ತಂದೆ ಆಸೆ ಈಡೇರಿಸಲು ಎಂಬಿಬಿಎಸ್ ಬಿಟ್ಟು ಐಎಎಸ್ ಅಧಿಕಾರಿಯಾದ ಮಗಳು

By Suvarna News  |  First Published Sep 13, 2023, 4:24 PM IST

ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗೋದು ಸುಲಭವಲ್ಲ. ಕಠಿಣ ಪರಿಶ್ರಮ ಇದಕ್ಕೆ ಅಗತ್ಯ. ಕೇವಲ ಮೂರೇ ಬಾರಿ ಪರೀಕ್ಷೆ ಎದುರಿಸಿ ತೇರ್ಗಡೆ ಹೊಂದಿದ ಈ ಮಹಿಳೆ ಅಧಿಕಾರಿ ಎಲ್ಲರಿಗೂ ಸ್ಫೂರ್ತಿ.  
 


ಪ್ರತಿಯೊಬ್ಬರೂ ಒಂದೊಂದು ಕನಸು ಕಂಡಿರ್ತಾರೆ. ತಮ್ಮ ಕನಸುಗಳನ್ನು ನನಸಾಗಿಸಲು ಹೆಣಗಾಡುತ್ತಾರೆ. ಆದರೆ ತಮ್ಮ ಹೆತ್ತವರ ನನಸಾಗದ ಕನಸುಗಳನ್ನು ನನಸಾಗಿಸುವವರು ಬಹಳ ಅಪರೂಪ. ಅವರು ಹೆತ್ತವರ ಕನಸನ್ನು ನನಸು ಮಾಡಿದ್ರೆ ಅದಕ್ಕಿಂತ ಯಶಸ್ಸು ಇನ್ನೊಂದಿಲ್ಲ. ಅದಕ್ಕೆ ಈ ಅಧಿಕಾರಿ ಉತ್ತಮ ನಿದರ್ಶನ.

ತಂದೆಯ ಕನಸನ್ನು ನನಸಾಗಿಸಲು ಎಂಬಿಬಿಎಸ್ (MBBS) ಓದನ್ನು ತೊರೆದ  ಯುವತಿ ಈಗ ಧಕ್ಷ ಅಧಿಕಾರಿಯಾಗಿದ್ದಾರೆ. ಯಾರವರು ಎಂಬ ವಿವರವನ್ನು ನಾವಿಂದು ನೀಡ್ತೇವೆ.

Tap to resize

Latest Videos

undefined

ತಂದೆ ಕನಸು ಈಡೇರಿಸಿದ ಐಎಎಸ್ ಅಧಿಕಾರಿ : ನಾವು ಹೇಳ್ತಿರುವುದು ಐಎಎಸ್ ಅಧಿಕಾರಿ ಮಾನ್ಸಿ ಸೋನಾವಾನೆ ಬಗ್ಗೆ. ಅವರು ಮಹಾರಾಷ್ಟ್ರದ ಔರಂಗಾಬಾದ್ ನಿವಾಸಿ. ತಂದೆ ನರೇಂದ್ರ ಸೋನಾವಾನೆ. ತಂದೆ ನರೇಂದ್ರ ಸೋನಾವಾನೆ ಅಕೌಂಟೆಂಟ್. ಅವರು ನಾಗರಿಕ ಸೇವೆಗಳಿಗೆ ಸೇರಲು ಬಯಸಿದ್ದರು. ಆದರೆ ಅವರ ಕನಸು ಈಡೇರಿರಲಿಲ್ಲ. ಅವರು ಅಕೌಂಟೆಂಟ್ ಆಗಿ ವೃತ್ತಿ ಶುರು ಮಾಡಬೇಕಾಯ್ತು. ಆರಂಭದಲ್ಲಿ ಮಾನ್ಸಿಗೆ ಇದು ತಿಳಿದಿರಲಿಲ್ಲ.  

