ನನಗೆ ಇಂಗ್ಲೀಷ್ ನಲ್ಲಿ ಹಿಡಿದತವಿಲ್ಲ, ಸ್ಪರ್ಧಾತ್ಮಕ ಪರೀಕ್ಷೆ ಬರೆಯೋದು ಕಷ್ಟ ಎನ್ನುತ್ತ ಕುಳಿತುಕೊಳ್ಬೇಡಿ. ಮನಸ್ಸು ಮಾಡಿದ್ರೆ ಏನು ಬೇಕಾದ್ರೂ ಮಾಡ್ಬಹುದು. ಇದಕ್ಕೆ ಸುರಭಿ ಗೌತಮ್ ಉತ್ತಮ ನಿದರ್ಶನ.
ಯುಪಿಎಸ್ಸಿ ಪರೀಕ್ಷೆ ಕಠಿಣವಾಗಿರುತ್ತದೆ. ಪೂರ್ವಭಾವಿ ಪರೀಕ್ಷೆಯಲ್ಲಿ ಪಾಸ್ ಆದ್ರೂ ಮುಖ್ಯ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಪಾಸ್ ಆಗೋದು ಕಷ್ಟ ಎನ್ನುವವರೇ ಹೆಚ್ಚು. ಸಾಮಾನ್ಯವಾಗಿ ನಾವೆಲ್ಲ ಯುಪಿಎಸ್ಸಿ ಪರೀಕ್ಷೆ ಬರೆಯಲು ಉತ್ತಮ ಇಂಗ್ಲೀಷ್ ಬರ್ಬೇಕು ಎಂದು ಭಾವಿಸ್ತೇವೆ. ಆದ್ರೆ ಇದು ತಪ್ಪು ಕಲ್ಪನೆ. ಕನ್ನಡ ಮಾಧ್ಯಮದಲ್ಲಿ ನೀವು ಓದಿದ್ದರೂ ಯುಪಿಎಸ್ಸಿ ಗೆ ತಯಾರಿ ನಡೆಸಬಹುದು. ಕಠಿಣ ಪರಿಶ್ರಮ ಮತ್ತು ಉತ್ತಮ ತಂತ್ರದೊಂದಿಗೆ ನೀವು ಪರೀಕ್ಷೆಯನ್ಉ ಪಾಸ್ ಆಗ್ಬಹುದು. ಯುಪಿಎಸ್‌ಸಿ ಪರೀಕ್ಷೆಯ ಮೊದಲ ಪ್ರಯತ್ನದಲ್ಲಿ ತೇರ್ಗಡೆಯಾಗುವ ಮೂಲಕ ಐಎಎಸ್ ಆಗುವ ಕನಸನ್ನು ನನಸು ಮಾಡಿಕೊಂಡ ಸುರಭಿ ಗೌತಮ್ ಅವರ ಕಥೆ ನಿಮಗೆ ಸ್ಪೂರ್ತಿ. ಇಂಗ್ಲೀಷ್ ನಲ್ಲಿ ಪರ್ಫೆಕ್ಟ್ ಇಲ್ಲ ಎಂದರೂ ನೀವು ಯುಪಿಎಸ್ಸಿ ಪರೀಕ್ಷೆಯನ್ನು ಪಾಸ್ ಮಾಡಬಹುದು ಎಂಬುದನ್ನು ಸುರಭಿ ಗೌತಮ್ ತೋರಿಸಿಕೊಟ್ಟಿದ್ದಾರೆ.
ಸುರಭಿ ಗೌತಮ್ ಯಾರು? : ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಅಮ್ದಾರ ಗ್ರಾಮದ ನಿವಾಸಿ ಸುರಭಿ ಗೌತಮ್. ಅವರ ತಂದೆ ಮೈಹಾರ್ ನ್ಯಾಯಾಲಯದಲ್ಲಿ ವಕೀಲರಾಗಿದ್ದರೆ, ತಾಯಿ ಡಾ || ಸುಶೀಲಾ ಗೌತಮ್ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಶಾಲಾ ಶಿಕ್ಷಣವನ್ನು ಹಳ್ಳಿಯ ಶಾಲೆಯಲ್ಲಿ ಮುಗಿಸಿದ್ದರು ಸುರಭಿ. 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳಲ್ಲಿ ಅವರು ಅತ್ಯುತ್ತಮ ಸಾಧನೆ ಮಾಡಿದ್ದಲ್ಲದೆ ತಮ್ಮ ರಾಜ್ಯದ ಮೆರಿಟ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಸುರುಭಿ ಬರೆದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದಾರೆ. ಸುರಭಿ ಗೌತಮ್‌ಗೆ 12ನೇ ತರಗತಿಯಲ್ಲಿ ಸಂಧಿವಾತ ಜ್ವರ ಕಾಣಿಸಿಕೊಂಡಿತ್ತು. 150 ಕಿಲೋಮೀಟರ್ ದೂರದಲ್ಲಿರುವ ವೈದ್ಯರನ್ನು ಭೇಟಿ ಮಾಡಲು ಹೋಗ್ಬೇಕಿತ್ತು. ಪ್ರತಿ 15 ದಿನಕ್ಕೊಮ್ಮೆ 150 ಕಿಲೋಮೀಟರ್ ಹೋಗ್ತಿದ್ದ ಸುರಭಿ ಛಲ ಮಾತ್ರ ಬಿಟ್ಟಿರಲಿಲ್ಲ.
