ಖಾಸಗಿ ಅಂಗದ ಆರೋಗ್ಯದ ಬಗ್ಗೆ ಅತಿ ಹೆಚ್ಚು ಕಾಳಜಿ ವಹಿಸಬೇಕು. ಬೇಸಿಗೆಯಲ್ಲಿ ಯೋನಿ ತುರಿಕೆ, ಕೆಂಪು ದದ್ದು ಕಾಡ್ಬಾರದು ಅಂದ್ರೆ ಪ್ಯುಬಿಕ್ ಕೂದಲಿನ ಸ್ವಚ್ಛತೆ ಮುಖ್ಯ. ಸರಿಯಾದ ವಿಧಾನದಲ್ಲಿ ಶೇವ್ ಮಾಡಿದ್ರೆ ಸೋಂಕಿನಿಂದ ಮಾತ್ರವಲ್ಲ ಕಿರಿಕಿರಿಯಿಂದ್ಲೂ ದೂರವಿರಬಹುದು.
ಖಾಸಗಿ ಅಂಗದ ವಿಷ್ಯವನ್ನು ಜನರು ಬಹಿರಂಗವಾಗಿ ಮಾತನಾಡೋದಿಲ್ಲ. ಹದಿಹರೆಯದ ಮಕ್ಕಳಿಗೆ ಇದ್ರ ಬಗ್ಗೆ ಪಾಲಕರು ಸರಿಯಾಗಿ ಮಾಹಿತಿನ ನೀಡೋದಿಲ್ಲ. ಇದ್ರಿಂದಾಗಿ ಮಕ್ಕಳಿಗೆ ಗೊಂದಲವಿರುತ್ತದೆ. ಪ್ಯುಬಿಕ್ ಕೂದಲಿನ ಬೆಳವಣಿಗೆ ಹಾಗೂ ಅದ್ರ ಸ್ವಚ್ಛತೆ ಬಗ್ಗೆಯೂ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಜ್ಞಾನವಿರಬೇಕು.
ಪ್ಯುಬಿಕ್ (Pubic) ಕೂದಲು ನಮ್ಮ ಖಾಸಗಿ (Private) ಅಂಗವನ್ನು ರಕ್ಷಿಸುತ್ತದೆ. ಆದ್ರೆ ಅದ್ರ ನೈರ್ಮಲ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ಬೇಸಿಗೆಯಲ್ಲಿ ಪ್ಯುಬಿಕ್ ಕೂದಲು, ತುರಿಕೆ, ಕೆಟ್ಟ ವಾಸನೆ (Smell) ಗೆ ಕಾರಣವಾಗುತ್ತದೆ. ಇದ್ರಿಂದ ಬೆವರು ಹೆಚ್ಚಾಗಿ ಕಾಡುತ್ತದೆ. ಯೋನಿ (Vagina) ಯ ಆರೋಗ್ಯ ಕಾಪಾಡಿಕೊಳ್ಳಲು ಪ್ಯುಬಿಕ್ ಕೂದಲನ್ನು ಕಾಲ ಕಾಲಕ್ಕೆ ತೆಗೆಯಬೇಕು. ಇದನ್ನು ತೆಗೆಯಲು ಕೆಲವರು ಶೇವಿಂಗ್ ಕ್ರೀಮ್ ಬಳಸುತ್ತಾರೆ. ಮತ್ತೆ ಕೆಲವರು ಟ್ರಿಮ್ ಮಾಡಲು ಜೆಲ್ ಬಳಸುತ್ತಾರೆ. ನಾವಿಂದು ಪ್ಯುಬಿಕ್ ಕೂದಲನ್ನು ಹೇಗೆ ತೆಗೆಯಬೇಕು ಎನ್ನುವ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
undefined
ಸ್ತ್ರೀರೋಗ ತಜ್ಞರತ್ರ ಮಾತಾಡ್ವಾಗ ಸಂಕೋಚ ಬೇಡ
