ಸೀರೆಯುಟ್ಟರೂ ಸಾಧಿಸಿ ತೋರಿಸಿದ ವೃದ್ಧೆ: ಈ ಅಜ್ಜಿ ಉತ್ಸಾಹ ನಮಗ್ಯಾಕಿಲ್ಲ?

By Suvarna NewsFirst Published Jan 25, 2023, 2:33 PM IST
Highlights

ಅಜ್ಜಿ- ಅಜ್ಜ ಎಂದಾಗ ಮನೆಯಲ್ಲಿ ಟಿವಿ ನೋಡ್ತಾ ಕುಳಿತುಕೊಳ್ಳುವವರು ನನೆಪಾಗ್ತಾರೆ. ಆದ್ರೆ ಎಲ್ಲ ವೃದ್ಧರೂ ಹಾಗಿರೋದಿಲ್ಲ. ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ಕೊನೆವಯಸ್ಸಿನಲ್ಲೂ ಉತ್ಸಾಹದ ಜೀವನ ನಡೆಸ್ತಾರೆ. ಎಲ್ಲರಿಗೂ ಮಾದರಿಯಾಗ್ತಾರೆ.
 

ಓಟ ಅನ್ನೋದು ಕೇವಲ ಯುವ ಜನತೆಗೆ ಮಾತ್ರ ಮೀಸಲು ಎಂದು ಭಾವಿಸುವವರಿದ್ದಾರೆ. ವಯಸ್ಸಾದಂತೆ ಓಡೋದಿರಲಿ ನಡೆಯೋದು ಕಷ್ಟ ಎಂದುಕೊಂಡು ಅನೇಕರು ಮನೆಯಿಂದ ಹೊರಗೆ ಬೀಳೋದಿಲ್ಲ. ಆದ್ರೆ ಯಾವ ಕೆಲಸಕ್ಕೂ ವಯಸ್ಸಿನ ಗಡಿಯಿಲ್ಲ. ಮನಸ್ಸಿದ್ದಲ್ಲಿ ಮಾರ್ಗ. ಎಂಥ ಕಠಿಣ ಕೆಲಸವನ್ನಾದ್ರೂ ಮನಸ್ಸು ಮಾಡಿದ್ರೆ ಯಾವುದೇ ವಯಸ್ಸಿನ ವ್ಯಕ್ತಿ ಮಾಡಬಹುದು. ಈ ವಿಷ್ಯ ಈಗ ಮತ್ತೊಮ್ಮೆ ಸಾಭೀತಾಗಿದೆ. 80 ವರ್ಷದ ಮಹಿಳೆಯೊಬ್ಬಳು ಸಾಮಾಜಿಕ ಜಾಲತಾಣ (Social Media ) ದಲ್ಲಿ ಭರ್ಜರಿ ಸುದ್ದಿ ಮಾಡ್ತಿದ್ದಾರೆ. ಅಜ್ಜಿ ಮ್ಯಾರಥಾನ್ (Marathon) ನಲ್ಲಿ ಓಡಿ 7 ದಿನ ಕಳೆದ್ರೂ ಅವರ ವಿಷ್ಯ ಮಾತ್ರ ಈಗ್ಲೂ ಚರ್ಚೆಯಾಗ್ತಿದೆ. ಇಷ್ಟು ವಯಸ್ಸಿನಲ್ಲೂ ಉತ್ಸಾಹ ತೋರಿದ ಮಹಿಳೆಯ ಬಗ್ಗೆ ಎಲ್ಲಡೆಯಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ. ಮಹಿಳೆ ಮಾಡಿದ ಕೆಲಸ ಯುವಕರಿಗೆ ಸ್ಪೂರ್ತಿಯಾಗಿದೆ. 

