ಭಯ ಯಾರಿಗಿಲ್ಲ ಹೇಳಿ? ರಸ್ತೆ ಬದಿಯಲ್ಲಿ ನಾಯಿ ಬಂತು ಅಂತ ರೋಡ್ ಗೆ ಜಿಗಿದ್ರೆ ಏನಾಗ್ಬೇಡ? ಈ ಮಹಿಳೆ ಕಥೆಯೂ ಹಾಗೇ ಆಗಿದೆ. ಏನೋ ಮಾಡೋಕೆ ಹೋಗಿ ಇನ್ನೇನೋ ಮಾಡ್ಕೊಂಡಿದ್ದಾಳೆ.
ನನಗೆ ಭಯವೇ ಇಲ್ಲ ಎನ್ನವ ವ್ಯಕ್ತಿ ಜಗತ್ತಿನಲ್ಲಿ ಸಿಗಲು ಸಾಧ್ಯವೇ ಇಲ್ವೇನೋ. ಪ್ರತಿಯೊಬ್ಬರಿಗೂ ಒಂದೊಂದು ವಿಷ್ಯದಲ್ಲಿ ಭಯ ಇರುತ್ತದೆ. ಕೆಲವರಿಗೆ ನಾಯಿ ಕಂಡ್ರೆ ಭಯ. ಮತ್ತೆ ಕೆಲವರಿಗೆ ಎತ್ತರದ ಪ್ರದೇಶಕ್ಕೆ ಹೋಗಲು ಭಯ. ಇನ್ನು ಕೆಲವರಿಗೆ ನೀರಂದ್ರೆ ಭಯ. ಮತ್ತೊಂದಿಷ್ಟು ಮಂದಿಗೆ ಕೀಟಗಳನ್ನು ಕಂಡ್ರೆ ಹೆದರಿಕೆ. ಮನೆಯಲ್ಲಿ ಜಿರಳೆ, ಜೇಡ, ಇರುವೆ.. ಬರೋದು ಸಾಮಾನ್ಯ. ವಾರಕ್ಕೊಮ್ಮೆಯಾದ್ರೂ ಇವು ನಮ್ಮ ಕಣ್ಣಿಗೆ ಕಾಣುತ್ವೆ. ಆದ್ರೂ ಅನೇಕರಿಗೆ ಜಿರಳೆ ಕಂಡ್ರೆ ವಿಪರೀತ ಭಯವಿರುತ್ತದೆ. ಇನ್ನು ಕೆಲವರಿಗೆ ಹಲ್ಲಿ ನೋಡಿದ್ರೆ ಬೆವರು ಬರುತ್ತೆ. ನಾವು ನಮಗೆ ಭಯವಾದ ವಸ್ತುವಿನಿಂದ, ಪ್ರಾಣಿಯಿಂದ ಅಥವಾ ಸಂಗತಿಯಿಂದ ಆದಷ್ಟು ದೂರವಿರ್ತೇವೆ. ಅವು ನಮ್ಮ ಕಣ್ಣಮುಂದೆ ಕಾಣಿಸಿದ್ರೆ ಪ್ಯಾನಿಕ್ ಗೆ ಒಳಗಾಗ್ತೇವೆ. ಆ ಸಂದರ್ಭದಲ್ಲಿ ನಮ್ಮ ಗುರಿ, ನಾವು ಭಯಪಡುವ ಸಂಗತಿಯಿಂದ ದೂರ ಓಡೋದೇ ಆಗಿರುತ್ತೆ ವಿನಃ ಅಲ್ಲಿ ಮತ್ತೇನು ಆಗ್ತಿದೆ ಎಂಬುದನ್ನು ಗಮನಿಸೋದೇ ಇಲ್ಲ. ಈ ಮಹಿಳೆ ಸ್ಥಿತಿಯೂ ಹಾಗೆ ಆಗಿದೆ. ಒಂದು ಜೇಡಕ್ಕೆ ಹೆದರಿದ ಮಹಿಳೆ ತನ್ನ ಕಾರು ಹಾಗೂ ದೋಣಿ ಎರಡನ್ನೂ ಕಳೆದುಕೊಂಡಿದ್ದಾಳೆ.
ಘಟನೆ ನಡೆದಿರೋದು ಅಮೆರಿಕ (America) ದ ಜಾರ್ಜಿಯಾದಲ್ಲಿ. ಇಲ್ಲಿನ ಮಹಿಳೆಯೊಬ್ಬಳು ತನ್ನ ಕಾರನ್ನು ನದಿ ಬಳಿ ತೆಗೆದುಕೊಂಡು ಹೋಗಿದ್ದಾಳೆ. ಆಕೆ ಕಣ್ಣಿಗೆ ಜೇಡ (Spider) ಕಾಣಿಸಿದೆ. ಅದ್ರಿಂದ ರಕ್ಷಣೆ ಪಡೆಯಲು ಕಾರಿನಿಂದ ಜಿಗಿದಿದ್ದಲ್ಲದೆ ತನ್ನ ಕಾರು ಏನಾಯ್ತು ಎಂಬುದನ್ನು ಕೂಡ ನೋಡುವ ಪ್ರಯತ್ನ ಮಾಡ್ಲಿಲ್ಲ. ಅಂತಿಮವಾಗಿ ಕಾರು (Car) ನದಿಯಲ್ಲಿ ಬಿದ್ದಿದ್ದೆ.
ಚೀನಾದ ಫೋಟೋಗಳನ್ನ ಶೇರ್ ಮಾಡಿದ DR BRO: ನಕಲಿಗಳ ಮಧ್ಯೆ ನೀವು ಕನ್ನಡದ ಅಸಲಿ ಚಿನ್ನ ಎಂದ ಫ್ಯಾನ್ಸ್!
