Kitchen Hacks: ಕೆಸು ಸಿಪ್ಪೆ ತೆಗೆಯುವಾಗ ಕೈ ತುರಿಸುತ್ತಾ? ಇಲ್ಲಿವೆ ಟಿಪ್ಸ್

By Suvarna NewsFirst Published Jun 2, 2022, 2:21 PM IST
Highlights

ತಿನ್ನೋಕೆ ರುಚಿ ಈ ಕೆಸುವಿನ ಗಡ್ಡೆ, ಮುಟ್ಟಿದ್ರೆ ಸಿಕ್ಕಾಪಟ್ಟೆ ತುರಿಕೆ. ಅದ್ರ ಅಡುಗೆ ಮಾಡೋದೆ ಕಷ್ಟ. ಮನೆಗೆ ತಂದಿಟ್ಟು ವಾರವಾದ್ರೂ ಅದ್ರ ಸುದ್ದಿಗೆ ಹೋಗಿಲ್ಲ ಎನ್ನುವ ಮಹಿಳೆಯರು ಈ ಟಿಪ್ಸ್ ಬಳಸಿ, ರುಚಿ ರುಚಿ ಕೆಸುವಿನ ಗಡ್ಡೆ ಕರಿ ಮಾಡ್ಬಹುದು.
 

ಬೇರೆ ಕೆಲಸ (Work) ದಲ್ಲಿ ಬ್ಯುಸಿ (Busy) ಯಾಗಿರುವ ಮಹಿಳೆ (Woman) ಯರಿಗೆ ಅಡುಗೆ ಮಾಡುವುದು ಸ್ವಲ್ಪ ಕಷ್ಟ. ಮನೆ (Home) ಹಾಗೂ ವೃತ್ತಿ (Career)  ಎರಡನ್ನೂ ಸಮತೋಲನದಲ್ಲಿ ಕಾಯ್ದುಕೊಳ್ಳುವುದು ಹೇಳಿದಷ್ಟು ಸುಲಭವಲ್ಲ. ತರಾತುರಿಯಲ್ಲಿ ರುಚಿಯಾದ ಅಡುಗೆ ಮಾಡ್ಬೇಕಾಗುತ್ತದೆ. ಅನೇಕ ಬಾರಿ ಮನಸ್ಸು ಒಂದು ಆಹಾರ (Food) ವನ್ನು ಬಯಸ್ತಾ ಇರುತ್ತದೆ. ಆದ್ರೆ ಟೈ ಇಲ್ಲದ ಕಾರಣಕ್ಕೆ ಆ ಆಹಾರ (Food) ದ ಬದಲು ಸುಲಭವಾದ ಅಡುಗೆ ತಯಾರಿಸಲು ಮಹಿಳೆ ಮುಂದಾಗ್ತಾಳೆ. ಕೆಸುವಿನ ಗಡ್ಡೆ (Arbi)  ಕರಿ (Curry) ತಿನ್ನಲು ತುಂಬಾ ರುಚಿ (Taste). ಆದರೆ ಅದನ್ನು ಕತ್ತರಿಸುವುದು ತುಂಬಾ ಕಷ್ಟ. ಅದನ್ನು ಸಿಪ್ಪೆ (Peel) ತೆಗೆಯುವಾಗ  ಕೈಗಳಲ್ಲಿ ತುರಿಕೆ ಶುರುವಾಗುತ್ತದೆ. ಕೆಸುವಿನ ಗಡ್ಡೆ ಸಿಪ್ಪೆಗಳು ತುಂಬಾ ತೆಳ್ಳಗಿರುತ್ತವೆ.  ಆದ್ದರಿಂದ ಅವುಗಳನ್ನು ಕತ್ತರಿಸುವುದರಿಂದ ಕೈ (Hand) ಯಲ್ಲಿ ತುರಿಕೆ ಮತ್ತು ಉರಿಯ ಅನುಭವ ಉಂಟಾಗುತ್ತದೆ. ಕೈ ತುರಿಕೆಯಾಗದಂತೆ, ಫಟಾ ಫಟಾ ಕೆಸುವಿನ ಗಡ್ಡೆ ಸಿಪ್ಪೆ ತೆಗೆದು ರುಚಿ ರುಚಿ ಕರಿ ಮಾಡ್ಬೇಕೆಂದ್ರೆ ಕೆಲವು ಸಲಹೆಗಳನ್ನು ನೀವು ಪಾಲನೆ ಮಾಡ್ಬೇಕಾಗುತ್ತದೆ. ಇಂದು ನಾವು ತುರಿಕೆ ಇಲ್ಲದೆ ಕೆಸುವಿನ ಗಡ್ಡೆ ಸಿಪ್ಪೆ ತೆಗೆಯೋದು ಹೇಗೆ ಎಂಬುದನ್ನು ಹೇಳ್ತೇವೆ.

ಕೈಗೆ ಗ್ಲೌಸ್ (Gloves) ಧರಿಸಿ : ನೀವು  ಕೆಸುವಿನ ಸಿಪ್ಪೆ ತೆಗೆಯುವ ಮೊದಲು ನಿಮ್ಮ ಕೈಗೆ ಗ್ಲೌಸ್ ಧರಿಸಿ. ಇದು ನಿಮ್ಮ ಕೈ ತುರಿಕೆ ಆಗದಂತೆ ಕಾಪಾಡುತ್ತದೆ. ಇದ್ರಿಂದ ನೀವು  ಸುಲಭವಾಗಿ ಕೆಸುವಿನ ಗಡ್ಡೆ ಸಿಪ್ಪೆಯನ್ನು ತೆಗೆಯಬಹುದು. 

Latest Videos

ಗರ್ಭಿಣಿಯಾಗಿದ್ದಾಗಲೇ ಮತ್ತೊಮ್ಮೆ ಗರ್ಭಿಣಿಯಾದ ಮಹಿಳೆ ! ಅರೆ ಇದು ಹೇಗೆ ಸಾಧ್ಯ?

ಕೆಸುವಿನ ಗಡ್ಡೆ ಸಿಪ್ಪೆ ತೆಗೆಯಲು ಸ್ಕ್ರಬ್ (Scrub) ಬಳಸಿ : ಕೆಸುವಿನ ಗಡ್ಡೆ  ಸಿಪ್ಪೆ ತೆಗೆಯಲು ನೀವು ಡಿಶ್ವಾಶಿಂಗ್ ಸ್ಕ್ರಬ್ ಅನ್ನು ಬಳಸಬಹುದು. ಮೊದಲು ಬಳಸಿದ ಸ್ಕ್ರಬ್ ಅನ್ನು ಕೆಸುವಿನ ಗಡ್ಡೆ ಸಿಪ್ಪೆ ತೆಗೆಯಲು ಬಳಸಬೇಡಿ. ಕೆಸುವಿನ ಗಡ್ಡೆ ಸಿಪ್ಪೆ ತೆಗೆಯಲು ಹೊಸ ಸ್ಕ್ರಬ್ ಅನ್ನು ಬಳಸಿ.

ತೆಂಗಿನ ಸಿಪ್ಪೆ (Coconut Peel )ಬಳಸಿ : ಕೆಸುವಿನ ಗಡ್ಡೆ ಸಿಪ್ಪೆ ತೆಗೆಯಲು ಸ್ಕ್ರಬ್  ಬೇಡ ಎನ್ನುವವರು ತೆಂಗಿನ ಸಿಪ್ಪೆಯನ್ನು ಬಳಸಬಹುದು. ನೀವು ತೆಂಗಿನ ಚಿಪ್ಪನ್ನು ದುಂಡಗಿನ ಆಕಾರದಲ್ಲಿ ಕತ್ತರಿಸಬೇಕು. ನಂತರ ಅದರ ಸಹಾಯದಿಂದ ನೀವು ಸಿಪ್ಪೆಯನ್ನು ತೆಗೆಯಬೇಕು. ಇದ್ರಿಂದ ನಿಮ್ಮ ಕೈ ಉರಿಯಾಗುವುದಿಲ್ಲ. ಹಾಗೆ ಗಂಟೆಗಟ್ಟಲೆ ಕೈನಲ್ಲಿ ತುರಿಕೆ ಕಾಣಿಸಿಕೊಳ್ಳುವುದಿಲ್ಲ.

