ಆಪ್ತರಿರಲಿ, ಅಪರಿಚಿತರಿರಲಿ ನಿಮ್ಮನ್ನು ಕಣ್ಣು ಮಿಟುಕಿಸದೆ ನೋಡ್ದಾಗ ಮುಜುಗರವಾಗೋದು ಸಹಜ. ಕೆಲವರು ಇದನ್ನೇ ದೃಷ್ಟಿ ಹಾಕೋದು ಎನ್ನುತ್ತಾರೆ. ಬರೀ ನಮ್ಮ ನಿಮ್ಮಂತವರಲ್ಲ ಸೆಲೆಬ್ರಿಟಿಸ್ ಕೂಡ ಇದನ್ನು ನಂಬ್ತಾರೆ.
ಬಾಲಿವುಡ್‌ನ ಸುಂದರ ನಟಿ ಜಾನ್ವಿ ಕಪೂರ್. ತಮ್ಮ ಸ್ಟೈಲ್ ಮತ್ತು ನಡವಳಿಕೆಯಿಂದಲೇ ಹೆಸರು ಮಾಡಿದವರು. ಅಮ್ಮನಂತೆ ಹೊಳೆಯುವ ಮೈಬಣ್ಣ ಹೊಂದಿರುವ ಜಾನ್ವಿ ಕಪೂರ್ ಯಾವುದಕ್ಕೂ ಹೆದರೋದಿಲ್ಲ. ಬೋಲ್ಡ್ ನಟಿಯರಲ್ಲಿ ಒಬ್ಬರಾಗಿರುವ ಜಾನ್ವಿ, ಎಲ್ಲ ವಿಷ್ಯವನ್ನು ಅಭಿಮಾನಿಗಳ ಮುಂದಿಡುತ್ತಾರೆ. ಕೆಲ ದಿನಗಳ ಹಿಂದೆ ತಮ್ಮ ರಿಲೇಶನ್ಶಿಪ್ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದರು. ಅಮ್ಮ ಶ್ರೀದೇವಿಗೆ ಆಪ್ತರಾಗಿದ್ದ ಅವರು ಶ್ರೀದೇವಿ ಬಗ್ಗೆಯೂ ಕುತೂಹಲಕಾರಿ ವಿಷ್ಯಗಳನ್ನು ಆಗಾಗ ಹೇಳ್ತಿರುತ್ತಾರೆ. ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ ಜಾನ್ವಿ ಕಪೂರ್, ಕೆಟ್ಟ ದೃಷ್ಟಿ ಬಗ್ಗೆ ತಮಗಿರುವ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಜನಸಾಮಾನ್ಯರು ಕೆಟ್ಟ ದೃಷ್ಟಿ ಬಗ್ಗೆ ಆಗಾಗ ಮಾತನಾಡೋದನ್ನು ನಾವು ನೋಡ್ತಿರುತ್ತೇವೆ. ಚಿಕ್ಕ ಮಗುವಿಗೆ ದೃಷ್ಟಿ ಬೀಳೋದು ಹೆಚ್ಚು ಎನ್ನುವ ಕಾರಣಕ್ಕೆ ಆಗಾಗ ದೃಷ್ಟಿ ತೆಗೆಯುವ ಕೆಲಸ ನಡೆಯುತ್ತಿರುತ್ತದೆ. ಯಾವುದೇ ಸುಂದರವಾದ ವಸ್ತು, ಸುಂದರವಾದ ವ್ಯಕ್ತಿ ಕಂಡ್ರೂ ದೃಷ್ಟಿ ಬೀಳ್ಬಹುದು ಹುಷಾರಿ ಎಂಬ ಎಚ್ಚರಿಕೆ ಮಾತು ಕೇಳ್ತಿರುತ್ತದೆ. ಯಾವುದೇ ವ್ಯಕ್ತಿ ತನ್ನ ಏಳ್ಗೆ ಬಗ್ಗೆ ಎಲ್ಲಿಯೂ ಹೇಳಿಕೊಳ್ಳಬಾರದು ಎನ್ನುವ ಮಾತನ್ನೂ ಹಿರಿಯರು ಹೇಳ್ತಿರುತ್ತಾರೆ. ಈ ದೃಷ್ಟಿ ವಿಷ್ಯವನ್ನು ಬಾಲಿವುಡ್ ನಟಿ ಜಾನ್ವಿ ಕಪೂರ್ (Janhvi Kapoor) ಕೂಡ ನಂಬುತ್ತಾರೆ ಅಂದ್ರೆ ನೀವು ನಂಬ್ಲೇಬೇಕು.
ಕೋಟಿ ಬೆಲೆ ಒಡವೆ ತೊಟ್ಟರೂ ಕೈಗೆ ಕಪ್ಪು ದಾರ ಕಟ್ಟಿದ್ದೇಕೆ ಅಂಬಾನಿ ಭಾವೀ ಸೊಸೆ!
