ಗಂಡ, 5 ಮಕ್ಕಳನ್ನು ಬಿಟ್ಟು ಒಬ್ಬಂಟಿಯಾಗಿ ವಿಶ್ವ ಪರ್ಯಟನೆ ಮಾಡಿದ ಗೃಹಿಣಿ! ಕುವೈತ್‌ನಲ್ಲಿ ಸಿಕ್ಕಿಬಿದ್ದಳು

Published : Feb 15, 2025, 09:02 PM ISTUpdated : Feb 15, 2025, 09:16 PM IST
ಗಂಡ, 5 ಮಕ್ಕಳನ್ನು ಬಿಟ್ಟು ಒಬ್ಬಂಟಿಯಾಗಿ ವಿಶ್ವ ಪರ್ಯಟನೆ ಮಾಡಿದ ಗೃಹಿಣಿ! ಕುವೈತ್‌ನಲ್ಲಿ ಸಿಕ್ಕಿಬಿದ್ದಳು

ಸಾರಾಂಶ

ಕೇರಳದ ಐದು ಮಕ್ಕಳ ತಾಯಿ ನಾಜಿ ನೌಷಿ, ಮಹೀಂದ್ರಾ ಥಾರ್‌ನಲ್ಲಿ ಒಬ್ಬಂಟಿಯಾಗಿ ವಿಶ್ವ ಪರ್ಯಟನೆ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಗಳಿಸಿದ್ದಾರೆ. ಪ್ರಯಾಣದಲ್ಲಿ ಎದುರಾದ ಸವಾಲುಗಳನ್ನು ಮೆಟ್ಟಿನಿಂತು, ಸ್ತ್ರೀ ಸಬಲೀಕರಣಕ್ಕೆ ಒಂದು ಮಾದರಿಯಾಗಿದ್ದಾರೆ. ಕುವೈತ್‌ನಿಂದ ಯುಎಇಗೆ ತೆರಳಲು ಸಿದ್ಧರಾಗಿರುವ ನಾಜಿ, ಫಿಫಾ ವಿಶ್ವಕಪ್ ವೀಕ್ಷಿಸಲು ಕತಾರ್‌ಗೂ ಭೇಟಿ ನೀಡಿದ್ದರು.

 ಮದುವೆಯಾದ ನಂತರ ಮಹಿಳೆಯರು ಮಕ್ಕಳು, ಕುಟುಂಬ ಅಂತ ಮನೆಯಲ್ಲಿಯೇ ತಮ್ಮ ಇಡೀ ಜೀವನವನ್ನು ಕಳೆಯುವುದಕ್ಕೆ ನಿರ್ಧಾರ ಮಾಡಿಬಿಡುತ್ತಾರೆ. ಆದರೆ, ಬೆರಳೆಣಿಕೆ ಮಹಿಳೆಯರು ಮಾತ್ರ ಮನೆಯ ಹೊಸ್ತಿಲನ್ನು ದಾಟಿ ಬಂದು ಪುರುಷರಂತೆ ದುಡಿದು, ಸಬಲೀಕರಣ ಹೊಂದುತ್ತಾರೆ. ಜೊತೆಗೆ, ಜೀವನದಲ್ಲಿ ತಮಗಿದ್ದ ಎಲ್ಲ ಆಸೆಗಳನ್ನು ಈಡೇರಿಸಿಕೊಳ್ಳುತ್ತಾರೆ. ಅದೇ ರೀಲಿ ಇಲ್ಲೊಬ್ಬ ಗೃಹಿಣಿ ಮಹಿಂದ್ರಾ ಥಾರ್ ಕಾರ್‌ನಲ್ಲಿ ಒಬ್ಬಂಟಿಯಾಗಿ ವಿಶ್ವ ಪರ್ಯಟನೆ ಮಾಡುತ್ತಿದ್ದಾರೆ. ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ಗಳಿಸಿದ್ದಾರೆ.

ನಮ್ಮ ದೇಶ ಸಾಂಪ್ರದಾಯಿಕ ಮತ್ತು ಪುರುಷ ಪ್ರಧಾನ ದೇಶವಾಗಿದೆ. ಆದ್ದರಿಂದ ಮಹಿಳೆಯರು ಅನೇಕ ಕಟ್ಟುಪಾಡುಗಳಲ್ಲಿಯೇ ಜೀವನ ಮಾಡುತ್ತಿದ್ದಾರೆ. ಹೀಗಾಗಿ, ಮನೆ, ಕುಟುಂಬ, ಮಕ್ಕಳು ಅಂತಾ ಬಂದಾಗ ಬಹುತೇಕ ಮಹಿಳೆಯರು ತಮ್ಮ ಇಷ್ಟಗಳನ್ನೆಲ್ಲ ಬದಿಗಿಟ್ಟು ಮನೆಗೆಲಸದಲ್ಲಿ ಮುಳುಗಿಹೋಗ್ತಾರೆ. ಕೆಲವರು ಕುಟುಂಬಕ್ಕೋಸ್ಕರ ತಮ್ಮ ಆಸೆಗಳನ್ನ ಬದಿಗಿಡ್ತಾರೆ. ಆದ್ರೆ, ಜೀವನದಲ್ಲಿ ಏನೇ ಬದಲಾವಣೆಗಳಾದ್ರೂ ಮಹಿಳೆಯರು ಮನೆಯೊಳಗೆ ಸೀಮಿತರಾಗಬಾರದು ಅಂತ ನಾಜಿ ನೌಷಿ ಎಂಬ ಗೃಹಿಣಿ ತಮ್ಮ ಸಾಹಸ ಯಾನದ ಮೂಲಕ ಸಾಬೀತುಪಡಿಸಿದ್ದಾರೆ. ಕೇರಳ ಮೂಲದ ನಾಜಿಗೆ ಪ್ರಯಾಣ ಅಂದ್ರೆ ಪ್ರಾಣ. ನಾಜಿ ಮಾಡಿರೋ ಒಬ್ಬಂಟಿ ಸಾಹಸ ಯಾನ ಈಗ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಗಳಿಸಿದೆ.

