ವಿಶ್ವದ Ugly Woman ಯಾರು ಗೊತ್ತಾ? ಅದ್ಯಾಕೆ ಇವರನ್ನು ಕುರೂಪಿ ಅಂತಾರೆ?

By Suvarna News  |  First Published Dec 20, 2022, 2:26 PM IST

ನಮ್ಮ ಕೈನಲ್ಲಿರುವ ಎಲ್ಲ ಬೆರಳುಗಳು ಒಂದೇ ಸಮನಾಗಿಲ್ಲ ಅಂದ್ಮೇಲೆ ವಿಶ್ವದಲ್ಲಿರುವ ಮನುಷ್ಯರು ಒಂದೇ ರೀತಿ ಇರಲು ಹೇಗೆ ಸಾಧ್ಯ. ಕೆಲವರು ಸುಂದರವಾಗಿದ್ದರೆ ಮತ್ತೆ ಕೆಲವರು ಸೌಂದರ್ಯದಲ್ಲಿ ಹಿಂದಿದ್ದಾರೆ. ಸುಂದರವಾಗಿಲ್ಲ ಎಂದು ಬೇಸರಪಟ್ಟುಕೊಳ್ಳಬೇಕಾಗಿಲ್ಲ. ವಿಶ್ವದ ಅತ್ಯಂತ ಕುರೂಪಿ ಎಂಬ ಬಿರುದು ಪಡೆದ ಮಹಿಳೆ ಮನೆಯಲ್ಲಿ ಅಡಗಿ ಕುಳಿತುಕೊಳ್ಳಲಿಲ್ಲ. ಆಕೆ ಎಲ್ಲರಿಗೂ ಸ್ಫೂರ್ತಿ.
 


ನಾವು ಪ್ರತಿ ದಿನ ಅನೇಕ ವಸ್ತುಗಳನ್ನು ನೋಡುತ್ತೇವೆ. ಕೆಲವೊಂದು ವಸ್ತು ನಮಗೆ ಸುಂದರವಾಗಿ ಕಾಣುತ್ತದೆ. ಮತ್ತೆ ಕೆಲವು ಸುಂದರವಾಗಿ ಕಾಣುವುದಿಲ್ಲ. ಹಾಗಂತ ನಮಗೆ ಸುಂದರವೆನಿಸದ ವಸ್ತು ಬೇರೆಯವರಿಗೆ ಸುಂದರವಾಗಿ ಕಾಣಬಾರದು ಎಂದೇನಿಲ್ಲ. ಸೌಂದರ್ಯ ನಾವು ನೋಡುವ ದೃಷ್ಟಿಯಲ್ಲಿದೆ. ಅನೇಕ ಬಾರಿ ಕೆಲವೊಂದು ವ್ಯಕ್ತಿ ನಮಗೆ ಸುಂದರವಾಗಿ ಕಾಣೋದಿಲ್ಲ. ಆದ್ರೆ ಆತನ ಮನಸ್ಸು ತುಂಬಾ ಒಳ್ಳೆಯದಾಗಿರುತ್ತದೆ. ಹೊಳೆಯುವ ಎಲ್ಲ ವಸ್ತು ಚಿನ್ನವಾಗಿರಬೇಕಾಗಿಲ್ಲ. ಹಾಗೆಯೇ ಸುಂದರವಾಗಿರದ ವ್ಯಕ್ತಿ ಅಥವಾ ವಸ್ತು ಕೂಡ ಕೆಟ್ಟದ್ದಾಗಿರಬೇಕೆಂದೇನಿಲ್ಲ. 

