ನೋವಿರಲಿ, ಖುಷಿ ಇರಲಿ, ಮನೇಲಿ ಅಮ್ಮನ ನಗುವಿಗೆಲ್ಲಿ ಬರ? ಅವಳ ಮೆದುಳೆಷ್ಟು ಭಾರ?

Published : May 16, 2025, 04:59 PM ISTUpdated : May 16, 2025, 05:02 PM IST
ನೋವಿರಲಿ, ಖುಷಿ ಇರಲಿ, ಮನೇಲಿ ಅಮ್ಮನ ನಗುವಿಗೆಲ್ಲಿ ಬರ? ಅವಳ ಮೆದುಳೆಷ್ಟು ಭಾರ?

ಸಾರಾಂಶ

ಮಹಿಳೆಯರ ಮನೆಗೆಲಸ ಎಂದಿಗೂ ಮುಗಿಯದು. ಅದರೊಂದಿಗೆ ಮಾನಸಿಕ ಹೊರೆಯೂ ಇರುತ್ತದೆ. ಪುರುಷರು ಇದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ತಾಯ್ತನದ ಜವಾಬ್ದಾರಿ, ಮನೆ ನಿರ್ವಹಣೆಯ ಚಿಂತೆ ನಿರಂತರ. ಈ ಮಾನಸಿಕ ಹೊರೆಯನ್ನು ಹಂಚಿಕೊಳ್ಳಬೇಕು. ಸಂಗಾತಿಯಾಗಿ ಕೆಲಸ, ಭಾವನೆಗಳನ್ನು ಹಂಚಿಕೊಂಡು, ಮಹಿಳೆಯ ಬಳಲಿಕೆಗೆ ಮುಕ್ತಿ ನೀಡಬೇಕು.

ಮನೆಯಲ್ಲಿರುವ ಪತ್ನಿ, ಅಕ್ಕ, ಅಮ್ಮ (mother)ನ ಬಳಿ ಹೋಗಿ ಕೆಲ್ಸ ಮುಗೀತಾ ಅಂತ ಕೇಳಿದ್ರೆ ಅವರು ಏನ್ ಹೇಳ್ತಾರೆ? ನಮ್ಮ ಕೆಲ್ಸ ಮುಗಿಯೋದೇ ಅಲ್ಲ. ಅದಿದೆ, ಇದಿದೆ ಅಂತ ಉದ್ದದ್ದ ಲೀಸ್ಟ್ ನೀಡ್ತಾರೆ. ಅದೆಷ್ಟೋ ಬಾರಿ  ತಲೆಯಾಡಿಸಿ ಸುಮ್ಮನಾಗ್ತಾರೆ. ಈ ಮೌನದಲ್ಲಿ ಅದೆಷ್ಟೋ ಆಯಾಸವಿದೆ.  ಆ ಆಯಾಸವನ್ನು ಪುರುಷನಾದವನು  ಎಂದೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗೇ ಇಲ್ಲ.                        

ಕೆಲ್ಸ ಮುಗಿಸಿ ರಾತ್ರಿ ತಲೆ ಹಾಸಿಗೆ ಮೇಲಿಡ್ತನೇ ಸುಖ ನಿದ್ದೆಗೆ ಪುರುಷ    ಜಾರಿದ್ರೆ ಮಹಿಳೆ ಮನಸ್ಸಿನಲ್ಲಿ ನೂರಾರು ಆಲೋಚನೆ ಓಡ್ತಿರುತ್ತೆ. ನಾಳೆ ಬೆಳಿಗ್ಗೆ ಎಷ್ಟು ಗಂಟೆಗೆ ಏಳ್ಬೇಕು? ಅಲಾರಂ ಸರಿಯಾಗಿ ಇಟ್ಟಿದ್ದೀನಾ? ಮಕ್ಕಳ ಸಾಕ್ಸ್ ತೊಳೆದಾಗಿದ್ಯಾ? ಇದು ನಿಲ್ಲಲಾರದ, ಅಂತ್ಯವಿಲ್ಲದ ಮಾನಸಿಕ ಹೊರೆ. ಇದ್ರ ಬಗ್ಗೆ ಯಾರೂ ಮಾತನಾಡೋದೇ ಇಲ್ಲ. ಜಂಜಾಟವನ್ನೆಲ್ಲ ಬಿಟ್ಟ ಪ್ರವಾಸಕ್ಕೆ ಹೋದ್ರೂ ತಾಯಿಯ ಕೆಲ್ಸ ಕಡಿಮೆ ಆಗೋದಿಲ್ಲ. ನಿರಂತರ ದುಡಿಯುವ ಹೆಣ್ಣಿಗೆ ತಾಯ್ತನದ ಮಾನಸಿಕ ಹೊರೆ (motherhood mental load)  ಕಾಡೋದು ಸಾಮಾನ್ಯ. ಇದು ಕಣ್ಣಿಗೆ ಕಾಣದ, ಕೊನೆಯಿಲ್ಲದ ಜವಾಬ್ದಾರಿ.   ಭಾರತೀಯ ತಾಯಂದಿರಿಗೆ ವಿಶ್ರಾಂತಿ ಒಂದು ಪರಿಕಲ್ಪನೆಯೇ ಹೊರತು ವಾಸ್ತವ ಅಲ್ವೆ ಅಲ್ಲ. 

