ಅಪ್ಪನ ಎಲ್ಲಾ ಆಸ್ತಿ ಹೆಣ್ಣುಮಕ್ಕಳಿಗೆ ಸಿಗತ್ತಾ? ಯಾವುದರಲ್ಲಿ ಹಕ್ಕಿಲ್ಲ? ಇಲ್ಲಿದೆ ಫುಲ್​ ಡಿಟೇಲ್ಸ್​

Published : May 18, 2025, 01:24 PM ISTUpdated : May 19, 2025, 09:35 AM IST
ಅಪ್ಪನ ಎಲ್ಲಾ ಆಸ್ತಿ ಹೆಣ್ಣುಮಕ್ಕಳಿಗೆ ಸಿಗತ್ತಾ? ಯಾವುದರಲ್ಲಿ ಹಕ್ಕಿಲ್ಲ? ಇಲ್ಲಿದೆ ಫುಲ್​ ಡಿಟೇಲ್ಸ್​

ಸಾರಾಂಶ

ತಂದೆಯ ಆಸ್ತಿಯಲ್ಲಿ ಹೆಣ್ಣುಮಕ್ಕಳ ಪಾಲು ಕುರಿತು ತಿಳಿಯಿರಿ. ಪಿತ್ರಾರ್ಜಿತ ಮತ್ತು ಸ್ವಯಾರ್ಜಿತ ಆಸ್ತಿಗಳಲ್ಲಿ ಹೆಣ್ಣುಮಕ್ಕಳ ಹಕ್ಕುಗಳು, ಕಾನೂನುಗಳು ಮತ್ತು ವಿಲ್ ಬರೆಯುವಿಕೆಯ ಮಹತ್ವದ ಬಗ್ಗೆ ತಿಳಿದುಕೊಳ್ಳಿ.

ಗಂಡು ಮತ್ತು ಹೆಣ್ಣು ಮಕ್ಕಳು ಇಬ್ಬರೂ ಸರಿಸಮಾನರು ಎಂದು ಹೇಳುತ್ತ ಬಂದಿದ್ದರೂ ಆಸ್ತಿಯ ವಿಷಯಕ್ಕೆ ಬಂದಾಗ  ಮುಂಚಿನಿಂದಲೂ ಹೆಣ್ಣುಮಕ್ಕಳಿಗೆ ಗಂಡು ಮಗನಂತೆ ಆಸ್ತಿಯಲ್ಲಿ ಹಕ್ಕು ಇರಲಿಲ್ಲ. ಕೊಟ್ಟ ಹೆಣ್ಣು ಕುಲದಿಂದ ಹೊರಕ್ಕೆ ಎನ್ನುವ ಗಾದೆಮಾತಿನಂತೆ, ಹೆಣ್ಣು ಎಂದರೆ  ಮದುವೆಯಾಗಿ ಹೋಗುವವಳು. ಅವಳಿಗೆ ಅಪ್ಪನ ಆಸ್ತಿಯಾಕೆ ಎನ್ನುವ ಮಾತೇ ಕೇಳಿಬರುತ್ತಿತ್ತು. ಹಿಂದೂ ಉತ್ತರಾಧಿಕಾರ ಕಾಯ್ದೆ ಜಾರಿಗೆ ಬಂದದ್ದು 1956 ರಲ್ಲಿ. ಭಾರತದಲ್ಲಿ ಹಿಂದೂಗಳು, ಬೌದ್ಧರು, ಜೈನರು ಮತ್ತು ಸಿಖ್ಖರಲ್ಲಿ ಆಸ್ತಿ ವಿಭಜನೆ ಮತ್ತು ಉತ್ತರಾಧಿಕಾರದ ಬಗ್ಗೆ ಇದರಲ್ಲಿ ತಿಳಿಸಲಾಗಿದೆ. ಆದರೆ ಕಾನೂನಿನ ಪ್ರಕಾರ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕಿರಲಿಲ್ಲ.  2005 ರವರೆಗೂ ಹಾಗೆಯೇ ಇತ್ತು. ಆದರೆ ಈ ಕಾಯ್ದೆಗೆ 2005ರಲ್ಲಿ ತಿದ್ದುಪಡಿ ಮಾಡಿದ ಬಳಿಕ, ಹೆಣ್ಣುಮಕ್ಕಳಿಗೂ ಗಂಡುಮಕ್ಕಳಂತೆಯೇ ಅಪ್ಪನ ಆಸ್ತಿಯಲ್ಲಿ ಅಧಿಕಾರ ಇದೆ.  ಆದರೆ ಎಲ್ಲಾ ಆಸ್ತಿಗಳಲ್ಲಿಯೂ ಹೆಣ್ಣುಮಕ್ಕಳಿಗೆ ಅಧಿಕಾರ ಇದೆಯೇ? ಯಾವ ಆಸ್ತಿಯಲ್ಲಿ ಹಕ್ಕಿಲ್ಲ ಇತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. 

