ನಮ್ಮ ಭಾರತೀಯ ಸಮಾಜದಲ್ಲಿ ಪೀರಿಯೆಡ್ಸ್ ಟೈಮ್ ನಲ್ಲಿ ಹೆಚ್ಚಿನವರು ಸೆಕ್ಸ್ ಮಾಡಲು ಅಂಜಿಕೊಳ್ಳುತ್ತಾರೆ. ಆ ಸಮಯದಲ್ಲಿ ಹೆಣ್ಣಿನ ಮೂಡ್ ಬದಲಾಗುತ್ತಲೇ ಇರುತ್ತದೆ. ಇದಕ್ಕೆ ಮೂಡ್ ಸ್ವಿಂಗ್ ಅಂತಾರೆ. ಅಂಥಾ ಟೈಮ್ ನಲ್ಲಿ ಅವಳಿಗೆ ತಾನು ಬಹಳ ಪ್ರೀತಿಸುವ ಪತಿ ಪಕ್ಕದಲ್ಲಿದ್ದರೆ ಸುರಕ್ಷಾ ಭಾವವಿರುತ್ತದೆ.
ನಮ್ಮ ಭಾರತೀಯ ಸಮಾಜದಲ್ಲಿ ಪೀರಿಯೆಡ್ಸ್ ಟೈಮ್ ನಲ್ಲಿ ಹೆಚ್ಚಿನವರು ಸೆಕ್ಸ್ ಮಾಡಲು ಅಂಜಿಕೊಳ್ಳುತ್ತಾರೆ. ಮದುವೆ ಅಥವಾ ಸಂಬಂಧದ ಆರಂಭದಿಂದಲೂ ಆ ಟೈಮ್ನಲ್ಲಿ ಇಂಥದ್ದೊಂದು ಗೆರೆ ಎಳೆದಿರುತ್ತಾರೆ. ಸಂಪ್ರದಾಯಸ್ಥ ಕುಟುಂಬಗಳಲ್ಲಿ ಗಂಡ ಹೆಂಡತಿಯನ್ನು ಆ ಸಮಯದಲ್ಲಿ ಒಟ್ಟಿಗೆ ಮಲಗಲೂ ಬಿಡೋದಿಲ್ಲ. ಕಾರಣ ಆ ಟೈಮ್ನಲ್ಲಿ ಸೆಕ್ಸ್ ಮಾಡಿದರೆ ಸಮಸ್ಯೆಯಾಗಬಹುದು ಅನ್ನುವುದು. ಆದರೆ 'ನಿಜವಾಗಿ ಸಾಮರಸ್ಯ ಇರುವ ದಂಪತಿಯಾದರೆ ಅವರಿಬ್ಬರೂ ಆ ಸಮಯ ಹತ್ತಿರ ಮಲಗಿದರೇ ಉತ್ತಮ. ಆದರೆ ಸೂಕ್ಷ್ಮತೆ ಇಲ್ಲದ ಪತಿಯನ್ನು ದೂರ ಮಲಗಿಸೋದೇ ಸೇಫ್' ಅಂತಾರೆ ಸೆಕ್ಸಾಲಜಿಸ್ಟ್ ಒಬ್ಬರು. ಇದಕ್ಕೆ ಕಾರಣ ಇದೆ, ಆ ಸಮಯದಲ್ಲಿ ಹೆಣ್ಣಿನ ಮೂಡ್ ಬದಲಾಗುತ್ತಲೇ ಇರುತ್ತದೆ. ಇದಕ್ಕೆ ಮೂಡ್ ಸ್ವಿಂಗ್ ಅಂತಾರೆ. ಅಂಥಾ ಟೈಮ್ ನಲ್ಲಿ ಅವಳಿಗೆ ತಾನು ಬಹಳ ಪ್ರೀತಿಸುವ ಪತಿ ಪಕ್ಕದಲ್ಲಿದ್ದರೆ ಸುರಕ್ಷಾ ಭಾವವಿರುತ್ತದೆ. ಅವಳ ಮಾನಸಿಕ ಕಿರಿಕಿರಿಗಳೆಲ್ಲ ಅವನ ತಬ್ಬುಗೆಯಲ್ಲಿ ಕರಗಿ ಹೋಗಿರುತ್ತದೆ. ಆ ಟೈಮ್ ನಲ್ಲಿ ಅವಳು ಬಳಲಿದ್ದಾಳೆ, ಅವಳಿಗೆ ಮೂಡ್ ಇಲ್ಲ ಅಂದರೆ ಅವನು ಬಲವಂತ ಮಾಡದೇ ಸಮಾಧಾನ ಮಾಡಿ ಮಲಗಿಸುತ್ತಾನೆ. ಇನ್ನು ಸದಾ ಕಿರಿಕಿರಿ ಮಾಡುವ, ಅವಳಿಗೆ ಇಷ್ಟವಾಗದ ಪತಿ ಆ ಟೈಮ್ ನಲ್ಲಿ ಅವಳ ಜೊತೆಗಿದ್ದರೆ ಕಿರಿಕಿರಿ ಇನ್ನೂ ಹೆಚ್ಚಾಗುತ್ತದೆ. ಆಕೆಯ ಮನಸ್ಸು ಸೂಕ್ಷ್ಮ ಇರುವ ಕಾರಣ ಈ ಟೈಮ್ ನಲ್ಲಿ ಆತ ಏನಾದರೂ ಮಾಡಿದರೂ ಅವನ ಬಗ್ಗೆ ಸಿಟ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಆ ಟೈಮ್ ನಲ್ಲಿ ಸೆಕ್ಸ್ ಮಾಡೋದು ಸರಿಯಾ?
ಪೀರಿಯೆಡ್ಸ್ ಟೈಮ್ ನಲ್ಲಿ ಸೆಕ್ಸ್ ಮಾಡೋದಕ್ಕೆ ಇಬ್ಬರಿಗೂ ಸಮ್ಮತಿ ಇದ್ದರೆ ಅದು ತಪ್ಪಲ್ಲ. ಆದರೆ ಪೀರಿಯೆಡ್ಸ್ ನ ಮೊದಲ ದಿನ ಮಹಿಳೆಯ ದೇಹದಲ್ಲಿರುವ ಈಸ್ಟ್ರೋಜಿನ್ ಹಾಗೂ ಟೆಸ್ಟೊಸ್ಟೆರೋನ್ ಪ್ರಮಾಣ ಗಣನೀಯವಾಗಿ ಇಳಿದಿರುತ್ತದೆ. ಹಾಗಾಗಿ ಅವಳಿಗೆ ಸೆಕ್ಸ್ ನಲ್ಲಿ ಆಸಕ್ತಿ ಬರದಿರುವ ಸಾಧ್ಯತೆ ಹೆಚ್ಚು. ದೇಹದ ಬಳಲಿಕೆಯೂ ಹೆಚ್ಚಿರುವ ಕಾರಣ ಅವಳು ನೋ ಅನ್ನುವ ಸಾಧ್ಯತೆಯೇ ಹೆಚ್ಚು. ಬಲವಂತದ ಸೆಕ್ಸ್ ಯಾವತ್ತೂ ತಪ್ಪು. ಇಂಥ ಟೈಮ್ ನಲ್ಲಿ ಅವಳಿಗೆ ಕಂಫರ್ಟ್ ಫೀಲ್ ಕೊಟ್ಟರೆ ಅವಳ ಮನಸ್ಸು ಫ್ರೆಶ್ ಆಗುತ್ತೆ. ಮೊದಲ ದಿನ ಈಸ್ಟ್ರೋಜನ್ ಪ್ರಮಾಣ ಒಂದಕ್ಕೆ ಇಳಿದಿದ್ದರೆ ಮೂರನೇ ದಿನ ಇದು ಮೂರಕ್ಕೆ ಏರಿರುತ್ತದೆ.
ಫೀಲ್ ಫ್ರೀ: ಮಹಿಳೆಯರೂ ಹಸ್ತ ಮೈಥುನ ಮಾಡ್ತಾರಾ?
ಏನಾದರೂ ಸಮಸ್ಯೆ ಆಗುತ್ತಾ?
