ಗಂಡನೂ ವೈದ್ಯ: MBBS ಓದ್ತಿರುವ 4 ಮಕ್ಕಳು: ಈಗ 47ನೇ ವಯಸ್ಸಲ್ಲಿ ನೀಟ್ ಪರೀಕ್ಷೆ ಪಾಸು ಮಾಡಿದ ಅಮ್ಮ

Published : Oct 31, 2025, 04:37 PM IST
Neet exam passed by 47 Year old woman

ಸಾರಾಂಶ

Juvana Abdulla inspirational story: ನಾಲ್ಕು ಮಕ್ಕಳ ತಾಯಿಯಾದ 47 ವರ್ಷದ ಕೇರಳದ ಜುವಾನಾ ಅಬ್ದುಲ್ಲಾ ಮೊದಲ ಯತ್ನದಲ್ಲೇ ನೀಟ್ ಪರೀಕ್ಷೆ ಪಾಸು ಮಾಡಿದ್ದು, ವೈದ್ಯ ಪತಿ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಾದ ಮಕ್ಕಳಿಂದಲೇ ಸ್ಫೂರ್ತಿ ಪಡೆದಿರುವ ಅವರು ಡೆಂಟಲ್ ಡಾಕ್ಟರ್ ಆಗುವ ಹಾದಿಯಲ್ಲಿದ್ದಾರೆ.

47ರ ಹರೆಯದಲ್ಲಿ ನೀಟ್ ಪರೀಕ್ಷೆ ಪಾಸು ಮಾಡಿದ ಜುವಾನಾ

ವೈದರಾಗುವ ಕನಸಿಗೆ ರೆಕ್ಕೆ ಪುಕ್ಕ ನೀಡುವ ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ನೀಡುವ ನೀಟ್ ಪರೀಕ್ಷೆ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು. ಇದನ್ನು ಪಾಸು ಮಾಡುವುದಕ್ಕೆ ವಿದ್ಯಾರ್ಥಿಗಳು ರಾತ್ರಿ ಹಗಲೆನ್ನದೇ ಅಧ್ಯಯನದಲ್ಲಿ ತೊಡುಗುತ್ತಾರೆ. ಆದರೂ ಅನೇಕರಿಗೆ ಈ ಪರೀಕ್ಷೆ ಪಾಸು ಮಾಡಲು ಸಾಧ್ಯವಾಗದೇ ವೈದ್ಯರಾಗುವ ಕನಸನ್ನು ಕೈ ಚೆಲ್ಲಿ ಬಿಡುತ್ತಾರೆ. ಆದರೆ ಇಲ್ಲೊಬ್ಬರು 4 ಮಕ್ಕಳ ತಾಯಿ ತಾವು ಶಿಕ್ಷಣ ತ್ಯಜಿಸಿ ಬರೋಬ್ಬರಿ 25 ವರ್ಷಗಳ ನಂತರ ಮತ್ತೆ ಓದುವುದಕ್ಕೆ ಆರಂಭಿಸಿದ್ದು, ತಮ್ಮ 47ನೇ ವಯಸ್ಸಿನಲ್ಲಿ ಈ ನೀಟ್ ಪರೀಕ್ಷೆಯನ್ನು ಮೊದಲ ಯತ್ನದಲ್ಲೇ ಪಾಸು ಮಾಡಿದ್ದಾರೆ. ಕೇರಳದ ಜುವಾನಾ ಅಬ್ದುಲ್ಲಾ ಎಂಬುವವರೇ ಹೀಗೆ ಸಾಧನೆ ಮಾಡಿದ ತಾಯಿ.