ಮೊದಲನೆಯದ್ದಾಗಿ ಹೆಣ್ಣು ಮಕ್ಕಳಿಗೂ ಹಕ್ಕು ಇರುವುದು ಅಪ್ಪನ ಪಿತ್ರಾರ್ಜಿತ ಆಸ್ತಿಯ ಮೇಲೆ. ಇದರ ಅರ್ಥ  ಒಂದು ವೇಳೆ ಅಪ್ಪನಿಗೆ ಅವರ ಹಿರಿಯರಿಂದ ಬಂದಿರುವ ಆಸ್ತಿಯಾಗಿದ್ದರೆ ಅಂದ್ರೆ  ಪಿತ್ರಾರ್ಜಿತ ಆಸ್ತಿ ಆಗಿದ್ದರೆ, ಅವರ ಎಲ್ಲಾ ಮಕ್ಕಳು ಹುಟ್ಟಿದಾಗಲೇ ಅದಕ್ಕೆ ಸಮನಾಗಿ ಅರ್ಹರಾಗಿರುತ್ತಾರೆ. ಅಂದರೆ ಗಂಡು- ಹೆಣ್ಣು ಭೇದವಿಲ್ಲದೇ ಎಲ್ಲಾ ಮಕ್ಕಳಿಗೂ ಇದು ಸಮನಾಗಿ ಹಂಚಿಕೆ ಆಗಬೇಕು. ಆಗ ತಂದೆಗೆ ಇದರ ಮೇಲೆ ಹಕ್ಕು ಇರುವುದಿಲ್ಲ. ಇದಕ್ಕೆ ಅರ್ಹರಾಗಿರುವ ಮಕ್ಕಳ ಅನುಮತಿ ಇಲ್ಲದೇ ಪಿತ್ರಾರ್ಜಿತ ಆಸ್ತಿಯನ್ನು ತನ್ನಿಷ್ಟದಂತೆ  ನೀಡಲು ಅಪ್ಪನಿಗೆ ಹಕ್ಕು ಇರುವುದಿಲ್ಲ. ಒಂದು ವೇಳೆ ಹಾಗೆ ಮಾಡಿದರೆ,  ಮಕ್ಕಳು ಕಾನೂನಿನ ಮೂಲಕ ಆಸ್ತಿಯ ಭಾಗ ಕೇಳುವ ಅಧಿಕಾರ ಇದೆ. ಆದ್ದರಿಂದ ಅಪ್ಪನ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಪಾಲು ಇದ್ದೇ ಇದೆ. ಆಕೆ ಮದುವೆಯಾಗಲಿ, ಇಲ್ಲದೇ ಇರಲಿ. ಅವಳಿಗೆ ಆ ಹಕ್ಕು ಇದೆ. 

ತಂದೆ ತನ್ನಿಷ್ಟದಂತೆ ಆಸ್ತಿ ಭಾಗ ಮಾಡಬಹುದಾ? ಮಕ್ಕಳ ಹಕ್ಕೇನು? ಕಾನೂನಿನಲ್ಲಿ ಏನಿದೆ ನೋಡಿ...

