ದಿನವಿಡಿ ಕೆಲಸ, ಒಂದಿಷ್ಟು ಒತ್ತಡ, ಮಕ್ಕಳ ವಿದ್ಯಾಭ್ಯಾಸ, ತಿಂಗಳು ಕಾಡೋ ಮುಟ್ಟು, ಹೆಚ್ಚಾಗ್ತಿರುವ ವಯಸ್ಸು ಎಲ್ಲವೂ ಮಹಿಳೆಯರ ಶಕ್ತಿ ಕುಗ್ಗಿಸುತ್ತೆ. ವಯಸ್ಸು ಹೆಚ್ಚಾಗ್ತಿದ್ದಂತೆ ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸ್ಬೇಕು.
ಮಹಿಳೆಯರು ಸದಾ ಒಂದಲ್ಲ ಒಂದು ಕೆಲಸದಲ್ಲಿ ಬ್ಯುಸಿಯಿರ್ತಾರೆ. ಮನೆ, ಮಕ್ಕಳು ಸೇರಿದಂತೆ ಅನೇಕ ಕೆಲಸಗಳನ್ನು ಮಹಿಳೆಯರು ಮಾಡ್ತಾರೆ. ವಯಸ್ಸಾಗ್ತಿದ್ದಂತೆ ಮಹಿಳೆಯರ ಶಕ್ತಿ ಕಡಿಮೆಯಾಗ್ತಾ ಬರುತ್ತದೆ. ಹಾರ್ಮೋನ್ ಏರುಪೇರಿನಿಂದಾಗಿ ಮಹಿಳೆಯರು ಆಯಾಸ ಮತ್ತು ದೌರ್ಬಲ್ಯಕ್ಕೊಳಗಾಗ್ತಾರೆ. ಆಯಾಸ, ಸುಸ್ತಿನಿಂದಾಗಿ ಅನೇಕ ಬಾರಿ ಅವರಿಗೆ ದಿನನಿತ್ಯದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಸುಸ್ತು, ಆಯಾಸ ಕಡಿಮೆಯಾದಾಗ, ಮನೆ ಕೆಲಸ ಮಾಡಲೂ ಸಾಧ್ಯವಿಲ್ಲ ಎಂದಾಗ ಕೊನೆ ಆಯ್ಕೆ ಎನ್ನುವಂತೆ ಮಹಿಳೆಯರು ಆಸ್ಪತ್ರೆಗೆ ಹೋಗ್ತಾರೆ. ವಿಟಮಿನ್ ಔಷಧಿ, ಕ್ಯಾಲ್ಸಿಯಂ ಔಷಧಿ ಸೇರಿದಂತೆ ಅನೇಕ ರೀತಿಯ ಔಷಧಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ. ಈ ಔಷಧಿಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಅಡ್ಡಪರಿಣಾಮವನ್ನು ಎದುರಿಸಬೇಕಾಗುತ್ತದೆ. ಶಕ್ತಿ ಕಡಿಮೆಯಾಗ್ತಿದೆ, ಸುಸ್ತಾಗ್ತಿದೆ ಎನ್ನುವ ಮಹಿಳೆಯರು ಆಹಾರದಲ್ಲಿ ಬದಲಾವಣೆ ಮಾಡ್ಬೇಕು. ಆರೋಗ್ಯಕರ, ಪೌಷ್ಟಿಕಾಂಶವಿರುವ ಆಹಾರ ಸೇವನೆ ಮಾಡ್ಬೇಕು. ಇದ್ರಿಂದ ಆಯಾಸ ಕಡಿಮೆಯಾಗಿ ಲವಲವಿಕೆಯಿಂದ ಇರಬಹುದು.
