ವಾಶಿಂಗ್ ಮಶಿನ್ ವಿಪರೀತ ಸದ್ದು ಮಾಡ್ತಿದ್ರೆ ಹೀಗ್ ಮಾಡಿ

By Suvarna NewsFirst Published Jan 13, 2024, 5:34 PM IST
Highlights

ವಾಶಿಂಗ್ ಮಶಿನ್ ಈಗ ಅನಿವಾರ್ಯವಾಗಿದೆ. ನೀವೆಷ್ಟೆ ಒಳ್ಳೆ ಕಂಪನಿ ವಾಶಿಂಗ್ ಮಶಿನ್ ತಂದ್ರೂ ಅನೇಕ ಬಾರಿ ಇದು ದೊಡ್ದದಾಗಿ ಶಬ್ಧ ಮಾಡುತ್ತದೆ. ಈ ಶಬ್ಧ ಬರಬಾರದು ಅಂದ್ರೆ ಕೆಲ ಟಿಪ್ಸ್ ಫಾಲೋ ಮಾಡ್ಬೇಕು.
 

ಮೊದಲೆಲ್ಲ ಅದೆಷ್ಟೇ ಬಟ್ಟೆಗಳಿದ್ದರೂ ಅದನ್ನು ಕೈಯಲ್ಲೇ ತೊಳೆಯುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಈಗ ಹೆಚ್ಚಿನ ಮಂದಿ ಬಟ್ಟೆ ತೊಳೆಯಲು ವಾಶಿಂಗ್ ಮಶಿನ್ ಅನ್ನೇ ಬಳಸುತ್ತಾರೆ. ಈ ಬಟ್ಟೆ ತೊಳೆಯುವ ಯಂತ್ರ ಬಂದಾಗಿನಿಂದ ಅನೇಕ ಮಂದಿ ಕೈಯಿಂದ ಬಟ್ಟೆ ತೊಳೆಯುವುದನ್ನೇ ಮರೆತಿದ್ದಾರೆ.

ವಾಶಿಂಗ್ ಮಶಿನ್ (Washing Machine) ನಲ್ಲಿ ಅನೇಕ ಬಗೆಗಳಿರುತ್ತವೆ. ಸಾಧಾರಣ ವಾಶಿಂಗ್ ಮಶಿನ್ ನಿಂದ ಹಿಡಿದು ಹೆಚ್ಚು ಬೆಲೆಬಾಳುವ ವಾಶಿಂಗ್ ಮಶಿನ್ ಗಳು ಮಾರುಕಟ್ಟೆ (Market) ಯಲ್ಲಿ ಸಿಗುತ್ತವೆ. ಇದು ಮಹಿಳೆಯರಿಗೆ ಬಲಗೈ ಇದ್ದಂತೆಯೇ ಸರಿ. ವೃತ್ತಿ ನಿರತ ಮಹಿಳೆಯರಿಗಾಗಲೀ, ಗೃಹಿಣಿಯರಿಗಾಗಲೀ ಇದು ವರದಾನವಾಗಿದೆ. ಇದು ಮಹಿಳೆಯರ ಕೆಲಸವನ್ನು ಸುಲಭಮಾಡಿಕೊಡುತ್ತದೆ. ಆದರೆ ಕೆಲವೊಮ್ಮೆ ವಾಶಿಂಗ್ ಮಶಿನ್ ಜೋರಾಗಿ ಸದ್ದು ಮಾಡುತ್ತದೆ ಮತ್ತು ಬಟ್ಟೆಗಳನ್ನು ಸ್ಪಿನ್ ಮಾಡುವ ಸಮಯದಲ್ಲಿ ಹೆಚ್ಚು ಅಲುಗಾಡುತ್ತದೆ. ಅಂತಹ ಸಮಯದಲ್ಲಿ ವಾಶಿಂಗ್ ಮಶಿನ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದೇ ಇರುವವರು ವಾಶಿಂಗ್ ಮಶಿನ್ ತಂತ್ರಜ್ಞರನ್ನು ಸಂಪರ್ಕಿಸುತ್ತಾರೆ. ವಾಶಿಂಗ್ ಮಶಿನ್ ನಲ್ಲಿ ಉಂಟಾಗುವ ಇಂತಹ ಸಣ್ಣ ಪುಟ್ಟ ಸಮಸ್ಯೆಗಳನ್ನು ನೀವು ಮನೆಯಲ್ಲಿಯೇ ಪರಿಹರಿಸಿಕೊಳ್ಳಬಹುದು. ಅಂತಹ ಕೆಲವು ಸರಳ ವಿಧಾನ ಇಲ್ಲಿದೆ.

