
ಜೂನ್ 2, 1975ರಂದು, ಫ್ರಾನ್ಸ್(France)ನಲ್ಲಿ ಸುಮಾರು 100 ಲೈಂಗಿಕ ಕಾರ್ಯಕರ್ತರು(Sex Workers) ತಮ್ಮ ಕೆಲಸವನ್ನು ಅಪರಾಧ ಎಂಬಂತೆ ಕಾಣುತ್ತಿರುವುದರ ವಿರುದ್ಧ ಪ್ರತಿಭಟಿಸಲು ಲಿಯಾನ್ಸ್(Lions)ನ ಸೇಂಟ್-ನಿಜಿಯರ್ ಚರ್ಚ್‌ನಲ್ಲಿ ಜಮಾಯಿಸಿದರು. 1975ರ ಪ್ರತಿಭಟನೆಯು(Protest) ರಾಷ್ಟ್ರೀಯ ಮುಷ್ಕರಕ್ಕೆ ಕಾರಣವಾಯಿತು. ಆದರೆ ಯಾವುದೇ ಸುಧಾರಣೆಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಎಂಟು ದಿನಗಳವರೆಗೆ ಚರ್ಚ್ ಅನ್ನು ಅವರು ವಶಪಡಿಸಿಕೊಂಡು ಅಲ್ಲಿ ಉಳಿದರು. ನಂತರ ಪೊಲೀಸರೇನೋ ಅವರನ್ನು ಸಾಗಹಾಕಿದರು ಎನ್ನಿ. ಆದರೆ ಇದರ ಮಹತ್ವ ಎಲ್ಲರಿಗೂ ಗೊತ್ತಾಯಿತು. ಜೂನ್ 2ನ್ನು ವೇಶ್ಯಾವೃತ್ತಿಯಲ್ಲಿ ತೊಡಗಿದವರ ದಿನ( ಎಂದು ಆಚರಿಸಲು ವಿಶ್ವಸಂಸ್ಥೆ ನಿರ್ಣಯಿಸಿತು.
ವೇಶ್ಯಾವಾಟಿಕೆ ಬಗ್ಗೆ ನಿಮಗಿವು ತಿಳಿದಿರಲಿ
- ವೇಶ್ಯಾವಾಟಿಕೆ ಜಗತ್ತಿನ ಅತ್ಯಂತ ಪ್ರಾಚೀನ ವೃತ್ತಿ. ಎಲ್ಲ ದೊಡ್ಡ ಸಾಹಿತ್ಯ ಕೃತಿಗಳಲ್ಲೂ ಇವರ ಉಲ್ಲೇಖ ಇದೆ. ಪುರಾಣಗಳಲ್ಲೂ ಇದೆ.
- ಭಾರತದಲ್ಲಿ ವೇಶ್ಯಾವೃತ್ತಿಯನ್ನು ಯಾವತ್ತೂ ನಿಷೇಧ ಮಾಡಿರಲೇ ಇಲ್ಲ. ಅಂದರೆ ಇದು ನಿಷೇಧಿತ ವೃತ್ತಿ (Banned Professiona) ಅಲ್ಲ.
- ವೇಶ್ಯೆಯರ ಜೊತೆಗೆ ಸಿಕ್ಕಿಬಿದ್ದ ಗಂಡಸರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತಿಲ್ಲ ಎಂದು ಕೋರ್ಟ್(Court)ಗಳು ಹೇಳಿವೆ.
- ಹೆಚ್ಚಿನ ಮುಂದುವರಿದ ದೇಶಗಳಲ್ಲಿ ವೇಶ್ಯಾವಾಟಿಕೆ ಅಪರಾಧವೇ ಅಲ್ಲ. ಆದರೆ ಅರಬ್ ದೇಶ(Arab Nations)ಗಳಲ್ಲಿ ಇದನ್ನು ಅಪರಾಧ ಎಂದು ಪರಿಗಣಿಸಿ ಕಠಿಣ ಶಿಕ್ಷೆ ನೀಡಲಾಗುತ್ತದೆ.
