Chefs Tips : ನಿಮ್ಮ ಅಡುಗೆ ತಿಂದು ಜನ ಹೊಗಳ್ಬೇಕೆಂದ್ರೆ ಹೀಗ್ ಮಾಡಿ

By Suvarna News  |  First Published Dec 14, 2022, 4:09 PM IST

ರುಚಿಯಾದ ಅಡುಗೆ ತಿಂದವರು ಬಾಯ್ತುಂಬ ಹೊಗಳಿ ಹೋಗ್ತಾರೆ. ಕೆಲವರಿಗೆ ಅಡುಗೆ ಬರೋದಿಲ್ಲ, ಹೊಗಳಿಕೆ ಸಿಗೋದಿಲ್ಲ. ಅಂಥವರು ಕುಗ್ಗದೆ ಮರಳಿ ಪ್ರಯತ್ನ ಮಾಡಿದ್ರೆ ನಿಮ್ಮ ಅಡುಗೆ ಕೂಡ ಹೋಟೆಲ್ ರುಚಿ ಪಡೆಯೋದ್ರಲ್ಲಿ ಡೌಟಿಲ್ಲ.
 


ಎಲ್ಲರೂ ಮಾಡೋದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂದು ದೊಡ್ಡವರು ಹೇಳಿದ್ದಾರೆ. ಇದು ಸತ್ಯ. ಹೊಟ್ಟೆ ತುಂಬಿದ್ರೆ ಮನಸ್ಸು ಖುಷಿಗೊಳ್ಳುತ್ತದೆ. ಹಾಗಂತ ಯಾವ್ಯಾವುದೋ ಆಹಾರ ಸೇವನೆ ಮಾಡೋಕೆ ಮನಸ್ಸು ಬರೋದಿಲ್ಲ. ಉಪ್ಪು ಕಡಿಮೆಯಿರುವ, ಖಾರ ಹೆಚ್ಚಿರುವ, ಹೆಚ್ಚು ಕರಕಲಾದ ತಿಂಡಿಗಳನ್ನು ನಮ್ಮ ಮುಂದಿಟ್ಟರೆ ನಾವು ಅದನ್ನು ತಿರಸ್ಕರಿಸುತ್ತೇವೆ. ಯಾವಾಗ್ಲೂ ಹೊಟೇಲ್ ಆಹಾರ ಸೇವನೆಗೆ ಆದ್ಯತೆ ನೀಡ್ತೇವೆ.

ರುಚಿಯಾದ ಅಡುಗೆ (Cooking) ಮಾಡಿದವರಿಗೆ ಥ್ಯಾಂಕ್ಸ್ ಹೇಳುವ ಜೊತೆಗೆ ಹೋಟೆಲ್ (Hotel) ನಂತೆಯೇ ಅಡುಗೆ ಮಾಡಿದ್ದೀರಿ ಎಂದು ಹೊಗಳ್ತೆವೆ. ಕೆಲವರು ಅಚ್ಚುಕಟ್ಟಾಗಿ ಅಡುಗೆ ಮಾಡುತ್ತಾರೆ. ಮತ್ತೆ ಕೆಲವರಿಗೆ ಅಡುಗೆ ಮಾಡೋದು ಯುದ್ಧ ಗೆದ್ದಂತೆ. ಅದೇನೇ ಮಾಡಿದ್ರೂ ಯಡವಟ್ಟಾಗುತ್ತದೆ. ನಾನು ಮಾಡಿದ ಅಡುಗೆಯನ್ನು ಎಲ್ಲರೂ ತಿನ್ನಬೇಕು, ಹೊಗಳಬೇಕು, ನಾನೊಬ್ಬ ಬಾಣಸಿಗನಾಗಬೇಕು ಎನ್ನುವವರು ಕೆಲವೊಂದು ಟ್ರಿಕ್ಸ್ (Tricks) ಫಾಲೋ ಮಾಡಬೇಕಾಗುತ್ತದೆ. ಬುದ್ಧಿವಂತಿಕೆಯಿಂದ ಅಡುಗೆ ಮಾಡಿದ್ರೆ ನೀವೂ ಅಡುಗೆಯಲ್ಲಿ ನಂಬರ್ ಒನ್ ಆಗ್ಬಬಹುದು. ನಾವಿಂದು ಬೆಸ್ಟ್ ಕುಕ್ ಆಗೋದು ಹೇಗೆ ಎಂಬುದನ್ನು ಹೇಳ್ತೆವೆ. 