ಮಹಿಳೆ ಒಂದ್ಕಡೆ ಕೆಲ್ಸ ಮಾಡ್ತಿದ್ದರೆ ಇನ್ನೊಂದು ಕಡೆ ಆಲೋಚನೆ, ಪ್ಲಾನ್ ನಲ್ಲಿ ಮುಳುಗಿರ್ತಾಳೆ. ಗ್ಯಾಸ್ ಸಿಲಿಂಡರ್ ಬುಕ್ ಆಗಿದ್ಯಾ? ಮಕ್ಕಳ ಶಾಲೆ ಫೀಸ್ ಎಷ್ಟು? ಮುಂದಿನ ಕೆಲ್ಸ  ಏನು ಎಂಬುದನ್ನು ನಿರಂತರವಾಗಿ ಆಲೋಚನೆ ಮಾಡ್ತಾ ಅದನ್ನು ಕಾರ್ಯರೂಪಕ್ಕೆ ತರಲು ಸಿದ್ಧವಾಗಿರ್ತಾಳೆ. ಆಕೆ ಕೆಲ್ಸ ಮುಗೀತು ಅನ್ನೋದೆ ಇಲ್ಲ. ಬೆಳಿಗ್ಗೆ ತಿಂಡಿ ಮಾಡಿದ್ರೆ ಜವಾಬ್ದಾರಿ ಮುಗಿಯಲಿಲ್ಲ. ಬರೀ ಅಡುಗೆ ಮಾತ್ರ ಆಕೆ ಕೆಲ್ಸ ಅಲ್ವೇ ಅಲ್ಲ. ಮನೆಯಲ್ಲಿ ಎಲ್ಲವನ್ನೂ ತಾಯಿ ತಿಳಿದಿರ್ಬೇಕು. ಸಿಲಿಂ                                                                                                                                                                                                                                                                                                                                            ಡರ್ ಹೊತ್ತು ತರುವ ಕೆಲ್ಸದಿಂದ ಹಿಡಿದು, ಮನೆಯವರ ಭಾವನಾತ್ಮಕ ಮನಸ್ಥಿತಿಗೆ ಹೊಂದಿಕೊಳ್ಳುವವರೆಗೆ ಆಕೆ ಪಕ್ವವಾಗಿರಬೇಕು ಅಂತ ಭಾರತೀಯರು ಬಯಸ್ತಾರೆ. ಮಹಿಳೆಯರ ಈ ಕೆಲ್ಸ  ಪ್ರೀತಿಯಲ್ಲ. ಇದು ಸ್ವಯಂ ತ್ಯಾಗಕ್ಕೆ ಪ್ರತಿಫಲ.  

