Healthy skin ಸೌಂದರ್ಯವನ್ನೇ ಹೆಚ್ಚಿಸುತ್ತೆ, ಅದಕ್ಕಿಲ್ಲಿವೆ ಸಿಂಪಲ್ ಟಿಪ್ಸ್

By Suvarna NewsFirst Published Sep 26, 2022, 1:18 PM IST
Highlights

ಎಣ್ಣೆಯುಕ್ತ ಚರ್ಮವು ಮೊಡವೆಗಳು ಮತ್ತು ಕಲೆಗಳಿಗೆ ಕಾರಣವಾಗುತ್ತದೆ. ಮೊಡವೆಗಳು ರೂಪುಗೊಳ್ಳುತ್ತವೆ. ಜೊತೆಗೆ ಕಪ್ಪು ವರ್ತುಲಗಳು ಸಹ ಉಂಟಾಗುತ್ತವೆ. ಅದಕ್ಕೆ ಇಲ್ಲಿದೆ ಪರಿಹಾರ.

ಚರ್ಮದ ಸಮಸ್ಯೆಗಳಲ್ಲಿ ಎಣ್ಣೆಯುಕ್ತ ಚರ್ಮವು ಕೂಡ ಒಂದು. ಇದು ಮೇದೋಗ್ರಂಥಿಗಳ ಅತಿಯಾದ  ಸ್ರಾವದಿಂದ ಉಂಟಾಗುತ್ತದೆ. ಹಾಗೂ ವ್ಯಕ್ತಿಯಲ್ಲಿನ ಹಾರ್ಮೋನುಗಳ ಬದಲಾವಣೆ, ಆಹಾರ, ಒತ್ತಡದಿಂದ ಈ ಸಮಸ್ಯೆ ಉಂಟಾಗುತ್ತದೆ. ಇದರಿಂದ ಮುಖದಲ್ಲಿ ಮೊಡವೆಗಳ ರಾಶಿ ಕಾಣಿಸುವುದು, ಬ್ಲಾಕ್ ಹೆಡ್ಸ್, ವೈಟ್ ಹೆಡ್ಸ್ ಜತೆಗೆ ಮುಖ ಯಾವಾಗಲೂ ಬೇಸತ್ತಂತೆ ಕಾಣುತ್ತದೆ. ಇನ್ನು ಎಣ್ಣೆಯುಕ್ತ ಚರ್ಮ ಇದ್ದವರು ಬಿಸಿಲು ಅಥವಾ ಶಾಖ ಹೆಚ್ಚಿರುವ ವಾತಾವರಣದಲ್ಲಿ ಇದ್ದರೆ ಸಾಕು ಅತಿಯಾಗಿ ಬೆವರುವಿಕೆಗೆ ಒಳಗಾಗುತ್ತಾರೆ. ಈ ಸಮಸ್ಯೆ ಇದ್ದವರು ಚಿಂತಿಸಬೇಡಿ, ಇದಕ್ಕೆ ಇಲ್ಲಿದೆ ಸುಲಭ ಉಪಾಯ. ಇವುಗಳನ್ನು ನೀವು ಪಾಲಿಸುವ ಮೂಲಕ ಎಣ್ಣೆಯುಕ್ತ ಚರ್ಮ ಸಮಸ್ಯೆಯಿಂದ ಪಾರಾಗಬಹುದು.

