ರಾಷ್ಟ್ರ ರಾಜಧಾನಿಗೆ ಕಾಲಿಟ್ಟ ಭೂತ ಸನ್ಯಾಸಿನಿ: ಜನರನ್ನು ಆತಂಕಕ್ಕೀಡುಮಾಡಿದ ವೈರಲ್‌ ವಿಡಿಯೋ!

Published : Oct 12, 2023, 06:38 PM IST
ರಾಷ್ಟ್ರ ರಾಜಧಾನಿಗೆ ಕಾಲಿಟ್ಟ ಭೂತ ಸನ್ಯಾಸಿನಿ: ಜನರನ್ನು ಆತಂಕಕ್ಕೀಡುಮಾಡಿದ ವೈರಲ್‌ ವಿಡಿಯೋ!

ಸಾರಾಂಶ

ದೆಹಲಿ ಮೂಲದ ಮೇಕಪ್ ಕಲಾವಿದೆ ಇಜಾ ಸೆಟಿಯಾ ಅವರು ಜನಪ್ರಿಯ ಚಲನಚಿತ್ರ ದಿ ನನ್‌ ಖ್ಯಾತಿಯ ಡೆಮನ್ ನನ್‌ನ ಪಾತ್ರವಾಗಿದ್ದರು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದೆ. 

ದೆಹಲಿ (ಅಕ್ಟೋಬರ್ 12, 2023): ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಹೋಗುತ್ತಿದ್ದ ನಿಮ್ಮ ಮುಂದೆ ರಾಕ್ಷಸಿ ಅಥವಾ ದೆವ್ವದ ವೇಷದಲ್ಲಿ ಬಂದರೆ ಹೇಗಾಗುತ್ತೆ? ಅದರಲ್ಲೂ, ನಿರ್ಜನ ಪ್ರದೇಶದಲ್ಲಿ ರಾತ್ರಿ ಹೊತ್ತು ಬಂದ್ರೆ, ಭಯವಾಗುತ್ತೆ ಅಲ್ವಾ..? ಕೆಲವರು ದಿಕ್ಕಾಪಾಲಾಗಿ ಓಡಿಹೋಗ್ತಾರೆ. ದೆಹಲಿಯಲ್ಲೂ ಇತ್ತೀಚೆಗೆ ಅಂತದ್ದೊಂದು ಘಟನೆ ನಡೆದಿದೆ.

ಆದರೆ, ಇದು ದೆವ್ವ ಅಥವಾ ರಾಕ್ಷಸಿ ಅಲ್ಲ ಬಿಡಿ. ದೆಹಲಿ ಮೂಲದ ಮೇಕಪ್ ಕಲಾವಿದೆ ಇಜಾ ಸೆಟಿಯಾ ಅವರು ಜನಪ್ರಿಯ ಚಲನಚಿತ್ರ ದಿ ನನ್‌ ಖ್ಯಾತಿಯ ಡೆಮನ್ ನನ್‌ನ ಪಾತ್ರವಾಗಿದ್ದರು. ಈ ಮೂಲಕ ಇಂಟರ್ನೆಟ್‌ನಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಅಲ್ಲದೆ, ಮೇಕಪ್ ಕಲಾತ್ಮಕತೆಯ ಪ್ರಪಂಚವು ಕೌಶಲ್ಯ ಮತ್ತು ಸೃಜನಶೀಲತೆಯ ಗಮನಾರ್ಹ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ.

ಇದನ್ನು ಓದಿ: ದೇವಸ್ಥಾನದಲ್ಲಿ ಬೆತ್ತಲೆ ಧ್ಯಾನ ಮಾಡಿದ ವಿದೇಶಿಗನಿಗಾಗಿ ಸರ್ಕಾರ ಹುಡುಕಾಟ

ಬೀದಿಗಳಲ್ಲಿ ಜನರನ್ನು ತಮಾಷೆ ಮಾಡಿದ ಆಕೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋ 7 ಮಿಲಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ್ದು, 6 ಲಕ್ಷಕ್ಕೂ ಹೆಚ್ಚು ಲೈಕ್‌ ಗಳಿಸಿತ್ತು. 

