ಭಾರತದ ಬಹುತೇಕ ಜನಸಂಖ್ಯೆ ಹಳ್ಳಿಯಲ್ಲಿದೆ. ಹಳ್ಳಿಯಲ್ಲಿರುವ ಮಹಿಳೆಯರು ಬರೀ ಮನೆ ಕೆಲಸ ಮಾಡಿದ್ರೆ ಸಾಲದು. ಬೇರೆ ಗಳಿಕೆ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಮಹಿಳೆಯರಿಗೆ ಅಲ್ಲೂ ಕೆಲಸ ಮಾಡಲು ಸಾಕಷ್ಟು ದಾರಿಯಿದೆ.
ನಗರದಲ್ಲಿರುವಷ್ಟು ಆಯ್ಕೆಗಳು ಹಳ್ಳಿಗಳಲ್ಲಿ ಇಲ್ಲ. ಹಾಗಾಗಿಯೇ ಇತ್ತೀಚಿನ ದಿನಗಳಲ್ಲಿ ಹಳ್ಳಿಗಳು ಖಾಲಿಯಾಗ್ತಿವೆ. ಜನರು ಪಟ್ಟಣ ಸೇರುತ್ತಿದ್ದಾರೆ. ಆದ್ರೆ ಪಟ್ಟಣದ ಜೀವನ ಸುಲಭವಲ್ಲ. ಇಲ್ಲಿ ಜೀವನ ನಿರ್ವಹಣೆಗೆ ಸಾಕಷ್ಟು ಹಣ ಬೇಕು. ಹಳ್ಳಿಯಲ್ಲಿರುವ ಮಹಿಳೆಯರು ನಮಗೆ ಅವಕಾಶವಿಲ್ಲವೆಂದು ಚಿಂತಿಸುವ ಅಗತ್ಯವಿಲ್ಲ. ಹಳ್ಳಿಯಲ್ಲೂ ಸಾಕಷ್ಟು ಉದ್ಯೋಗಗಳು ಲಭ್ಯವಿದೆ. ಅದ್ರ ಬಗ್ಗೆ ನೀವು ತಿಳಿದಿದ್ದರೆ ಹಳ್ಳಿಯಲ್ಲೇ ಉಳಿದುಕೊಂಡು ಸ್ವಲ್ಪ ಮಟ್ಟಿಗೆ ಹಣವನ್ನು ನೀವು ಸಂಪಾದನೆ ಮಾಡಬಹುದು. ನಾವಿಂದು ಹಳ್ಳಿ ಮಹಿಳೆಯರಿಗಿರುವ ಉದ್ಯೋಗ ಆಯ್ಕೆಗಳ ಬಗ್ಗೆ ಮಾಹಿತಿಯನ್ನು ನೀಡ್ತೆವೆ.
ಹಳ್ಳಿ (Village) ಮಹಿಳೆಯರಿಗಿದೆ ಈ ಎಲ್ಲ ಉದ್ಯೋಗವಕಾಶ (Employment) :
ಅಂಗನವಾಡಿ (Anganwadi) ಕಾರ್ಯಕರ್ತೆ : ಹಳ್ಳಿಯಲ್ಲಿ ವಾಸಿಸುತ್ತಿರುವ ಮಹಿಳೆಯರು ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡಬಹುದು. ಇದಕ್ಕಾಗಿ ನೀವು 10 ನೇ ತರಗತಿ ಪಾಸ್ ಆಗಿರಬೇಕು. ರಾಜ್ಯ (State) ಸರ್ಕಾರದ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ಸಂಬಳವನ್ನು ನೀಡುತ್ತದೆ.