ಮ್ಯಾರಥಾನ್ ನಲ್ಲಿ ಓಡಿದ 80ರ ಮಹಿಳೆ : ಹೌದು, 80 ವರ್ಷದ ಮಹಿಳೆ ಮ್ಯಾರಥಾನ್ ನಲ್ಲಿ ಪಾಲ್ಗೊಂಡಿದ್ದಳು. ಹೆಸರು ಭಾರ್ತಿ (Bharti ) ಜಿತೇಂದ್ರ ಪಾಠಕ್. ಟಾಟಾ ಮುಂಬೈ ಮ್ಯಾರಥಾನ್‌ನಲ್ಲಿ ಭಾರ್ತಿ ಭಾಗವಹಿಸಿದ್ದರು. ಬರೀ ಮ್ಯಾರಾಥಾನ್ ನಲ್ಲಿ ಪಾಲ್ಗೊಂಡಿದ್ದು ಮಾತ್ರವಲ್ಲ ಭಾರ್ತಿ ಜಿತೇಂದ್ರ ಪಾಠಕ್, ಮ್ಯಾರಥಾನ್ ಪೂರ್ಣಗೊಳಿಸಿದ್ದಾರೆ. ಬರೋಬ್ಬರಿ 4.2 ಕಿಲೋಮೀಟರ್ ಓಟ (race) ವನ್ನು 51 ನಿಮಿಷಗಳಲ್ಲಿ ಪೂರ್ಣಗೊಳಿಸಿ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದಾರೆ. ಪ್ರತಿ ವರ್ಷ ಟಾಟಾ (Tata) ಮುಂಬೈ ಮ್ಯಾರಥಾನ್ ನಡೆಯುತ್ತದೆ. ಕೊರೊನಾ ಹಿನ್ನಲೆಯಲ್ಲಿ ಎರಡು ವರ್ಷಗಳಿಂದ ಮ್ಯಾರಥಾನ್ ಆಯೋಜನೆ ಮಾಡಿರಲಿಲ್ಲ. ಈ ಬಾರಿ ಮತ್ತೆ ಮ್ಯಾರಥಾನ್ ಆಯೋಜನೆ ಮಾಡಲಾಗಿತ್ತು. ಈ ವೃದ್ಧೆಯಿಂದಾಗಿ ಈ ಮ್ಯಾರಥಾನ್ ಎಲ್ಲರ ಗಮನ ಸೆಳೆದಿದೆ.

ಭಾರ್ತಿ ಅವರ ಮೊಮ್ಮಗಳು ಡಿಂಪಲ್ ಮೆಹ್ತಾ ಫೆರ್ನಾಂಡಿಸ್, ಭಾರ್ತಿ ಮ್ಯಾರಥಾನ್‌ನಲ್ಲಿ ಓಡುತ್ತಿರುವ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ವಿಡಿಯೋ ಈಗ ವೈರಲ್ ಆಗಿದೆ. ಜನರು ಭಾರ್ತಿ ಧೈರ್ಯ, ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟಾಟಾ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ನನ್ನ 80 ವರ್ಷದ ಅಜ್ಜಿಯ ಇಚ್ಛಾಶಕ್ತಿ ಮತ್ತು ತಾಳ್ಮೆಯಿಂದ ನಾನು ತುಂಬಾ ಸ್ಫೂರ್ತಿ ಪಡೆದಿದ್ದೇನೆ ಎಂದು ಡಿಂಪಲ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ. ಮ್ಯಾರಥಾನ್ ಗೆ ಭಾರ್ತಿ ಸಾಕಷ್ಟು ಅಭ್ಯಾಸ ಮಾಡಿದ್ದರಂತೆ. ಪ್ರತಿ ದಿನ ಭಾರ್ತಿ ಓಡ್ತಿದ್ದರಂತೆ. ಭಾರ್ತಿ ಐದನೇ ಬಾರಿಗೆ ಮ್ಯಾರಥಾನ್ನಲ್ಲಿ ಪಾಲ್ಗೊಂಡಿದ್ದು ಮತ್ತೊಂದು ವಿಶೇಷ.

ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಪಡೆದ ಮಹಿಳೆಯರಿಗೆ ಸರ್ಕಾರದಿಂದ ಸಿಗುತ್ತೆ ಭರ್ಜರಿ ಗಿಫ್ಟ್..!

