ಹಿಂದೆ ಮೈಲಿಗೆಯಾಗಿದ್ದ ಪಿರಿಯಡ್ಸ್ ಬಗ್ಗೆ ಈಗ ಮಹಿಳೆಯರು ಮಾತನಾಡ್ತಾರೆ. ಹೊಟ್ಟೆ ನೋವು, ಪ್ಯಾಡ್ ಬಳಕೆ ಸೇರಿದಂತೆ ಅನೇಕ ವಿಷ್ಯದ ಬಗ್ಗೆ ಕಚೇರಿಯಲ್ಲೂ ಚರ್ಚೆ ಮಾಡ್ತಾರೆ. ಆದ್ರೆ ಈ ಮಹಿಳೆಗೆ ಅದೇ ಸಂಕಷ್ಟ ತಂದಿದೆ.
ಪ್ರತಿ ತಿಂಗಳು ಕಾಡುವ ನೈಸರ್ಗಿಕ ಕ್ರಿಯೆ ಮುಟ್ಟು. ಪಿರಿಯಡ್ಸ್ ಕೆಲ ಮಹಿಳೆಯರ ದೊಡ್ಡ ಶತ್ರು. ಆರಂಭವಾಗುವ ಒಂದು ವಾರದ ಹಿಂದಿನಿಂದಲೇ ಶುರುವಾಗುವ ನೋವು, ಮಾನಸಿಕ ಹಿಂಸೆ, ಪಿರಿಯಡ್ಸ್ ಮುಗಿದ ನಾಲ್ಕೈದು ದಿನ ಕಾಡುವುದಿದೆ. ಪಿರಿಯಡ್ಸ್ ಸಮಸ್ಯೆ ಎಲ್ಲ ಮಹಿಳೆಯರಿಗೆ ಒಂದೇ ರೀತಿ ಇರೋದಿಲ್ಲ. ಕೆಲವರಿಗೆ ಹೆವಿ ಬ್ಲೀಡಿಂಗ್ ಕಾಡಿದ್ರೆ ಮತ್ತೆ ಕೆಲವರಿಗೆ ಹೊಟ್ಟೆ ನೋವು, ಕಿಬ್ಬೊಟ್ಟೆ ನೋವು, ಸೊಂಟ ನೋವು, ಕಾಲು ನೋವು ಹೀಗೆ ಬೇರೆ ಬೇರೆ ಸಮಸ್ಯೆ ಕಾಡುವುದಿದೆ. ಪಿರಿಯಡ್ಸ್ ಬಗ್ಗೆ ಹಿಂದಿದ್ದ ಭಾವನೆಗಳು ಈಗಿನ ದಿನಗಳಲ್ಲಿ ಸ್ವಲ್ಪಮಟ್ಟಿಗೆ ಬದಲಾಗಿದೆ.
ಮಹಿಳೆಯರು ಪಿರಿಯಡ್ಸ್ (Periods) ಬಗ್ಗೆ ಮಾತನಾಡುವ ಧೈರ್ಯ ಮಾಡ್ತಿದ್ದಾರೆ. ಹಿಂದಿನ ಪದ್ಧತಿಗಳನ್ನು ತೊರೆದು, ಮುಟ್ಟಿನ ಸಮಯದಲ್ಲೂ ಎಲ್ಲರ ಜೊತೆ ಬೆರೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಇನ್ನೊಂದು ಕಡೆ ಪಿರಿಯಡ್ಸ್ ನೈರ್ಮಲ್ಯ (Hygiene) ದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳೂ ನಡೆಯುತ್ತಿವೆ. ಪುರುಷರು ಕೂಡ ಪಿರಿಯಡ್ಸ್ ಬಗ್ಗೆ ಇದ್ದ ತಮ್ಮ ಆಲೋಚನೆಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ. ಹುಡುಗಿರಿಗೆ ಮುಟ್ಟಿನ ಸಮಯದಲ್ಲಿ ನೆರವಾಗುವ ಅನೇಕ ತಂದೆ, ಸಹೋದರರು, ಸ್ನೇಹಿತರನ್ನು ನೀವು ನೋಡ್ಬಹುದು.