Tap to resize

Latest Videos

ಪ್ರತಿದಿನ ಅಡುಗೆ ಮಾಡೋದು ಬಿಡಬೇಡಿ  : ಅಡುಗೆ ಬರಲ್ಲ ಅಂತ ಅಡುಗೆ ಮನೆಯಿಂದ ದೂರವಿದ್ರೆ ಎಂದೂ ನಿಮಗೆ ಅಡುಗೆ ಬರೋದಿಲ್ಲ. ನೀವು ಪ್ರತಿ ದಿನ ಅಡುಗೆ ಮಾಡ್ಬೇಕು. ಜೊತೆಗೆ ಪ್ರತಿ ದಿನ ಹೊಸ ಪ್ರಯೋಗಗಳನ್ನು ಮಾಡಬೇಕು. ತುಂಬಾ ಕಷ್ಟವಾದ ಭಕ್ಷ್ಯಗಳನ್ನು ಪದೇ ಪದೇ ಮಾಡಲು ಪ್ರಯತ್ನಿಸಿ. ಈ ಭಕ್ಷ್ಯಗಳು ಒಂದೇ ಬಾರಿಗೆ ಚೆನ್ನಾಗಿ ಬರೋದಿಲ್ಲ. ಆದರೆ ಎರಡನೇ ಅಥವಾ ಮೂರನೇ ಬಾರಿ ಹೊಟೇಲ್ ರುಚಿ ಪಡೆಯುತ್ತವೆ. ಯೂಟ್ಯೂಬ್‌ (YouTube) ನಲ್ಲಿ ರೆಸಿಪಿಗಳನ್ನು ವೀಕ್ಷಿಸಿ ನೀವು ಅದನ್ನು ಕೂಡ ಪ್ರಯತ್ನಿಸಬಹುದು. ಹಾಗೆ ನೀವು ಮಾಡಿದ ಹೊಸ ರೆಸಿಪಿಗೆ ಕುಟುಂಬಸ್ಥರಿಂದ ಪ್ರತಿಕ್ರಿಯೆ ಪಡೆಯಲು ಮರೆಯಬೇಡಿ.  

ಅಡುಗೆ ಮಾಡಲು ಮನಸ್ಸು ಮುಖ್ಯ : ಅನೇಕ ಬಾರಿ ಮಾಡ್ಬೇಕು ಎನ್ನುವ ಕಾರಣಕ್ಕೆ ಅಡುಗೆ ಮಾಡುತ್ತೇವೆ. ಹಾಗಾಗಿ ಅದ್ರ ರುಚಿ ಚೆನ್ನಾಗಿರೋದಿಲ್ಲ. ಕುಕ್ಕರ್ (Cooker) ಎಷ್ಟು ಸೀಟಿ ಹೊಡೆದಿದೆ ಎಂಬುದು ನೆನಪಿರೋದಿಲ್ಲ. ಆಹಾರಕ್ಕೆ ಉಪ್ಪು ಹಾಕಿದ್ದೇವಾ ಎಂಬುದು ಮರೆತು ಹೋಗಿರುತ್ತದೆ. ನಿಮ್ಮ ಮನಸ್ಸು ಅಡುಗೆ ಮೇಲಿದ್ದರೆ ಇದ್ಯಾವ ಯಡವಟ್ಟು ಆಗೋದಿಲ್ಲ. ರುಚಿಕರ ಅಡುಗೆ ಸಿದ್ಧವಾಗುತ್ತದೆ.