ಜಾನ್ವಿಗೆ ಈ ದೃಷ್ಟಿ ಮೇಲೆ ನಂಬಿಕೆ ಇದೆಯಂತೆ. ನಿಮ್ಮ ಸ್ನೇಹಿತ (Friend) ರ ಮುಂದೆ ಅಥವಾ ಇನ್ನಾರದ್ದೋ ಮುಂದೆ ಸಣ್ಣ ಸಣ್ಣ ವಿಷ್ಯವನ್ನು ಹಂಚಿಕೊಂಡಿರ್ತಿರಿ. ಹಾಗಂತ ಅವರು ಕೆಟ್ಟವರೆಂದಲ್ಲ. ಆದ್ರೆ ಅವರ ಆಲೋಚನೆ ನಮ್ಮ ಮೇಲೆ ಪರಿಣಾಮ ಬೀರುತ್ತೆ ಎನ್ನುತ್ತಾರೆ ಜಾನ್ವಿ. ಅದನ್ನು ಅವರು ಉದಾಹರಣೆ ಸಮೇತ ವಿವರಿಸ್ತಾರೆ. ಸ್ನೇಹಿತರ ಮುಂದೆ ಹಾಲಿಡೇ ಟ್ರಿಪ್ ಬಗ್ಗೆ ಮಾತನಾಡಿರ್ತಿರಿ. ಅವರು ಕುತೂಹಲದಲ್ಲಿ ಹತ್ತಾರು ಪ್ರಶ್ನೆ ಕೇಳಿರ್ತಾರೆ. ನೀವು ಅದಕ್ಕೆಲ್ಲ ಉತ್ತರ ನೀಡಿರ್ತೀರಿ. ಅವರು ನಮಗೆ ಕೆಟ್ಟದ್ದೇನು ಬಯಸಿರೋದಿಲ್ಲ. ಆದ್ರೆ ಮನೆಗೆ ಹೋದ್ಮೇಲೆ, ಅವಳು ಟ್ರಿಪ್ ಹೋಗ್ತಿದ್ದಾಳೆ, ನಾನು ಇಲ್ಲೇ ಮನೆಯಲ್ಲಿದ್ದೇನೆ ಎಂಬ ನೋವು ಅವರನ್ನು ಕಾಡುತ್ತದೆ. ಆ ನೋವಿನ ನೆಗೆಟಿವ್ ಎನರ್ಜಿ ನಮ್ಮನ್ನು ತಲುಪುತ್ತೆ ಎನ್ನುತ್ತಾರೆ ಜಾನ್ವಿ.
ಕೆಟ್ಟ ದೃಷ್ಟಿ ಬಿದ್ದಾಗ ಜಾನ್ವಿ ಕಪೂರ್ ಗೆ ಏನಾಗುತ್ತೆ? : ಮಾತು ಮುಂದುವರೆಸಿದ ಜಾನ್ವಿ, ಕೆಟ್ಟ ದೃಷ್ಟಿ ಬಿದ್ದಾಗ ನನಗೆ ಜ್ವರ ಬರುತ್ತೆ ಎನ್ನುತ್ತಾರೆ. ಅದು ಕೆಟ್ಟ ದೃಷ್ಟಿಯಂದ್ಲೋ ಅಥವಾ ಬೇರೆ ಕಾರಣಕ್ಕೋ ತಿಳಿದಿಲ್ಲ. ಆದ್ರೆ ನನಗೆ ಅದು ದೃಷ್ಟಿ ಎನ್ನುವ ಭ್ರಮೆ ಇದೆ. ಆ ಆಂಟಿ ನನಗೆ ದೃಷ್ಟಿ ಹಾಕಿದ್ದಾರೆ, ಅದಕ್ಕೆ ನನಗೆ ಜ್ವರ ಬಂದಿದೆ ಎಂಬ ಭಾವನೆ ಬರುತ್ತೆ ಎನ್ನುತ್ತಾರೆ ಜಾನ್ವಿ.
ಈ 3 ರಾಶಿಯ ಲವ್ ಲೈಫ್ ಮೇಲೆ ಕೆಟ್ಟ ದೃಷ್ಟಿ, ಡಿವೋರ್ಸ್ ಬ್ರೇಕ್ ಅಪ್
ಇನ್ಸ್ಟಾಗ್ರಾಮ್ ನಲ್ಲಿ ಜಾನ್ವಿ ಈ ವಿಡಿಯೋ ಪೋಸ್ಟ್ ಆಗಿದೆ. ಅದಕ್ಕೆ ಅನೇಕರು ಕಮೆಂಟ್ ಕೂಡ ಮಾಡಿದ್ದಾರೆ. ಜಾನ್ವಿಕಪೂರ್17 ಹೆಸರಿನ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಆಗಿದ್ದು, ನೀವು ದೃಷ್ಟಿಯನ್ನು ನಂಬ್ತೀರಾ ಎಂದು ಶೀರ್ಷಿಕೆ ಹಾಕಲಾಗಿದೆ. ಇದಕ್ಕೆ 2 ಲಕ್ಷಕ್ಕಿಂತಲೂ ಹೆಚ್ಚು ಲೈಕ್ಸ್ ಸಿಕ್ಕಿದೆ. ನೂರಾರು ಮಂದಿ ಕಮೆಂಟ್ ಮಾಡಿದ್ದಾರೆ. ಅನೇಕರು ಜಾನ್ವಿ ಮಾತಿಗೆ ಹೌದು ಎಂದಿದ್ದಾರೆ. ಕೆಲಸ ಪೂರ್ತಿಯಾದ್ಮೇಲೆ ಎಲ್ಲರಿಗೂ ಹೇಳ್ಬೇಕು ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ರೆ, ಅನೇಕರು ನಮ್ಮ ಲೈಫ್ ನಲ್ಲೂ ಹೀಗೆ ಆಗುತ್ತೆ ಎಂದು ಬರೆದಿದ್ದಾರೆ. ಪ್ರತಿಯೊಬ್ಬರ ಜೀವನ ಭಿನ್ನವಾಗಿದ್ದು, ಅವರ ನೆಗೆಟಿವ್ ಎನರ್ಜಿ ನಮಗೆ ಬರುತ್ತೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಅಂಬಾನಿಗೆ ಯಾಕೆ ದೃಷ್ಟಿ ಬೀಳಲ್ಲ ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ.