ಇಂದಿನ ಹೆಚ್ಚು ಹೆಣ್ಣುಮಕ್ಕಳು ವಯಸ್ಸು 30 ದಾಟಿದರೂ ಮದುವೆಯಾಗಲು ಹಿಂದೇಟು ಹಾಕುತ್ತಿದ್ದಾರೆ. ಇಂಥ ಕೆಲವು ಹೆಣ್ಣುಮಕ್ಕಳು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಅವರು ಹೇಳಿದ್ದೇನು?
ಹೆಣ್ಣುಮಕ್ಕಳು ವಯಸ್ಸಿಗೆ ಸರಿಯಾಗಿ ಮದ್ವೆಯಾಗ್ಬೇಕು ಎಂದು ಒಂದಿಷ್ಟು ಹೆಂಗಸರು ಪಿಸುಗುಡುತ್ತಿದ್ದರೆ, ಅವರಿಗೆ ತಿರುಗೇಟು ನೀಡುವ ಈ ಯುವತಿ, ವಯಸ್ಸಿಗೆ ಸರಿಯಾಗಿ ಅಲ್ಲ, ಮನಸ್ಸಿಗೆ ಬಂದಾಗ ಮದ್ವೆಯಾಗ್ಬೇಕು ಎನ್ನುತ್ತಾಳೆ... ಇದು ಪಾನೀಯವೊಂದರ ಜಾಹೀರಾತಿನ ವಿಷಯ. ಆ ಪಾನೀಯಕ್ಕೂ ಈ ಜಾಹೀರಾತಿಗೂ ಸಂಬಂಧವಿಲ್ಲದೇ ಹೋದರೂ ಈಗಿನ ಹೆಚ್ಚು ಹೆಣ್ಣುಮಕ್ಕಳ ಮನಸ್ಸಿನ ಮಾತು ಇದೇ ಆಗಿದೆ ಎನ್ನುವುದಂತೂ ದಿಟ. ಹೆಣ್ಣುಮಕ್ಕಳಿಗೆ 20 ವರ್ಷ ಆಗುತ್ತಿದ್ದಂತೆಯೇ ಮನೆಯಲ್ಲಿ ಅವರ ಮದುವೆಯ ಬಗ್ಗೆ ಚಿಂತೆ ಮಾಡುವುದು ಈಗಿನ ಕಾಲದಲ್ಲಿಯೂ ಮಾಮೂಲಿನ ವಿಷಯವೇ. ಆದರೆ ಹೆಚ್ಚಿನ ಯುವತಿಯರು ಮದುವೆಯ ಬಗ್ಗೆ ಚಿಂತಿಸದೇ ತಮ್ಮ ಕಾಲ ಮೇಲೆ ನಿಂತುಕೊಂಡು ಆಮೇಲೆ ಮದ್ವೆಯ ಕುರಿತು ಯೋಚಿಸೋಣ ಎಂದುಕೊಳ್ಳುತ್ತಾರೆ. ಕೆಲವು ಹೆಣ್ಣುಮಕ್ಕಳು ಯಾವುದ್ಯಾವುದೋ ಕಾರಣಗಳಿಂದ ಒಂಟಿ ಉಳಿಯಬೇಕಾದ ಅನಿವಾರ್ಯತೆ ಉಂಟಾದರೆ, ಹೆಚ್ಚಿನವರು ಮದುವೆಯಾಗುವದನ್ನು ವಿಳಂಬ ಮಾಡುವುದು ಅವರ ಆಯ್ಕೆಯಾಗಿರುತ್ತದೆ.
ವಯಸ್ಸು 30 ದಾಟಿದರೂ ಮದುವೆಯಾಗದ ಹೆಣ್ಣುಮಕ್ಕಳು ಅನೇಕ ಮಂದಿ ಇದ್ದಾರೆ. ಕಾರಣಗಳು ಏನೇ ಇದ್ದರೂ ತಮ್ಮ 30 ರ ಹರೆಯದಲ್ಲಿ ಒಂಟಿಯಾಗಿರುವ ಮಹಿಳೆಯರ ಮನಸ್ಸಿನಲ್ಲಿ ಏನಾಗುತ್ತದೆ ಎಂಬುದು ಆಸಕ್ತಿದಾಯಕವಾಗಿದೆ. ಐವರು ಮಹಿಳೆಯರು ತಮ್ಮ ಒಂಟಿತನದ ಬಗ್ಗೆ ಏನನ್ನು ಹಂಚಿಕೊಳ್ಳುತ್ತಾರೆ ಎಂಬುದನ್ನು ನೋಡೋಣ.
undefined
ಹಾಟ್ ಹುಡ್ಗೀರ ಜೊತೆ ಫ್ರೆಂಡ್ಷಿಪ್ ಮಾಡ್ಕೊಳೋದು ಇಷ್ಟು ಸುಲಭನಾ?
ಸಮಾಜದ ಒತ್ತಡವೇ ಹೆಚ್ಚು
ವೃತ್ತಿಜೀವನದ ಮೇಲೆ ಕೇಂದ್ರೀಕರಿಸುವುದು ನನ್ನ ಆದ್ಯತೆಯಾಗಿದೆ. 30ವರ್ಷವಾದರೂ ಒಂಟಿಯಾಗಿರುವುದು ಸವಾಲಿನ ಸಂಗತಿ. ಒಂದು ಕಡೆ, ನನ್ನ ವೃತ್ತಿಯ ಮೇಲೆ ಕೇಂದ್ರೀಕರಿಸಲು, ನನ್ನ ಉತ್ಸಾಹವನ್ನು ಮುಂದುವರಿಸಲು ಮತ್ತು ಯಾವುದೇ ಬದ್ಧತೆಗಳಿಲ್ಲದೆ ಪ್ರಯಾಣಿಸಲು ನನಗೆ ಸ್ವಾತಂತ್ರ್ಯವಿದೆ. ಆದರೆ ಮತ್ತೊಂದೆಡೆ, ಸಮಾಜ ಒತ್ತಡಗಳು ಮತ್ತು ನಿರೀಕ್ಷೆಗಳು ಅಗಾಧವಾಗಿರಬಹುದು. ನಾನು ಯಾಕೆ ಮದುವೆಯಾಗಿಲ್ಲ ಅಥವಾ ಇನ್ನೂ ಮಕ್ಕಳನ್ನು ಹೊಂದಿಲ್ಲ ಎಂದು ನಿರಂತರವಾಗಿ ಜನರು ಕೇಳುತ್ತಿರುತ್ತಾರೆ. ಇದನ್ನು ಕಿವಿಯ ಮೇಲೆ ಹಾಕಿಕೊಳ್ಳದೇ ನನ್ನ ಸ್ವಾತಂತ್ರ್ಯವನ್ನು ಸ್ವೀಕರಿಸಲು ಮತ್ತು ನನ್ನದೇ ಆದ ಆದ್ಯತೆ ನೀಡಲು ಕಲಿತಿದ್ದು, ಇದರ ಬಗ್ಗೆ ನನಗೆ ಹೆಮ್ಮೆ ಇದೆ.
ರಾಧಿಕಾ (Radhika), 34 ವರ್ಷ
ಭಾವೋದ್ರೇಕಗಳೊಂದಿಗೆ ರಾಜಿ ಮಾಡಿಕೊಂಡಿದ್ದೇನೆ
ನಿಮ್ಮ 30 ರ ದಶಕದಲ್ಲಿ ಡೇಟಿಂಗ್ ಮಾಡಲು ಸಾಕಷ್ಟು ಅವಕಾಶಗಳು ಇವೆ. ಸಾಕಷ್ಟು ಡೇಟಿಂಗ್ ಅಪ್ಲಿಕೇಶನ್‌ಗಳು ಇಂದು ಹಲವು ಸಾಧ್ಯತೆಗಳನ್ನು ತೆರೆದಿಡುತ್ತಿವೆ. ಆದರೆ ಅವು ಕೆಲವೊಮ್ಮೆ ಆಯಾಸ ಮತ್ತು ನಿರಾಶೆಯನ್ನು ಉಂಟುಮಾಡಬಹುದು. ಆದ್ದರಿಂದ ನಾನು ತಾಳ್ಮೆಯಿಂದಿರಲು ಕಲಿತಿದ್ದೇನೆ, ನನ್ನ ಅಂತಃಪ್ರಜ್ಞೆಯನ್ನು ನಂಬುತ್ತೇನೆ. ನನ್ನ ಭಾವೋದ್ರೇಕಗಳೊಂದಿಗೆ ರಾಜಿ ಮಾಡುವುದನ್ನು ನಾನು ಕಲಿತಿದ್ದೇನೆ.