ತಾನು ಭಾರತೀಯ ಎಂದು ಎಲ್ಲರಿಗೂ ತಿಳಿಯಬೇಕು, ಹಾಗೆಯೇ ನಮ್ಮ ಸಂಸ್ಕೃತಿಯ ಬಗ್ಗೆ ಎಲ್ಲರೂ ಹೆಮ್ಮೆಪಡಬೇಕೆಂದು ಭಾರ್ತಿ ತ್ರಿವರ್ಣ ಧ್ವಜವನ್ನು ಹಿಡಿದು ಓಡಿದ್ದರು. 
ಭಾರ್ತಿಯ ಮ್ಯಾರಥಾನ್ ಮತ್ತೊಂದು ವಿಶೇಷವೆಂದ್ರೆ ಸೀರೆ. ಸಾಮಾನ್ಯವಾಗಿ ಸ್ಪೋರ್ಟ್ಸ್ ಎಂಬ ವಿಷ್ಯ ಬಂದಾಗ ಬಹುತೇಕರು ಶಾರ್ಟ್ಸ್ ಅಥವಾ ಸ್ಪೋರ್ಟ್ಸ್ ಪ್ಯಾಂಟ್ ಧರಿಸ್ತಾರೆ. ಆದ್ರೆ ಭಾರ್ತಿ ಸೀರೆಯಲ್ಲಿಯೇ ಓಡುವ ಮೂಲಕ, ಸೀರೆಯಲ್ಲಿಯೂ ಓಟ ಸಾಧ್ಯ ಎಂಬುದನ್ನು ತೋರಿಸಿದ್ದಾರೆ. ಹಾಗೆಯೇ ಸೀರೆ ಭಾರ್ತಿ ಸಂಸ್ಕೃತಿ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.  

ರೊಮ್ಯಾನ್ಸ್ ಆದ್ಮೇಲೆ? ರಿಯಲ್ ಲೈಫ್ ಸತ್ಯಗಳ ಬಗ್ಗೆ ಸುಧಾಮೂರ್ತಿ ಮಾತು!

ವಯಸ್ಸು ಅಡ್ಡಿಯಾಗದು, ಆರೋಗ್ಯ ಮುಖ್ಯ : ಭಾರ್ತಿ ನಮಗೆಲ್ಲರಿಗೂ ಪ್ರೇರಣೆಯಾಗಿದ್ದಾರೆ. ಆರೋಗ್ಯವೊಂದಿದ್ದರೆ ಗುರಿ ತಲುಪುವುದು ಸುಲಭ. ಇತ್ತೀಚಿನ ದಿನಗಳಲ್ಲಿ ಕೆಟ್ಟ ಜೀವನಶೈಲಿ ಹಾಗೂ ಆಹಾರ ಪದ್ಧತಿ ಮನುಷ್ಯನ ಆರೋಗ್ಯ ಕೆಡಿಸುತ್ತಿದೆ. ಇದ್ರಿಂದಾಗಿ ಸಣ್ಣ ವಯಸ್ಸಿನಲ್ಲಿಯೇ ಜನರು ನಾನಾ ಖಾಯಿಲೆಗೆ ಗುರಿಯಾಗ್ತಿದ್ದಾರೆ. ಹಾಗೆಯೇ ನಿಯಮಿತ ವ್ಯಾಯಾಮ ಇಲ್ಲವಾಗಿದೆ. ಈ ಎಲ್ಲ ಕಾರಣಕ್ಕೆ 40ನೇ ವಯಸ್ಸಿನಲ್ಲಿಯೇ ಅನೇಕರ ಶಕ್ತಿ ಕುಂದಿರುತ್ತದೆ. ಆರೋಗ್ಯದ ಜೊತೆ ನಿಯಮಿತ ಅಭ್ಯಾಸ ಮಾಡುವುದು ಮುಖ್ಯವಾಗುತ್ತದೆ. ಭಾರ್ತಿಯ ಆರೋಗ್ಯಕರ ಜೀವನಶೈಲಿಯೇ 80ರ ಹರೆಯದಲ್ಲೂ ಓಟವನ್ನು ಸಾಧ್ಯವಾಗಿಸಿದೆ. 

click me!