2000ನೇ ಇಸವಿಯಲ್ಲಿ ಇವರು ಮದುವೆಯಾಗಿ ಹೊಸ ಮನೆಗೆ ಬಂದಾಗ ಇವರು ಕೇವಲ ತಮ್ಮ ಮನೆಯನ್ನು ಮಾತ್ರ ಬಿಟ್ಟು ಬಂದಿರಲಿಲ್ಲ, ಮದುವೆಗಾಗಿ ಶಿಕ್ಷಣವನ್ನು ಇವರು ಅರ್ಧಕ್ಕೆ ನಿಲ್ಲಿಸಿದ್ದರು. ಮೆಡಿಕಲ್ ಫಾರ್ಮಾಕೊಲಾಜಿಯಲ್ಲಿ ಮಾಸ್ಟರ್‌ ಮಾಡುತ್ತಿದ್ದಾಗಲೇ ಅವರಿಗೆ ಮದುವೆಯಾಗಿತ್ತು. ಆದರೆ 4 ಮಕ್ಕಳಾದ ನಂತರ ಬರೋಬ್ಬರಿ 25 ವರ್ಷಗಳ ನಂತರ ತಮ್ಮ 47ನೇ ವಯಸ್ಸಿನಲ್ಲಿ ಅವರು ಮತ್ತೆ ತಾವು ತಮ್ಮ ಶಿಕ್ಷಣವನ್ನು ಎಲ್ಲಿ ನಿಲ್ಲಿಸಿದರೋ ಅಲ್ಲಿಂದ ಮತ್ತೆ ಆರಂಭಿಸಿದರು. 2022ರಲ್ಲಿ ರಾಷ್ಟ್ರೀಯ ಮೆಡಿಕಲ್ ಕಮೀಷನ್ ನೀಟ್ ಪರೀಕ್ಷೆಗೆ ಕೂರುವುದಕ್ಕೆ ಇರಬೇಕಾಗಿದ್ದ 25 ವರ್ಷಗಳ ಅರ್ಹತೆ ಮಾನದಂಡವನ್ನು ತೆಗೆದು ಹಾಕಿದ್ದು, ಕೂಡ ಜುವಾನಾ ಅವರ ಕನಸಿಗೆ ನೀರೆರೆಯಿತು.

ಇವರ ನಾಲ್ವರು ಮಕ್ಕಳು ಕೂಡ ಎಂಬಿಬಿಎಸ್ ಸ್ಟುಡೆಂಟ್, ಗಂಡನೂ ವೈದ್ಯ

ಹೀಗಾಗಿ ನೀಟ್ ಪರೀಕ್ಷೆ ಪಾಸು ಮಾಡಿದ ಜುವಾನಾ ಅವರು ಈಗ ಡೆಂಟಲ್ ಸರ್ಜರಿಯಲ್ಲಿ ಬ್ಯಾಚುಲರ್ ಡಿಗ್ರಿ ಮಾಡುತ್ತಿದ್ದಾರೆ. ಇನ್ನೂ ವಿಶೇಷ ಎಂದರೆ ಇವರ ನಾಲ್ವರು ಮಕ್ಕಳು ಕೂಡ ಎಂಬಿಬಿಎಸ್ ಓದುತ್ತಿದ್ದರೆ ಇವರ ಪತಿ ಕೂಡ ವೈದ್ಯರಾಗಿದ್ದಾರೆ. ಹೀಗಾಗಿ ತನ್ನ ಪತಿ ಹಾಗೂ ಮಕ್ಕಳಂತೆ ತಾನು ಯಾಕೆ ವೈದ್ಯರಲ್ಲಿ ಒಬ್ಬರಾಗಬಹುದು ಎಂದು ಯೋಚಿಸಿದರಂತೆ ಹಾಗೆಯೇ ನೀಟ್ ಪರೀಕ್ಷೆ ಬರೆಯುವುದಕ್ಕೆ ನಿರ್ಧರಿಸಿದ ಅವರು ರಿಸಲ್ಟ್ ಬಂದ ವೇಳೆ ಪಾಸಾಗಿದ್ದರು. ಹೀಗಾಗಿ ವೈದ್ಯರಾಗುವ ಅವರ ಕನಸು ಈಗ ನನಸಾಗುವ ಹಾದಿಯಲ್ಲಿದೆ.

ಜುವಾನಾ ಅವರು ಮೂಲತಃ ಕಾಸರಗೊಡಿನ ಕೊಟ್ಟಚೇರಿ ನಿವಾಸಿಯಾಗಿದ್ದಾರೆ. ವಯಸ್ಸು ಮೀರಿದ ನಂತರ ತಾವು ನೀಟ್ ಪರೀಕ್ಷೆ ಬರೆಯಲು ಹೋದಾಗ ತಮಗಾದ ಅನುಭವವನ್ನು ಅವರು ಹೇಳಿಕೊಂಡಿದ್ದಾರೆ. ಪೆರಿಯಾ ಪಾಲಿಟೆಕ್ನಿಕ್‌ನಲ್ಲಿದ್ದ ನೀಟ್ ಪರೀಕ್ಷಾ ಕೇಂದ್ರಕ್ಕೆ ಅವರು ಪರೀಕ್ಷೆ ಬರೆಯಲು ಬಂದಾಗ ಅಲ್ಲಿನ ಸೆಕ್ಯೂರಿಟಿ ಗಾರ್ಡ್ ಅವರು ವಿದ್ಯಾರ್ಥಿಯ ಪೋಷಕರು ಎಂದು ಭಾವಿಸಿ ಇದು ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಎಂದು ಹೇಳಿದ್ರಂತೆ, ಈ ವೇಳೆ ನಾನು ಕೂಡ ಪರೀಕ್ಷೆ ಬರೆಯಲು ಬಂದಿರುವ ವಿದ್ಯಾರ್ಥಿ ಎಂದು ಹೇಳಿ ನಗುತ್ತಾ ಅವರು ಪರೀಕ್ಷಾ ಹಾಲ್‌ಗೆ ಹೋದರಂತೆ. ಪರೀಕ್ಷೆಗೂ ಮೊದಲು ಸಣ್ಣದಾದ ಪ್ರಾರ್ಥನೆ ಮಾಡಿದೆ ನನಗೆ ಪರೀಕ್ಷೆಯಲ್ಲಿ ಪಾಸಾಗುತ್ತೇನೆ ಎಂಬ ಬಗ್ಗೆ ಖಚಿತತೆ ಇರಲಿಲ್ಲ. ಆದರೆ ಅದು ನನ್ನ ಬಹು ದಿನಗಳ ಕನಸಾಗಿತ್ತು ಹಾಗೂ ಕನಸನ್ನು ಈಡೇರಿಸುವ ಮಾರ್ಗ ತೆರೆದುಕೊಂಡಿದೆ ಎಂದು ಅವರು ಹೇಳಿದರು.

