ಇನ್ಫೋಸಿಸ್‌ ನಾರಾಯಣ ಮೂರ್ತಿಯವರ ಈ ಗುಣ ನೋಡಿ ಸುಧಾ ಮೂರ್ತಿ ಕ್ಲೀನ್ ಬೋಲ್ಡ್ ಆದ್ರಂತೆ!

ಇನ್ಫೋಸಿಸ್‌ನ ಸಂಸ್ಥಾಪಕ ಬಿಲಿಯನೇರ್ ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಸುಧಾ ಮೂರ್ತಿ ತಮ್ಮ ಜೀವನದ ಬಗ್ಗೆ ಆಗಾಗ ಮಾತನಾಡುತ್ತಾ ಸುದ್ದಿಯಲ್ಲಿರುತ್ತಾರೆ. ಸದ್ಯ ನಾರಾಯಣ ಮೂರ್ತಿಯವರ ಯಾವ ಗುಣದಿಂದ ನಾನು ಅವರನ್ನು ಇಷ್ಟಪಟ್ಟೆ ಎಂಬುದನ್ನು ಸುಧಾಮೂರ್ತಿ ಬಹಿರಂಗಪಡಿಸಿದ್ದಾರೆ.

When Ticketless Narayana Murthy Travelled 11 Hours In Train For Sudha Murty Vin

ನವದೆಹಲಿ: ಇನ್ಫೋಸಿಸ್‌ನ ಸಂಸ್ಥಾಪಕ ಬಿಲಿಯನೇರ್ ನಾರಾಯಣ ಮೂರ್ತಿ ಅವರ ಪತ್ನಿ. ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿ ತಮ್ಮ ವ್ಯವಹಾರ ಸಂಬಂಧಿತ ವಿಷಯಗಳಿಂದಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗಷ್ಟೇ ನಾರಾಯಣ ಮೂರ್ತಿ ವರ್ಕಿಂಗ್ ಅವರ್ಸ್ 70 ಗಂಟೆಗಳ ಕಾಲ ಇರಬೇಕು ಎಂದು ಹೇಳಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದರು. ಈ ಬಗ್ಗೆ ಪರ-ವಿರೋಧದ ಮಾತುಕತೆ ಕೇಳಿ ಬಂದಿತ್ತು. ಇದಲ್ಲದೆ ದಂಪತಿ ಆಗಾಗ ಹಲವು ಸಂದರ್ಶನಗಳಲ್ಲಿ ಭಾಗವಹಿಸಿ ತಮ್ಮ ಜೀವನದ ಬಗ್ಗೆ ಆಸಕ್ತಿದಾಯಕ ಮಾತುಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚಿಗಷ್ಟೇ ಸುಧಾಮೂರ್ತಿ, ನಾರಾಯಣ ಮೂರ್ತಿಯವರನ್ನು ಮದುವೆಯಾಗಲು ತಾವು ಹಾಕಿದ ಕಂಡೀಷನ್ಸ್ ಬಗ್ಗೆ ಹೇಳಿದ್ದರು. 

ಈಗ ಇನ್ಫೋಸಿಸ್‌ ನಾರಾಯಣ ಮೂರ್ತಿಯವರ ಯಾವ ಗುಣದಿಂದ ನಾನು ಅವರನ್ನು ಇಷ್ಟಪಟ್ಟೆ ಎಂಬುದನ್ನು ಸುಧಾಮೂರ್ತಿ ತಿಳಿಸಿಕೊಟ್ಟಿದ್ದಾರೆ. ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ತಮ್ಮ ಪತ್ನಿ ಸುಧಾ ಮೂರ್ತಿ ಅವರನ್ನು ಡ್ರಾಪ್ ಮಾಡಲು ಟಿಕೆಟ್ ಇಲ್ಲದೆ 11 ಗಂಟೆಗಳ ಕಾಲ ರೈಲಿನಲ್ಲಿ ಪ್ರಯಾಣಿಸಿದ್ದನ್ನು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. 'ವ್ಯಕ್ತಿ ಪ್ರೀತಿಯಲ್ಲಿದ್ದಾಗ ಹೀಗೆಲ್ಲಾ ಆಗುತ್ತದೆ' ಎಂದು ಅವರು ಹೇಳಿದರು.

ಬಿಲಿಯನೇರ್ ಆಗಿದ್ರೂ ಇನ್ಫಿ ಮೂರ್ತಿ ವರಿಸಲು ಸುಧಾಮೂರ್ತಿ ಇಷ್ಟೆಲ್ಲಾ ಕಂಡೀಷನ್ಸ್‌ ಹಾಕಿದ್ರಂತೆ!

