ಸವಾಲು ಮೆಟ್ಟಿನಿಂತು ನಟಿಯಾದ ಟ್ರಾನ್ಸ್ಜೆಂಡರ್ ವೈದ್ಯೆ, ಫ್ಯಾನ್ಸ್ ಫಿದಾ!

By Suvarna NewsFirst Published Sep 11, 2023, 3:45 PM IST
Highlights

ತ್ರಿನೇತ್ರ ಹಲ್ಡರ್ ಗುಮ್ಮರಾಜು ಕರ್ನಾಟಕ ಮೂಲಕ ಟ್ರಾನ್ಸ್ಜೆಂಡರ್ ವೈದ್ಯೆ. ಈಗ ವೆಬ್ ಸರಣಿಯಲ್ಲಿ ಮಿಂಚುತ್ತಿರುವ ತ್ರಿನೇತ್ರ ಹಲ್ಡರ್ ಗುಮ್ಮರಾಜು ಈ ಹಂತಕ್ಕೆ ಬರಲು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಅವರ ದಾರಿ ಸುಲಭವಾಗಿರಲಿಲ್ಲವಾದ್ರೂ ಸಹಿಯಾದ ಫಲ ಸಿಕ್ಕಿದೆ.  
 

ತ್ರಿನೇತ್ರ ಹಲ್ಡರ್ ಗುಮ್ಮರಾಜು ಭಾರತೀಯ ನಟಿ, ವೈದ್ಯೆ, ಕಂಟೆಂಟ್ ಕ್ರಿಯೇಟರ್ ಮತ್ತು ಟ್ರಾನ್ಸ್ ಜೆಂಡರ್ ಕಾರ್ಯಕರ್ತೆ. ದೂರದರ್ಶನ ಮತ್ತು ಹಿಂದಿ ಸಿನಿಮಾದಲ್ಲಿ ತ್ರಿನೇತ್ರ ಹಲ್ಡರ್ ಗುಮ್ಮರಾಜು ಕೆಲಸ ಮಾಡುತ್ತಿದ್ದಾರೆ. ತ್ರಿನೇತ್ರ ಹಲ್ಡರ್, ಪ್ರೈಮರಿ ಕೇರ್ ವೈದ್ಯೆಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಈಗ ರೊಮ್ಯಾಂಟಿಕ್ ಡ್ರಾಮಾ ವೆಬ್ ಸರಣಿ ಮೇಡ್ ಇನ್ ಹೆವೆನ್‌ನಲ್ಲಿ ಮೊದಲ ಬಾರಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ತ್ರಿನೇತ್ರ ಹಲ್ಡರ್ ಗುಮ್ಮರಾಜು (Trinetra Halder Gummaraju ) ತಾವು ಕಳೆದ ಕಠಿಣ ದಿನಗಳ ಬಗ್ಗೆ, ಸವಾಲಿನ ಬಗ್ಗೆ ಆಗಾಗ ಮಾತನಾಡ್ತಿರುತ್ತಾರೆ. 
ನಾನು ಯಾವಾಗಲೂ ಮಹಿಳೆಯಾಗಿದ್ದೇನೆ, ಬೇರೆ ಏನಾಗಬೇಕೆಂದು ನನಗೆ ತಿಳಿದಿಲ್ಲ ಎನ್ನುವ ತ್ರಿನೇತ್ರ ಹಲ್ಡರ್ ಗುಮ್ಮರಾಜು, ನಾನೇನು ಎಂಬುದನ್ನು ತಿಳಿಯಲು ತುಂಬಾ ಸಮಯ ಹಿಡಿತು ಎನ್ನುತ್ತಾರೆ.  ನಾನು ಯಾರು, ನನ್ನೊಳಗಿರೋದು ಏನು ಎಂಬುದು ತಿಳಿದಾಗ ಎದುರಾಗಿದ್ದೇ ದೊಡ್ಡ ಸವಾಲು ಎನ್ನುತ್ತಾರೆ ತ್ರಿನೇತ್ರ ಹಲ್ಡರ್ ಗುಮ್ಮರಾಜು. 