ಎರಡು ಮಕ್ಕಳ ತಂದೆಯನ್ನು ಪ್ರೀತಿಸಿದ್ದ ಲೇಡಿ ಸೂಪರ್‌ಸ್ಟಾರ್‌, ಹಾಳಾಗಿ ಹೋಗುವಂತೆ ಶಾಪ ಹಾಕಿದ್ದಳು ಆತನ ಪತ್ನಿ!

ಮಾನ್ಸಿ ಐಎಎಸ್ ಅಧಿಕಾರಿ ಆಗಿದ್ದು ಹೇಗೆ ? : ಮಾನ್ಸಿ, ನಾಸಿಕ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. ಔರಂಗಾಬಾದ್‌ನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪದವಿಯನ್ನು ಪೂರ್ಣಗೊಳಿಸಿದರು.12ನೇ ತರಗತಿ ನಂತ್ರ ನಡೆಯುವ ವೈದ್ಯಕೀಯ ಪ್ರವೇಶ ಪರೀಕ್ಷೆ, NEET ಯನ್ನು ಬರೆದಿದ್ದ ಮಾನ್ಸಿ ಅದರಲ್ಲಿ ಸಹ ತೇರ್ಗಡೆ ಹೊಂದಿದ್ದರು. ಮಾನ್ಸಿ ಸೋನಾವಾನೆಗೆ ಎಂಬಿಬಿಎಸ್ ಓದುವ ಮನಸ್ಸಿತ್ತು. ಹೆಚ್ಚಿನ ಶಿಕ್ಷಣಕ್ಕೆ ಎಲ್ಲಿಗೆ ಹೋಗಬೇಕೆಂದು ಪ್ಲಾನ್ ಮಾಡುವ ಸಂದರ್ಭದಲ್ಲಿ ತಂದೆ ನನಸಾಗದ ಕನಸಿನ ಬಗ್ಗೆ ತಿಳಿಯಿತು.

ತಮ್ಮ ಎಂಬಿಬಿಎಸ್ ಆಸೆಯನ್ನು ತೊರೆದ ಮಾನ್ಸಿ, ಐಎಎಸ್ ಅಧಿಕಾರಿಯಾಗಲು ನಿರ್ಧರಿಸಿದ್ರು. ಇದಕ್ಕಾಗಿ ಮಾನ್ಸಿ ಮೊದಲು ಮಾಡಿದ ಕೆಲಸವೆಂದ್ರೆ ಬಿಎಗೆ ಪ್ರವೇಶ ಪಡೆದಿದ್ದು. ಕಾಲೇಜಿಗೆ ಪ್ರವೇಶ ಸಿಗ್ತಿದ್ದಂತೆ ಇತ್ತ ಮಾನ್ಸಿ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಆರಂಭಿಸಿದ್ದರು. ಐಎಎಸ್ ಅಧಿಕಾರಿ ಮಾನ್ಸಿ ಸೋನಾವಾನೆ, ಸತತ ಮೂರು ಬಾರಿ  ಯುಪಿಎಸ್‌ಸಿ ಪರೀಕ್ಷೆ ಬರೆದು ಕೊನೆಯಲ್ಲಿ ತೇರ್ಗಡೆಯಾದ್ರು. 

ನೀತಾ ಅಂಬಾನಿ ಮಾತ್ರ ರೂಪವಂತೆ ಅಲ್ಲ; ತಂಗಿನೂ ಸಖತ್‌ ಬ್ಯೂಟಿ, ಸೂಪರ್ ಮಾಡೆಲ್!

