Deepika Padukone ಬೇಬಿ ಬಂಪ್ ಫೋಟೋಗೆ ಆಲಿಯಾ ಕ್ಯೂಟ್ ಕಮೆಂಟ್!

By Roopa Hegde  |  First Published Jun 20, 2024, 10:34 AM IST

ಗರ್ಭಿಣಿ ದೀಪಿಕಾ ಪಡುಕೋಣೆಗೆ ದೃಷ್ಟಿ ತಾಗುವಂತಿದೆ. ಗರ್ಭಧಾರಣೆಯಲ್ಲೂ ಸುಂದರ ಉಡುಗೆ ತೊಟ್ಟು, ಹೈ ಹೀಲ್ಡ್ ಧರಿಸಿ, ನಗು ಮುಖದಲ್ಲಿ ಮಿಂಚುತ್ತಿರುವ ದೀಪಿಕಾರನ್ನು ನೋಡಿದ್ರೆ ಮತ್ತೆ ಮತ್ತೆ ನೋಡ್ಬೇಕನ್ನಿಸದೆ ಇರದು. ಡಿಪ್ಪಿ ಲುಕ್‌ಗೆ ಆಲಿಯಾ ಭಟ್ ಕೂಡ ಫಿದಾ ಆದಂತಿದೆ. 
 


ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ (Bollywood Actress Deepika Padukone) ಸದ್ಯ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಗರ್ಭಧಾರಣೆಯಲ್ಲೂ ದೀಪಿ ಲುಕ್ ಜನರ ನಿದ್ರೆಗೆಡಿಸಿದ್ದು ಸುಳ್ಳಲ್ಲ. ಸಾಮಾಜಿಕ ಜಾಲತಾಣದಲ್ಲಿ ದೀಪಿಕಾ ಫೋಟೋ, ವಿಡಿಯೋ ಹರಿದಾಡ್ತಿದೆ. ಇದಕ್ಕೆ ಕಾರಣ ದೀಪಿಕಾರ ಹೊಳೆಯುತ್ತಿರುವ ಮುಖ, ಕಲ್ಮಶವಿಲ್ಲದ ನಗು. ಇನ್ನೇನು ಮೂರು ತಿಂಗಳಿಗೆ ದೀಪಿಕಾ ಮಡಿಲಿಗೆ ಮಗು ಬರ್ತಿದೆ. ಈ ಸಮಯದಲ್ಲೂ ಬ್ಯೂಸಿ ಇರುವ ದೀಪಿಕಾ, ಮೊದಲ ಬಾರಿ ತಮ್ಮ ಬೇಬಿ ಬಂಪ್ ತೋರಿಸಿದ್ದಲ್ಲದೆ ನಗುವಿನ ಮೂಲಕವೇ ಕೋಟ್ಯಾಂತರ ಜನರ ಮನಸ್ಸು ಕದ್ದಿದ್ದಾರೆ. 

ವೃತ್ತಿ ಹಾಗೂ ವೈಯಕ್ತಿಕ ಎರಡೂ ಜೀವನ ಎರಡರಲ್ಲೂ ಅವರು ಸುದ್ದಿಯಲ್ಲಿದ್ದಾರೆ. ಸದ್ಯ ದೀಪಿಕಾ (Deepika) ಅಭಿನಯಿಸಿರುವ ಕಲ್ಕಿ 2898 ಕ್ರಿ.ಶ ಜೂನ್ 27 ರಂದು ತೆರೆಗೆ ಬರ್ತಿದೆ. ಚಿತ್ರಬಿಡುಗಡೆ ಮುನ್ನ ಬುಧವಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದಿದ್ದು ಗರ್ಭಿಣಿ (Pregnant) ದೀಪಿಕಾ ಪಡುಕೋಣೆ. ಬ್ಲಾಕ್ ಕಲರ್ ಡ್ರೆಸ್ ನಲ್ಲಿ ಇಡೀ ತಂಡವಿತ್ತು. ಆದ್ರೆ ಗರ್ಭಿಣಿ ದೀಪಿಕಾ ಲುಕ್ ಎಲ್ಲರನ್ನೂ ಮಂತ್ರಮುಗ್ದಗೊಳಿಸಿದೆ. ಗರ್ಭಿಣಿ ದೀಪಿಕಾ ಗ್ಲೋ (Glow) ಹೆಚ್ಚಾಗಿದೆ. ಎಚ್ಚರಿಕೆ ಹೆಜ್ಜೆ ಇಟ್ಟು ಕಾರ್ಯಕ್ರಮಕ್ಕೆ ಬಂದ ದೀಪಿಕಾ ಪಡುಕೋಣೆಗೆ, ಬಿಗ್ ಬಿ ಅಮಿತಾಬ್ ಬಚ್ಚನ್, ನಟ ಪ್ರಭಾಸ್ ಸ್ಪರ್ಧೆ ರೀತಿಯಲ್ಲಿ ತಾ ಮುಂದು ನಾ ಮುಂದು ಅಂತ ಸಹಾಯಕ್ಕೆ ನಿಂತಿದ್ದರು. 