ದೈಹಿಕವಾಗಿ ಗಂಭೀರವಾದ ಸಮಸ್ಯೆಗಳೇನೂ ಬರಲ್ಲ. ಆದರೆ ಆ ಸಮಯದಲ್ಲಿ ಋತುಸ್ರಾವ ಅಧಿಕವಿದ್ದರೆ ಲೈಂಗಿಕ ಕ್ರಿಯೆ ಸರಿಯಾಗಿ ಆಗಲಿಕ್ಕಿಲ್ಲ. ಹೆಣ್ಣಿಗೆ ಕಡಿಮೆ ಉದ್ರೇಕ ಅಥವಾ ಕೆಲವೊಮ್ಮೆ ಅತೀ ಉದ್ರೇಕ ಉಂಟಾಗುವ ಸಾಧ್ಯತೆ ಇದೆ. ಕ್ರಿಯೆಯ ಬಳಿಕ ಅವಳಿಗೆ ಬಳಲಿಕೆ ಹೆಚ್ಚಾಗಬಹುದು. ಅವಳಿಗೆ ಸೆಕ್ಸ್ ಮೇಲೆ ಹೆಚ್ಚು ಗಮನ ಹೋಗದೇ ಇರಬಹುದು. ಆರಂಭದಲ್ಲಿ ಮೂಡ್ ಇದ್ದರೂ ಇದ್ದಕ್ಕಿದ್ದ ಹಾಗೆ ಮೂಡ್ ಹೋಗಿ ಬಿಡಬಹುದು. ದೈಹಿಕ ಅಂಗಗಳೂ ಈ ಸಮಯದಲ್ಲಿ ಸೂಕ್ಷ್ಮ ಆಗಿರುವ ಕಾರಣ ಯಾವತ್ತಿನಂತೆ ಸೆಕ್ಸ್ ನಲ್ಲಿ ತೊಡಗಿದರೆ ಹೆಚ್ಚು ನೋವಾಗುವ ಸಾಧ್ಯತೆ ಇದೆ. ಪುರುಷನಿಗೂ ಈ ಸಮಯದ ಸೆಕ್ಸ್ ಎಂದಿನ ಖುಷಿ ಕೊಡದಿರುವ ಸಾಧ್ಯತೆಗಳಿವೆ. ಕೆಲವೊಮ್ಮೆ ಇಬ್ಬರಿಗೂ ವಿಭಿನ್ನ ಅನುಭವ ನೀಡಬಹುದು.
ಅಪ್ಪನ ವಯಸ್ಸಿನ ಪುರುಷನೊಂದಿಗೆ ಕನ್ಯತ್ವ ಕಳೆದುಕೊಳ್ಳೋ ಬಯಕೆ ಈ ಚೆಲುವೆ
ಗರ್ಭ ಧರಿಸುವ ಸಾಧ್ಯತೆ ಇದೆಯಾ?
ಖಂಡಿತಾ ಇದೆ ಅನ್ನುತ್ತದೆ ವೈದ್ಯಕೀಯ, ಹಾಗಂತ ನೂರು ಶೇಕಡಾ ಗರ್ಭ ಧರಿಸುವ ಸಾಧ್ಯತೆ ಇದೆ ಅನ್ನುವ ಹಾಗಿಲ್ಲ. ಆದರೆ ಈ ಟೈಮ್ ನಲ್ಲಿ ಸೆಕ್ಸ್ ಮಾಡಿದರೆ ಸೇಫ್ ಅನ್ನೋ ಫೀಲ್ ಮಾತ್ರ ಬೇಡ. ಕಾಂಡೋಮ್ ಧರಿಸಿದರೆ ಉತ್ತಮ. ಋತುಸ್ರಾವದೊಂದಿಗೆ ಬಿಡುಗಡೆಯಾದ ಅಂಡದ ಮೇಲ್ಮೈಯಲ್ಲಿ ವೀರ್ಯವು ನಾಲ್ಕೈದು ದಿನದವರೆಗೂ ಇದ್ದು ಬಳಿಕ ಅದು ಫಲಿತಗೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಅಂತ ಇತ್ತೀಚಿನ ಅಧ್ಯಯನ ಹೇಳಿದೆ. ಈ ಸಮಯದಲ್ಲಿ ಇನ್ ಫೆಕ್ಷನ್ ಆಗುವ ಸಾಧ್ಯತೆಯೂ ಹೆಚ್ಚು ಅನ್ನುವ ಅಭಿಪ್ರಾಯವನ್ನೂ ವೈದ್ಯರು ವ್ಯಕ್ತಪಡಿಸುತ್ತಾರೆ.