ಮೊದಲ ವರ್ಷದಲ್ಲಿ ಮಾನ್ಸಿ ಸೋನಾವಾನೆ,  ಪರೀಕ್ಷೆ ಮತ್ತು ಯುಪಿಎಸ್ಸಿ ಆಯ್ಕೆ ಪ್ರಕ್ರಿಯೆಯ ಬಗ್ಗೆ ಅರ್ಥಮಾಡಿಕೊಂಡರು. ಅವರು NCERT ಪುಸ್ತಕಗಳಿಂದ ತಮ್ಮ ತಯಾರಿಯನ್ನು ಪ್ರಾರಂಭಿಸಿದರು. ಅಲ್ಲದೆ ಉಲ್ಲೇಖ ಪುಸ್ತಕಗಳ ಸಹಾಯವನ್ನು ಪಡೆದರು. ಆದ್ರೆ ಮೊದಲ ಬಾರಿ ಅವರಿಗೆ ಪರೀಕ್ಷೆ ಪಾಸ್ ಆಗಲು ಸಾಧ್ಯವಾಗಲಿಲ್ಲ. ಇದ್ರಿಂದ ಮಾನ್ಸಿ ಎದೆಗುಂದಲಿಲ್ಲ. ತಮ್ಮ ಛಲ ಬಿಡಲಿಲ್ಲ. ಎರಡನೇ ಪ್ರಯತ್ನದಲ್ಲಿ, ಐಎಎಸ್ ಅಧಿಕಾರಿ ಮಾನ್ಸಿ ಸೋನಾವಾನೆ ಅವರು ತಮ್ಮ ತಯಾರಿ ಸಮಯದಲ್ಲಿ ಕೆಲ ತಪ್ಪುಗಳನ್ನು ಮಾಡಿದ್ದರು. ಈ ಕಾರಣದಿಂದಾಗಿ ಅವರು ತೇರ್ಗಡೆ ಹೊಂದಲು ಸಾಧ್ಯವಾಗಲಿಲ್ಲ. ಆಗ್ಲೂ ನೋವುಂಡು ತಮ್ಮ ಪ್ರಯತ್ನ ಕೈಬಿಡದ ಮಾನ್ಸಿ, ಮೂರನೇ ಬಾರಿ ಸರಿಯಾದ ಯೋಜನೆ ರೂಪಿಸಿಕೊಂಡು ಓದಲು ಶುರು ಮಾಡಿದ್ದರು. ಅದು ಯಶಸ್ಸು ಕಂಡಿತು. ಮಾನ್ಸಿ ಸೋನಾವಾನೆ ತಮ್ಮ ಮೂರನೇ ಪ್ರಯತ್ನದಲ್ಲಿ ಪಾಸ್ ಆದ್ರು. 2021 ರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಮಾನ್ಸಿ ಸೋನಾವಾನೆ  AIR 627 ಅನ್ನು ಪಡೆದುಕೊಂಡರು. 

ಯುಪಿಎಸ್‌ಸಿ ಓದುತ್ತಿರುವ ಇತರ ಅಭ್ಯರ್ಥಿಗಳಿಗೆ ಸ್ಫೂರ್ತಿ ನೀಡಿದ ಮಾನ್ಸಿ : ನಾಗರಿಕ ಸೇವಾ ಪರೀಕ್ಷೆಯು ಭಾರತದಲ್ಲಿ ನಡೆಯುವ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು ಪರೀಕ್ಷೆಗೆ ತಯಾರಿ ನಡೆಸುತ್ತಾರೆ. ಆದರೆ ಅವರಲ್ಲಿ ಕೆಲವರು ಮಾತ್ರ ತಮ್ಮ ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದಿಂದ ಉತ್ತೀರ್ಣರಾಗುತ್ತಾರೆ. ಅದರಲ್ಲಿ ಒಬ್ಬರಾಗಿರುವ ಮಾನ್ಸಿ, ಪರೀಕ್ಷೆಯನ್ನು ಗೆದ್ದು ಬರುವುದು ಸುಲಭದ ಪ್ರಕ್ರಿಯೆಯಲ್ಲ. ಇದು ಸುದೀರ್ಘ ಮತ್ತು ಸವಾಲಿನ ಕೆಲಸ. ಎಲ್ಲರೂ ಒಂದೇ ದೋಣಿಯಲ್ಲಿದ್ದಾರೆ. ನಂಬಿಕೆ ಮತ್ತು ವಿಶ್ವಾಸವನ್ನು ಹೊಂದಿರುವುದು ಇಲ್ಲಿ ಬಹಳ ಮುಖ್ಯ ಎಂದಿದ್ದಾರೆ. 
 

click me!