undefined
ಬ್ರಿಟನ್ ಪ್ರಧಾನಿ ಪತ್ನಿ ಕರ್ನಾಟಕದ ಮಗಳು ಅಕ್ಷತಾ ಮೂರ್ತಿ ಡ್ರೆಸ್ ಕೋಡ್ ಗೆ ಭಾರತೀಯರು ಫಿದಾ
ಭಾರತ (India)ದಲ್ಲಿ ಪಿರಿಯಡ್ಸ್ ಬಗ್ಗೆ ಆಲೋಚನೆ ಬದಲಾಗ್ತಿದ್ದರೂ ಅದು ಇನ್ನೂ ಸರ್ವವ್ಯಾಪಿ ಆಗಿಲ್ಲ. ಕೆಲ ಪ್ರದೇಶದಲ್ಲಿ ಈಗ್ಲೂ ಗೊಡ್ಡು ಪದ್ಧತಿ ಜಾರಿಯಲ್ಲಿದೆ. ಪಿರಿಯಡ್ಸ್ ಸಮಯದಲ್ಲಿ ಪ್ರತ್ಯೇಕವಾಗಿ ವಾಸ ಮಾಡುವ ಜನರಿದ್ದಾರೆ. ಹಾಗೆ ಅದನ್ನು ಮೈಲಿಗೆ ಎಂದು ಭಾವಿಸಿರುವ ಜನರು ಮಕ್ಕಳ ಮುಂದೆ, ಸಾರ್ವಜನಿಕ ಪ್ರದೇಶದಲ್ಲಿ ಅದ್ರ ಬಗ್ಗೆ ಮಾತನಾಡೋದಿಲ್ಲ.
ಮುಟ್ಟಿನ ಬಗ್ಗೆ ಮಾತನಾಡಿದ್ದ ಹುಡುಗಿಯೊಬ್ಬಳಿಗೆ ಆಕೆ ಕೆಲಸ ಮಾಡ್ತಿದ್ದ ಕಂಪನಿಯ ಮಾನವ ಸಂಪನ್ಮೂಲ ತಂಡದಿಂದ ಎಚ್ಚರಿಕೆ ನೊಟೀಸ್ ಬಂದಿದೆ. ರೆಡ್ಡಿಟ್ ನಲ್ಲಿ ಮಹಿಳೆ ತನ್ನ ನೋವನ್ನು ಹಂಚಿಕೊಂಡಿದ್ದಾಳೆ. ರೆಡ್ಡಿಟ್ ನಲ್ಲಿ ಮಹಿಳೆ ತನ್ನ ಜೊತೆ ಆದ ತಾರತಮ್ಯದ ಬಗ್ಗೆ ಬರೆದುಕೊಂಡಿದ್ದಾಳೆ. ಆಕೆ ಕಂಪನಿಯೊಂದರಲ್ಲಿ ಮೇಲ್ವಿಚಾರಕಿಯಾಗಿ ಕೆಲಸ ಮಾಡ್ತಾಳಂತೆ. ಉದ್ಯೋಗಿಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸಲು ಆಕೆ ಪ್ರಯತ್ನ ನಡೆಸುತ್ತಾಳಂತೆ. ಆಕೆ ಕಚೇರಿಯಲ್ಲಿ ಆಕೆ ಕೈ ಕೆಳಗೆ ಕೆಲಸ ಮಾಡುವ ಉದ್ಯೋಗಿಯೊಬ್ಬಳಿಗೆ ಪಿರಿಯಡ್ಸ್ ನೋವು ಕಾಣಿಸಿಕೊಂಡಿದೆ. ಆಕೆ ಇದನ್ನು ಮೇಲ್ವಿಚಾರಕಿಗೆ ಹೇಳಿದ್ದಾಳೆ. ಪಿರಿಯಡ್ಸ್ ನಿಂದಾಗಿ ವಿಪರೀತ ನೋವು ಕಾಣಿಸಿಕೊಂಡಿದೆ ಎಂದಿದ್ದಾಳೆ. ಅದಕ್ಕೆ ಉತ್ತರವಾಗಿ ಮೇಲ್ವಿಚಾರಕಿ ಕೂಡ ನನಗೂ ಪಿರಿಯಡ್ಸ್ ಆಗಿದ್ದು, ಹೊಟ್ಟೆ ನೋವಾಗ್ತಿದೆ ಎಂದಿದ್ದಾಳೆ. ಮಹಿಳೆ ಕಚೇರಿಯಲ್ಲಿ ಈ ಬಗ್ಗೆ ಮಾತನಾಡ್ತಿದ್ದಂತೆ ಮಾನವ ಸಂಪನ್ಮೂಲ ತಂಡ, ಮಹಿಳೆಗೆ ನೊಟೀಸ್ ನೀಡಿದೆ. ಇಂಥ ಮಾತುಗಳನ್ನು ಆಡಬಾರದುಎ ಎಂದು ಎಚ್ಚರಿಕೆ ನೀಡಿದೆ.