Latest Videos

ಇನ್ಫೋಸಿಸ್‌ ನಾರಾಯಣ ಮೂರ್ತಿಯವರ ಈ ಗುಣ ನೋಡಿ ಸುಧಾ ಮೂರ್ತಿ ಕ್ಲೀನ್ ಬೋಲ್ಡ್ ಆದ್ರಂತೆ!

ಈ ತೊಂದರೆಗಳಿಂದ ವಾಶಿಂಗ್ ಮಶಿನ್ ಹೆಚ್ಚು ಸದ್ದು ಮಾಡಬಹುದು : 

ತೂಕ : ಒಂದೊಂದು ವಾಶಿಂಗ್ ಮಶಿನ್ ಒಂದೊಂದು ಬಗೆಯ ಸಾಮರ್ಥ್ಯವನ್ನು ಹೊಂದಿರುತ್ತದೆ. ಕಡಿಮೆ ಸಾಮರ್ಥ್ಯದ ವಾಶಿಂಗ್ ಮಶಿನ್ ಗೆ ಹೆಚ್ಚು ಬಟ್ಟೆಗಳನ್ನು ಹಾಕಿದಾಗ ಸ್ಪಿನ್ ಮಾಡುವ ಸಮಯದಲ್ಲಿ ಅದು ಹೆಚ್ಚು ಸದ್ದು ಮಾಡುತ್ತವೆ ಮತ್ತು ಅಲುಗಾಡುತ್ತದೆ. ಹಾಗಾಗಿ ಟವೆಲ್, ಡ್ರೆಸ್ಸಿಂಗ್ ಗೌನ್ ಗಳಂತಹ ಭಾರವಾದ ವಸ್ತುಗಳನ್ನು ವಾಶಿಂಗ್ ಮಶಿನ್ ಗೆ ಹಾಕುವುದನ್ನು ತಪ್ಪಿಸಬೇಕು. ಈಗಿನ ಆಧುನಿಕ ವಾಶಿಂಗ್ ಮಶಿನ್ ಗಳು ಬಟ್ಟೆಯ ತೂಕ ಎಷ್ಟಿದೆಯೆಂದು ಪತ್ತೆ ಹಚ್ಚಬಹುದು. ಅದರಿಂದ ವಾಶಿಂಗ್ ಮಶಿನ್ ಹೆಚ್ಚು ಲೋಡ್ ಆಗಿ ಸದ್ದು ಮಾಡುವುದನ್ನು ತಪ್ಪಿಸಬಹುದು.

ಹೆಣ್ಣೆಂದರೆ ಇಲ್ಲಿ ಮಕ್ಕಳು ಹೆರುವ ಯಂತ್ರ, ಮಕ್ಕಳನ್ನೂ ಬಲವಂತವಾಗಿ ಬಸುರು ಮಾಡಲಾಗುತ್ತೆ!

ನಾಣ್ಯ ಮತ್ತು ಬ್ರಾ ವೈರ್ ಗಳು :  ವಾಶಿಂಗ್ ಡ್ರಮ್ ನಲ್ಲಿ ನಾಣ್ಯ, ಬ್ರಾ ವೈರ್ ಮುಂತಾದ ಗಟ್ಟಿಯಾದ ವಸ್ತುಗಳು ಸೇರಿಕೊಳ್ಳುವುದರಿಂದಲೂ ವಿಚಿತ್ರವಾದ ಸಪ್ಪಳ ಬರುತ್ತದೆ ಎನ್ನುವುದು ಸಂಶೋಧನೆಯಿಂದ ತಿಳಿದುಬಂದಿದೆ. ಬ್ರಾ ವೈರ್ ಗಳಿಂದ ಹೆಚ್ಚಿನ ಸ್ಕ್ರಾಚಿಂಗ್ ಶಬ್ದ ಬರುತ್ತದೆ ಎನ್ನುವುದನ್ನು ಕೂಡ ಸಂಶೋಧನಾಕಾರರು ಹೇಳಿದ್ದಾರೆ.