- ಜರ್ಮನಿ(Germany), ಗ್ರೀಸ್(Greece) ಮುಂತಾದ ದೇಶಗಳಲ್ಲಿ ವೇಶ್ಯಾವಾಟಿಕೆ ಕಾನೂನುಬದ್ಧವಾಗಿದ್ದು, ವೇಶ್ಯೆಯರು ಸರಕಾರಕ್ಕೆ ಟ್ಯಾಕ್ಸ್(Tax) ಕೂಡ ಕೊಡಬೇಕಾಗುತ್ತದೆ.
ಲಂಡನ್‌ನಲ್ಲಿ ಪುರುಷರಲ್ಲಿ ಹೆಚ್ಚಾಗುತ್ತಿದೆ ಮಂಕಿಪಾಕ್ಸ್ ಸೋಂಕಿನ ಅಪಾಯ !
ಕೋರ್ಟ್ ಹೇಳಿದ್ದೇನು?
ಇಂದಿಗೂ ಸಹ, ಪ್ರಪಂಚದಾದ್ಯಂತ ಲೈಂಗಿಕ ಕಾರ್ಯಕರ್ತರು ತಮ್ಮ ಮೂಲಭೂತ ಹಕ್ಕುಗಳನ್ನು ಪಡೆಯಲು ಹೆಣಗಾಡುತ್ತಿದ್ದಾರೆ. ಪೊಲೀಸರಿಂದ, ಒರಟು ಗಂಡಸರಿಂದ ಇವರು ಸದಾ ಸಂಕಷ್ಟ ಅನುಭವಿಸುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಗಮನಾರ್ಹವಾಗಿದೆ. ಅದು ಹೇಳಿದ ಅಂಶಗಳು ಇಲ್ಲಿವೆ:
- ಕಾನೂನಿನ ಸುರಕ್ಷತೆಯನ್ನು ವೇಶ್ಯೆಯರು ಹೊಂದಿದ್ದಾರೆ. ಸೆಕ್ಸ್‌ವರ್ಕರ್‌ಪ್ರೌಢ ವಯಸ್ಕಳು ಹಾಗೂ ಸಮ್ಮತಿಯಿಂದಲೇ ಲೈಂಗಿಕ ಕ್ರಿಯೆಗೆ ಒಪ್ಪಿದ್ದಾಳೆ ಎಂದಾಗಿದ್ದರೆ ಪೊಲೀಸರು ಆಕೆಯ ಮೇಲೆ ಕೇಸು ದಾಖಲಿಸುವಂತಿಲ್ಲ. - ವೇಶ್ಯಾಗೃಹಗಳ ಮೇಲೆ ನಡೆಯುವ ದಾಳಿಗಳ ಸಂದರ್ಭ ಪೊಲೀಸರು ವೇಶ್ಯೆಯರನ್ನು ಬಂಧಿಸುವುದು, ಚಿತ್ರಹಿಂಸೆ ಕೊಡುವುದು, ಅಪರಾಧಿಯಾಗಿಸುವುದು ಮಾಡುವಂತಿಲ್ಲ.- ಯಾವುದೇ ವೇಶ್ಯಾಗೃಹದಲ್ಲಿ ಮಕ್ಕಳು ಸಿಕ್ಕಿದರೆ, ಅವರನ್ನು ವೇಶ್ಯಾವಾಟಿಕೆಗಾಗಿ ಬಳಸಲಾಗುತ್ತಿದೆ ಎಂಬ ತೀರ್ಮಾನಕ್ಕೆ ಏಕಾಏಕಿ ಬರಬಾರದು. ಅವರಿಗೂ ಸುರಕ್ಷತೆ, ಶಿಕ್ಷಣ ಅಗತ್ಯವಿದೆ. ಮಕ್ಕಳನ್ನು ಅವರಿಂದ ಪ್ರತ್ಯೇಕಗೊಳಿಸುವಂತಿಲ್ಲ.
- ವೇಶ್ಯೆಯರ ಬಳಿ ಸಂಗ್ರಹಿಸಿದ ಕಾಂಡೋಮ್(Condom)ಗಳನ್ನು ಅವರ ವಿರುದ್ಧ ಅಪರಾಧಕ್ಕೆ ಸಾಕ್ಷಿಯಾಗಿ ಬಳಸುವಂತಿಲ್ಲ.
