ಮಹಿಳೆ ಸೌಂದರ್ಯ ಪ್ರಿಯೆ. ಆಕೆಯ ಪ್ರತಿಯೊಂದು ಅಂಗ ಎಲ್ಲರ ಗಮನ ಸೆಳೆಯುತ್ತದೆ. ಅನೇಕ ಮಹಿಳೆಯರ ಸ್ತನದ ಗಾತ್ರ ಚಿಕ್ಕದಾಗಿರುತ್ತದೆ. ಅದು ಅವರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಸ್ತನದ ಗಾತ್ರ ಹೆಚ್ಚಾಗಲು ಮನೆಯಲ್ಲಿರುವ ಒಂದು ವಸ್ತು ಸಾಕು.
ಎಲ್ಲಾ ಮಹಿಳೆಯರು ಆಕರ್ಷಕ ಸ್ತನ ಹೊಂದಲು ಬಯಸ್ತಾರೆ. ಸರಿ ಗಾತ್ರದ ಹಾಗೂ ಬಿಗಿಯಾದ ಸ್ತನ ಎಲ್ಲರನ್ನೂ ಆಕರ್ಷಿಸುತ್ತದೆ. ಹಾಗೆಯೇ ಇದು ಮಹಿಳೆಯರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಆದರೆ ಅನೇಕ ಮಹಿಳೆಯರು ಸಣ್ಣ, ಇಳಿ ಬಿದ್ದ ಮತ್ತು ಉಬ್ಬಿದ ಸ್ತನ ಹೊಂದಿರ್ತಾರೆ. ಸ್ತನ ಗಾತ್ರ ಹಾಗೂ ಇಳಿ ಬೀಳುವ ಸ್ತನ ಮಹಿಳೆಯರನ್ನು ಮುಜುಗರಕ್ಕೊಳಗಾಗುವಂತೆ ಮಾಡುತ್ತದೆ. ಇದು ಅವರ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ತಮ್ಮಿಷ್ಟದ ಡ್ರೆಸ್ ಧರಿಸಲು ಮಹಿಳೆಯರು ಹಿಂದೇಟು ಹಾಕ್ತಾರೆ. ಸ್ತನ ಗಾತ್ರವನ್ನು ಹೆಚ್ಚಿಸಲು ಸಾಕಷ್ಟು ಪ್ರಯತ್ನ ನಡೆಸ್ತಾರೆ. ಸ್ತನದ ಗಾತ್ರ ಹೆಚ್ಚಿಸಲು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ತೈಲಗಳು ಮತ್ತು ಸ್ತನ ಕ್ರೀಮ್‌ಗಳು ಲಭ್ಯವಿದೆ . ಆದರೆ ಅವುಗಳಲ್ಲಿ ಹೆಚ್ಚಿನವು ರಾಸಾಯನಿಕಗಳಿಂದ ತುಂಬಿರುತ್ತವೆ. ಮಹಿಳೆಯರು ಈ ದುಬಾರಿ ಉತ್ಪನ್ನಗಳನ್ನು ಬಳಸಿದ್ರೂ ಪ್ರಯೋಜನ ಶೂನ್ಯ. ಸ್ತನದಲ್ಲಿ ಯಾವುದೇ ವಿಶೇಷ ಬದಲಾವಣೆ ಕಾಣುವುದಿಲ್ಲ. ಇನ್ನು ಕೆಲವರು ವಿವಿಧ ಮನೆ ಮದ್ದುಗಳನ್ನು ಪ್ರಯತ್ನಿಸುತ್ತಾರೆ. ಆದರೆ ಸಣ್ಣ ಮತ್ತು ಸಡಿಲವಾದ ಸ್ತನಗಳಿಗೆ ಅವು ಪರಿಹಾರ ನೀಡುವುದಿಲ್ಲ. ಹಾಗಿರುವಾಗ ಬಿಗಿಯಾದ ಹಾಗೂ ಆಕರ್ಷಕ ಸ್ತನ ಪಡೆಯೋದು ಹೇಗೆ ಎಂಬುದನ್ನು ನಾವು ಹೇಳ್ತೇವೆ.
ತೆಂಗಿನ ಎಣ್ಣೆ (Coconut Oil) ಯಿಂದ ಸ್ತನ (Breast) ಗಳನ್ನು ಮಸಾಜ್ (Massage ) ಮಾಡುವುದು ಸ್ತನದ ಗಾತ್ರವನ್ನು ಹೆಚ್ಚಿಸಲು ಹೆಚ್ಚಿನ ಪ್ರಯೋಜನಕಾರಿ ಅಂದ್ರೆ ನೀವು ನಂಬ್ಲೇಬೇಕು. ತೆಂಗಿನ ಎಣ್ಣೆಯ ಸಹಾಯದಿಂದ ನೈಸರ್ಗಿಕವಾಗಿ ಸ್ತನಗಳ ಗಾತ್ರವನ್ನು ಹೆಚ್ಚಿಸಬಹುದು.
