾಯ್ ಮಾಡಲು ಶುರು ಮಾಡಿದ್ದಾರೆ.
ವಿದೇಶದಲ್ಲಿ ಲಕ್ಷಗಟ್ಟಲೆ ಸಂಪಾದನೆಯ ಕೆಲಸ ಬಿಟ್ಟು ದೇಶ ಸೇವೆಗಾಗಿ ಪೊಲೀಸ್ ಆದ NEHA PACHISIA
ಸ್ನೇಹಿತೆ ಪತಿಯೇ ವಿಲನ್ : ಆರಂಭದಲ್ಲಿ ಎಲ್ಲವೂ ಸರಿಯಾಗಿಯೇ ಇತ್ತಂತೆ. ಆದ್ರೆ ದಿನ ಕಳೆದಂತೆ ಸ್ನೇಹಿತೆ ಪತಿಯ ವರ್ತನೆ ವಿಚಿತ್ರವಾಗಿದೆಯಂತೆ. ಪತ್ನಿ ಹತ್ತಿರವಿಲ್ಲವೆಂದಾಗ ಆಕೆ ಪತಿ ಇವಳ ಹತ್ತಿರ ಬರಲು ಪ್ರಯತ್ನಿಸುತ್ತಾನಂತೆ. ಆಕೆ ಜೊತೆ ಕೆಟ್ಟದಾಗಿ ವರ್ತಿಸುತ್ತಾನಂತೆ. ಆರಂಭದಲ್ಲಿ ಸ್ನೇಹಿತೆ ಪತಿಯನ್ನು ಮಹಿಳೆ ಒಂದೆರಡು ಬಾರಿ ಹೊಗಳಿದ್ದಳಂತೆ. ಆದ್ರೆ ಸ್ನೇಹಿತೆ ಪತಿ, ನಿನ್ನನ್ನು ಇಷ್ಟಪಡ್ತೇನೆಂದು ನೇರವಾಗಿ ಹೇಳಿದ್ದಾನಂತೆ.
ಅಷ್ಟೇ ಅಲ್ಲ ಮೂರ್ನಾಲ್ಕು ಬಾರಿ ಕೆಟ್ಟದಾಗಿ ಸ್ಪರ್ಶಿಸಿದ್ದಾನಂತೆ. ಆರಂಭದಲ್ಲಿ ಇದು ಮಹಿಳೆಗೆ ತಿಳಿಯಲಿಲ್ಲವಂತೆ. ಆದ್ರೆ ಈಗ ಎಲ್ಲವೂ ಸ್ಪಷ್ಟವಾಗಿದೆಯಂತೆ. ಸ್ನೇಹಿತೆ ಮನೆಗೆ ಹೋಗಲು ನನಗೆ ಸಾಧ್ಯವಾಗ್ತಿಲ್ಲ ಎನ್ನುವ ಮಹಿಳೆ, ಸ್ನೇಹಿತೆ ಇಲ್ಲದಿರುವ ಸಂದರ್ಭದಲ್ಲಿ ಆಕೆಯ ಪತಿ ನನ್ನನ್ನು ಸಿನಿಮಾಕ್ಕೆ ಆಹ್ವಾನಿಸಿದ್ದ ಎಂದಿದ್ದಾಳೆ.
ಗೊಂದಲದಲ್ಲಿ ಮಹಿಳೆ : ಆಪ್ತ ಸ್ನೇಹಿತೆಯ ಗಂಡನ ಬಗ್ಗೆ ಯಾವ ನಿರ್ಧಾರಕ್ಕೆ ಬರಬೇಕೆಂಬುದು ಈಗ ಮಹಿಳೆಗೆ ದೊಡ್ಡ ಸಮಸ್ಯೆಯಾಗಿದೆ. ಗೆಳತಿಗೆ ಈ ವಿಷ್ಯ ಹೇಳಿದ್ರೆ ಆಕೆ ತನ್ನನ್ನು ತಪ್ಪು ತಿಳಿಯಬಹುದು. ಇಬ್ಬರ ಮಧ್ಯೆ ಸ್ನೇಹ ಕಟ್ ಆಗಬಹುದು ಎಂಬ ಆತಂಕವಿದೆಯಂತೆ. ಆದ್ರೆ ಇದನ್ನು ಸಹಿಸಿಕೊಳ್ಳಲು ನನ್ನಿಂದ ಸಾಧ್ಯವಿಲ್ಲ ಎನ್ನುತ್ತಾಳೆ ಮಹಿಳೆ.
ಹೀಗೆಲ್ಲಾ ಆಗ್ತಿದ್ರೆ ನೆಗ್ಲೆಕ್ಟ್ ಮಾಡ್ಬೇಡಿ..ಇದು ಥೈರಾಯ್ಡ್ ಸಮಸ್ಯೆನೂ ಆಗಿರ್ಬೋದು
ತಜ್ಞರ ಸಲಹೆ : ಮಹಿಳೆ ಸಮಸ್ಯೆಗೆ ತಜ್ಞರು ಸಲಹೆ ನೀಡಿದ್ದಾರೆ. ನಿಮ್ಮ ಟೆನ್ಷನ್ ನಮಗೆ ಅರ್ಥವಾಗ್ತಿದೆ. ಆದ್ರೆ ಒಂದು ನಿರ್ಧಾರಕ್ಕೆ ನೀವು ಬರಲೇಬೇಕು ಎನ್ನುತ್ತಾರೆ ಅವರು. ಸ್ನೇಹಿತೆ ಬಳಿ ಎಲ್ಲವನ್ನೂ ಹೇಳುವ ನಿರ್ಧಾರಕ್ಕೆ ಬಂದಿದ್ದರೆ ಯಾವುದನ್ನೂ ಮುಚ್ಚಿಡುವ ಪ್ರಯತ್ನ ಮಾಡ್ಬೇಡಿ. ಎಲ್ಲವನ್ನು ಆಕೆ ಮುಂದಿಡಿ. ಆಕೆ ನಿಮ್ಮ ಮೇಲೆ ಮುನಿಸಿಕೊಳ್ಳಬಹುದು. ಆದ್ರೆ ನಿಮ್ಮ ಒಂದು ತಪ್ಪು ಆಕೆ ಬಾಳನ್ನು ಹಾಳುಮಾಡ್ಬಹುದು ಎನ್ನುತ್ತಾರೆ ತಜ್ಞರು.
ಒಂದು ವೇಳೆ ಸ್ನೇಹಿತೆ ಮುಂದೆ ಇದು ಸಾಧ್ಯವಿಲ್ಲವೆಂದಾದ್ರೆ ಗೆಳತಿ ಪತಿಯ ಜೊತೆ ಮಾತನಾಡಿ ಎಂದು ತಜ್ಞರು ಹೇಳಿದ್ದಾರೆ. ಆತನ ಬಳಿ ಎಲ್ಲ ವಿಷ್ಯವನ್ನು ಸ್ಪಷ್ಟಪಡಿಸಿ. ಆತನ ವರ್ತನೆಯಿಂದ ನಿಮಗೆಷ್ಟು ತೊಂದರೆಯಾಗ್ತಿದೆ ಎಂಬುದನ್ನು ಹೇಳಿ. ಜೊತೆಗೆ ಆತನ ಸಂಸಾರಕ್ಕೆ ಏನು ತೊಂದೆಯಾಗ್ಬಹುದು ಎಂಬುದನ್ನೂ ಹೇಳಿ ಎಂದಿದ್ದಾರೆ ತಜ್ಞರು.