
ಬೆಂಗಳೂರು (ಅ.16): ತೋಳಿನ ಚರ್ಮದೊಳಗೆ ಅಳವಡಿಸುವ ಪುಟ್ಟ ಸಾಧನ ದಿಂದ (ಸಬ್ ಡರ್ಮಲ್ ಇಂಪ್ಲಾಂಟ್) ಮೂರು ವರ್ಷಗಳವರೆಗೆ ಗರ್ಭಧಾರಣೆಯನ್ನು ತಡೆಯಬಲ್ಲ ಹೊಸ ಗರ್ಭ ನಿರೋಧಕ ಆಯ್ಕೆಯನ್ನು ರಾಜ್ಯ ಆರೋಗ್ಯ ಇಲಾಖೆ ಪರಿಚಯಿಸುತ್ತಿದೆ.
'ಗರ್ಭ ನಿರೋಧಕ ಇಂಪ್ಲಾಂಟ್' ಸರಳ, ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದ್ದು, ಹೆರಿಗೆ ಆದ ಕೂಡಲೇ ಅಳವಡಿಸಬಹುದು. ಗರ್ಭಧಾರಣೆಯ ಎಲ್ಲ ವಯಸ್ಸಿನ ಮಹಿಳೆಯರಿಗೂ ಅಳವಡಿಕೆ ಮಾಡಬಹುದು. ಒಮ್ಮೆ ಅಳವಡಿಸಿಕೊಂಡರೆ 3 ವರ್ಷ ನಿಶ್ಚಿಂತರಾಗಿರಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜತೆಗೆ, 'ಹೊಸ ಆಯ್ಕೆಗಳು- ಹೊಸ ಆಯಾಮಗಳು' ಕಾರ್ಯಕ್ರಮದ ಹೆಸರಿನಲ್ಲಿ ಗರ್ಭನಿರೋಧಕ ಇಂಪ್ಲಾಂಟ್ (ಸಬ್ ಡರ್ಮಲ್ ಇಂಪ್ಲಾಂಟ್) ಜತೆಗೆ ಅಂತರ' ಹೆಸರಿನ ಸಬ್ಕ್ಯುಟೇನಿಯಸ್ ಇಂಜೆಕ್ಷನ್ (ಎಂಪಿಎ) ಪರಿಚಯಿ ಸುತ್ತಿದೆ. ಇದು ಮಹಿಳೆಯರಿಗೆ 3 ತಿಂಗಳವರೆಗೆ ಗರ್ಭ ನಿರೋಧಕವಾಗಿ ನೆರವಾಗಲಿದೆ. ಅತ್ಯಂತ ಸರಳ ಹಾಗೂ ಸುರಕ್ಷಿತವಾದ ಎರಡೂ ಅತ್ಯಾಧುನಿಕ ಗರ್ಭ ನಿರೋಧಕ ಆಯ್ಕೆಗಳಿಗೆ ಸೋಮವಾರದಿಂದ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗುತ್ತಿದೆ.
Pregnancy Care: ಗರ್ಭಾವಸ್ಥೆಯಲ್ಲಿ ಡಕ್ ವಾಕ್ ಮಾಡೋದ್ರಿಂದ ಇಷ್ಟೆಲ್ಲಾ ಲಾಭವಿದೆ!
ನಾಲ್ಕು ಜಿಲ್ಲೆಗಳಲ್ಲಿ ಪ್ರಾಯೋಗಿಕ ಜಾರಿ: ಸಬ್ ಡರ್ಮಲ್ ಇಂಪ್ಲಾಂಟ್ ಆಯ್ಕೆಯನ್ನು ಬೀದರ್, ಬೆಂಗಳೂರು ನಗರ ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿ ಮಾಡಲಾಗುತ್ತಿದೆ. ಯಾದಗಿರಿ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಸಬ್ ಕ್ಯುಟೇನಿಯಸ್ ಚುಚ್ಚುಮದ್ದು ಪರಿಚಯಿಸಲಾಗುತ್ತಿದೆ. ಇದಕ್ಕಾಗಿ 10,008 ಇಂಪ್ಲಾಂಟ್ ಹಾಗೂ 20 ಸಾವಿರ ಡೋಸ್ ಇಂಜೆಕ್ಷನ್ ಹಂಚಿಕೆ ಮಾಡಲಾಗಿದೆ.
ಜತೆಗೆ ನಾಲ್ಕು ಜಿಲ್ಲೆಗಳ 40 ವೈದ್ಯರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಲಾಗಿದೆ. ಇದಕ್ಕೂ ಮೊದಲು ಬೆಂಗಳೂರು ವಾಣಿ ವಿಲಾಸ್ ಆಸ್ಪತ್ರೆ, ಕೆ.ಸಿ. ಜನರಲ್ ಆಸ್ಪತ್ರೆ, ಬೀದರ್ ಪ್ರಾದೇಶಿಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ತಾಯಿ ಮತ್ತು ಮಕ್ಕಳ ಆರೋಗ್ಯ ಕೇಂದ್ರದಲ್ಲಿ 200 ಫಲಾನುಭವಿಗಳಿಗೆ ಪ್ರಾಯೋಗಿಕವಾಗಿ ಇಂಪ್ಲಾಂಟೇಷನ್ ಅಳವಡಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Health TIps: ಪಿರಿಯಡ್ಸ್ ನಂತರ ದಿನಗಳಲ್ಲಿ ಸೆಕ್ಸ್ ಮಾಡಿದ್ರೆ ಗರ್ಭಧಾರಣೆ ಅಪಾಯ ಇಲ್ವಾ?
ಬಳಕೆ ಹೇಗೆ?: ಮಕ್ಕಳ ಜನನದ ನಡುವೆ ಅಂತರ ಕಾಪಾಡುವ ಸಲುವಾಗಿ ಇವುಗಳನ್ನು ಪರಿಚಯಿಸಲಾಗುತ್ತಿದೆ. ಇದರಲ್ಲಿ ಸಬ್-ಕ್ಯುಟೇನಿಯಸ್ ಇಂಜೆಕ್ಷನ್ (ಎಂಪಿಎ) ಮಹಿಳೆಯ ತೊಡೆಯ ಹೊರ ಮೇಲ್ಬಾಗ, ಹೊಟ್ಟೆ ಅಥವಾ ಮೇಲ್ಭಾಗದ ತೋಳಿನ ಹೊರ ಭಾಗದಲ್ಲಿರುವ ಸಬ್-ಕ್ಯುಟೇನಿಯಸ್ ಭಾಗದಲ್ಲಿ ನೀಡಲಾಗುತ್ತದೆ. ಒಮ್ಮೆ ಇಂಜೆಕ್ಷನ್ ನೀಡಿದರೆ 3 ತಿಂಗಳು ಅವರು ಗರ್ಭ ಧರಿಸುವ ಅವಕಾಶವಿರುವುದಿಲ್ಲ.
ಇನ್ನು ಮಹಿಳೆಯ ತೋಳಿನ ಚರ್ಮದೊಳಗೆ ಸಬ್ ಡರ್ಮಲ್ ಇಂಪ್ಲಾಂಟ್ ಎಂಬ ಪುಟ್ಟ ಸಾಧನವನ್ನು ಅಳವಡಿಸಲಾಗುತ್ತಿದೆ. ಇದರಿಂದ ಮೂರು ವರ್ಷಗಳವರೆಗೆ ಗರ್ಭಧಾರಣೆಯನ್ನು ತಡೆಯಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.