Women's Day 2022: ಪತ್ನಿಗೆ ಗುಲಾಬಿ ನೀಡಿದ್ರೆ ಸಾಲ್ದು, ಸಂಬಂಧ ಗಟ್ಟಿಯಾಗಿರಲು ಹೀಗೆ ಮಾಡಿ

By Suvarna News  |  First Published Mar 8, 2022, 4:53 PM IST

ಮಹಿಳಾ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಿರಬಾರದು. ಕುಟುಂಬದಲ್ಲಿ ಮಹಿಳೆಗೆ ಗೌರವ,ಪ್ರೀತಿ ಸಿಕ್ಕರೆ ಆಕೆಗೆ ಸಮಾಜದಲ್ಲೂ ಗೌರವ ಸಿಗುತ್ತದೆ. ಪತಿಯಾದವನಿಂದ ಪತ್ನಿ ಬಯಸುವುದು ಬರೀ  ಉಡುಗೊರೆಯನ್ನಲ್ಲ ಎಂಬುದು ನೆನಪಿಟ್ಟುಕೊಳ್ಳಬೇಕು. 
 


ಇಂದು ವಿಶ್ವ ಮಹಿಳಾ ದಿನಾಚರಣೆ (World Womens Day). ವಿಶ್ವದಾದ್ಯಂತ ಮಹಿಳೆಯರಿಗೆ ಶುಭಾಶಯಗಳು ಹರಿದು ಬರ್ತಿವೆ. ಅನೇಕ ಕಾರ್ಯಕ್ರಮ (Program)ಗಳು, ಸನ್ಮಾನಗಳು ನಡೆಯುತ್ತಿವೆ. ಅನೇಕರು ತಮ್ಮ ಪತ್ನಿ (Wife)ಗೆ ವಿಶ್ವ ಮಹಿಳಾ ದಿನಾಚರಣೆ ಶುಭ ಕೋರುತ್ತಿದ್ದಾರೆ. ಕೆಲವರು ಬರಿ ಶುಭಕೋರಿದ್ರೆ ಮತ್ತೆ ಕೆಲವರು ಗುಲಾಬಿ ಹೂ ನೀಡಿ ಶುಭಕೋರುತ್ತಿದ್ದಾರೆ. ಆದ್ರೆ ಮಹಿಳೆಯಾದವಳಿಗೆ ಈ ದಿನ ಮಾತ್ರ ಶುಭಕೋರಿದ್ರೆ ಸಾಲದು. ಪತ್ನಿಯಾದವಳು ಪತಿಯಿಂದ ಇನ್ನಷ್ಟನ್ನು ಬಯಸ್ತಾಳೆ. ಪ್ರೇಮವಿವಾಹವೇ ಆಗಿರಲಿ ಅಥವಾ ಅರೇಂಜ್ಡ್ ಆಗಿರಲಿ, ಮದುವೆಯಾದ ನಂತರ ಒಂದಷ್ಟು ದಿನಗಳ ಕಾಲ ಪ್ರೀತಿ, ಪ್ರೇಮದ ಮಾತು,ರೋಮ್ಯಾನ್ಸ್ ಇರುತ್ತದೆ. ಆ ನಂತರ ಇಬ್ಬರು ಜವಾಬ್ದಾರಿಯಲ್ಲಿ ಬೀಳುವುದ್ರಿಂದ ಗಮನ ಅತ್ತ ಹೋಗುತ್ತದೆ. ಕೆಲವೇ ಕೆಲವು ಮಂದಿ ಮಾತ್ರ ಜವಾಬ್ದಾರಿ ಮಧ್ಯೆಯೂ ಪ್ರೀತಿ ವ್ಯಕ್ತಪಡಿಸುತ್ತಾರೆ. ಆದ್ರೆ ಇನ್ನು ಕೆಲ ದಾಂಪತ್ಯದಲ್ಲಿ ಜವಾಬ್ದಾರಿ ಇಬ್ಬರ ಮಧ್ಯೆ ಅಂತರವನ್ನು ಹೆಚ್ಚಿಸುತ್ತದೆ. 