ಇನ್ನು ಅಪ್ಪನ ಯಾವ ಆಸ್ತಿಯನ್ನು ಆಕೆ ಒತ್ತಾಯಪೂರ್ವಕವಾಗಿ ಕೇಳಲು ಆಗುವುದಿಲ್ಲ ಎನ್ನುವುದನ್ನು ನೋಡುವುದಾದರೆ, ಅದು ಅಪ್ಪನ ಸ್ವಯಾರ್ಜಿತ ಆಸ್ತಿ. ಅಂದರೆ ಅಪ್ಪನ ಸ್ವಂತ ಆಸ್ತಿ. ಅಪ್ಪನ ಸ್ವಂತ ದುಡಿಮೆಯಿಂದ  ಖರೀದಿಸಿದ ಆಸ್ತಿ, ಸಂಪತ್ತಿಗೆ ಅಪ್ಪನೇ ನೇರ ಹೊಣೆ.  ಆದ್ದರಿಂದ ಆ ಆಸ್ತಿಯನ್ನು ಆತ ಯಾರಿಗೆ ಬೇಕಾದರೂ ಕೊಡಬಹುದು. ಒಬ್ಬನೇ ಮಗನಿಗೆ ಕೊಡಬಹುದು, ಮಗಳಿಗೆ ಕೊಡಬಹುದು, ಎಲ್ಲಾ ಮಕ್ಕಳಿಗೂ ಸಮನಾಗಿ ಹಂಚಬಹುದು ಇಲ್ಲವೇ ಮಕ್ಕಳು ಚೆನ್ನಾಗಿ ನೋಡಿಕೊಳ್ಳಲಿಲ್ಲ ಎಂದರೆ ಆತ ಅದನ್ನು ತನ್ನಿಷ್ಟ ಬಂದವರಿಗೆ  ಉಡುಗೊರೆ ರೂಪದಲ್ಲಿ ಕೊಡಬಹುದು. ಇದರ ಬಗ್ಗೆ ಮಕ್ಕಳು ಕಂ ಕಿಂ ಅನ್ನುವಂತಿಲ್ಲ. ಆದರೆ, ಹೀಗೆ ಮಾಡಬೇಕಾದರೆ ಆತ ಅದಕ್ಕೆ ವಿಲ್​ ಬರೆದು ಇಡಬೇಕಾಗುತ್ತದೆ. ನನ್ನ ಸ್ವಯಂ ಸಂಪಾದನೆಯ ಆಸ್ತಿ ಇಷ್ಟು ಇದ್ದು, ಇದು ಇವರಿಗೆ ಸಲ್ಲಬೇಕು ಎಂದು ಬರೆಯಬೇಕಾಗುತ್ತದೆ. ಒಂದು ವೇಳೆ ಆತ ವಿಲ್​ ಬರೆದು ಅದನ್ನು ಹೆಣ್ಣು ಮಕ್ಕಳಾಗಲೀ, ಗಂಡು ಮಕ್ಕಳಾಗಲಿ ಅವರ ಹೆಸರು ಬರೆಯಲಿಲ್ಲ ಎಂದ್ರೆ ಮಗಳು ಕೂಡ ಅದನ್ನು ಕೇಳುವಂತಿಲ್ಲ. 

ಆದರೆ, ಒಂದು ವೇಳೆ ಸ್ವಯಂ ಆಸ್ತಿ ಇದ್ದು, ವಿಲ್​ ಬರೆಯದೇ ಅಪ್ಪ ತೀರಿಕೊಂಡರೆ, ಆಗ ಆ ಆಸ್ತಿಯ ವರ್ಗ I ವಾರಸುದಾರರಿಗೆ ಸಮನಾಗಿ ಹಂಚಿಕೆಯಾಗುತ್ತದೆ. ವರ್ಗ I ವಾರಸುದಾರು ಎಂದರೆ ಆತನ ಪತ್ನಿ, ಮಕ್ಕಳು (ಗಂಡ ಮತ್ತು ಹೆಣ್ಣು ಮಕ್ಕಳು ಇಬ್ಬರೂ) ಹಾಗೂ ತಾಯಿ. ಇವರಿಗೆಲ್ಲವೂ ಸಮನಾಗಿ ಹಂಚಿಕೆಯಾಗುತ್ತದೆ. ವಿಲ್​ ಬರೆಯದೇ ಅಪ್ಪ ಸತ್ತರೆ, ಆ ಆಸ್ತಿಯ ಭಾಗ ಕೇಳುವ ಅಧಿಕಾರ ಹೆಣ್ಣುಮಕ್ಕಳಿಗೂ ಇದೆ. ಒಂದು ವೇಳೆ, 1956ರಲ್ಲಿ ಕಾಯ್ದೆ ಆರಂಭವಾಗುವುದಕ್ಕಿಂತ ಮುಂಚೆ ಹೆಣ್ಣುಮಕ್ಕಳು ಹುಟ್ಟಿದ್ದರೆ ಅವರಿಗೂ ಮೇಲೆ ತಿಳಿಸಿದ  ರೀತಿಯಲ್ಲಿ ಆಸ್ತಿಯಲ್ಲಿ ಸಮಪಾಲು ಇದೆ. ಆದರೆ ಅವರ ತಂದೆ 1956ಕ್ಕಿಂತ ಮುಂಚೆ ತೀರಿಕೊಂಡಿದ್ದರೆ, ಅವರಿಗೆ ಆಸ್ತಿಯಲ್ಲಿ ಅಧಿಕಾರ ಇರುವುದಿಲ್ಲ.  

ಮಾವನ ಆಸ್ತಿಯಲ್ಲಿ ಅಳಿಯನಿಗೂ ಪಾಲಿದ್ಯಾ? ಹೈಕೋರ್ಟ್​ ನೀಡಿರುವ ಮಹತ್ವದ ತೀರ್ಪೇನು? ಇಲ್ಲಿದೆ ಡಿಟೇಲ್ಸ್​

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!