ಮಹಿಳೆ ಜಾರ್ಜಿಯಾದ ಎಟೋವಾ ನದಿ (River) ಬಳಿ ಹೋಗಿದ್ದಾಳೆ. ನದಿಯಲ್ಲಿ ದೋಣಿ ಚಲಾಯಿಸೋದು ಆಕೆಯ ಗುರಿಯಾಗಿತ್ತು. ಹಾಗಾಗಿಯೇ ನದಿ ಬಳಿಗೆ ಕಾರನ್ನು ತೆಗೆದುಕೊಂಡು ಹೋಗಿದ್ದಾಳೆ. ಕಾರಿನ ಮೇಲೆ ಕಟ್ಟಲಾಗಿದ್ದ ಸಣ್ಣ ದೋಣಿಯನ್ನು ಸ್ವಲ್ಪ ತಳ್ಳಿದ್ರೂ ಅದು ನದಿಯಲ್ಲಿ ಬೀಳುವಂತೆ ಪಾರ್ಕ್ ಮಾಡುವುದು ಮಹಿಳೆ ಉದ್ದೇಶವಾಗಿತ್ತು. ಹಾಗಾಗಿಯೇ ಕಾರನ್ನು ರಿವರ್ಸ್ ಗೆ ಹಾಕಿ ತನ್ನ ಪ್ರಯತ್ನ ಮುಂದುವರೆಸಿದ್ದಾಳೆ.
ಕಾರು ನದಿಯಲ್ಲಿ ಬಿದ್ದಿದ್ದು ಹೀಗೆ? : ಇಷ್ಟೆಲ್ಲ ಪ್ರಯತ್ನ ನಡೆಯುತ್ತಿದ್ದ ಸಂದರ್ಭದಲ್ಲಿ ಜೇಡವೊಂದು ಮಹಿಳೆ ಮೈ ಮೇಲೆ ಬಿದ್ದಿದೆ. ಇದನ್ನು ನೋಡಿ ಕಂಗಾಲಾದ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದಾಳೆ. ಅಲ್ಲದೆ ಸೀಟ್ ಬೆಲ್ಟ್ ತೆಗೆದು ಕಾರಿನಿಂದ ಹೊರಗೆ ಜಿಗಿದು ಓಡಿದ್ದಾಳೆ. ಕಾರು ರಿವರ್ಸ್ ನಲ್ಲಿದ್ದ ಕಾರಣ, ಹಿಂದೆ ಹೋದ ಕಾರು ನದಿಗೆ ಬಿದ್ದಿದೆ.
ರೇಷ್ಮೆ ಸೀರೆಯುಟ್ಟು ನಾಚಿದ ವೈಷ್ಣವಿ, ಸೀರೆಲಿ ಹುಡುಗೀನಾ ನೋಡಲೇಬಾರದು ಎಂದ ಫ್ಯಾನ್ಸ್!
ಮಹಿಳೆಗೆ ಜೇಡವನ್ನು ಕಂಡ್ರೆ ಇನ್ನಿಲ್ಲದ ಭಯ. ಆಕೆ ಜೇಡದಿಂದ ತಪ್ಪಿಸಿಕೊಳ್ಳಲು ಎಷ್ಟು ಮುಂದೆ ಓಡಿದ್ಲು ಅಂದ್ರೆ ಆಕೆಗೆ ಕಾರು ನದಿಗೆ ಬೀಳ್ತಿರೋದು ಗೊತ್ತೇ ಆಗ್ಲಿಲ್ಲ. ಕಾರಿನ ಜೊತೆ ಆಕೆಯ ಸಣ್ಣ ದೋಣಿ ಕೂಡ ನೀರು ಪಾಲಾಗಿದೆ.
ಎಷ್ಟೇ ಪ್ರಯತ್ನಿಸಿದ್ರೂ ಸಿಗಲಿಲ್ಲ ಕಾರು : ಎಟೋವಾ ನದಿ 164 ಮೈಲಿ ಉದ್ದವಿದೆ. ಮಹಿಳೆ ಕಾರು ನದಿ ಪಾಲಾಗಿದೆ ಎಂದು ಜಾರ್ಜಿಯಾ ರಾಜ್ಯ ಗಸ್ತು ತಂಡಕ್ಕೆ ಮಾಹಿತಿ ನೀಡಿದ್ದಾಳೆ. ಸ್ಥಳಕ್ಕೆ ಬಂದ ತಂಡ, ಕಾರು ಪತ್ತೆ ಹಚ್ಚುವ ಕೆಲಸ ನಡೆಸಿದೆ. ದೋಣಿಯ ಸಹಾಯದಿಂದ ಕಾರನ್ನು ಹುಡುಕಿದೆ. ಆದ್ರೆ ಕಾರು ಪತ್ತೆಯಾಗಿಲ್ಲ. ಕಾರು ನದಿಗೆ ಬಿದ್ದ ಕೆಲವೇ ಕ್ಷಣಗಳಲ್ಲಿ ಅದು ನೀರಿನಲ್ಲಿ ಮುಳುಗಿದೆ. ಅದನ್ನು ಪತ್ತೆ ಮಾಡಲು ನಮ್ಮಿಂದ ಸಾಧ್ಯವಾಗಿಲ್ಲ ಎಂದು ಜಾರ್ಜಿಯಾದ ಪೊಲೀಸ್ ಆಯುಕ್ತರು ಹೇಳಿದ್ದಾರೆ. ಜೇಡಕ್ಕೆ ಹೆದರಿ ಮಹಿಳೆ ತನ್ನ ಕಾರು ಹಾಗೂ ದೋಣಿ ಎರಡನ್ನೂ ಕಳೆದುಕೊಂಡಿದ್ದಾಳೆ.