ಮುದ್ರೆಯನ್ನು ಪರಿಶೀಲಿಸಿ : ವಾಶಿಂಗ್ ಮಶಿನ್ ಸೀಲ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಒಳ್ಳೆಯದು. ಏಕೆಂದರೆ ಅದರಲ್ಲಿ ಸಿಲುಕಿಕೊಳ್ಳುವ ಸಣ್ಣ ಸಣ್ಣ ವಸ್ತುಗಳಿಂದಲೂ ವಾಶಿಂಗ್ ಮಶಿನ್ ಸದ್ದುಮಾಡಬಹುದು. ಇದನ್ನು ಸ್ವಚ್ಛಮಾಡಲು ಅಸಾಧ್ಯವಾದರೆ ಸೀಲ್ ಅನ್ನು ಬದಲಾಯಿಸುವುದು ಒಳ್ಳೆಯದು.

ಮುಂಬಾಗದ ಫಿಲ್ಟರ್ ಅನ್ನು ಸ್ವಚ್ಛಗೊಳಿಸಿ : ವಾಶಿಂಗ್ ಮಶಿನ್ ನ ಫಿಲ್ಟರ್ ಅನ್ನು ಆಗಾಗ ಸ್ವಚ್ಛಗೊಳಿಸುತ್ತಿರಬೇಕು. ಫಿಲ್ಟರ್ ಎಲ್ಲಿದೆ ಅದನ್ನು ಹೇಗೆ ಸ್ವಚ್ಛಗೊಳಿಸಬೇಕು ಎನ್ನುವುದನ್ನು ತಿಳಿದುಕೊಳ್ಳಲು ನೀವು ಇನ್ಟ್ರಕ್ಷನ್ ನಲ್ಲಿ ನೀಡಲಾಗಿರುವ ಸೂಚನೆಗಳನ್ನು ಅನುಸರಿಸಬೇಕು. ಫಿಲ್ಟರ್ ಒಳಗಡೆ ಸಿಲುಕಿಕೊಂಡಿರುವ ನೀರನ್ನು ಹೊರತೆಗೆಯುವ ಸಮಯದಲ್ಲಿ ನೀವು ಓವನ್ ಟ್ರೇ ಯನ್ನು ಕೆಳಗಡೆ ಇಟ್ಟುಕೊಳ್ಳಬಹುದು. ಇದರಿಂದ ನೀರು ನೆಲದ ಮೇಲೆ ಚೆಲ್ಲುವುದನ್ನು ತಪ್ಪಿಸಬಹುದು.

ಹೊರಗಿನ ಡ್ರಮ್ ನಲ್ಲಿ ಏನಾದರೂ ಸಿಲುಕಿಕೊಂಡಿದೆಯೇ ಎಂದು ಪರೀಕ್ಷಿಸಿ : ವಾಶಿಂಗ್ ಮಶಿನ್ ನ ಹೊರಗಿನ ಪ್ಲಾಸ್ಟಿಕ್ ಟಬ್ ನಲ್ಲಿ ಏನಾದರೂ ಚಿಕ್ಕ ವಸ್ತು ಸಿಲುಕಿಕೊಂಡರೂ ವಾಶಿಂಗ್ ಮಶಿನ್ ಜೋರಾಗಿ ಶಬ್ದ ಮಾಡುತ್ತದೆ. ಇಂತಹ ಸಮಸ್ಯೆಯಾದಾಗ ನೀವು ವಾಶಿಂಗ್ ಮಶಿನ್ ತಂತ್ರಜ್ಞರಿಂದಲೇ ಅದನ್ನು ಸರಿಪಡಿಸಿಕೊಳ್ಳಬೇಕು.
 

click me!