ಜುವಾನಾ ಅವರು ಕಾಞಂಗಾಡ್‌ನ ಆರಂಭಿಕ ಜವಳಿ ವ್ಯಾಪಾರಿಗಳಲ್ಲಿ ಒಬ್ಬರಾದ ಪಿ ವಿ ಕುಂಹಮದ್ ಹಾಜಿ ಅವರ ಮೊಮ್ಮಗಳಾಗಿದ್ದಾರೆ. ಅವರು ಮಾಜಿ ಲಯನ್ಸ್ ಜಿಲ್ಲಾ ಗವರ್ನರ್ ಕೆ ಅಬ್ದುಲ್ ರಸಿಕ್ ಮತ್ತು ಆಸಿಯುಮ್ಮ ಅವರ ಎರಡನೇ ಪುತ್ರಿಯಾಗಿದ್ದು,. ಅವರ ತಂದೆ ಯಾವಾಗಲೂ ತಮ್ಮ ಇಬ್ಬರು ಮಕ್ಕಳು ವೈದ್ಯರಾಗಬೇಕೆಂದು ಬಯಸಿದ್ದರಂತೆ, ಆದರೆ ಅವರ ಅಕ್ಕ ಶೈಬಾನಾ ಪ್ರಾಣಿಶಾಸ್ತ್ರವನ್ನು ಅಧ್ಯಯನ ಮಾಡಲು ಆಯ್ಕೆ ಮಾಡಿಕೊಂಡರು.

ಕಾಞಂಗಾಡ್‌ನ ಲಿಟಲ್ ಫ್ಲವರ್ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಮತ್ತು ಕೋಝಿಕೋಡ್‌ನ ಎಂಇಎಸ್ ಕಾಲೇಜಿನಲ್ಲಿ ಪಿಯು ಶಿಕ್ಷಣ ಪೂರ್ಣಗೊಳಿಸಿದ ನಂತರ ಪ್ರಾಣಿಶಾಸ್ತ್ರದಲ್ಲಿ ಪದವಿ ಗಳಿಸಿದರು ಮತ್ತು ನಂತರ ವೈದ್ಯಕೀಯ ಔಷಧಶಾಸ್ತ್ರದಲ್ಲಿ ಸ್ನಾತಕೋತ್ತರ ಅಧ್ಯಯನ ಪ್ರಾರಂಭಿಸಿದರು. ಇದೇ ವೇಳೆ ಅವರು ಕಾಞಂಗಾಡ್‌ನಲ್ಲಿ ಇಎನ್‌ಟಿ ತಜ್ಞ ಡಾ. ಕೆ ಪಿ ಅಬ್ದುಲ್ಲಾ ಅವರನ್ನು ವಿವಾಹವಾದರು.

ಇದನ್ನೂ ಓದಿ: ಚುನಾವಣೆಗೆ ನಿಲ್ಲದೇ ಶಾಸಕನೂ ಆಗದೇ ಸಚಿವನಾದ ಕ್ರಿಕೆಟರ್ ಮೊಹಮ್ಮದ್ ಅಜರುದ್ದೀನ್

ಇದನ್ನೂ ಓದಿ: ಶಾಲೆಗೆ ಹೋಗಲೊಪ್ಪದ ಹುಡುಗ: ಮಂಚದ ಸಮೇತ ಶಾಲೆಗೆ ಕರೆತಂದ ಮನೆಯವರು

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!