
ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿಇಒ ಬಗ್ಗೆ ಮಾತನಾಡಿದರೆ, ಮೊದಲು ಬರುವ ಹೆಸರು ಗೂಗಲ್ ಸಿಇಒ ಸುಂದರ್ ಪಿಚೈ, ನಂತರ ಎಲೋನ್ ಮಸ್ಕ್, ಟಿಮ್ ಕುಕ್ ಮತ್ತು ಸತ್ಯ ನಾಡೆಲ್ಲಾ ಮುಂತಾದವರ ಹೆಸರು ಕೇಳಿ ಬರುತ್ತೆ. ಆದರೆ ಬ್ರಿಟನ್ ನ ಮಹಿಳಾ ಸಿಇಒ ಒಬ್ಬರು ಸಂಬಳದ ವಿಚಾರದಲ್ಲಿ ಇವರನ್ನೆಲ್ಲ ಹಿಂದೆ ಹಾಕಿದ್ದಾರೆ. ಅವರ ಹೆಸರು ಡೆನ್ನಿಸ್ ಕೋಟ್ಸ್. ಈ ಹೆಸರು ಹೇಳಿದ ಜನರು ಸಂಖ್ಯೆ ಬಹಳ ಕಡಿಮೆ ಇದೆ. ಅನೇಕರಿಗೆ ಡೆನ್ನಿಸ್ ಕೋಟ್ಸ್ ಕೋಡ್ಸ್ ಬಗ್ಗೆ ಮಾಹಿತಿ ಇಲ್ಲ. ಆಟದ ಮೂಲಕವೇ ಕೋಟ್ಯಾಂತರ ರೂಪಾಯಿ ಗಳಿಸುವ ಡೆನ್ನಿಸ್ ಕೋಟ್ಸ್ ಸಾಮಾನ್ಯದವರಲ್ಲ. ಅವರ ಸಾಧನೆ ಕೇಳಿದ ಮೇಲೆ ನೀವು ಅವರ ಹೆಸರು ಮರೆಯೋಕೆ ಸಾಧ್ಯವಿಲ್ಲ.
ಡೆನ್ನಿಸ್ ಕೋಟ್ಸ್ (Dennis Coates) ಯಾರು? : ಆನ್‌ಲೈನ್ (Online) ಬೆಟ್ಟಿಂಗ್ ಪ್ಲಾಟ್‌ಫಾರ್ಮ್ Bet365 ನ ಸಂಸ್ಥಾಪಕಿ ಮತ್ತು ಸಿಇಒ ಡೆನ್ನಿಸ್ ಕೋಟ್ಸ್. 2023 ರಲ್ಲಿ ಡೆನ್ನಿಸ್ ಒಟ್ಟು 2,324 ಕೋಟಿ ರೂಪಾಯಿ ಸಂಬಳ ಪಡೆದಿದ್ದಾರೆ. 53 ವರ್ಷದ ಕೋಟ್ಸ್ ಬ್ರಿಟನ್‌ನ ಅತ್ಯಂತ ಶ್ರೀಮಂತ ಮಹಿಳೆ. ಕಳೆದ 10 ವರ್ಷಗಳಲ್ಲಿ ಕೋಟ್ಸ್ 11,000 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಗಳಿಸಿದ್ದಾರೆ.
ನಾಲಾಯಕ್ ಅಂದ್ರೂ ತಲೆಕೆಡಿಸಿಕೊಳ್ಳದ ಭಾರತೀಯನೀಗ ಅಮೆರಿಕದ ಯಶಸ್ವಿ ಉದ್ಯಮಿ;ಈತನ ಸಂಪತ್ತು 24,102 ಕೋಟಿ ರೂ
Bet365 ಕಂಪನಿ ಆದಾಯ ಎಷ್ಟು? : Bet365 ಕಂಪನಿ ಕೂಡ ಆದಾಯ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. 2023ರಲ್ಲಿ ಸುಮಾರು 35 ಸಾವಿರ ಕೋಟಿ ವ್ಯವಹಾರ ಮಾಡಿದೆ. ಕಂಪನಿಯ ಗೇಮಿಂಗ್ ವಿಭಾಗವು 630 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದ್ದರೂ, ಒಟ್ಟಾರೆ ಲಾಭವು ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ. ಡೆನ್ನಿಸ್ ಒಟ್ಟೂ ಆದಾಯ ಎಷ್ಟು? : ಡೆನ್ನಿಸ್ ಬರಿ ಸಂಬಳ ಮಾತ್ರ ಪಡೆಯೋದಿಲ್ಲ. ಅವರಿಗೆ ಡಿವಿಡೆಂಡ್ ಆಗಿ 1,054 ಕೋಟಿ ರೂಪಾಯಿ ಸಿಕ್ಕಿದೆ. ಈ ಮೂಲಕ 2023ರಲ್ಲಿ ಅವರ ಒಟ್ಟು ಗಳಿಕೆ 3,378 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಗಳಿಕೆ ವಿಷ್ಯದಲ್ಲಿ ದಿಗ್ಗಜರನ್ನು ಹಿಂದಿಕ್ಕಿದ ಡೆನ್ನಿಸ್ ಕೋಟ್ಸ್ : ಅನೇಕ ದಿಗ್ಗಜರನ್ನು ಡೆನ್ನಿಸ್ ಕೊಟ್ಸ್ ಗಳಿಕೆ ವಿಷ್ಯದಲ್ಲಿ ಹಿಂದಿಕ್ಕಿದ್ದಾರೆ. ಸುಂದರ್ ಪಿಚೈ ಅವರ ಒಟ್ಟು ಗಳಿಕೆಗಿಂತ ಡೆನ್ನಿಸ್ ಗಳಿಕೆ ದ್ವಿಗುಣವಾಗಿದೆ. ಗೂಗಲ್ ಸಿಇಒ ಸುಂದರ್ ಪಿಚೈ ಅವರು 2023 ರಲ್ಲಿ ಒಟ್ಟು 1,876 ಕೋಟಿ ರೂಪಾಯಿ ಪ್ಯಾಕೇಜ್ ಪಡೆದಿದ್ದರು. ಕೋಟ್ಸ್, ಬ್ರಿಟಿಷ್ ಪ್ರಧಾನಿಯನ್ನೂ ರೇಸ್ ನಲ್ಲಿ ಹಿಂದಿಕ್ಕಿದ್ದಾರೆ. ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರು 2023 ರಲ್ಲಿ ವಾರ್ಷಿಕ ಪ್ಯಾಕೇಜ್ ಆಗಿ ಕೇವಲ 2.09 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ. ಅವರ ಒಟ್ಟೂ ಆದಾಯ ಕೋಟ್ಸ್ ಗಿಂತ ತುಂಬಾ ಕಡಿಮೆ ಇದೆ. ಕೋಟ್ಸ್ ಕಳೆದ 10 ವರ್ಷಗಳಲ್ಲಿ ಸುಮಾರು 16 ಸಾವಿರ ಕೋಟಿ ರೂಪಾಯಿಗಳ ಸಂಬಳ ಮತ್ತು ಲಾಭಾಂಶವನ್ನು ಪಡೆದಿದ್ದಾರೆ.
13 ವರ್ಷದಲ್ಲೇ ಬಿಸಿನೆಸ್ ಆರಂಭಿಸಿ ಬರೋಬ್ಬರಿ 100 ಕೋಟಿ ಗಳಿಸ್ತಿರೋ ಭಾರತದ ಅತೀ ಕಿರಿಯ ಉದ್ಯಮಿ!
ಡೆನ್ನಿಸ್ ಕೋಟ್ಸ್ ಶಿಕ್ಷಣ : ಡೆನ್ನಿಸ್ ಕೋಟ್ಸ್ ಶೆಫೀಲ್ಡ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಬ್ಯಾಚುಲರ್ ಪದವಿ ಪಡೆದಿದ್ದಾರೆ. ಡೆನ್ನಿಸ್ ಕೋಟ್ಸ್ ಪ್ರೌಢಶಾಲೆಯಲ್ಲಿದ್ದಾಗ ಅವರ ಕುಟುಂಬ ಪ್ರಾಂತೀಯ ರೇಸಿಂಗ್ ವ್ಯವಹಾರದಲ್ಲಿ ಕೆಲಸ ಶುರು ಮಾಡಿತ್ತು. ಕಾಲೇಜಿನ ನಂತರ ಡೆನ್ನಿಸ್ ಕೋಟ್ಸ್ ಕುಟುಂಬ ವ್ಯಾಪಾರದಲ್ಲಿ ಕೈಜೋಡಿಸಿದ್ರು. ಅಕೌಂಟೆಂಟ್ ಆಗಿ ಕೆಲಸ ಆರಂಭಿಸಿದ್ರು. 1995 ರಲ್ಲಿ ಅವರು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದರು. ಅವರು ಶೀಘ್ರದಲ್ಲೇ ಸುಮಾರು 50 ಬೆಟ್ಟಿಂಗ್ ಅಂಗಡಿಗಳಿಗೆ ವ್ಯವಹಾರವನ್ನು ವಿಸ್ತರಿಸಿದ್ದರು. 2000 ರಲ್ಲಿ ಇಂಟರ್ನೆಟ್‌ನ ಉದಯ ಅವರ ದಾರಿ ಬದಲಿಸಿತು. ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್‌ನಿಂದ 18 ಮಿಲಿಯನ್ ಡಾಲರ್ ಸಾಲ ಪಡೆದು, ಸಾಫ್ಟ್ವೇರ್ ಅಭಿವೃದ್ಧಿಪಡಿಸಿ, 2001 ರಲ್ಲಿ Bet365.com ಶುರು ಮಾಡಿದ್ರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.