Tap to resize

Latest Videos

ಹೈ ಹೀಲ್ಸ್​, ಟೈಟ್​ ಡ್ರೆಸ್​ ಧರಿಸಿ ಬಂದ ಗರ್ಭಿಣಿ ದೀಪಿಕಾ! ಮತ್ತೊಂದು ಜೋಕರ್​ ಹುಟ್ಟಿಸ್ಬೇಡಮ್ಮಾ ಅಂದ ಫ್ಯಾನ್ಸ್​...

ಈ ಚಿತ್ರ ಬಿಡುಗಡೆ ಈವೆಂಟ್ ನಲ್ಲಿ ದೀಪಿಕಾ ಪಡುಕೋಣೆ ಅಭಿಮಾನಿಗಳಿಗೆ ಸಾಕಷ್ಟು ವಿಷ್ಯ ಸಿಕ್ಕಿದೆ. ಈವೆಂಟ್‌ನಲ್ಲಿ ಮಾತನಾಡಿದ ದೀಪಿಕಾ, ತಮ್ಮ ಹೊಟ್ಟೆ ಇಷ್ಟು ದೊಡ್ಡದಾಗಲು ಪ್ರಭಾಸ್ ನೀಡ್ತಿದ್ದ ಆಹಾರ ಕಾರಣ ಎಂದೂ ಪ್ರಭಾಸ್ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಕಲ್ಕಿ ಚಿತ್ರದಲ್ಲೂ ಗರ್ಭಿಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ದೀಪಿಕಾ. 

ದೀಪಿಕಾ ಪಡುಕೋಣೆ ತಮ್ಮ ಇನ್ಸ್ಟಾ ಖಾತೆಯಲ್ಲೂ ಈವೆಂಟ್ ಫೋಟೋವನ್ನು ಹಂಚಿಕೊಂಡಿದ್ದಾರೆ. ದೀಪಿಕಾ ಪೋಸ್ಟಿಗೆ ಲಕ್ಷಾಂತರ ಅಭಿಮಾನಿಗಳು ಲೈಕ್ ಒತ್ತಿದ್ದಾರೆ. ಇನ್ನು ಸಾವಿರಾರು ಮಂದಿ ಕಮೆಂಟ್ ಮಾಡಿದ್ದಾರೆ. ಅದ್ರಲ್ಲಿ ಗಮನ ಸೆಳೆದಿದ್ದು ಬಾಲಿವುಡ್ ನಟಿ ಆಲಿಯಾ ಭಟ್ ಕಮೆಂಟ್. ಆಲಿಯಾ ಭಟ್, ದೀಪಿಕಾ ಪಡುಕೋಣೆ ಕ್ಯೂಟ್ ಫೋಟೋಕ್ಕೆ Gorge ಅಂತಾ ಬರೆದು ಅದ್ರ ಮುಂದೆ ಒಂದಿಷ್ಟು ಹಾರ್ಟ್ ಹಾಕಿದ್ದಾರೆ. ಅನೇಕ ಅಭಿಮಾನಿಗಳು ದೃಷ್ಟಿ ಬೀಳದಿರಲಿ ಎಂದಿದ್ದಾರೆ. 