undefined
ತೆಂಗಿನ ಎಣ್ಣೆಯಿಂದ ಸ್ತನಗಳ ಮಸಾಜ್ ಮಾಡುವುದು ಹೇಗೆ ? : ಸ್ತನಗಳನ್ನು ಮಸಾಜ್ ಮಾಡಲು ತೆಂಗಿನ ಎಣ್ಣೆಯನ್ನು ಬಳಸುವುದು ತುಂಬಾ ಸುಲಭ. ಸ್ತನಗಳನ್ನು ಮಸಾಜ್ ಮಾಡುವ ಮೊದಲು ತೆಂಗಿನ ಎಣ್ಣೆಯನ್ನು ಸ್ವಲ್ಪ ಬೆಚ್ಚಗೆ ಮಾಡ್ಬೇಕು. ಇದನ್ನು ಸ್ತನಗಳ ಮೇಲೆ ಅನ್ವಯಿಸಿ ಮತ್ತು ವೃತ್ತಾಕಾರದ ಚಲನೆಯಲ್ಲಿ ಕೈಯಿಂದ ಮೃದುವಾಗಿ ಮಸಾಜ್ ಮಾಡಬೇಕು. ಆದ್ರೆ ನಿಪ್ಪಲ್ ಮೇಲೆ ತೆಂಗಿನ ಎಣ್ಣೆಯನ್ನು ಅನ್ವಯಿಸುವುದನ್ನು ತಪ್ಪಿಸಬೇಕು. ದಿನಕ್ಕೆ 5-10 ನಿಮಿಷಗಳ ಕಾಲ ಸ್ತನಗಳನ್ನು ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಲು ಪ್ರಯತ್ನಿಸಿ. ನಿಯಮಿತವಾಗಿ ತೆಂಗಿನ ಎಣ್ಣೆಯಿಂದ ಸ್ತನಗಳನ್ನು ಮಸಾಜ್ ಮಾಡ್ತಾ ಬಂದ್ರೆ ಇದು ನಿಮಗೆ ತ್ವರಿತ ಮತ್ತು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.
ಸ್ಕಿನ್ನಿ ಜೀನ್ಸ್ ಹಾಕ್ತೀರಾ ? ಪ್ಯಾರಾಲಿಸಿಸ್‌ಗೂ ಕಾರಣವಾಗ್ಬೋದು ಜೋಕೆ !
ತೆಂಗಿನ ಎಣ್ಣೆ ಮಸಾಜ್ ನಿಂದ ಸ್ತನಕ್ಕಾಗುವ ಪ್ರಯೋಜನಗಳು ಏನು? :
1. ಸ್ತನದ ಗಾತ್ರ ಹೆಚ್ಚಿಸಬೇಕು ಎನ್ನುವ ಮಹಿಳೆಯರು ಸುಲಭವಾದ ತೆಂಗಿನ ಎಣ್ಣೆ ಮಾರ್ಗವನ್ನು ಅನುಸರಿಬೇಕು. ತೆಂಗಿನ ಎಣ್ಣೆಯಿಂದ ಸ್ತನಗಳನ್ನು ಮಸಾಜ್ ಮಾಡಬೇಕು . ನೀವು ತೆಂಗಿನ ಎಣ್ಣೆಯಿಂದ ಸ್ತನಗಳನ್ನು ಮಸಾಜ್ ಮಾಡಿದಾಗ ಇದು ಸ್ತನಗಳ ಗಾತ್ರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇಷ್ಟೇ ಅಲ್ಲ ತೆಂಗಿನ ಎಣ್ಣೆಯಿಂದ ಸ್ತನ ಮಸಾಜ್ ಮಾಡಿದಾಗ ಇತರ ಅನೇಕ ಪ್ರಯೋಜನಗಳನ್ನು ನೀಡುತ್ತದೆ.
2. ತೆಂಗಿನ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಸ್ತನಗಳಲ್ಲಿ ರಕ್ತ ಪರಿಚಲನೆ ಸುಧಾರಿಸಲು ಸಹಾಯವಾಗುತ್ತದೆ. ಇದು ಸಡಿಲವಾದ ಮತ್ತು ಉಬ್ಬಿದ ಸ್ತನಗಳನ್ನು ಬಿಗಿಗೊಳಿಸಲು ಸಹಾಯ ಮಾಡುತ್ತದೆ.
3. ಸ್ತನಗಳ ಮೇಲೆ ನೀವು ಪ್ರತಿ ದಿನ ತೆಂಗಿನ ಎಣ್ಣೆ ಅನ್ವಯಿಸಿ ಮಸಾಜ್ ಮಾಡುವುದ್ರಿಂದ ಸ್ತನಗಳ ಸುತ್ತ ಇರುವ ಸ್ಟ್ರೆಚ್ ಮಾರ್ಕ್ಸ್ ಕೂಡ ಕಡಿಮ ಆಗುತ್ತದೆ.
4. ತೆಂಗಿನ ಎಣ್ಣೆಯಿಂದ ಸ್ತನವನ್ನು ಮಸಾಜ್ ಮಾಡಿದ್ರೆ ಕುಗ್ಗುತ್ತಿರುವ ಸ್ತನ ಸಮಸ್ಯೆ ಕಡಿಮೆ ಮಾಡುತ್ತದೆ.
ಯಾವ ಮೈ ಬಣ್ಣಕ್ಕೆ ಯಾವ ಬಣ್ಣದ ಸೀರೆ ಸೂಕ್ತ? ಇಲ್ಲಿದೆ ಟಿಪ್ಸ್
5. ತೆಂಗಿನ ಎಣ್ಣೆಯಿಂದ ಸ್ತನವನ್ನು ಮಸಾಜ್ ಮಾಡಿದ್ರೆ ಸ್ತನಗಳು ಆಕರ್ಷಕವಾಗಿ ಕಾಣುತ್ತವೆ. ಸ್ತನಗಳ ಚರ್ಮದ ಹೊಳಪು ಕೂಡ ಹೆಚ್ಚಾಗುತ್ತದೆ ಮತ್ತು ಸ್ತನಗಳು ಸಾಕಷ್ಟು ಬ್ರೈಟ್ ಆಗಿ ಕಾಣುತ್ತವೆ.