ಗಂಡನ ಗಮನ ಸದಾ ತನ್ನ ಮೇಲಿರಬೇಕೆಂದು ಹೆಂಡತಿ ಬಯಸುತ್ತಾಳೆ. ಆದರೆ ಮದುವೆಯ ನಂತರ ವೃತ್ತಿಯ ಮೇಲೆ ಗಮನ ಕೇಂದ್ರೀಕರಿಸುವುದ್ರಿಂದ, ಮನೆ, ಮಕ್ಕಳ ಜವಾಬ್ದಾರಿ ಭಾರ ಹೆಚ್ಚಾಗುವ ಕಾರಣಕ್ಕೆ ಗಂಡನಿಗೆ ಹೆಚ್ಚಿನ ಸಮಯವನ್ನು ಪತ್ನಿಗೆ ನೀಡಲಾಗುವುದಿಲ್ಲ. ಇದು ಹೆಂಡತಿಯನ್ನು ನಿರಾಸೆಗೊಳಿಸುತ್ತದೆ. ಪತ್ನಿ ಸದಾ ಖುಷಿಯಾಗಿರಬೇಕೆಂದ್ರೆ ಜೀವನ ಸಂಗಾತಿಯ ಮುಂದೆ ಪತಿ ಪ್ರೀತಿಯನ್ನು ವ್ಯಕ್ತಪಡಿಸುತ್ತಲೇ ಇರುವುದು ಅವಶ್ಯಕ.

ಮೊದಲೇ ಹೇಳಿದಂತೆ ಬರ್ತ್ ಡೇ ಅಥವಾ ಮಹಿಳಾ ದಿನಾಚರಣೆ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಗುಲಾಬಿ ನೀಡಿದ್ರೆ ಮಾತ್ರ ಸಾಲದು. ಗುಲಾಬಿ ಪ್ರೀತಿಯ ಸಂಕೇತ ನಿಜ. ಹಾಗಂತ ಪ್ರತಿ ಬಾರಿ ಅದನ್ನೇ ನೀಡ್ತಿದ್ದರೆ ಅದು ಪ್ರೀತಿಯನ್ನು ಹೆಚ್ಚಿಸಲಾರದು. ಪತಿಯಾದವನು ಇನ್ನೂ ಅನೇಕ ವಿಧಾನಗಳ ಮೂಲಕ ಪ್ರೀತಿ ವ್ಯಕ್ತಪಡಿಸಬೇಕು.

ಪತ್ನಿ ಮುಂದೆ ಪ್ರೀತಿ ವ್ಯಕ್ತಪಡಿಸುವ ವಿಧಾನ 

Tap to resize

Latest Videos

ಮನೆ ಕೆಲಸಗಳಲ್ಲಿ ಸಹಾಯ ಮಾಡಿ :  ಗಂಡನಾದವನು ಹೊರಗೆ ದುಡಿಯುತ್ತಾನೆ ನಿಜ. ಹಾಗಂತ ಮನೆಯಲ್ಲಿರುವ ಪತ್ನಿ ಖಾಲಿ ಕುಳಿತಿರುವುದಿಲ್ಲ. ಆಕೆ ಕೂಡ ಮನೆ ಕೆಲಸ ಮಾಡ್ತಿರುತ್ತಾಳೆ. ಕಚೇರಿಗೆ ಹೋಗುವ ಮಹಿಳೆಯರ ಸಂಖ್ಯೆ ಕಡಿಮೆಯೇನಿಲ್ಲ. ಕಚೇರಿಯಿಂದ ಬಂದ ತಕ್ಷಣ ಕೆಲಸ ಮಾಡಬೇಕೆಂದಲ್ಲ. ಸ್ವಲ್ಪ ಸಮಯ ವಿಶ್ರಾಂತಿ ಪಡೆದ ನಂತ್ರ ಹೆಂಡತಿಗೆ ಮನೆಗೆಲಸದಲ್ಲಿ ನೆರವಾಗಬೇಕು. ಪತ್ನಿ ಮೇಲೆ ನಿಮಗೆ ಎಷ್ಟು ಕಾಳಜಿಯಿದೆ,ಪ್ರೀತಿಯಿದೆ ಎಂಬುದನ್ನು ನೀವು ಈ ಮೂಲಕ ವ್ಯಕ್ತಪಡಿಸಬಹುದು. ಮನೆ ಕೆಲಸದಲ್ಲಿ ಸಹಾಯ ಮಾಡುವ ಪತಿ, ಪತ್ನಿಯ ಮನಸ್ಸನ್ನು ಕದಿಯುತ್ತಾನೆ.