ನಟಿ ವಿಜಯಲಕ್ಷ್ಮಿಗೆ ಏಳು ಬಾರಿ ಗರ್ಭಪಾತ! ನಟ,ರಾಜಕಾರಣಿ ಸೀಮನ್ಗೆ ಪೊಲೀಸ್ ಬುಲಾವ್
ಇಲ್ಲಿನ ಅಚ್ಚರಿ ವಿಷ್ಯವೆಂದ್ರೆ ಮಾನವ ಸಂಪನ್ಮೂಲ ತಂಡದ ಮುಖ್ಯಸ್ಥೆ ಕೂಡ ಮಹಿಳೆಯಂತೆ. ಆಕೆ ಹಿಂದಿನ ಬಾರಿ ಲಿಂಗ ಅಸಮಾನತೆ ಬಗ್ಗೆ ಸುದೀರ್ಘ ಭಾಷಣ ಮಾಡಿದ್ದಳಂತೆ. ಮಹಿಳೆಯರು ಬೆಳಿಗ್ಗೆ ರೆಡಿಯಾಗಲು ಕಡಿಮೆ ಸಮಯ ತೆಗೆದುಕೊಳ್ಳಿ. ಯಾಕೆಂದ್ರೆ ಪುರುಷರು ಮಹಿಳೆಯರನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಹೇಳಿದ್ದಳಂತೆ. ಈಗ ಹೆಚ್ ಆರ್ ಹೀಗೆ ಹೇಳ್ತಿದ್ದಾರೆಂದು ಮಹಿಳೆ ರೆಡ್ಡಿಟ್ ನಲ್ಲಿ ಬರೆದಿದ್ದಾರೆ.
ಮಹಿಳೆ ಪೋಸ್ಟ್ ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರು ಹೆಚ್ ಆರ್ ಕೆಲಸವನ್ನು ಖಂಡಿಸಿದ್ದಾರೆ. ಇಂಥ ತಾರತಮ್ಯ ಇನ್ನೂ ನಡೆಯುತ್ತಿದೆ ಎಂದು ಕೆಲವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಕೆಲಸ ಮಾಡುವ ಸ್ಥಳದಲ್ಲಿ ಸಂತೋಷವಾಗಿರದ ನನ್ನ ಬಳಿ ಬಂದ ಬಾಸ್, ಕಾರಣವನ್ನು ಕೇಳಿದ್ದರು. ನಾನು ಇದಕ್ಕೆ ಪಿರಿಯಡ್ಸ್ ಕಾರಣ ಎಂದಿದ್ದೆ. ಆದ್ರೆ ಪಿರಿಯಡ್ಸ್ ಕಾರಣ ನೀಡ್ಬೇಡ ಎಂದು ಗದರಿದ್ದರು ಎಂದು ಮಹಿಳೆಯೊಬ್ಬಳು ಕಮೆಂಟ್ ಮಾಡಿದ್ದಾಳೆ.