ಕಾಲ ಅದೆಷ್ಟೇ ಬದಲಾದರೂ ಅಡುಗೆ ಮಾಡೋದು, ಪಾತ್ರೆ ತೊಳೆಯೋದು, ಮನೆ ಕ್ಲೀನ್ ಮಾಡೋದು ಈ ಎಲ್ಲಾ ಕೆಲಸಗಳನ್ನು ಹೆಂಡ್ತೀನೆ ಮಾಡ್ಬೇಕು ಅನ್ನೋ ಗಂಡಸರ ಮನಸ್ಥಿತಿಯಂತೂ ಬದಲಾಗಿಲ್ಲ. ಇವತ್ತಿಗೂ ಅದೆಷ್ಟೋ ಮನೆಯ ಹೆಣ್ಣುಮಕ್ಕಳು ಸಂಪೂರ್ಣ ಮನೆಗೆಲಸದ ಜವಾಬ್ದಾರಿ ತೆಗೆದುಕೊಂಡು ಹೈರಾಣಾಗಿ ಯಾರಲ್ಲೂ ಹೇಳಿಕೊಳ್ಳಲಾಗದೆ ಒದ್ದಾಡುತ್ತಿದ್ದಾರೆ. ಹೀಗಿರುವಾಗ ಬಾಂಬೆ ಹೈಕೋರ್ಟ್ ಹೇಳಿದ್ದೇನು ನೋಡಿ.
ಕಾಲ ಅದೆಷ್ಟೇ ಬದಲಾದರೂ ಜನರ ಮನಸ್ಥಿತಿಯಂತೂ ಬದಲಾಗಲ್ಲ. ಹೆಂಗಸರು ಇರೋದು ಅಡುಗೆ ಮಾಡೋಕೆ, ಗಂಡಸರು ಅದನ್ನೆಲ್ಲಾ ಮಾಡ್ಬಾರ್ದು ಅನ್ನೋ ಮನಸ್ಥಿತಿ ಮೊದಲಿನಿಂದಲೂ ಇದೆ. ಅಡುಗೆ ಮಾಡೋದು, ಪಾತ್ರೆ ತೊಳೆಯೋದು, ಮನೆ ಕ್ಲೀನ್ ಮಾಡೋದು ಈ ಎಲ್ಲಾ ಕೆಲಸಗಳನ್ನು ಹೆಂಡ್ತೀನೆ ಮಾಡ್ಬೇಕು ಅನ್ನೋ ಗಂಡಸರ ಮನಸ್ಥಿತಿ ಬದಲಾಗಿಲ್ಲ. ಇವತ್ತಿಗೂ ಅದೆಷ್ಟೋ ಮನೆಯ ಹೆಣ್ಣುಮಕ್ಕಳು ಸಂಪೂರ್ಣ ಮನೆಗೆಲಸದ ಜವಾಬ್ದಾರಿ ತೆಗೆದುಕೊಂಡು ಹೈರಾಣಾಗಿ ಯಾರಲ್ಲೂ ಹೇಳಿಕೊಳ್ಳಲಾಗದೆ ಒದ್ದಾಡುತ್ತಿದ್ದಾರೆ. ಹೀಗಿರುವಾಗ ಬಾಂಬೆ ಹೈಕೋರ್ಟ್ ಹೇಳಿದ್ದೇನು ನೋಡಿ.
ಆಧುನಿಕ ಸಮಾಜದಲ್ಲಿ ಪತಿ-ಪತ್ನಿಯರ (Husband-wife) ನಡುವೆ ಮನೆಯ ಜವಾಬ್ದಾರಿಗಳನ್ನು ಸಮಾನವಾಗಿ ಹಂಚಿಕೊಳ್ಳಬೇಕು ಎಂದು ಬಾಂಬೆ ಹೈಕೋರ್ಟ್ ಗುರುವಾರ ಹೇಳಿದ್ದು, ವಿಚ್ಛೇದನ (Divorce) ಕೋರಿ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ನಿತಿನ್ ಸಾಂಬ್ರೆ ಮತ್ತು ಶರ್ಮಿಳಾ ದೇಶಮುಖ್ ಅವರನ್ನೊಳಗೊಂಡ ಪೀಠ, 'ಆಧುನಿಕ ಸಮಾಜದಲ್ಲಿ ಮನೆಯ ಜವಾಬ್ದಾರಿಯ ಭಾರವನ್ನು ಪತಿ-ಪತ್ನಿ ಇಬ್ಬರೂ ಸಮಾನವಾಗಿ ಹೊರಬೇಕು, ಮನೆಯ ಮಹಿಳೆ ಮಾತ್ರ ಮನೆಯ ಜವಾಬ್ದಾರಿಯನ್ನು ತೆಗೆದುಕೊಳ್ಳೇಕು ಎಂಬ ಹಿಂದಿನ ಕಾಲದ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳುವ ಅಗತ್ಯವಿದೆ. ಧನಾತ್ಮಕ ಬದಲಾವಣೆಗೆ ಒಳಗಾಗಿ' ಎಂದು ಹೇಳಿದ್ದಾರೆ.
Viral Video: ಮಿಲಿಯನೇರ್ ಪತ್ನಿಯಾದ್ರೂ ಕಷ್ಟ ಇರುತ್ತಂತೆ, ದುಬೈ ಗೃಹಿಣಿಯ ಸಂಕಷ್ಟ ನೋಡಿ!