ಅಡುಗೆಮನೆಯಲ್ಲಿ ಸಮಯ ಕಳೆಯಿರಿ : ಅಡುಗೆ ಅಂದ್ರೆ ಮಹಿಳೆಯರಿಗೆ ಸೀಮಿತ ಎಂದುಕೊಳ್ಳಲಾಗಿದೆ. ಆದರೆ ಗಂಡಸರು ಅಡುಗೆ ಮಾಡಬಹುದು. ನಿಮಗೆ ಅಡುಗೆ ಬಂದ್ರೆ ವಾರದಲ್ಲಿ ಒಂದು ದಿನವಾದ್ರೂ ಪತ್ನಿಗೆ ನಿಮ್ಮ ಕೈ ಅಡುಗೆ ತಿನ್ನಿಸಿ. ಒಂದು ವೇಳೆ ಅಡುಗೆ ಬರ್ತಿಲ್ಲವೆಂದಾದ್ರೆ ಅಡುಗೆ ಮನೆಯಲ್ಲಿ ಪತ್ನಿ ಜೊತೆ ಸಮಯ ಕಳೆಯಿರಿ. ರೋಮ್ಯಾನ್ಸ್ ಗೆ ಅಡುಗೆ ಮನೆಯೂ ಒಂದು ಅತ್ಯುತ್ತಮ ಜಾಗ ಎಂಬುದು ನೆನಪಿರಲಿ.  

ಗರ್ಭಾವಸ್ಥೆಯಲ್ಲಿ ಮಹಿಳೆ ಮೀನು ತಿನ್ನೋದ್ರಿಂದ ಮಗುವಿಗೆ ತೊಂದರೆ ಇದೆಯೇ?

ಅಮೂಲ್ಯ ಸಮಯ ಹೆಂಡತಿಗೆ ಮೀಸಲಿಡಿ : ಪತ್ನಿಗೆ ಸಮಯ ನೀಡುವುದು ಬಹಳ ಮುಖ್ಯ. ಕಚೇರಿ,ಸ್ನೇಹಿತರ ಜೊತೆ ಬ್ಯುಸಿಯಾಗಿರುವ ಗಂಡಸರು ಪತ್ನಿಗೆ ಸಮಯ ನೀಡುವುದಿಲ್ಲ. ಆದ್ರೆ ಕುಟುಂಬದ ಜೊತೆ ಸಮಯ ಕಳೆಯುವುದು ಬಹಳ ಮುಖ್ಯ. ಪತ್ನಿ ಜೊತೆ ಹೊರಗೆ ಹೋಗಲು ಸಾಧ್ಯವಾಗಿಲ್ಲವೆಂದ್ರೆ ಮನೆಯಲ್ಲಿಯಾದ್ರೂ ಸಮಯ ಕಳೆಯರಿ.  

ಕ್ಷಮೆ ಮುಖ್ಯ : ನಮಗೆ ಗೊತ್ತಿಲ್ಲದೆ ನಾವು ತಪ್ಪುಗಳನ್ನು ಮಾಡ್ತೇವೆ. ಮಾಡಿದ ತಪ್ಪುಗಳಿಗೆ ಕ್ಷಮೆ ಕೇಳುವುದು ಬಹಳ ಮುಖ್ಯ. ನಿಮ್ಮಿಂದ ತಪ್ಪಾಗಿದ್ದರೆ ಅವಶ್ಯಕವಾಗಿ ಪತ್ನಿ ಮುಂದೆ ಕ್ಷಮೆ ಕೇಳಿ. ಇದು ಪತ್ನಿಯ ಬೇಸರ,ಕೋಪವನ್ನು ಕಡಿಮೆ ಮಾಡುತ್ತದೆ. 

WOMEN'S DAY 'ಮಹಿಳಾ ದಿನ'ದ ವಿಶೇಷ: `ಅಸ್ಮಿತೆ’ ವ್ಯಾಪಾರ ಮೇಳಕ್ಕೆ ಸಿಎಂ ಚಾಲನೆ

ಥ್ಯಾಂಕ್ಸ್ ಕೂಡ ಅತ್ಯಗತ್ಯ : ಮಹಿಳೆಯರು ಮಾಡುವ ಕೆಲಸವನ್ನು ಅನೇಕರು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ನಿಮ್ಮ ಕೆಲಸ ಸುಲಭ ಎನ್ನುವಂತೆ ಮಾತನಾಡ್ತಾರೆ. ಆದ್ರೆ ಎಲ್ಲ ಜವಾಬ್ದಾರಿ ನಿಭಾಯಿಸುವುದು ಕಷ್ಟ. ಪತ್ನಿಯಾದವಳು ಒಳ್ಳೆಯ ಕೆಲಸ ಮಾಡಿದಾಗ ಅಥವಾ ನಿಮಗೆ ಸಹಾಯ ಮಾಡಿದಾಗ ಆಕೆಗೆ ಧನ್ಯವಾದ ಹೇಳಿ.  

click me!