ಇದನ್ನೂ ಓದಿ: ಭಾರತದ ಯಾವ ರಾಜ್ಯದ ಮಹಿಳೆಯರು ಅತಿಹೆಚ್ಚು ಮದ್ಯ ಸೇವಿಸುತ್ತಾರೆ? ಕರ್ನಾಟಕದ ಪಾಲೆಷ್ಟು?

5 ಮಕ್ಕಳ ತಾಯಿ ನಾಜಿ ನೌಷಿ. ತನ್ನ ಇಷ್ಟದಂತೆ ಜಗತ್ತನ್ನ ಸುತ್ತಬೇಕು ಅನ್ನೋದು ನಾಜಿ ಆಸೆ. ತಮ್ಮ ಮಹೀಂದ್ರ ಥಾರ್‌ನಲ್ಲಿ ಒಬ್ಬಂಟಿಯಾಗಿ ಹೋದ ಸಾಹಸ ಯಾನದ ವಿಡಿಯೋ ಮತ್ತು ಅನುಭವಗಳನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಅದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಪುರುಷರಿಗೆ ಮಾತ್ರವಲ್ಲ, ಮಹಿಳೆಯರಿಗೂ ಇಂಥ ಯಾನ ಮಾಡಲು ಸಾಧ್ಯ ಅಂತ ನಾಜಿ ತೋರಿಸಿಕೊಟ್ಟಿದ್ದಾರೆ.

ಪ್ರಯಾಣದ ವೇಳೆ ಯಾವುದೇ ತೊಂದರೆ ಆಗದಂತೆ ವಾಹನದಲ್ಲಿಯೇ ಸುರಕ್ಷತಾ ಸಾಮಗ್ರಿಗಳು, ಆಹಾರ ಪದಾರ್ಥಗಳು ಮತ್ತು ಅಡುಗೆ ಮಾಡಲು ಬೇಕಾದ ವ್ಯವಸ್ಥೆ ಮಾಡಿಕೊಂಡು ನಾಜಿ ಯಾನ ಮಾಡ್ತಾರೆ. ಈಗ ಕುವೈತ್‌ನಲ್ಲಿರೋ ನಾಜಿ, ಬಹ್ರೇನ್, ಒಮಾನ್, ಕತಾರ್, ಸೌದಿ ಅರೇಬಿಯಾ ಮೂಲಕ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಹೋಗಲು ತಯಾರಿ ನಡೆಸಿದ್ದಾರೆ.

ಇದನ್ನೂ ಓದಿ: ಒಲಿಂಪಿಕ್ಸ್ ಸೋಲಿನಿಂದ ಕಂಗೆಟ್ಟ ಲವ್ಲಿನಾ; ಗೆಲುವಿಗೊಂದು ಅರ್ಥ ತಿಳಿಸಿಕೊಟ್ಟ ರವಿಶಂಕರ ಗುರೂಜಿ ಭೇಟಿ

ಆದ್ರೆ, ಒಬ್ಬಂಟಿ ಯಾನ ಅಷ್ಟು ಸುಲಭ ಅಲ್ಲ ಅಂತ ನಾಜಿ ಹೇಳ್ತಾರೆ. ಒಮ್ಮೆ ತಾಂತ್ರಿಕ ದೋಷದಿಂದಾಗಿ ಮರುಭೂಮಿಯಲ್ಲಿ ವಾಹನ ನಿಂತುಹೋಗಿತ್ತು. ಆಗ ಒಬ್ಬ ಯುವಕ ಬಂದು ಸಹಾಯ ಮಾಡಿದ ಅಂತ ನಾಜಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡು ಬರೆದುಕೊಂಡಿದ್ದಾರೆ. ಫಿಫಾ ವಿಶ್ವಕಪ್‌ನಲ್ಲಿ ತಮ್ಮ ನೆಚ್ಚಿನ ತಂಡದ ಪಂದ್ಯ ನೋಡಲು ಕತಾರ್‌ಗೆ ಐತಿಹಾಸಿಕ ಯಾನ ಮಾಡಿದ್ದರಿಂದ ನಾಜಿ ಪ್ರಸಿದ್ಧರಾದರು. ಲಕ್ಷದ್ವೀಪ ಮತ್ತು ನೇಪಾಳಕ್ಕೂ ಒಬ್ಬಂಟಿಯಾಗಿ ಯಾನ ಮಾಡಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೋನಿಯಾ ಗಾಂಧಿ ಮೊದಲ ಬಾರಿಗೆ ಇಂದಿರಾ ಗಾಂಧಿಯನ್ನು ಭೇಟಿಯಾದಾಗ ಏನಾಗಿತ್ತು?
ಮಹಿಳಾ ನೌಕರರಿಗೆ ಬ್ಯಾಡ್ ನ್ಯೂಸ್: ಮುಟ್ಟಿನ ರಜೆಗೆ ಹೈಕೋರ್ಟ್ ತಡೆ: ಸರ್ಕಾರದ ಆದೇಶಕ್ಕೆ ಹಿನ್ನಡೆ?