ದೀಪಿಕಾ ಪಡುಕೋಣೆ ಫೋಟೋಗೆ ಆಲಿಯಾ ರಿಯಾಕ್ಷನ್ ಅಭಿಮಾನಿಗಳನ್ನು ಮತ್ತಷ್ಟು ಖುಷಿಗೊಳಿಸಿದೆ. ಆಲಿಯಾ ಶುದ್ಧ ಮನಸ್ಸಿನ ನಟಿ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ದೀಪಿಕಾ ಗರ್ಭಧಾರಣೆ ಬಗ್ಗೆ ಸಾಕಷ್ಟು ಕಮೆಂಟ್ ಈ ಹಿಂದೆ ಬಂದಿತ್ತು. ದೀಪಿ ಎಲ್ಲಿಯೂ ತಮ್ಮ ಬೇಬಿ ಬಂಪ್ ತೋರಿಸುವ ಪ್ರಯತ್ನ ಮಾಡಿರಲಿಲ್ಲ. ಹಾಗಾಗಿ ಅನೇಕರು ದೀಪಿಕಾ ಸುಳ್ಳು ಹೇಳ್ತಿದ್ದಾರೆ, ಅದು ನಕಲಿ ಬೇಬಿ ಬಂಪ್ ಎಂದಿದ್ದರು. ಇದಕ್ಕೂ ದೀಪಿಕಾ ಉತ್ತರ ನೀಡಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಮುಖ ತೋರಿಸದೆ ಬೇಬಿ ಬಂಪ್ ಫೋಟೋವೊಂದನ್ನು ಪ್ರತ್ಯೇಕವಾಗಿ ಪೋಸ್ಟ್ ಮಾಡಿ, ಆರೋಪಿಗಳಿಗೆ ಉತ್ತರ ನೀಡಿದ್ದಾರೆ. 

ನೋಡಿ ಸ್ವಾಮಿ ನಾವಿರೋದು ಹೀಗೆ ಅಂತ ಕೈಕೈ ಹಿಡಿದು ಕುಣಿದರು, ಕೇಕೆ ಹಾಕಿ ನಕ್ಕರು

ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ : ಫೆಬ್ರವರಿ 29, 2024 ರಂದು ದೀಪಿಕಾ ಪಡುಕೋಣೆ ಹಾಗೂ ರಣವೀರ್ ತಮ್ಮ ಮಗುವಿನ ಬಗ್ಗೆ ಹೇಳಿದ್ದರು. ಸೆಪ್ಟೆಂಬರ್ ನಲ್ಲಿ ದೀಪಿಕಾ ಮಗುವಿಗೆ ಜನ್ಮ ನೀಡಲಿದ್ದಾರೆ. ಮದುವೆಯಾದ ಆರು ವರ್ಷದ ನಂತ್ರ ದೀಪಿಕಾ ಮನೆಗೆ ಮಗು ಬರ್ತಿದೆ. ಚೊಚ್ಚಲ ಮಗುವಿಗೆ ಜನ್ಮ ನೀಡಲಿರುವ ದೀಪಿಕಾ ಜೋಡಿ ಸಾಕಷ್ಟು ಉತ್ಸಾಹದಲ್ಲಿದ್ದಾರೆ. ದೀಪಿಕಾ ರಣವೀರ್ ಜೋಡಿಗೆ ಹುಟ್ಟಲಿರುವ ಮಗು ಯಾವುದು ಎಂಬ ಪ್ರಶ್ನೆ ಕೂಡ ಶುರುವಾಗಿದೆ. ಹೆಣ್ಣಾ, ಗಂಡಾ ಎನ್ನುವ ಪ್ರಶ್ನೆಗೆ ಇನ್ನು ಮೂರು ತಿಂಗಳಲ್ಲಿ ಉತ್ತರ ಸಿಗಲಿದೆ. 
 

click me!