undefined
ದಿ ಎಲಿಫ್ಯಾಂಟ್ ವಿಸ್ಪರ್ಸ್‌ನ ಬೆಳ್ಳಿಗೆ ಸರ್ಕಾರಿ ಕೆಲಸ: ಬೆಳ್ಳಿ ಈಗ ತಮಿಳುನಾಡಿನ ಮೊದಲ ಮಹಿಳಾ ಕಾವಡಿ
ನಂತ್ರ ಭೋಪಾಲ್‌ನ ಇಂಜಿನಿಯರಿಂಗ್ ಕಾಲೇಜಿನಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ಶಿಕ್ಷಣ ಶುರು ಮಾಡಿದ್ದ ಸುರಭಿಗೆ ಇಂಗ್ಲೀಷ್ ಕಠಿಣವಾಗಿತ್ತು. ಸ್ಪಷ್ಟವಾಗಿ ಇಂಗ್ಲೀಷ್ ನಲ್ಲಿ ಮಾತನಾಡಲು ಬರದ ಕಾರಣ ಕೀಳರಿಮೆಯಿಂದ ಬಳಲುತ್ತಿದ್ದರಂತೆ. ಅದನ್ನು ಮೆಟ್ಟಿ ನಿಂತರು. ನಿಧಾನವಾಗಿ ಇಂಗ್ಲೀಷ್ ಮೇಲೆ ಹಿಡಿತ ಸಾಧಿಸುತ್ತಾ ಹೋದ್ರು. ದಿನಕ್ಕೆ 10 ಪದ ಇಂಗ್ಲೀಷ್ ಕಲಿಯುತ್ತಿದ್ದ ಸುರಭಿ, ಯಾವುದೇ ಒಂದು ಪದವನ್ನು ಅಥವಾ ವಾಕ್ಯವನ್ನು ಕೇಳಿದ ನಂತ್ರ ಅದನ್ನು ಕಲಿತು, ತನ್ನನ್ನು ತಾನು ಸುಧಾರಿಸಿಕೊಳ್ಳುವ ಯತ್ನ ನಡೆಸಿದ್ದರು. ಇಂಜಿನಿಯರಿಂಗ್ ಮುಗಿಸಿದ ನಂತ್ರ ಟಿಸಿಎಸ್ ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ ಸುರಭಿಗೆ ಸಿವಿಲ್ ಇಂಜಿನಿಯರಿಂಗ್ ಮೇಲೆ ಒಲವಿತ್ತು. ಹಾಗಾಗಿ ಕೆಲಸ ಬಿಡಬೇಕಾಯ್ತು.
ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ ಸುರಭಿ : ಸುರಭಿ ಗೌತಮ್ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ (Competitive Exams) ಯಶಸ್ಸು ಸಾಧಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಯುಪಿಎಸ್ಸಿ (UPSC) ಗಿಂತ ಮೊದಲು GATE, ದೆಹಲಿ ಪೊಲೀಸ್, FCI, ISRO, SSC CGL ಮತ್ತು IES ಪರೀಕ್ಷೆಗಳಲ್ಲಿ ಸುರಭಿ ಉತ್ತೀರ್ಣರಾಗಿದ್ದಾರೆ. ಇಷ್ಟೆಲ್ಲಾ ಇದ್ದರೂ ಐಎಎಸ್ ಅಧಿಕಾರಿಯಾಗಬೇಕೆಂಬುದು ಅವರ ಕನಸಾಗಿತ್ತು. ಅದಕ್ಕಾಗಿ ಅವರು ಶ್ರಮಿಸಿದರು. ಗುರಿಯಿಟ್ಟು ಓದಿದ ಅವರು ತಮ್ಮ ಮೊದಲ ಪ್ರಯತ್ನದಲ್ಲಿ ಯುಪಿಎಸ್‌ಸಿಯಲ್ಲಿ ಅಖಿಲ ಭಾರತ 50 ರ್ಯಾಂಕ್ ಪಡೆದರು.
ಮಗಳ ಜೊತೆ ಫೋಟೋ ಹಂಚಿ ಕೊಂಡ ರಾಧಿಕಾಗೆ ಯಶ್ ಮುಂದಿನ ಚಿತ್ರ ಯಾವುದೆಂದ್ ಕೇಳಿದ ಫ್ಯಾನ್ಸ್!
ಇತರ ಅಭ್ಯರ್ಥಿಗಳಿಗೆ ಸುರಭಿ ಸಲಹೆ : ಯುಪಿಎಸ್‌ಸಿಯಲ್ಲಿ ಯಶಸ್ವಿಯಾಗಲು ಶ್ರಮ ಮುಖ್ಯವೆಂದು ಸುರಭಿ ನಂಬಿದ್ದಾರೆ. ಇಲ್ಲಿ ನೀವು ಯಾವುದೇ ರೀತಿಯ ಶಾರ್ಟ್‌ಕಟ್‌ನಿಂದ ಯಶಸ್ಸನ್ನು ಪಡೆಯಲು ಸಾಧ್ಯವಿಲ್ಲ. ನಿಮ್ಮ ಪಠ್ಯಕ್ರಮದ ಪ್ರಕಾರ ಅಧ್ಯಯನ ಸಾಮಗ್ರಿಯನ್ನು ಆರಿಸುವ ಮೂಲಕ ನೀವು ನಿರಂತರವಾಗಿ ಅಧ್ಯಯನ ಮಾಡಬೇಕು. ನಿಮ್ಮ ತಂತ್ರವು ಉತ್ತಮವಾಗಿದ್ದರೆ, ನೀವು ಮೊದಲ ಪ್ರಯತ್ನದಲ್ಲಿ ಈ ಪರೀಕ್ಷೆ ಪಾಸ್ ಆಗಬಹುದು ಎನ್ನುತ್ತಾರೆ ಸುರಭಿ.