'ಅದೊಂದು ಬೇರೆ ರೀತಿಯ ಕಾಲಘಟ್ಟವಾಗಿತ್ತು. ಆದರೆ ದೀರ್ಘ ಸಮಯದ ಕಾಲ ಈ ಸಂಬಂಧದಲ್ಲಿ ಆಪ್ತತೆಯನ್ನು ಉಳಿಸಿಕೊಳ್ಳುವ ಬಗ್ಗೆ ನಾನು ಮಾತನಾಡುತ್ತಿದ್ದೇನೆ. ಈ ಸಂಬಂಧದ ಕುರಿತಾದ ಅತ್ಯುತ್ತಮ ವಿಷಯವೆಂದರೆ ಮಕ್ಕಳು, ಮಕ್ಕಳ ಮದುವೆ ಈ ಸಂಬಂಧವನ್ನು ಇನ್ನಷ್ಟು ಎಕ್ಸೈಟ್ ಆಗಿ ಮಾಡುತ್ತದೆ' ಎಂದು ನಾರಾಯಣ ಮೂರ್ತಿ ಹೇಳಿದರು.

ಅಮೇರಿಕಾ ಮೂಲದ ಭಾರತೀಯ ಮೂಲದ ಲೇಖಕಿ ಚಿತ್ರಾ ಬ್ಯಾನರ್ಜಿ ದಿವಾಕರುಣಿ ಅವರು ಬರೆದಿರುವ ಸುಧಾಮೂರ್ತಿ ಜೀವನಚರಿತ್ರೆ 'An Uncommon Love: The Early Life of Sudha and Narayana Murthy' ಪುಸ್ತಕ ಬಿಡುಗಡೆಯ ಸಮಯದಲ್ಲಿ ಈ ವಿಚಾರಗಳನ್ನು ಬಹಿರಂಗಪಡಿಸಲಾಗಿದೆ.

ಇನ್ಫೋಸಿಸ್ ಆರಂಭಿಸೋಕೆ ದುಡ್ಡು ಕೊಟ್ಟಿದ್ದೇ ಸುಧಾಮೂರ್ತಿ, ಆದ್ರೂ ನಾರಾಯಣ ಮೂರ್ತಿ ಕಂಪೆನಿಯೊಳಗೆ ಬಿಡ್ತಿರ್ಲಿಲ್ಲ ಯಾಕೆ?

ಪತ್ನಿಗಾಗಿ ಟಿಕೆಟ್‌ ಇಲ್ಲದೆ 11 ಗಂಟೆ ರೈಲಿನಲ್ಲಿ ಪ್ರಯಾಣಿಸಿದ್ದ ಇನ್ಫೋಸಿಸ್ ನಾರಾಯಣ ಮೂರ್ತಿಯವರ ಬಗ್ಗೆ ತಿಳಿದು ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ವಾರಕ್ಕೆ 70 ಗಂಟೆಗಳ ಕೆಲಸದ ಸಲಹೆ ಬಗ್ಗೆ ಟೀಕಿಸಿದ್ದಾರೆ. 'ಪ್ರಯಾಣದ ಸಮಯದಲ್ಲಿ ವಾರಕ್ಕೆ 70 ಗಂಟೆಗಳ ಕೆಲಸದ ಪರಿಕಲ್ಪನೆಯನ್ನು ಕಡೆಗಣಿಸಲು ಏಕೆ ಆಯ್ಕೆ ಮಾಡಿದರು' ಎಂದು ಒಬ್ಬರು ಪ್ರಶ್ನಿಸಿದರು. ಇನ್ನೊಬ್ಬರು, 'ಇದು ರೈಲ್ವೇ ಮತ್ತು ಬಿಲ್ಲಿಂಗ್ ಗಂಟೆಗಳ ಆದಾಯದ ನಷ್ಟ. ಆಗ 70 ಗಂಟೆಗಳ ನಿಯಮ ಅನ್ವಯವಾಗುದಿಲ್ವೇ' ಎಂದು ಕೇಳಿದ್ದಾರೆ. ಇನ್ನೊಬ್ಬ ವ್ಯಕ್ತಿ ಪ್ರತಿಕ್ರಿಯಿಸಿ,  '70 ಗಂಟೆಗಳಲ್ಲಿ 59 ಗಂಟೆ ಮಾತ್ರ ಕೆಲಸ. ಆ ವಾರ ಎಷ್ಟು ಅನುತ್ಪಾದಕವಾಗಿರಬಹುದು, ಕಂಪನಿಗೆ ಗಮನಾರ್ಹ ಆರ್ಥಿಕ ನಷ್ಟವನ್ನು ಉಂಟುಮಾಡಬಹುದು' ಎಂದು ವ್ಯಂಗ್ಯವಾಡಿದರು.

ಇತ್ತೀಚೆಗೆ ನಾರಾಯಣ ಮೂರ್ತಿ, ಸುಧಾ ಮೂರ್ತಿಯನ್ನು ಕಂಪನಿಯಿಂದ ಹೊರಗಿಟ್ಟು ತಾನು ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದರು. ಅವಳು ತನಗಿಂತ ಹೆಚ್ಚು ಅರ್ಹತೆ ಹೊಂದಿದ್ದಾಳೆ. ಆದರೆ ಆ ದಿನಗಳಲ್ಲಿ ನಾನು ಕುಟುಂಬ ಮತ್ತು ಕಂಪೆನಿಯನ್ನು ಒಟ್ಟಿಗೆ ಸೇರಿಸಬಾರದು ಎಂದು ನಂಬಿದ್ದೆ' ಎಂದು ತಿಳಿಸಿದ್ದರು. 

Latest Videos
Follow Us:
Download App:
  • android
  • ios