- ಪೊಲೀಸರು ವೇಶ್ಯೆಯ ಜತೆಗೆ ಹಿಂಸಾತ್ಮಕವಾಗಿ ನಡೆದುಕೊಳ್ಳಬಾರದು. ಸೆಕ್ಸ್‌ವರ್ಕರ್‌ಗಳೂ ಅನೇಕ ಸಲ ರೇಪ್‌ಗೆ ತುತ್ತಾಗುತ್ತಾರೆ. ವೇಶ್ಯೆಯರು ದೂರು ನೀಡಲು ಬಂದಾಗ ಅವರಿಗೆ ಸೂಕ್ತ ವೈದ್ಯಕೀಯ ಹಾಗೂ ಕಾನೂನು ನೆರವು ಒದಗಿಸಬೇಕು.
Mature relationship: ಒಬ್ಬರಿಗೊಬ್ಬರು ಪ್ರೀತಿಸಿದರೆ ಸಾಲದು, ಗೌರವಿಸಬೇಕು!
ನಮ್ಮ ದೇಶದ ಕಾನೂನು ಏನು ಹೇಳುತ್ತೆ?
- ಸಾರ್ವಜನಿಕ ಸ್ಥಳಗಳಲ್ಲಿ ವೇಶ್ಯಾವಾಟಿಕೆಯ ಸೇವೆಗಳನ್ನು ಪ್ರದರ್ಶಿಸುವುದು, ಹೋಟೆಲ್‌ಗಳಲ್ಲಿ ವೇಶ್ಯಾವಾಟಿಕೆ ನಡೆಸುವುದು, ಲೈಂಗಿಕ ಕಾರ್ಯಕರ್ತೆಯನ್ನು ಸಂಪರ್ಕಿಸಿಕೊಡುವುದು, ಗಿರಾಕಿಗಳನ್ನು ಹೊಂದಿಸುವುದು ಕಾನೂನುಬಾಹಿರ.
- ಅನೈತಿಕ ವ್ಯವಹಾರಗಳ (ತಡೆ) ಕಾಯಿದೆ- 1986ರ ಪ್ರಕಾರ, ವೇಶ್ಯಾವೃತ್ತಿಗಾಗಿ ಇತರರನ್ನು ಆಕರ್ಷಿಸುವುದು, ಪ್ರಚೋದಿಸುವುದು ಅಪರಾಧ.
- ಭಾರತೀಯ ದಂಡಸಂಹಿತೆಯ ಸೆಕ್ಷನ್372 ಹಾಗೂ 373ರ ಪ್ರಕಾರ, ಅಪ್ರಾಪ್ತ ವಯಸ್ಕರನ್ನು ಲೈಂಗಿಕ ಕೃತ್ಯಗಳಿಗೆ ಬಳಸಿಕೊಳ್ಳುವುದು ಅಪರಾಧ.
- ಸಂವಿಧಾನದ ಆರ್ಟಿಕಲ್23ರ ಪ್ರಕಾರ, ವೇಶ್ಯಾವಾಟಿಕೆಗಾಗಿ ಮಹಿಳೆಯರ ಕಳ್ಳಸಾಗಣೆ ಮತ್ತು ಅವರನ್ನು ಬಲವಂತವಾಗಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ.
ಕೋರ್ಟ್ ತೀರ್ಪಿನ ಪರಿಣಾಮ
- ಈ ತೀರ್ಪು ವೇಶ್ಯಾವಾಟಿಕೆಯನ್ನು ಸಮರ್ಥಿಸುವಂತೆ ಇರುವುದರಿಂದ, ವೇಶ್ಯಾವಾಟಿಕೆ ಹೆಚ್ಚಾಗಬಹುದು. ಇದು ಸಮಾಜದ ನೈತಿಕತೆಗೆ ಮುಂದಿನ ದಿನಗಳಲ್ಲಿ ಸವಾಲು ಒಡ್ಡಲಿದೆ ಎಂಬ ಆತಂಕ ಮೂಡಿದೆ.
- ವೇಶ್ಯಾವಾಟಿಕೆಯಲ್ಲಿ ತೊಡಗಿದವರ ಕಲ್ಯಾಣ ಕಾರ್ಯಕ್ರಮ, ಗುರುತುಪತ್ರ ಮುಂತಾದ ಯೋಜನೆಗಳಿಗೆ ಚಾಲನೆ ಸಿಕ್ಕಿ, ಅವರ ಪರಿಸ್ಥಿತಿ ಸುಧಾರಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.