ಮುಖ ತೊಳೆಯುವ ಕ್ರಮ ಹೀಗಿರಲಿ.
ಮುಖವನ್ನು ಸ್ವಚ್ಛಗೊಳಿಸಲು ಉಗುರು ಬೆಚ್ಚಗಿನ ನೀರನ್ನು ಬಳಸಬೇಕು. ಬೆಚ್ಚಗಿನ ನೀರು ಮುಚ್ಚಿಹೋಗಿರುವ ಚರ್ಮದ ರಂಧ್ರಗಳನ್ನು ತೆರೆಯುತ್ತದೆ. ಮತ್ತು ನಮ್ಮ ಚರ್ಮದಿಂದ (Skin)ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕುತ್ತದೆ. ಹಾಗೇ ಮುಖವನ್ನು ಸ್ವಚ್ಛಗೊಳಿಸಲು ಎಣ್ಣೆ ರಹಿತ ಫೇಸ್ ವಾಶ್ (Face wash)ಅನ್ನು ಬಳಸಿ. ಇದು ಚರ್ಮವನ್ನು ಸ್ವಚ್ಛಗೊಳಿಸಿ  ಚರ್ಮವನ್ನು ಹೈಡ್ರೀಕರಿಸುತ್ತದೆ ಮತ್ತು ಕಲ್ಮಶಗಳು  ಶಮನಗೊಳಿಸುತ್ತದೆ.

Niveditha Gowda 7 ದಿನ ಸ್ಕಿನ್ ಚಾಲೆಂಜ್‌; ಮುಖದಲ್ಲಿ ಮೊಡವೆ ಬೇಗ ಹೋಗ್ಬೇಕಂದ್ರೆ ಹೀಗೆ ಮಾಡ್ಬೇಕಂತೆ

ಮಾಯಿಶ್ಚರೈಸರ್ ಬಳಕೆ ನಿಲ್ಲಿಸಬೇಡಿ.
ಮಾಯಿಶ್ಚರೈಸರ್ ಜಿಡ್ಡಿನ ಚರ್ಮವನ್ನು ನಿಯಂತ್ರಿಸುವುದರಲ್ಲಿ ಪ್ರಮುಖವಾಗಿದೆ. ಮುಖವನ್ನು (Face) ತೊಳೆದ ನಂತರ ಮಾಯಿಶ್ಚರೈಸಿಂಗ್ ಲೋಷನ್ ಬಳಸಿ . ಇದು ಎಣ್ಣೆ(oil) ಮುಕ್ತವಾಗಿದ್ದು, ಮುಖದಲ್ಲಿನ ರಂಧ್ರಗಳನ್ನು ಮುಚ್ಚುವುದಿಲ್ಲ ಅಥವಾ ಕಲೆಗಳನ್ನು ಉಂಟು ಮಾಡುವುದಿಲ್ಲ. ಹಾಗೇ  ಮಾಯಿಶ್ಚರೈಸರ್ ಚರ್ಮವನ್ನು ಹೈಡ್ರೀಕರಿಸುತ್ತದೆ ಮತ್ತು ಎಣ್ಣೆಯನ್ನು ಹೆಚ್ಚು ಉತ್ಪಾದಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಇನ್ನು ತುಳಸಿ ಜತೆ ಗ್ಲಿಸರಿನ್ ಮತ್ತು ರೋಸ್ ವಾಟರ್ (Rose water) ಮಿಶ್ರಣವು ತ್ವಚೆಯನ್ನು ಮಾಯಿಶ್ಚರೈಸರ್ ಮಾಡಲು ಸಹಾಯಕಾರಿಯಾಗಿದೆ . ತುಳಸಿ ಎಲೆಗಳನ್ನು ಸ್ವಲ್ಪ ರೋಸ್ ವಾಟರ್ ಮತ್ತು ಗ್ಲಿಸರಿನ್ ಸೇರಿಸಿ ಪುಡಿಮಾಡಿ, ರಸವನ್ನು ಹೊರತೆಗೆಯಲು ಅದನ್ನು ನಿಮ್ಮ ಕೈಯಿಂದ ಹಿಸುಕಿ ಹಾಕಿ. ನಂತರ ನಿಮ್ಮ ಮುಖದ ಮೇಲೆ ಹಚ್ಚಿಕೊಳ್ಳಿ. ತುಳಸಿಯಲ್ಲಿರುವ ನಂಜುನಿರೋಧಕ ಮತ್ತು ಬ್ಯಾಕ್ಟೀರಿಯಾ (Bacteria) ವಿರೋಧಿ ಗುಣಗಳು ತೈಲ ಉತ್ಪಾದನೆಯನ್ನು ನಿಯಂತ್ರಿಸುತ್ತದೆ ಮತ್ತು ಕಲೆಗಳನ್ನು ತೆರವುಗೊಳಿಸುತ್ತದೆ. ರೋಸ್ ವಾಟರ್ ಎಣ್ಣೆಯುಕ್ತ ಚರ್ಮಕ್ಕೆ ಗುಲಾಬಿ ಹೊಳಪನ್ನು ನೀಡುತ್ತದೆ ಮತ್ತು ಗ್ಲಿಸರಿನ್ ಅದನ್ನು ತೇವಗೊಳಿಸುತ್ತದೆ.