ಪ್ಯುಬಿಕ್ ಕೂದಲು ತೆಗೆಯುವುದ್ರಿಂದ ಆಗುವ ಲಾಭವೇನು? : ಅನೇಕ ಮಹಿಳೆಯರು ಪ್ಯುಬಿಕ್ ಕೂದಲನ್ನು ತೆಗೆಯುವುದಿಲ್ಲ. ಅದನ್ನು ತೆಗೆದ್ರೆ ಸಮಸ್ಯೆ ಎಂದು ಭಾವಿಸ್ತಾರೆ. ತಜ್ಞರು, ಪ್ಯುಬಿಕ್ ಕೂದಲು ತೆಗೆಯುವಂತೆ ಸಲಹೆ ನೀಡ್ತಾರೆ. ಪ್ಯುಬಿಕ್ ಕೂದಲಿಲ್ಲದ ಮೃದುವಾದ ಯೋನಿ, ಅಲರ್ಜಿ ಮತ್ತು ಚರ್ಮದ ಕಿರಿಕಿರಿಯನ್ನು ತಡೆಯುತ್ತದೆ. ಇದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಶುದ್ಧತೆ ಮತ್ತು ಸಂತೋಷಕ್ಕೂ ಇದು ಕಾರಣವಾಗುತ್ತದೆ. ಲೈಂಗಿಕ ಸಮಯದಲ್ಲಿ ಕೂದಲು ಉದುರುವ ಅಪಾಯವಿರುವುದಿಲ್ಲ. ಆರೋಗ್ಯಕರ ಲೈಂಗಿಕ ಜೀವನವನ್ನು ಆನಂದಿಸಬಹುದು. ಸೆಕ್ಸ್ ವೇಳೆ ಸೋಂಕು ಕಾಡುವ ಭಯವಿರೋದಿಲ್ಲ.
ಕತ್ತರಿ ಪ್ರಯೋಗ : ನೀವು ಪ್ಯುಬಿಕ್ ಕೂದಲನ್ನು ಕತ್ತರಿ ಮೂಲಕ ಕತ್ತರಿಸಿ ತೆಗೆಯಬಹುದು. ಕತ್ತರಿ ನೇರವಾಗಿ ಚರ್ಮದ ಸಂಪರ್ಕಕ್ಕೆ ಬರುವುದಿಲ್ಲ. ಇದು ಗಾಯದ ಅಪಾಯವನ್ನು ಕಡಿಮೆ ಮಾಡುತ್ತದೆ. ಕತ್ತರಿ ಬಳಸುವ ಮೊದಲು ಕತ್ತರಿಯನ್ನು ತೊಳೆದು ಸ್ವಚ್ಛಗೊಳಿಸಿ. ಬೆಳಕಿರುವ ಪ್ರದೇಶದಲ್ಲಿ ಪ್ಯುಬಿಕ್ ಕೂದಲನ್ನು ಕತ್ತರಿಸಿ. ಇಲ್ಲವೆಂದ್ರೆ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆಯಿರುತ್ತದೆ.
Health Tips: ಖಾಸಗಿ ಅಂಗದ ಕೂದಲು ಬಿಳಿಯಾಗಲು ಕಾರಣವೇನು?
ಶೇವಿಂಗ್ ರೇಜರ್ : ಯೋನಿ ಕೂದಲು ತೆಗೆಯಲು ಶೇವಿಂಗ್ ರೇಜರ್ ಉತ್ತಮ ಮಾರ್ಗವಾಗಿದೆ. ಇದಕ್ಕೆ ಚಿಕ್ಕ ರೇಜರ್ ಬಳಸಬೇಕು. ಚರ್ಮದ ಸೋಂಕನ್ನು ಇದು ತಡೆಯುತ್ತದೆ. ಶೇವಿಂಗ್ ಬದಲು ಫೋಮಿಂಗ್ ಜೆಲ್ ಹಚ್ಚಿ. ಕೂದಲು ಬೆಳೆಯುವ ದಿಕ್ಕಿಗೆ ರೇಜರ್ ಬಳಸಿ.