Latest Videos

ನಟಿ ವಿಜಯಲಕ್ಷ್ಮಿಗೆ ಏಳು ಬಾರಿ ಗರ್ಭಪಾತ! ನಟ,ರಾಜಕಾರಣಿ ಸೀಮನ್​ಗೆ ಪೊಲೀಸ್ ಬುಲಾವ್​

ಮೊದಲ ಬಾರಿ ಈ ವಿಷ್ಯವನ್ನು ತ್ರಿನೇತ್ರ ಹಲ್ಡರ್ ಗುಮ್ಮರಾಜು, ತಮ್ಮ ತಾಯಿ ಬಳಿಗೆ ಹೇಳುವ ಪ್ರಯತ್ನ ನಡೆಸಿದ್ದರಂತೆ. ಆದ್ರೆ ಅದು ತಾಯಿಗೆ ಅರ್ಥವಾಗ್ಲಿಲ್ಲ. ಅವರು ಏನೇನೋ ಹೇಳಿದ್ರು ಎನ್ನುವ ತ್ರಿನೇತ್ರ ಹಲ್ಡರ್ ಗುಮ್ಮರಾಜು, ನಮ್ಮ ಸಮಾಜದಲ್ಲಿ ಮೊದಲ ಮಗನನ್ನು ಕಳೆದುಕೊಳ್ಳೋದು ಸಾವಿಗೆ ಸಮಾನ. ನಮ್ಮ ಸಮಾಜದಲ್ಲಿ ಈ ಲಿಂಗ (Gender) ಪರಿವರ್ತನೆಯನ್ನು ಜನರು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬುದು ನನಗೆ ಗೊತ್ತಾಗಿದೆ ಎನ್ನುತ್ತಾರೆ.  

ತ್ರಿನೇತ್ರ ಹಲ್ಡರ್ ಗುಮ್ಮರಾಜು ಅವರಿಗೆ ಕುಟುಂಬದ ಬೆಂಬಲ ಸಂಪೂರ್ಣವಾಗಿ ಸಿಕ್ಕಿದೆ. ಆದ್ರೆ ಆರಂಭದಲ್ಲಿ ಎದುರಿಸಿದ ಸವಾಲಿನಿಂದ ಅವರು ಸಾಕಷ್ಟು ವಿಷ್ಯಗಳನ್ನು ಕಲಿತಿದ್ದಾರೆ. ಹುಟ್ಟಿದ ಮಗುವಿನ ಲಿಂಗವನ್ನೇ ಪಾಲಕರು ಒಪ್ಪಿಕೊಳ್ಳುತ್ತಾರೆ. ಮಕ್ಕಳನ್ನು ಬೇರೆ ಲಿಂಗದೊಂದಿಗೆ ಗುರುತಿಸಲು ಪಾಲಕರಿಗೆ ಕಠಿಣವಾಗುತ್ತದೆ ಎಂದು ತ್ರಿನೇತ್ರ ಹಲ್ಡರ್ ಗುಮ್ಮರಾಜು ಹೇಳುತ್ತಾರೆ. ತಾಯಿಯ ಮೇಕಪ್ ನಿಂದ ಹಿಡಿದು ಬಿಂದಿಯವರೆಗೆ ಎಲ್ಲ ಮಹಿಳೆಯರ ವಸ್ತುವಿಗೆ ತ್ರಿನೇತ್ರ ಹಲ್ಡರ್ ಗುಮ್ಮರಾಜು ಬಾಲ್ಯದಲ್ಲೇ ಆಕರ್ಷಿತರಾಗಿದ್ದರಂತೆ. ಆ ವಸ್ತುಗಳು ಅವರನ್ನು ಸೆಳೆಯುತ್ತಿದ್ದವಂತೆ. ಆದ್ರೆ ಪುರುಷ ದೇಹದಲ್ಲಿ ಸಿಕ್ಕಿಬಿದ್ದ ಹುಡುಗಿ ನಾನು ಎಂಬುದನ್ನು ಅರಿಯಲು ಎರಡು ದಶಕ ಹಿಡಿತು ಎನ್ನುತ್ತಾರೆ ತ್ರಿನೇತ್ರ ಹಲ್ಡರ್ ಗುಮ್ಮರಾಜು. ಕೊನೆಗೂ ನಾನು ಯಾರೆಂಬುದನ್ನು ತಿಳಿದೆ, ಅದಕ್ಕೆ ಒಪ್ಪಿಕೊಂಡೆ ಹಾಗೂ ಮಹಿಳೆಯಾಗಿ ಪರಿವರ್ತನೆಗೊಂಡೆ ಎನ್ನುತ್ತಾರೆ ತ್ರಿನೇತ್ರ ಹಲ್ಡರ್ ಗುಮ್ಮರಾಜು. 