ಪ್ರತಿದಿನ ಸನ್ ಸ್ಕ್ರೀನ್ (Sun Screen) ಬಳಸಿ..
ದಿನನಿತ್ಯ  ಸನ್ ಸ್ಕ್ರೀನ್ (Sun Skin) ಮುಖಕ್ಕೆ ಹಚ್ಚುವುದರಿಂದ ಒಣ ಚರ್ಮ ಮತ್ತು ಎಣ್ಣೆಯುಕ್ತ ಚರ್ಮ ಎರಡನ್ನೂ ತಡೆಯಬಹುದು. ಸೂಕ್ತವಾದ ತ್ವಚೆಯನ್ನು ಪಡೆಯಲು ಸನ್ ಸ್ಕ್ರೀನ್ ಉಪಯೋಗಿಸಬೇಕು. ಇದು ಜಿಗುಟುತನವನ್ನು ಉಂಟುಮಾಡುವುದಿಲ್ಲ ಹಾಗೇ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ.

Beauty Tips in Kannada: ಕಾಂತಿಯುತ ತ್ವಚೆ ನಿಮ್ಮದಾಗಬೇಕೆ? ಬಳಸಿ ಐಸ್ ಕ್ಯೂಬ್

ಎಣ್ಣೆಯುಕ್ತ ಚರ್ಮಕ್ಕೆ ನಿಂಬೆ ನೀರು (Lemon Water) ಮನೆ ಮದ್ದು.
ನಿಂಬೆ ನೀರು (Lemon water)ಎಣ್ಣೆಯುಕ್ತ ತ್ವಚೆಯನ್ನು ನೈಸರ್ಗಿಕವಾಗಿ ಹೊಳೆಯುವಂತೆ ಮಾಡುವ ಅತ್ಯುತ್ತಮ ಮನೆಮದ್ದುಗಳಲ್ಲಿ ಒಂದು.  ಒಂದು ಲೋಟ ಬೆಚ್ಚಗಿನ ನಿಂಬೆ ನೀರನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ಜೇನುತುಪ್ಪದೊಂದಿಗೆ (Honey)ಬೆರೆಸಿ ಕುಡಿಯುಬೇಕು. ನಿಂಬೆಯಲ್ಲಿನ  ಉತ್ಕರ್ಷಣ ನಿರೋಧಕಗಳು ನಮ್ಮ ಚರ್ಮವನ್ನು ಹೈಡ್ರೀಕರಿಸುತ್ತದೆ, ವಿಟಮಿನ್ ಸಿ (Vitamin c ) ಯನ್ನು ನಮ್ಮ ದೇಹಕ್ಕೆ ನೀಡಿ ನಮಗೆ ಸುಂದರವಾದ ಮತ್ತು ಆರೋಗ್ಯಕರ ಚರ್ಮವನ್ನು ನೀಡುತ್ತದೆ.