ಮ್ಯಾರೇಜ್ ಆಂಡ್ ಫ್ಯಾಮಿಲಿ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ತಾಯಂದಿರು ಮನೆಯ ಮಾನಸಿಕ ಶ್ರಮದ ಶೇಕಡಾ 71% ರಷ್ಟು ಹೊರ್ತಾರೆ. ಮನೆ ಕೆಲ್ಸದಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ತಂದೆಯೇ ಕೇವಲ ಶೇಕಡಾ 45ರಷ್ಟು ಹೊರೆ ತೆಗೆದುಕೊಳ್ಳುತ್ತಾನೆ. ಮನೆ ಜನರು ಎಷ್ಟೇ ಮಾಡರ್ನ್ ಆಗಿರಲಿ, ನಾವು ಪ್ರಗತಿಪರರು ಅಂತ ಹೇಳ್ತಿರ್ಲಿ, ಇಲ್ಲೂ ಲಿಂಗ ಬೇಧ ಸಾಮಾನ್ಯ. ಮಲಗಿದಾಗ್ಲೂ ಮಹಿಳೆ ಮೆದುಳು ವಿಶ್ರಾಂತಿ ಪಡೆಯೋದಿಲ್ಲ. ಅದು ನಿರಂತರವಾಗಿ ಓಡ್ತಿರುತ್ತದೆ. 

ಮಹಿಳೆ ಎಲ್ಲವನ್ನೂ ಮಾಡ್ತಾಳೆ ಅನ್ನೋದನ್ನು ಮೊದಲು ನಿಲ್ಲಿಸಿ. ಆಕೆ ಎಲ್ಲ ಕೆಲ್ಸ ಮಾಡ್ತಿರಬಹುದು. ಆದ್ರೆ ಅದು ಆಕೆಯ ಶಕ್ತಿಯಲ್ಲ. ಬಳಲಿಕೆ ಎಂಬ ವಾಸ್ತವ ನಿಮಗೆ ತಿಳಿದಿರಲಿ. ಅದೆಷ್ಟೋ ತಾಯಂದಿರುವ ಮೌನವಾಗಿ ಎಲ್ಲವನ್ನೂ ಸಹಿಸ್ತಾ ಬೆಂದು ಹೋಗ್ತಿದ್ದಾರೆ. ತಾಯ್ತನದ ಈ ದಣಿವಿನ ಪಯಣವನ್ನು ನಿಲ್ಲಿಸಬೇಕಾಗಿದೆ.  ಮಹಿಳೆಯಾದವಳು ಎಲ್ಲ ಕೆಲ್ಸ ಮಾಡ್ಬೇಕು, ಆಕೆ ಮಾಡ್ತಿರೋದು ಕೆಲ್ಸವಲ್ಲ ಆರೈಕೆ ಅನ್ನೋದನ್ನು ನಿಲ್ಲಿಸಬೇಕಿದೆ. ಎಲ್ಲರೂ ಕೆಲ್ಸ ಹಂಚಿಕೊಳ್ಳುವ ಅಗತ್ಯವಿದೆ. 

ಮಹಿಳೆಗೆ ಸಂಗಾತಿ ಬೇಕು. ಸಹಾಯಕನಲ್ಲ. ಏನು ಕೆಲ್ಸ ಮಾಡ್ಬೇಕು ಅಂತ ನೀವು ಸಂಗಾತಿ ಬಳಿ ಕೇಳಿದ್ರೆ ಅದು ಸಹಾಯ ಆಗೋದಿಲ್ಲ. ಅದು ಆಕೆಗೆ ಹೊರೆಯಾಗುತ್ತೆ. ಆಕೆ ಇದ್ರ ಬಗ್ಗೆ ಮತ್ತಷ್ಟು ಯೋಚಿಸುವಂತೆ ಮಾಡುತ್ತೆ. ಸಂಗಾತಿ ಕೆಲ್ಸವನ್ನು, ಭಾವನೆಗಳನ್ನು ಹಂಚಿಕೊಳ್ಬೇಕು. ಕೆಲಸ ನೀಡ್ಲಿ ಅಂತ ಕಾಯಬಾರದು. ಆರಂಭ ನಿಮ್ಮಿಂದ ಆಗ್ಲಿ. ನಿಮ್ಮ ಮನೆಯಿಂದ ಆಗ್ಲಿ. ಮಹಿಳೆಯ ಹೊಣೆಯನ್ನು ಹಂಚಿಕೊಳ್ಳುವ ಪ್ರಯತ್ನ ಮಾಡಿ. ಅವಳ ತಾಯ್ತನದ ಮಾನಸಿಕ ಹೊರಗೆ ಅಂತ್ಯನೀಡುವ ಪ್ರಯತ್ನ ಮಾಡಿ.   

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!