
ಬೊಜ್ಜು ಹೊಂದಿರುವ ಮಹಿಳೆಯರು ಅನೇಕ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಸ್ಥೂಲಕಾಯದ ಮಹಿಳೆಯರು ನೈರ್ಮಲ್ಯದ ಬಗ್ಗೆ ಕೂಡ ವಿಶೇಷ ಕಾಳಜಿ ವಹಿಸಬೇಕು. ಇಲ್ಲವೆಂದ್ರೆ ಯೋನಿ ಹಾಗೂ ಅದ್ರ ಸುತ್ತಮುತ್ತ ದುದ್ದುಗಳು ಸೇರಿದಂತೆ ಚರ್ಮದ ಸೋಂಕು ಕಾಣಿಸಿಕೊಳ್ಳುವ ಅಪಾಯವಿರುತ್ತದೆ.
ಸಾಮಾನ್ಯವಾಗಿ ಸ್ಥೂಲಕಾಯ (Obesity)ದ ಮಹಿಳೆ (Woman) ಯರಿಗೆ ತೊಡೆ ಸಂದುಗಳಲ್ಲಿ ಕೊಬ್ಬು ಸಂಗ್ರಹವಾಗಿರುತ್ತದೆ. ಇದ್ರಿಂದ ಚರ್ಮ (Skin) ಕ್ಕೆ ಸರಿಯಾಗಿ ಉಸಿರಾಡಲು ಸಾಧ್ಯವಾಗೋದಿಲ್ಲ. ಬೇಸಿಗೆ ಕಾಲದಲ್ಲಿ ಅಥವಾ ಅತಿಯಾಗಿ ಬೆವರುವ ಮಹಿಳೆಯರಿಗೆ ತೊಡೆ ಸಂದಿಗಳಲ್ಲಿ ಬೆವರು ಸಂಗ್ರಹಗೊಳ್ಳುತ್ತದೆ. ಈ ಬೆವರು ಯೋನಿ (Vagina) ಹಾಗೂ ಯೋನಿ ಸುತ್ತಮುತ್ತಲ ಪ್ರದೇಶವನ್ನೂ ಆಕ್ರಮಿಸುತ್ತದೆ. ಇದ್ರಿಂದ ಯೋನಿಯಲ್ಲಿ ತುರಿಕೆ, ಉರಿ ಸೇರಿದಂತೆ ಕೆಲ ಸಮಸ್ಯೆ ಎದುರಿಸುತ್ತಾರೆ. ಬರೀ ಇದು ಮಾತ್ರವಲ್ಲ, ಕೆಲ ಬೊಜ್ಜಿನ ಮಹಿಳೆಯರಿಗೆ ಯುಟಿಐ ಸೋಂಕು ಹಾಗೂ ಯೋನಿ ಸೋಂಕುಗಳು ಹೆಚ್ಚಾಗಿ ಕಾಡುತ್ತವೆ.
ಈ ಯೋಗಾಸನ ಮಹಿಳೆಯರಿಗೆ ಬೆಸ್ಟ್, ಆದ್ರೆ ಮಾಡುವಾಗ ತುಸು ಎಚ್ಚರ
ಹೃದಯ ಸಂಬಂಧಿ ಖಾಯಿಲೆ ಹಾಗೂ ಮಧುಮೇಹದಂತ ರೋಗದಿಂದ ದೂರವಿರಲು ಮಾತ್ರ ತೂಕ ಇಳಿಸಿಕೊಳ್ಳುವಂತೆ ತಜ್ಞರು ಸಲಹೆ ನೀಡೋದಿಲ್ಲ. ಯೋನಿ ಸೋಂಕಿನಿಂದ ರಕ್ಷಣೆ ಪಡೆಯಲು ಇದು ಸಹಕಾರಿ. ಅಧಿಕ ತೂಕ ಹೊಂದಿರುವ ಮಹಿಳೆಯರು ಮುಟ್ಟು, ಋತುಬಂಧ ಹಾಗೂ ಬದಲಾಗುವ ಹವಾಮಾನದಲ್ಲಿ ಹೆಚ್ಚು ಸೋಂಕಿಗೆ ಒಳಗಾಗ್ತಾರೆ ಎಂದು ಅಧ್ಯಯನಗಳು ಹೇಳಿವೆ. ಸೋಂಕಿನಿಂದ ದೂರವಿರಬೇಕೆಂದ್ರೆ ಅಧಿಕ ಬೊಜ್ಜು ಹೊಂದಿರುವ ಮಹಿಳೆಯರು ನೈರ್ಮಲ್ಯದ ಬಗ್ಗೆ ವಿಶೇಷ ಕಾಳಜಿವಹಿಸೋದು ಬಹಳ ಮುಖ್ಯವಾಗುತ್ತದೆ.
ಬೊಜ್ಜಿರುವ ಮಹಿಳೆಯರು ಯೋನಿ ನೈರ್ಮಲ್ಯಕ್ಕೆ ಹೀಗೆ ಮಾಡಿ :
ಸಡಿಲವಾದ ಬಟ್ಟೆ ಧರಿಸಿ (Wear Loose Cloths) : ಬೊಜ್ಜನ್ನು ಕಡಿಮೆ ಮಾಡಿಕೊಳ್ಳುವುದು ಮೊದಲ ಕೆಲಸವಾದ್ರೂ ಅದ್ರ ಜೊತೆ ಕೆಲ ನೈರ್ಮಲ್ಯದ ಬಗ್ಗೆ ಮಹಿಳೆಯರು ತಿಳಿದಿರಬೇಕು. ಗಾಳಿಯಾಡಬಲ್ಲ ಹಾಗೂ ಬೆವರನ್ನು ಹೀರಿಕೊಳ್ಳಬಲ್ಲ ಸಡಿಲವಾದ ಮತ್ತು ಹತ್ತಿ ಬಟ್ಟೆಯನ್ನು ಬೊಜ್ಜಿರುವ ಮಹಿಳೆಯರು ಧರಿಸಬೇಕಾಗುತ್ತದೆ. ಬಿಗಿಯಾದ ಬಟ್ಟೆಯಿಂದ ದೂರವಿರುವುದು ಒಳ್ಳೆಯದು.