ಮುಲ್ತಾನಿ ಮಿಟ್ಟಿ ಉಪಯೋಗಿಸಿ
ನೈಸರ್ಗಿಕ ಖನಿಜಾಂಶದಿಂದ (Natural Minerals) ಸಮೃದ್ಧವಾಗಿರುವ ಮುಲ್ತಾನಿ ಮಿಟ್ಟಿಯು ಎಣ್ಣೆಯುಕ್ತ ಚರ್ಮದ ಮೇಲೆ ಪರಿಣಾಮವನ್ನು ಬೀರುತ್ತದೆ.  ಇದು ಚರ್ಮದಿಂದ ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುವುದಲ್ಲದೆ, ಪರಿಪೂರ್ಣವಾದ ಚರ್ಮವನ್ನು ಪಡೆಯಲು ಸಹಾಯ ಮಾಡುವ ಹಲವಾರು ಚರ್ಮದ (Skin) ಪ್ರಯೋಜನಗಳನ್ನು ಒದಗಿಸುತ್ತದೆ. ಎರಡು ಟೇಬಲ್ ಸ್ಪೂನ್  ಮುಲ್ತಾನಿ ಮಿಟ್ಟಿ, ಮೊಸರು (Curd)ಮತ್ತು ಒಂದು ಟೇಬಲ್ ಚಮಚ ನಿಂಬೆ ರಸದೊಂದಿಗೆ ಮಿಶ್ರಣ ಮಾಡಿ. ಇದನ್ನು ನಿಮ್ಮ ಮುಖದ ಮೇಲೆ ಹಚ್ಚಿ ಮತ್ತು 20 ನಿಮಿಷಗಳ ಕಾಲ ಬಿಡಿ. ನಂತರ ಅದನ್ನು ಉಗುರುಬೆಚ್ಚಗಿನ ನೀರಿನಿಂದ ತೊಳೆಯುವುದರಿಂದ ಪರಿಣಾವನ್ನು ಕಾಣಬಹುದು.

ಮೊಟ್ಟೆಯ ಹಳದಿ (Egg Yellow Part) ಭಾಗ ಬಳಸಿ
ಮೊಟ್ಟೆಯ (Egg) ಹಳದಿ ಭಾಗವು ಚರ್ಮದಿಂದ ಅತಿಯಾದ ಎಣ್ಣೆಯನ್ನು ತೆಗೆದುಹಾಕುತ್ತದೆ. ಅದಲ್ಲದೆ ಮೊಟ್ಟೆ ಉತ್ತಮ ಗುಣಮಟ್ಟದ ಪ್ರೋಟೀನ್, (Protein) ಜೀವಸತ್ವಗಳು ಮತ್ತು ಖನಿಜಗಳ ಸಮೃದ್ಧ ಮೂಲವಾಗಿದೆ,  ಚರ್ಮದ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಒಂದು ಮೊಟ್ಟೆಯನ್ನು ಒಡೆದು ಅದರ ಹಳದಿ ಭಾಗವನ್ನು ಬೇರ್ಪಡಿಸಿ. ಆ ಹಳದಿ ಭಾಗವನ್ನು ಕರಡಿ ನಂತರ ಹತ್ತಿಯನ್ನು ಬಳಸಿ ಹಳದಿ ಲೋಳೆಯನ್ನು ಮುಖದ ಅತಿಯಾದ ಎಣ್ಣೆಯುಕ್ತ ಪ್ರದೇಶಗಳಿಗೆ ಅನ್ವಯಿಸಿ. 10 ನಿಮಿಷಗಳ ಕಾಲ ಒಣಗಲು ಬಿಡಿ ಮತ್ತು ನಂತರ ನೀರಿನಿಂದ ಚೆನ್ನಾಗಿ ತೊಳೆಯಿರಿ.

ಎಣ್ಣೆಯುಕ್ತ ಚರ್ಮವನ್ನು ನಿಭಾಯಿಸುವುದು ಕಷ್ಟದ ಕೆಲಸವಂತೂ ಅಲ್ಲ, ಈ ಟಿಪ್ಸ್ ಫಾಲೋ ಮಾಡಿ ಸಮಸ್ಯೆಗೆ ಗುಡ್ ಬೈ ಹೇಳಿ.

 

 

click me!