ಬ್ಯೂಟಿ ಪಾರ್ಲರ್ : ಹಳ್ಳಿ ಮಹಿಳೆಯರು ಕೂಡ ಸೌಂದರ್ಯಕ್ಕೆ ಆದ್ಯತೆ ನೀಡ್ತಾರೆ. ಐಬ್ರೋ ಮಾಡಿಸಿಕೊಳ್ಳಲು ಅವರು ದೂರದ ಪಟ್ಟಣಕ್ಕೆ ಬರಬೇಕಾಗುತ್ತದೆ. ನೀವು ಹೆಚ್ಚು ಮಹಿಳೆಯರಿರುವ ಹಾಗೂ ಫ್ಯಾಷನ್ ಗೆ ಆದ್ಯತೆ ನೀಡುವ ಹಳ್ಳಿ ಪ್ರದೇಶದಲ್ಲಿದ್ದರೆ ಅಲ್ಲಿಯೇ ಒಂದು ಬ್ಯೂಟಿಪಾರ್ಲರ್ ತೆರೆಯಬಹುದು. ನೀವು ಬ್ಯೂಟಿಪಾರ್ಲರ್ ಕೋರ್ಸ್ ಮಾಡಿದ್ದರೆ ಮತ್ತಷ್ಟು ಅನುಕೂಲ. ಬ್ಯೂಟಿ ಪಾರ್ಲರ್‌ಗೆ ಸಂಬಂಧಿಸಿದ ಅಗತ್ಯ ವಿಷಯಗಳನ್ನು ಕಲಿಯುವ ಮೂಲಕ ಹಳ್ಳಿಗಳಲ್ಲಿ ಬ್ಯೂಟಿ ಪಾರ್ಲರ್‌ಗಳನ್ನು ತೆರೆಯಬಹುದು. ಮನೆಯಲ್ಲಿಯೇ ಸಣ್ಣದಾಗಿ ನೀವು ಈ ಉದ್ಯೋಗ ನಡೆಸಬಹುದು.
ಬೂಟಿಕ್ ಶುರು ಮಾಡಿ : ಹೊಲಿಗೆಯಲ್ಲಿ ನೀವು ಆಸಕ್ತಿ ಹೊಂದಿದ್ರೆ ಇದು ಮಹಿಳೆಯರಿಗೆ ಹೇಳಿ ಮಾಡಿಸಿದ ಉದ್ಯೋಗವಾಗಿದೆ. ಹೊಲಿಗೆ ಎಂದು ಬೇಡಿಕೆ ಕಳೆದುಕೊಳ್ಳದ ಉದ್ಯೋಗವಾಗಿದೆ. ಹಳ್ಳಿ ಜನರಿಗೆ ಬೇರೆ ಬೇರೆ ರೀತಿಯ ಬಟ್ಟೆಗಳನ್ನು ಹೊಲಿದುಕೊಡುವ ಮೂಲಕ ನೀವು ಹಣ ಸಂಪಾದನೆ ಮಾಡಬಹುದು.
ಐದನೇ ವಯಸ್ಸಿನಲ್ಲಿ Indira Gandhi ಗೊಂಬೆ ಸುಟ್ಟಿದ್ದೇಕೆ?