ವ್ಯಾಕ್ಸಿಂಗ್ (Waxing) : ಪ್ಯುಬಿಕ್ ಕೂದಲು ತೆಗೆಯಲು ನೀವು ವ್ಯಾಕ್ಸಿಂಗ್ ಮಾರ್ಗ ಅನುಸರಿಸಬಹುದು. ವ್ಯಾಕ್ಸಿಂಗ್ ನೋವಿನಿಂದ ಕೂಡಿರುತ್ತದೆ. ಹಾಗಾಗಿ ಮೊದಲು ಪರೀಕ್ಷೆ ಮಾಡಿ ನಂತ್ರ ವ್ಯಾಕ್ಸಿಂಗ್ ಬಳಸಿ. ಇದ್ರಲ್ಲಿ ತುರಿಕೆ ಪ್ರಮಾಣ ಕಡಿಮೆಯಿರುತ್ತದೆ.
ಪ್ಯುಬಿಕ್ ಕೂದಲು ತೆಗೆಯಲು ಸರಿಯಾದ ಮಾರ್ಗ : ಯೋನಿ ಮತ್ತು ಪ್ಯುಬಿಕ್ ಕೂದಲನ್ನು ಮೊದಲು ಸ್ವಚ್ಛವಾಗಿ ತೊಳೆಯಬೇಕು. ಒದ್ದೆಯಾದ ಕೂದಲನ್ನು ಕತ್ತರಿಸುವುದು ಸುಲಭ. ಅವುಗಳನ್ನು ತೊಳೆದ ನಂತರ ಸಣ್ಣ ಕತ್ತರಿ, ರೇಜರ್ ಅಥವಾ ಟ್ರಿಮ್ಮರ್ ಬಳಸಬೇಕು. ಜೆಲ್ ಅಥವಾ ಶೇವಿಂಗ್ ಕ್ರೀಮ್ ಹಚ್ಚಿ ನಂತರ ಅವುಗಳನ್ನು ನಿಧಾನವಾಗಿ ಕತ್ತರಿಸಿ. ದೊಡ್ಡ ಕನ್ನಡಿಯ ಮುಂದೆ ನಿಂತು ನಿಮ್ಮ ಕೂದಲನ್ನು ಕತ್ತರಿಸಿ. ಪ್ಯುಬಿಕ್ ಕೂದಲನ್ನು ತೆಗೆದ ನಂತರ ಚರ್ಮದ ಶುಷ್ಕತೆಯನ್ನು ತೆಗೆದುಹಾಕಲು ಕ್ರೀಮ್ ಹಚ್ಚಬೇಕು. ಇದ್ರಿಂದ ಚರ್ಮಕ್ಕೆ ಪೋಷಣೆ ಸಿಕ್ಕಂತಾಗುತ್ತದೆ. ಉರಿ, ತುರಿಕೆ ಕಾಣಿಸುವುದಿಲ್ಲ. ಕೆನೆ, ಅಲೋವೆರಾ ಜೆಲ್ ಅಥವಾ ತೆಂಗಿನ ಎಣ್ಣೆಯನ್ನು ಮಾಯಿಶ್ಚರೈಸರ್ ಆಗಿ ನೀವು ಬಳಸಬಹುದು. ಪ್ಯುಬಿಕ್ ಕೂದಲನ್ನು ಶೇವ್ ಮಾಡಿದ ನಂತರ ಸಡಿಲವಾದ ಮತ್ತು ಹತ್ತಿ ಪ್ಯಾಂಟಿ ಧರಿಸಬೇಕು. ಆಗ ಯೋನಿ ಕೆಂಪಾಗುವುದಿಲ್ಲ. ತುರಿಕೆ ಕಾಣಿಸಿಕೊಳ್ಳುವುದಿಲ್ಲ.