ಬಾಲಿವುಡ್ ನಟಿ ಸಾರಾ ಅಲಿಖಾನ್ ಸಪೂರ ಸುಂದರಿ ಎಂದೇ ಫೇಮಸ್. ಬಾಲಿವುಡ್‌ಗೆ ಎಂಟ್ರಿ ಕೊಡುವ ಮೊದಲು ಸಾರಾ ದಪ್ಪವಾಗಿದ್ದರು. ಇಷ್ಟು ತೆಳ್ಳಗಾಗಲು ಸಾರಾ ಮಾಡಿದ ವರ್ಕೌಟ್ ಬಗ್ಗೆ ವಿಡಿಯೋವೊಂದು ವೈರಲ್ ಆಗಿದೆ.
ಇದೀಗ ಬಾಲಿವುಡ್‌ನಲ್ಲಿ ಸಪೂರವಾಗಿರುವ ಚೆಂದದ ಬೆಡಗಿಯರು ಎಂದು ಲೀಸ್ಟ್ ಮಾಡುತ್ತಾ ಹೊರಟರೆ ಅಲ್ಲಿ ಸಾರಾ ಅಲಿ ಖಾನ್ ಅವರ ಹೆಸರು ಇರಲೇಬೇಕು. ಏಕೆಂದರೆ ಅಷ್ಟು ಸಪೂರ ಮತ್ತು ಸುಂದರ ಈ ಹುಡುಗಿ. ಆದರೆ ಇದಕ್ಕೂ ಮೊದಲು ಅಂದರೆ ಬಾಲಿವುಡ್ ಅಂಗಳಕ್ಕೆ ಬರುವ ಮೊದಲು ಸಾರಾ ತುಂಬಾ ದಪ್ಪವಾಗಿದ್ದವರು.
ಅಯ್ಯೋ! ಫೋಟೋ ಕೇಳಿ ನಟಿಗೆ ಮುತ್ತಿಟ್ಟ ಅಭಿಮಾನಿ
ಅವರ ಅಂದಿನ ಫೋಟೋ ಮತ್ತು ಇಂದಿನ ಫೋಟೋವನ್ನು ಹೋಲಿಕೆ ಮಾಡಿ ನೋಡಿದರೆ ಇವರು ಇವರೇನಾ ಎನ್ನುವ ಡೌಟ್ ಖಂಡಿತಕ್ಕೂ ಬರುತ್ತದೆ. ಹೀಗಿರುವಾಗ ಸಾರಾ ತಮ್ಮ ಸೋಷಲ್ ಮೀಡಿಯಾ ಅಕೌಂಟ್‌ನಲ್ಲಿ ತಾವು ಸಣ್ಣ ಆದ ಜರ್ನಿಯ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಇದು ಕ್ಷಣಾರ್ಧದಲ್ಲಿ ಸಖತ್ ವೈರಲ್. ತಾವೂ ಸಾರಾ ರೀತಿ ಸಣ್ಣಗೆ ಆಗಬೇಕು ಎಂದು ಈಗಾಗಲೇ ಅವರಿಂದ ಸಾಕಷ್ಟು ಮಂದಿ ಸ್ಪೂರ್ತಿ ಪಡೆದು ವರ್ಕೌಟ್ ಶುರು ಮಾಡಿದ್ದಾರೆ. ಇದರ ಜೊತೆಗೆ ಸಾರಾ ಜರ್ನಿಯನ್ನು ಕೊಂಡಾಡಿ, ಆಕೆ ಸಿನಿಮಾ ಕ್ಷೇತ್ರಕ್ಕೆ ಬರುವ ಮೊದಲು ಇದ್ದ ಸ್ಥಿತಿ ಮತ್ತು ಈಗಿನ ಸ್ಥಿತಿ ಕಂಡು ಸಿಕ್ಕಾಪಟ್ಟೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಜೊತೆಗೆ ‘ಶಹಬ್ಬಾಸ್ ಸಾರಾ’ ಎಂದೂ ಕಮೆಂಟ್ ಮಾಡಿದ್ದಾರೆ. ಸದ್ಯ ಈಗ ಸಾರಾ ಅಲಿ ಖಾನ್ ಶೇರ್ ಮಾಡಿರುವ ವಿಡಿಯೋನದ್ದೇ ಎಲ್ಲಾ ಕಡೆ ಸುದ್ದಿ