ಹೆಂಡ್ತಿ ಮನೆ ಕೆಲಸ ಮಾಡದೆ ಫೋನ್‌ನಲ್ಲಿ ಮಾತನಾಡ್ತಾಳೆ ಎಂದು ಆರೋಪಿಸಿದ್ದ ಪತಿ
ಮಾರ್ಚ್ 2018 ರ ಆದೇಶವನ್ನು ಪ್ರಶ್ನಿಸಿ, ತನ್ನ 13 ವರ್ಷದ ದಾಂಪತ್ಯವನ್ನು (Married life) ವಿಸರ್ಜಿಸಲು ಕೋರಿ ವ್ಯಕ್ತಿಯೊಬ್ಬ ಸಲ್ಲಿಸಿದ ಮನವಿಯನ್ನು ವಜಾಗೊಳಿಸಿ ಕೌಟುಂಬಿಕ ನ್ಯಾಯಾಲಯವು (Court) ಹೀಗೆ ಹೇಳಿತು. ಈ ಪ್ರಕರಣದಲ್ಲಿ 2010ರಿಂದ ವಿವಾಹವಾದ ದಂಪತಿಗಳು (Couples) ಮಗುವನ್ನು ಹೊಂದಿದ್ದರು. ಪತಿ ಕ್ರೌರ್ಯದ ಆಧಾರದ ಮೇಲೆ ವಿಚ್ಛೇದನವನ್ನು ಕೋರಿದ್ದನು. ತನ್ನ ಹೆಂಡತಿ ನಿರಂತರವಾಗಿ ಫೋನ್‌ನಲ್ಲಿ ಮಾತನಾಡುತ್ತಿದ್ದಾಳೆ ಮತ್ತು ಅವಳ ಮನೆಯ ಕರ್ತವ್ಯಗಳನ್ನು (Responsibility) ನಿರ್ಲಕ್ಷಿಸುತ್ತಿದ್ದಳು ಎಂದು ಆರೋಪಿಸಿದ್ದನು.
ಇದಕ್ಕೆ ಪ್ರತಿಕ್ರಿಯಿಸಿದ ಪತ್ನಿ, ಕೆಲಸದಿಂದ ಹಿಂತಿರುಗಿದ ನಂತರ ಎಲ್ಲಾ ಮನೆಕೆಲಸಗಳನ್ನು (Household work) ನಿಭಾಯಿಸಲು ಒತ್ತಾಯಿಸುತ್ತಾರೆ ಮತ್ತು ತನ್ನ ಕುಟುಂಬವನ್ನು ಸಂಪರ್ಕಿಸಿದಾಗ ನಿಂದನೆಯನ್ನು ಎದುರಿಸಬೇಕಾಯಿತು ಎಂದು ಹೇಳಿದ್ದಾರೆ. ಆಕೆ ತನ್ನ ಪತಿ ದೈಹಿಕ ಕಿರುಕುಳ ನೀಡಿದ್ದಾಗಿಯೂ ಆರೋಪಿಸಿದ್ದಾಳೆ. ಎರಡೂ ಕಡೆಯವರು ಉದ್ಯೋಗ (Job)ದಲ್ಲಿದ್ದಾರೆ ಮತ್ತು ಹೆಂಡತಿಯು ಮನೆಯ ಎಲ್ಲಾ ಕೆಲಸಗಳನ್ನು ನಿರ್ವಹಿಸಬೇಕೆಂದು ನಿರೀಕ್ಷಿಸುವುದು ಹಿಂಜರಿಕೆಯ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ನ್ಯಾಯಾಲಯವು ಗಮನಿಸಿದೆ.
ಡಿಯರ್ ಗಂಡಸ್ರೆ…. Housewife ಅಲ್ಲ…. Househusband ನೀವಾಗಬಲ್ಲಿರಾ?
ವೈವಾಹಿಕ ಸಂಬಂಧವು ಸಂಗಾತಿಯನ್ನು ಅವರ ಪೋಷಕರಿಂದ ಪ್ರತ್ಯೇಕಿಸಬಾರದು ಎಂದು ಪೀಠವು ಒತ್ತಿಹೇಳಿತು. ತನ್ನ ಹೆತ್ತವರೊಂದಿಗೆ ಹೆಂಡತಿಯ ಸಂಪರ್ಕವನ್ನು ನಿರ್ಬಂಧಿಸುವುದು ಮಾನಸಿಕ ಮತ್ತು ದೈಹಿಕ ಕ್ರೌರ್ಯಕ್ಕೆ ಕಾರಣವಾಗುತ್ತದೆ ಎಂದು ನ್ಯಾಯಾಲಯ ತಿಳಿಸಿತು. 'ಪೋಷಕರೊಂದಿಗಿನ ಸಂಪರ್ಕವನ್ನು ಮೊಟಕುಗೊಳಿಸಲು ಪತಿ ನಿರ್ಬಂಧಗಳನ್ನು ಹಾಕುವುದು ಹೆಂಡತಿಗೆ ಮಾನಸಿಕ ಕ್ರೌರ್ಯವಾಗಿದೆ' ಎಂದು ನ್ಯಾಯಾಲಯ ಹೇಳಿತು.