ಇದು ತಿಳಿದೂ ಸೌಂದರ್ಯ (Beauty) ದ ಬಗ್ಗೆ ಮಹಿಳೆ (Woman) ಯರು ಅಪಾರ ಕಾಳಜಿವಹಿಸ್ತಾರೆ. ಎಲ್ಲರ ಮುಂದೆ ಸುಂದರವಾಗಿ ಕಾಣಬೇಕೆಂದು ನಾನಾ ಕಸರತ್ತು ಮಾಡ್ತಾರೆ. ಕೆಲವೊಮ್ಮೆ ಎಷ್ಟೇ ಪ್ರಯತ್ನಿಸಿದ್ರೂ ಎಲ್ಲರನ್ನು ಆಕರ್ಷಿಸಲು ಸಾಧ್ಯವಾಗುವುದಿಲ್ಲ. ನಿಮಗಿಂತ ಸ್ವಲ್ಪ ಸಾದಾರಣವಾಗಿರುವ ವ್ಯಕ್ತಿ ಎಲ್ಲರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗ್ತಾರೆ. ಜೀವನ (Life) ಕ್ಕೆ ಬರೀ ಸೌಂದರ್ಯ ಮುಖ್ಯವಲ್ಲ. ಕುರೂಪಿ (Ugly) ಎಂಬ ಬಿರುದು ಪಡೆದ ಮೇಲೂ ಕೆಲಸ ಗಿಟ್ಟಿಸಿಕೊಂಡು ಸಂಸಾರ ಸಾಗಿಸಿದ ಮಹಿಳೆಯೊಬ್ಬಳಿದ್ದಾಳೆ. ವಿಶ್ವದ ಅತ್ಯಂತ ಕುರೂಪಿ ಎಂಬ ಬಿರುದು ಪಡೆದ ಮಹಿಳೆ ಜೀವನ, ಸುಲಭವಾಗಿರಲಿಲ್ಲ. ಸವಾಲು, ನೋವಿನ ಜೊತೆ ಬಾಳ್ವೆ ನಡೆಸಿದ ವಿಶ್ವದ ಅತ್ಯಂತ ಕುರೂಪಿ ಮಹಿಳೆ ಬಗ್ಗೆ ನಿಮಗೆ ಮಾಹಿತಿ ನೀಡ್ತೆವೆ. 

Skin Care: ಈ ಹ್ಯಾಕ್ಸ್ ಅಂದುಕೊಂಡಷ್ಟು ಎಫೆಕ್ಟಿವ್ ಅಲ್ಲ!

Tap to resize

Latest Videos

ವಿಶ್ವದ ಅತ್ಯಂತ ಕುರೂಪಿ ಮಹಿಳೆ ಬಿರುದು ಸಿಕ್ಕಿದ್ದು ಯಾರಿಗೆ ? : ವಿಶ್ವದ ಅತ್ಯಂತ ಕುರೂಪಿ ಮಹಿಳೆ ಎಂದು ಬಿರುದು ಪಡೆದವಳು ಮೇರಿ ಆನ್ ಬೀವನ್ (Mary Ann Beavan). ಮೇರಿ, ಲಂಡನ್‌ನ ನ್ಯೂಹ್ಯಾಮ್‌ನಲ್ಲಿ 1874 ರಲ್ಲಿ ಜನಿಸಿದ್ದಳು. ಮೇರಿ  ಬಾಲ್ಯ ಎಲ್ಲರಂತೆ ಇತ್ತು. ತನ್ನ ಅಧ್ಯಯನ ಪೂರ್ಣಗೊಳಿಸಿದ ನಂತರ  ಮೇರಿ ನರ್ಸ್ ಆಗಿ ಕೆಲಸ ಮಾಡಿದ್ದಳು. ಮೇರಿ, ಥಾಮಸ್ ಬೀವನ್ ಎಂಬಾತನನ್ನು ವಿವಾಹವಾದಳು. ಆಕೆ ಹಾಗೂ ಥಾಮಸ್ ಗೆ ನಾಲ್ಕು ಮಕ್ಕಳಿದ್ದಾರೆ. ಬಾಲ್ಯದಿಂದ ವಿವಾಹದವರೆಗೆ ಮೇರಿಗೆ ಯಾವುದೇ ಸಮಸ್ಯೆ ಕಾಡಿರಲಿಲ್ಲ. 