ಬಟ್ಟೆ ಅಂಗಡಿ : ತುಂಬಾ ಮನೆಗಳನ್ನು ಹೊಂದಿರುವ ಹಳ್ಳಿಯಲ್ಲಿ ನೀವು ವಾಸವಾಗಿದ್ದರೆ ಅಥವಾ ಅನೇಕ ಹಳ್ಳಿಗಳು ಹಾದು ಹೋಗುವ ಪ್ರದೇಶದಲ್ಲಿ ನೀವಿದ್ದರೆ ನೀವು ಬಟ್ಟೆ ಅಂಗಡಿ ಶುರು ಮಾಡಬಹುದು. ಸಣ್ಣಪುಟ್ಟ ಬಟ್ಟೆಗಳಿಗೆ ಆಗ ಜನರು ಪಟ್ಟಣಕ್ಕೆ ಹೋಗುವುದು ತಪ್ಪುತ್ತದೆ. ನಿಮ್ಮ ಅಂಗಡಿಗೆ ಜನರು ಬರಲು ಶುರು ಮಾಡ್ತಾರೆ. ಇದ್ರ ಜೊತೆ ನೀವು ಕಿರಾಣಿ ಅಂಗಡಿ ಕೂಡ ನಡೆಸಬಹುದು. ಜನರಿಗೆ ಕಿರಾಣಿ ವಸ್ತುಗಳು ಪ್ರತಿ ನಿತ್ಯ ಬೇಕಾಗುತ್ತದೆ. ಅನೇಕ ಹಳ್ಳಿಗಳಲ್ಲಿ ಸರಿಯಾದ ಸಾರಿಗೆ ಸೌಲಭ್ಯವಿಲ್ಲದ ಕಾರಣ ಸಮಸ್ಯೆ ಎದುರಿಸುತ್ತಾರೆ. ನೀವು ಜನರಿಗೆ ಅಗತ್ಯವಿರುವ ಕಿರಾಣಿ ವಸ್ತುಗಳನ್ನು ಮನೆಯಲ್ಲಿಯೇ ಇಟ್ಟುಕೊಂಡು ಮಾರಾಟ ಮಾಡಬಹುದು.
ಮಕ್ಕಳಿಗೆ ಟ್ಯೂಷನ್ : ಹಳ್ಳಿಗಳಲ್ಲಿ ಮಾತ್ರವಲ್ಲ ಸಣ್ಣ ಪಟ್ಟಣಗಳಲ್ಲಿ ಕೂಡ ಟ್ಯೂಷನ್ ವ್ಯವಸ್ಥೆ ಮಕ್ಕಳಿಗೆ ಸಿಗ್ತಿಲ್ಲ. ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿರುವ ಹಳ್ಳಿ ಮಹಿಳೆಯರು ಅಲ್ಲಿನ ಮಕ್ಕಳಿಗೆ ಟ್ಯೂಷನ್ ಹೇಳಬಹುದು. ಟ್ಯೂಷನ್ ಕೂಡ ಹೆಚ್ಚು ಬೇಡಿಕೆಯಿರುವ ಕ್ಷೇತ್ರವಾಗಿದೆ. ನೀವು ಮಕ್ಕಳಿಗೆ ಸರಿಯಾಗಿ ಕೋಚಿಂಗ್ ನೀಡಿದ್ರೆ ನಿಮ್ಮ ಬಳಿ ಬರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತದೆ.
Small Business Ideas: ಹೊಸ ವರ್ಷದಲ್ಲಿ ನೀವೂ ಶುರು ಮಾಡಿ ಇಂಥ ಬ್ಯುಸಿನೆಸ್
ಹಳ್ಳಿ ವಸ್ತುಗಳ ತಯಾರಿ ಮತ್ತು ಮಾರಾಟ : ಈಗಿನ ದಿನಗಳಲ್ಲಿನ ಹಳ್ಳಿ ಹಳ್ಳಿಗೆ ಮಹಿಳಾ ಸಂಘಗಳು ಹುಟ್ಟಿಕೊಂಡಿವೆ. ಆ ಎಲ್ಲ ಮಹಿಳೆಯರನ್ನು ಸೇರಿಸಿ ನೀವು ಹಳ್ಳಿಯಲ್ಲಿ ಸಿದ್ಧವಾಗುವ ಆಹಾರ, ವಸ್ತುಗಳನ್ನು ತಯಾರಿಸಿ ಅದನ್ನು ಮಾರಾಟ ಮಾಡಬಹುದು. ಇದ್ರಿಂದ ನಿಮ್ಮ ಜೊತೆ ನಿಮ್ಮ ಹಳ್ಳಿಯ ಜನರಿಗೆ ಕೆಲಸ ಸಿಕ್ಕಿದಂತಾಗುತ್ತದೆ.