Health Tips: ತೂಕವನ್ನಷ್ಟೇ ಇಳಿಸ್ಕೊಳಿ, ದೇಹದ ಎನರ್ಜಿ ಮಟ್ಟವನ್ನಲ್ಲ, ಹೇಗಪ್ಪಾ ಅದು?
ಪ್ಯುಬಿಕ್ ಕೂದಲು ತೆಗೆಯುವ ಮುನ್ನ (Before Removing Fupic Hairs) : ಪ್ಯುಬಿಕ್ ಕೂದಲನ್ನು ಎಂದಿಗೂ ಸಂಪೂರ್ಣವಾಗಿ ತೆಗೆಯಬೇಡಿ. ರಿಮೂವಲ್ ಕ್ರೀಮ್ ನಿಂದ ಅದನ್ನು ಸ್ವಚ್ಛಗೊಳಿಸಿದ್ರೆ ದುದ್ದು, ಸೋಂಕಿನ ಅಪಾಯವಿರುತ್ತದೆ. ಹಾಗಾಗಿ ನೀವು ಪ್ಯುಬಿಕ್ ಕೂದಲನ್ನು ಟ್ರಿಮ್ ಮಾಡಲು ಆದ್ಯತೆ ನೀಡಿ.
ಖಾಸಗಿ ಅಂಗದ ಸ್ವಚ್ಛತೆಗೆ ಇದನ್ನು ಬಳಸಿ : ಖಾಸಗಿ ಅಂಗದ ಸ್ವಚ್ಛತೆಗೆ ನೀವು ಯಾವ ಉತ್ಪನ್ನಗಳನ್ನು ಬಳಕೆ ಮಾಡ್ತಿದ್ದೀರಿ ಎಂಬುದು ಕೂಡ ಇಲ್ಲಿ ಮುಖ್ಯವಾಗುತ್ತದೆ. ನೀವು ಸೋಡಿಯಂ ಲಾರಿನ್ ಸಲ್ಫೇಟ್ ರಹಿತ ಉತ್ಪನ್ನಗಳ ಬಳಕೆ ಮಾಡಬೇಕು. ಹೆಚ್ಚು ರಾಸಾಯನಿಕವಿರುವ ಸೋಪ್ ಗಳು ನಿಮ್ಮ ಯೋನಿ ಪಿಎಚ್ ಮಟ್ಟವನ್ನು ಹೆಚ್ಚಿಸಿ ಸಮಸ್ಯೆ ಉಂಟುಮಾಡುತ್ತವೆ.
ಯೋನಿಯನ್ನು ಶುಷ್ಕವಾಗಿಡಿ (Keep the Vagina Dry) : ಪ್ಯಾಂಟಿ ಹಾಗೂ ಯೋನಿ ಒದ್ದೆಯಾಗದಂತೆ ನೋಡಿಕೊಳ್ಳುವುದು ಮುಖ್ಯ. ನೀರಿನಾಂಶವಿರುವ ಪ್ಯಾಂಟಿಯನ್ನು ಧರಿಸಬೇಡಿ. ಪ್ರತಿ ಬಾರಿ ಮೂತ್ರ ವಿಸರ್ಜನೆಗೆ ಹೋದಾಗ್ಲೂ ನೀವು ಟಿಶ್ಯುವಿನಿಂದ ಯೋನಿಯನ್ನು ಕ್ಲೀನ್ ಮಾಡ್ಬೇಕು. ಯೋನಿ ಹಾಗೂ ಪ್ಯಾಂಟಿ ಒದ್ದೆಯಾಗಿದ್ದರೆ ಬ್ಯಾಕ್ಟೀರಿಯಾ ಬೆಳವಣಿಗೆ ಸುಲಭವಾಗುತ್ತದೆ. ಫಂಗಸ್ ಇನ್ಫೆಕ್ಷನ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.
ನಿಯಮಿತ ತಪಾಸಣೆ ಅಗತ್ಯ (Regular Test) : ನಿಮ್ಮ ತೂಕ ಎಷ್ಟೇ ಇರಲಿ, ನೀವು ನಿಯಮಿತ ತಪಾಸಣೆಗೆ ಮಹತ್ವ ನೀಡಬೇಕು. ಯೋನಿ ಡಿಸ್ಜಾರ್ಜ್ ನಲ್ಲಿ ಬದಲಾವಣೆಯಾದರೆ, ಯೋನಿಯಿಂದ ವಾಸನೆ ಬರ್ತಿದ್ದರೆ ಅಥವಾ ಯೋನಿಯಲ್ಲಿ ಯಾವುದೇ ಸಣ್ಣ ಬದಲಾವಣೆ ಕಂಡು ಬಂದ್ರೂ ನೀವು ವೈದ್ಯರನ್ನು ಭೇಟಿಯಾಗಬೇಕು. ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಕ್ಕಲ್ಲಿ ಸಮಸ್ಯೆ ಬೇಗ ಕಡಿಮೆಯಾಗುತ್ತದೆ. ನಿರ್ಲಕ್ಷ್ಯ ಮಾಡಿದ್ರೆ ಮುಂದಿನ ದಿನಗಳಲ್ಲಿ ಕಷ್ಟ ಎದುರಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.