ಪ್ರತಿಷ್ಠಾ (Pratishtha), 36 ವರ್ಷ
ನನ್ನನ್ನು ನಾನು ಅರ್ಥ ಮಾಡಿಕೊಳ್ಳಲು ಅವಕಾಶ
30 ರ ಹರೆಯದಲ್ಲಿ ಒಂಟಿಯಾಗಿರುವುದು ನನ್ನನ್ನು ನಾನು ಅರ್ಥ ಮಾಡಿಕೊಳ್ಳುವ ಅವಕಾಶ ನೀಡಿದೆ. ಹಿಂದಿನ ಸಂಬಂಧಗಳಿಂದ ಹೊರಕ್ಕೆ ಬಂದು ನನ್ನ ವೈಯಕ್ತಿಕ ಬೆಳವಣಿಗೆಯ ಮೇಲೆ ಕೇಂದ್ರೀಕರಿಸಲು ಇದು ಸುಸಮಯವಾಗಿದೆ. ಒಂಟಿತನದ ಕ್ಷಣಗಳಿರುವಾಗ, ನನ್ನನ್ನು ಮೇಲಕ್ಕೆತ್ತುವ ಮತ್ತು ಪ್ರೇರೇಪಿಸುವ ಸ್ನೇಹಿತರು ಮತ್ತು ಕುಟುಂಬದ ಬಲವಾದ ಬೆಂಬಲ ನೆಟ್‌ವರ್ಕ್ ನಾನು ನಿರ್ಮಿಸಿದ್ದೇನೆ. ಏಕಾಂಗಿಯಾಗಿರುವುದು ನಾನು ಅಪೂರ್ಣಎಂದು ಅರ್ಥವಲ್ಲ; ಇದರರ್ಥ ನಾನು ಅನ್ವೇಷಿಸಲು ಮತ್ತು ಸ್ವೀಕರಿಸಲು ಸ್ವಾತಂತ್ರ್ಯವನ್ನು ಹೊಂದಿದ್ದೇನೆ ಎಂದರ್ಥ.
ಸೃಷ್ಟಿ (Srusthi), 32 ವರ್ಷ
Ashada Masam 2023: ಆಷಾಢ ಬಂದ್ರೆ ಗಂಡ ಹೆಂಡ್ತಿ ಜೊತೆಗಿರ್ಬಾರ್ದೇಕೆ?
ಅಗತ್ಯ ಪೂರೈಕೆಗೆ ಸಂಗಾತಿ ಅಗತ್ಯವಿಲ್ಲ
ಸಂತೋಷವಾಗಿರಲು ಮತ್ತು ನನ್ನ ಅಗತ್ಯಗಳನ್ನು ಪೂರೈಸಲು ನನಗೆ ಸಂಗಾತಿಯ ಅಗತ್ಯವಿಲ್ಲ ಎಂಬ ಕಲ್ಪನೆಯನ್ನು ನಾನು ನನ್ನ 30ನೇ ವಯಸ್ಸಿನಲ್ಲಿ ಸ್ವೀಕರಿಸಿದ್ದೇನೆ. ನನ್ನ ಹವ್ಯಾಸಗಳನ್ನು ಪೋಷಿಸಲು ಮತ್ತು ಅರ್ಥಪೂರ್ಣ ಸ್ನೇಹವನ್ನು ಬೆಳೆಸುವತ್ತ ಗಮನಹರಿಸಿದ್ದೇನೆ. ಸಮಾಜದ ಮಾತುಗಳಿಗೆ ಕಿವಿಗೊಡದೇ ಒಂಟಿಯಾಗಿ ಇರುವುದನ್ನು ಕಲಿತಿದ್ದು, ಇದರ ಬಗ್ಗೆ ನಾನು ಹೆಚ್ಚಿಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ.
ನಾಡಿಯಾ (Nadia), 33 ವರ್ಷ
ಸ್ವಂತ ಶಕ್ತಿಯನ್ನು ಕಂಡುಹಿಡಿಯಲು ಸಹಕಾರಿಯಾಗಿದೆ
ಈ ವಯಸ್ಸಿನಲ್ಲಿ ನಾನು ಒಂಟಿಯಾಗುವ ಹಿನ್ನೆಲೆಯಲ್ಲಿ, ನನ್ನ ಸ್ವಂತ ಆಸೆಗಳು, ಕನಸುಗಳನ್ನು ಈಡೇರಿಸಿಕೊಳ್ಳಲು ಅವಕಾಶ ದೊರೆತಿದೆ. ಸಮಾಜದ ನಿರೀಕ್ಷೆಗಳು ಕೆಲವೊಮ್ಮೆ ನನ್ನ ಆಯ್ಕೆಗಳನ್ನು ಪ್ರಶ್ನಿಸುವಂತೆ ಮಾಡುತ್ತದೆ, ಆದರೆ ನಾನು ನನ್ನ ಪ್ರವೃತ್ತಿಯನ್ನು ನಂಬಿ ಸಾಗುತ್ತಿದ್ದೇನೆ. ಒಂಟಿಯಾಗಿರುವುದು ನನ್ನ ಜೀವನದ ಒಂದು ಅಧ್ಯಾಯವಾಗಿದ್ದು ಅದು ನನ್ನ ಸ್ವಂತ ಶಕ್ತಿಯನ್ನು ಕಂಡುಹಿಡಿಯಲು ನನಗೆ ಅವಕಾಶ ಮಾಡಿಕೊಟ್ಟಿದೆ.
ವರ್ಷಾ (Varsha), 37 ವರ್ಷ