ಸೌಂದರ್ಯ ಕೆಡಿಸಿತ್ತು ಆರೋಗ್ಯ ಸಮಸ್ಯೆ :  ಮೇರಿ ಕುರೂಪಿಯಾಗಿ ಕಾಣಲು ಆಕೆ ಅನಾರೋಗ್ಯವೇ ಕಾರಣವಾಗಿತ್ತು. ಮದುವೆಯ ನಂತರ ಮೇರಿಯ ಆರೋಗ್ಯ ಹದಗೆಡಲು ಪ್ರಾರಂಭಿಸಿತು. ಆಕೆ ಅಕ್ರೊಮೆಗಾಲಿ ಎಂಬ ಕಾಯಿಲೆಯಿಂದ ಬಳಲುತ್ತಿದ್ದಳು. ದೇಹವು ಅಧಿಕವಾಗಿ ಬೆಳವಣಿಗೆಯಾಗುವ ಹಾರ್ಮೋನ್ ಅನ್ನು ಉತ್ಪಾದಿಸುವ ಖಾಯಿಲೆ ಇದಾಗಿದೆ. ಇದರಿಂದ ಆಕೆಯ ಇಡೀ ದೇಹದ ರಚನೆಯೇ ಬದಲಾಗಿತ್ತು. ಅವಳ ಮುಖ ಪುರುಷರಂತೆ ಬದಲಾಗತೊಡಗಿತ್ತು. ಮುಖದ ಮೇಲೆ ಗಡ್ಡ ಬರಲು ಶುರುವಾಗಿತ್ತು. ದೇಹದಲ್ಲಿ ವಿಪರೀತಿ ನೋವನ್ನು ಆಕೆ ಅನುಭವಿಸಿದ್ದಳು. ಈ ಕಾರಣದಿಂದ ಮೇರಿ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು.

ಪತಿ ಸಾವಿನಿಂತ ಸಮಸ್ಯೆ ಹೆಚ್ಚಾಯ್ತು : ಮದುವೆಯಾದ 11 ವರ್ಷಗಳ ನಂತ್ರ ಮೇರಿ ಪತಿ ಥಾಮಸ್ ಸಾವನ್ನಪ್ಪಿದ್ದ. ಇದ್ರಿಂದ ಇಡೀ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿ ಮೇರಿ ಮೇಲೆ ಬಿತ್ತು. ಆಕೆಯ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿತ್ತು. ಮೇರಿಗೆ ಹಣದ ಅಗತ್ಯತೆ ಹೆಚ್ಚಾಗ್ತಾ ಹೋಯ್ತು.

ಐದನೇ ವಯಸ್ಸಿನಲ್ಲಿ INDIRA GANDHI ಗೊಂಬೆ ಸುಟ್ಟಿದ್ದೇಕೆ?

ಹಣಕ್ಕಾಗಿ ಸ್ಪರ್ಧೆಯಲ್ಲಿ ಪಾಲ್ಗೊಂಡ ಮೇರಿ : ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳುವ ಕಾರಣಕ್ಕೆ ಮೇರಿ 1920 ರ ದಶಕದಲ್ಲಿ ಅಗ್ಲಿಯೆಸ್ಟ್ ವುಮನ್ ಸ್ಪರ್ಧೆಯಲ್ಲಿ ಭಾಗವಹಿಸಿದಳು. ಆಕೆಗೆ ಸ್ಪರ್ಧೆ ಗೆಲ್ಲುವುದು ತಾನೇ ಎಂಬುದು ಖಚಿತವಾಗಿತ್ತು. ಅದರಂತೆ ಈ ಸ್ಪರ್ಧೆಯಲ್ಲಿ ಮೇರಿ ಗೆಲುವು ಸಾಧಿಸಿದಳು. ಸ್ಪರ್ಧೆಯನ್ನು ಗೆದ್ದ ನಂತರ ಮೇರಿ ಕೋನಿ ಐಲ್ಯಾಂಡ್ ಡ್ರೀಮ್‌ಲ್ಯಾಂಡ್ ಸರ್ಕಸ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಳು. ಅನೇಕ ವರ್ಷಗಳ ಕಾಲ ಸರ್ಕಸ್ ನಲ್ಲಿ ಕೆಲಸ ಮಾಡಿದ ಮೇರಿ 1933 ರಲ್ಲಿ ಸಾವನ್ನಪ್ಪಿದ್ದಳು. 

click me!