ಕಿವಿ ಹಣ್ಣನ್ನು ತಿನ್ನಿ ಆದರೆ ಸಿಪ್ಪೆ ಎಸೆಯೋ ಬದ್ಲು, ಈ ರೀತಿ ಬಳಸಿ

ಆತುರ ಬೇಡ : ಈ ಸಲಹೆಯನ್ನು ನೀವು ಎರಡು ರೀತಿಯಲ್ಲಿ ಅನ್ವಯಿಸಿಕೊಳ್ಳಬೇಕು. ಒಂದು ಅಡುಗೆ ಮಾಡಲು ಆತುರ ಬೇಡ. ನೀವು ಗಡಿಬಿಡಿಯಲ್ಲಿ ಅಡುಗೆ ಮಾಡಿದ್ರೆ ಆಹಾರ ಸರಿಯಾಗಿ ಬೇಯುವುದಿಲ್ಲ. ಇದರಿಂದ ರುಚಿ ಹಾಳಾಗುತ್ತದೆ. ಇನ್ನೊಂದು ನೀವು ಇಂದೇ ಅಡುಗೆಯನ್ನೆಲ್ಲ ಕಲಿಯಬೇಕೆಂದ್ರೆ ಸಾಧ್ಯವಿಲ್ಲ. ನೀವು ನಿಧಾನವಾಗಿ ಒಂದೊಂದೇ ಅಡುಗೆ ಕಲಿಯಬೇಕು. ಮೊದಲು ಒಬ್ಬರು, ಇಬ್ಬರಿಗೆ ಅಡುಗೆ ಮಾಡಿ ಅಭ್ಯಾಸಮಾಡಿಕೊಂಡ ನಂತರ ಪ್ರಮಾಣವನ್ನು ಹೆಚ್ಚಿಸಬೇಕು.   

ಕಲಿಕೆ ನಿರಂತರವಾಗಿರಲಿ : ಅಡುಗೆ ಕಲಿತು ಮುಗಿಯಿತು ಎಂಬುದಿಲ್ಲ. ನಿರಂತರ ಕಲಿಕೆ ಅದು. ನೀವು ಹೊಸ ಹೊಸ ಪ್ರಯೋಗ ಮಾಡಿದಂತೆ ಅಡುಗೆಯಲ್ಲಿ ಹೆಚ್ಚೆಚ್ಚು ರುಚಿ ಸಿಗುತ್ತದೆ.  ಸ್ವಲ್ಪ ಮಟ್ಟಿಗೆ ಅಡುಗೆ ಬರ್ತಿದೆ ಎಂದಾಗ ಅಸಡ್ಡೆ ಮಾಡಬೇಡಿ. ಕಲಿಕೆಗೆ ಆದ್ಯತೆ ನೀಡಿ.  

ಒಂದೇ ದಿನದಲ್ಲಿ ಅಡುಗೆಮನೆಯ ವಾರದ ಕೆಲಸ ಮಾಡಿ ಮುಗಿಸೋದು ಹೇಗೆ ಗೊತ್ತಾ?

ಸೋಲಿಗೆ ಹೆದರಬೇಡಿ : ಅನೇಕರು ಒಮ್ಮೆ ಕೈಸುಟ್ಟುಕೊಂಡರೆ ಮತ್ತೆ ಅಡುಗೆ ಮನೆಗೆ ಹೋಗೋದಿಲ್ಲ. ಹೀಗೆ ಮಾಡಬಾರದು. ಒಂದು ದಿನ ಆಹಾರ ಕತ್ತಬಹುದು. ಮತ್ತೊಂದು ದಿನ ರುಚಿ ಕೆಡಬಹುದು. ಇನ್ನೊಂದು ದಿನ ಮತ್ತೇನೋ ಸಮಸ್ಯೆಯಾಗಬಹುದು. ಆದ್ರೆ ಕೊನೆಯಲ್ಲಿ ಚೆನ್ನಾಗಿ ಬಂದೇ ಬರುತ್ತದೆ ಎಂಬ ಆತ್ಮವಿಶ್ವಾಸದಿಂದ ಅಡುಗೆ ಮಾಡಿದ್ರೆ ನೀವು ಒಳ್ಳೆ ಬಾಣಸಿಗರಾಗೋದ್ರಲ್ಲಿ ಎರಡು ಮಾತಿಲ್ಲ. 
 

click me!