Sologramy Marriage: ತನ್ನನ್ನು ತಾನು ಮದುವೆಯಾಗ್ತಿರೋ ಹುಡುಗಿ ಹನಿಮೂನ್ ಎಲ್ಲಿ?

ಕೈಗಳಿಗೆ ಎಣ್ಣೆ (Oil) ಹಚ್ಚಿ : ಒಂದ್ವೇಳೆ ಮನೆಯಲ್ಲಿ ಗ್ಲೌಸ್ ಇಲ್ಲ ಎಂದಾದ್ರೆ ನೀವು ಕೆಸುವಿನ ಗಡ್ಡೆಯ ಸಿಪ್ಪೆ ತೆಗೆಯಲು ಎಣ್ಣೆಯನ್ನು ಬಳಸಬಹುದು. ತೆಂಗಿನ ಎಣ್ಣೆ ಹೆಚ್ಚು ಪ್ರಯೋಜನಕಾರಿ. ಮೊದಲು ನಿಮ್ಮ ಕೈಗಳಿಗೆ ಎಣ್ಣೆಯನ್ನು ಅನ್ವಯಿಸಿ. ಎಣ್ಣೆಯನ್ನು ಅನ್ವಯಿಸುವ ಮೊದಲು, ನೀವು ನಿಮ್ಮ ಕೈಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಇದರ ನಂತರ  ಕೆಸುವಿನ ಗಡ್ಡೆ ಮೇಲೆ ಉಪ್ಪನ್ನು ಸಿಂಪಡಿಸಿ ಮತ್ತು ನಂತರ ಅದರ ಸಿಪ್ಪೆಯನ್ನು ತೆಗೆಯಬೇಕು.  ಹೀಗೆ ಮಾಡಿದ್ರೆ ನಿಮ್ಮ ಕೈನಲ್ಲಿ ತುರಿಕೆ ಕಾಣಿಸಿಕೊಳ್ಳುವುದಿಲ್ಲ. 

ಆಲೂಗಡ್ಡೆ ಸಿಪ್ಪೆಸುಲಿಯುವ ಯಂತ್ರವನ್ನು ಬಳಸಿ : ಅನೇಕರು ಕೆಸುವಿನ ಗಡ್ಡೆಯನ್ನು ಬೇಯಿಸಿ ನಂತ್ರ ಅದ್ರ ಸಿಪ್ಪೆ ತೆಗೆಯುತ್ತಾರೆ. ಇದು ನಿಮಗೆ ಸುಲಭ. ಮತ್ತೆ ಕೆಲವರು ಸಿಪ್ಪೆ ತೆಗೆದು ನಂತ್ರ ಅದನ್ನು ಅಡುಗೆಗೆ ಬಳಸ್ತಾರೆ. ಸಾಮಾನ್ಯವಾಗಿ ಕೆಸುವಿನ ಗಡ್ಡೆ ಸಿಪ್ಪೆಗಳು ತುಂಬಾ ಬಲವಾಗಿರುತ್ತವೆ. ಈ ಸಿಪ್ಪೆಗಳನ್ನು ತೆಗೆಯಲು ನೀವು ಆಲೂಗಡ್ಡೆ ಸಿಪ್ಪೆ ತೆಗೆಯುವ ಯಂತ್ರವನ್ನು ಬಳಸಬಹುದು. ಇದರಿಂದ ಕೈ ತುರಿಕೆ ಕಾಣಿಸಿಕೊಳ್ಳುವುದಿಲ್ಲ. ಜೊತೆಗೆ ಸಿಪ್ಪೆ ತೆಗೆಯಲು ಹೆಚ್ಚು ಕಷ್ಟಪಡಬೇಕಾಗಿಲ್ಲ. 
 

click me!