'ಡರ್ಟಿ ಪಿಕ್ಚರ್‌'ನಲ್ಲಿ ಬೆತ್ತಲಾಗಿದ್ದ ವಿದ್ಯಾ ಬಾಲನ್‌, ಸಿಲ್ಕ್ ಸ್ಮಿತಾ ಪಾತ್ರ ಮಾಡಿದ ನಂತರ ಜೀವನಾನೇ ಬದಲಾಯ್ತಂತೆ!

ಟ್ರಾನ್ಸ್ಜೆಂಡರ್ ಸಮುದಾಯವನ್ನು ಜನರು ಬೇಗ ಒಪ್ಪಿಕೊಳ್ಳುವುದಿಲ್ಲ. ಅವರನ್ನು ತಾತ್ಸಾರದಿಂದ ನೋಡುವ ಜನರೇ ಹೆಚ್ಚು. ಇದೇ ಕಾರಣಕ್ಕೆ ಎಷ್ಟೋ ಮಂದಿ ಮನೆಬಿಟ್ಟು ಬಂದಿದ್ದಾರೆ. ಆದ್ರೆ ತ್ರಿನೇತ್ರ ಹಲ್ಡರ್ ಗುಮ್ಮರಾಜು ಅವರಿಗೆ ಕುಟುಂಬದ ಸಂಪೂರ್ಣ ಬೆಂಬಲ ಸಿಕ್ಕಿರುವ ಕಾರಣ, ಅವರು ತಮ್ಮನ್ನು ಅದೃಷ್ಟಶಾಲಿ ಎಂದೇ ಭಾವಿಸಿದ್ದಾರೆ.  ತ್ರಿನೇತ್ರ ಹಲ್ಡರ್ ಗುಮ್ಮರಾಜು ಅವರ ಬದುಕಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಮೊದಲು ಹುಡುಗ ನಂತ್ರ ಹುಡುಗಿ ಆ ನಂತ್ರ ವೈದ್ಯೆ, ಈಗ ನಟಿಯಾಗಿ ತ್ರಿನೇತ್ರ ಹಲ್ಡರ್ ಗುಮ್ಮರಾಜು ಮಿಂಚುತ್ತಿದ್ದಾರೆ ನಟನೆಯಿರಲಿ ಅಥವಾ ಇನ್ನಾವುದೇ ವಿಷ್ಯವಿರಲಿ ಕಲಿಕೆ ನಿರಂತರವಾಗಿ ಸಾಗುತ್ತದೆ ಎನ್ನುತ್ತಾರೆ.

ತ್ರಿನೇತ್ರ ಹಲ್ಡರ್ ಗುಮ್ಮರಾಜು, ಮಣಿಪಾಲದಲ್ಲಿ ಜನಿಸಿದ್ರು. ಎಂಟು ವರ್ಷ ಹೈದ್ರಾಬಾದ್ ನಲ್ಲಿದ್ದ ತ್ರಿನೇತ್ರ ಹಲ್ಡರ್ ಗುಮ್ಮರಾಜು ವಿದ್ಯಾಭ್ಯಾಸ ಬೆಂಗಳೂರಿನಲ್ಲಾಗಿದೆ. ಮಣಿಪಾಲದಲ್ಲಿ ಎಂಬಿಬಿಎಸ್ ಡಿಗ್ರಿ ಪಡೆದಿದ್ದಾರೆ. ಸ್ತ್ರೀ ರೋಗ ವೈದ್ಯೆಯಾಗಿರುವ ತ್ರಿನೇತ್ರ ಹಲ್ಡರ್ ಗುಮ್ಮರಾಜು, ನಟನೆಯಲ್ಲೂ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ತ್ರಿನೇತ್ರ ಹಲ್ಡರ್ ಗುಮ್ಮರಾಜು ಸಂದರ್ಶನ ನೋಡಿದ ಜನರು ತ್ರಿನೇತ್ರ ಹಲ್ಡರ್ ಗುಮ್ಮರಾಜು ಪಾಲಕರನ್ನು ಮೆಚ್ಚಿಕೊಂಡಿದ್ದಾರೆ. ಅಲ್ಲದೆ ತ್ರಿನೇತ್ರ ಹಲ್ಡರ್ ಗುಮ್ಮರಾಜು ನಟನೆ, ಅವರ ಸಾಮಾಜ ಸೇವೆಗೆ ಶಹಬ್ಬಾಸ್ ಹೇಳಿದ್ದಾರೆ.  
 

click me!