ಇತ್ತೀಚಿನ ವರ್ಷಗಳಲ್ಲಿ, ಒಬ್ಬರ ನೋಟವನ್ನು ಸಂಪೂರ್ಣವಾಗಿ ಬದಲಾಯಿಸುವ ಶಕ್ತಿಯನ್ನು ಹೊಂದಿರುವ ನಂಬಲಾಗದ ಮೇಕ್ಅಪ್ ರೂಪಾಂತರಗಳನ್ನು ಪ್ರದರ್ಶಿಸಲು ಇಂಟರ್ನೆಟ್ ಒಂದು ವೇದಿಕೆಯಾಗಿದೆ. ಇಜಾ ಸೆಟಿಯಾ ಅವರ ರೂಪಾಂತರವು ಈ ಕಲಾತ್ಮಕತೆಯನ್ನು ಸಂಪೂರ್ಣ ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತದೆ. 

ಈ ವಿಡಿಯೋವನ್ನು ಮೂಲತಃ ಇಜಾ ಸೆಟಿಯಾ ಅವರೇ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಹೆಚ್ಚು ವೈರಲ್‌ ಆಗಿದೆ. ಈ ವೀವಿಡಿಯೋದಲ್ಲಿ ಮೇಕಪ್ ಕಲಾವಿದೆ, ಕಾರಿನ ಕಿಟಕಿಯಿಂದ ಇಣುಕಿ ನೋಡುವುದನ್ನು ಕಾಣಬಹುದು. ಆಕೆಯ ಮೇಕ್ಅಪ್ ಎಷ್ಟು ಚೆನ್ನಾಗಿದೆ ಎಂದರೆ ಹಲವರು ಆಕೆಯನ್ನು ನೋಡಿ ಹೆದರಿಕೊಂಡಿದ್ದಾರೆ. 

ಇದನ್ನೂ ಓದಿ: 2ನೇ ಕೌಶಲ್ಯ ಘಟಿಕೋತ್ಸವ ಸಮಾರಂಭ: 10 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ

ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಯೊಬ್ಬರು ಆಕೆಯ ಮೇಕ್ಅಪ್ ಕೌಶಲ್ಯವನ್ನು ಹೊಗಗಳಿದ್ದು, ಕೆಲವು ವ್ಯಕ್ತಿಗಳು ಭಯದಿಂದ ಪಲಾಯನ ಮಾಡುವುದನ್ನು ಕಾಣಬಹುದು. ಹಾಗೆ, ಕೆಲವರೊಂದಿಗೆ ಫೋಟೋಗೆ ಪೋಸ್‌ ಅನ್ನೂ ನೀಡಿದ್ದಾರೆ ಇಜಾ ಸೆಟಿಯಾ. ಕ್ಲಿಪ್‌ಗಳ ಸಂಯೋಜನೆಯು ಆಕೆಯ ತಮಾಷೆಯ ಚೇಷ್ಟೆಗೆ ಬಲಿಯಾದವರ ಪ್ರತಿಕ್ರಿಯೆಗಳನ್ನು ಬಹಿರಂಗಪಡಿಸುವುದರಿಂದ ವಿಡಿಯೋ ಅಂತ್ಯದ ಕಡೆಗೆ ಮನರಂಜಿಸುವ ತಿರುವು ಪಡೆಯುತ್ತದೆ. ನಾವು ಫೂಲ್‌ ಆಗಿದ್ದೇವೆ ಎಂದು ವ್ಯಕ್ತಿಗಳು ಅರಿತುಕೊಂಡ ಬಳಿಕ ನಕ್ಕಿದ್ದಾರೆ.

ಸಾಮಾಜಿಕ ಮಾಧ್ಯಮ ಬಳಕೆದಾರರು ಇದಕ್ಕೆ ಶೀಘ್ರವಾಗಿ ಪ್ರತಿಕ್ರಿಯಿಸಿದ್ದು, ಅನೇಕರು ರೂಪಾಂತರದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. "ಇಂದು ಇಂಟರ್ನೆಟ್‌ನಲ್ಲಿ ನಾನು ನೋಡಿದ ಬೆಸ್ಟ್ ಬೆಸ್ಟ್ ಬೆಸ್ಟ್ ಥಿಂಗ್" ಎಂದು ವ್ಯಕ್ತಿಯೊಬ್ಬರು ಉದ್ಗರಿಸಿದ್ದಾರೆ. ಮತ್ತೊಬ್ಬರು, ‘ಹುಡುಗಿ ನಿನಗೆ ಹ್ಯಾಟ್ಸ್ ಆಫ್‌’ ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆ, ಕೆಲವರು ಇದೇ ರೀತಿಯ ಪಾರ್ಟ್‌ 2 ವಿಡಿಯೋ ಬರಲೀ ಎಂದೂ ಕೇಳಿಕೊಂಡಿದ್ದಾರೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!