ಮಹಿಳೆ (Woman) ಯರು ಸೇವಿಸ್ಬೇಕು ಈ ಆಹಾರ :
undefined
ಡ್ರೈ ಫ್ರೂಟ್ಸ್ (Dry Fruits) : ಡ್ರೈ ಫ್ರೂಟ್ಸ್ ದೇಹಕ್ಕೆ ತುಂಬಾ ಪ್ರಯೋಜನಕಾರಿ. ಡ್ರೈ ಫ್ರೂಟ್ಸ್ ತಿನ್ನುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ. ಡ್ರೈ ಫ್ರೂಟ್ಸ್ ತಿನ್ನುವುದರಿಂದ ದೇಹದಲ್ಲಿ ಕೊಬ್ಬು ಏರಿಕೆಯಾಗುವುದಿಲ್ಲ. ಮಹಿಳೆಯರು ನಿಯಮಿತವಾಗಿ ಡ್ರೈ ಫ್ರೂಟ್ಸ್ ಸೇವಿಸುತ್ತ ಬಂದರೆ ಅವರ ಜೀರ್ಣಾಂಗ ವ್ಯವಸ್ಥೆ ಬಲಗೊಳ್ಳುತ್ತದೆ. ದೇಹದ ಆಯಾಸ (Weakness) ಮತ್ತು ದೌರ್ಬಲ್ಯವನ್ನು ಕಡಿಮೆ ಮಾಡಲು ಇದು ನೆರವಾಗುತ್ತದೆ.
ಆಹಾರದ ಜೊತೆ ಇರಲಿ ನೀರು (Water) : ಕೆಲಸದ ಒತ್ತಡದಲ್ಲಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಹಾಗೆಯೇ ಸರಿಯಾದ ಪ್ರಮಾಣದಲ್ಲಿ ನೀರನ್ನು ಸೇವನೆ ಮಾಡೋದಿಲ್ಲ. ದೇಹದಲ್ಲಿ ನೀರಿನ ಕೊರತೆಯಾದ್ರೆ ಮಹಿಳೆಯರು ಆಯಾಸ ಮತ್ತು ಸುಸ್ತಿನ ಸಮಸ್ಯೆ ಎದುರಿಸುತ್ತಾರೆ. ದೇಹದಲ್ಲಿ ನೀರಿನ ಅಂಶ ಕಡಿಮೆಯಾದ್ರೆ ಹಲವಾರು ರೋಗಗಳು ದೇಹವನ್ನು ಆವರಿಸುತ್ತವೆ. ಮಹಿಳೆಯರು ದಿನವಿಡೀ 2 ರಿಂದ 3 ಲೀಟರ್ ನೀರನ್ನು ಕುಡಿಯಬೇಕು. ನೀರು ದೇಹದ ಆಯಾಸ ಮತ್ತು ಸುಸ್ತನ್ನು ಕಡಿಮೆ ಮಾಡುತ್ತದೆ. ಜೊತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
BEAUTY TIPS IN KANNADA: ಕಾಂತಿಯುತ ತ್ವಚೆ ನಿಮ್ಮದಾಗಬೇಕೆ? ಬಳಸಿ ಐಸ್ ಕ್ಯೂಬ್
ಕ್ಯಾಲ್ಸಿಯಂ : ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾದ್ರೆ ದೇಹ ಶಕ್ತಿ ಕಳೆದುಕೊಳ್ಳುತ್ತದೆ. ಕ್ಯಾಲ್ಸಿಯಂ ಜೀವಕೋಶಗಳು ಆಮ್ಲಜನಕವನ್ನು ಪಡೆಯಲು ಸಹಾಯ ಮಾಡುತ್ತದೆ. ದೇಹದಲ್ಲಿ ಕಬ್ಬಿಣದ ಕೊರತೆಯಾದ್ರೆ ಆಯಾಸ ಕಾಡುತ್ತದೆ. ದಿನವಿಡಿ ಸುಸ್ತು ಎಲ್ಲರನ್ನೂ ಕಾಡುತ್ತದೆ. ಮಹಿಳೆಯರು ಸಾಕಷ್ಟು ಕ್ಯಾಲ್ಸಿಯಂ ದೇಹ ಸೇರುವಂತೆ ನೋಡಿಕೊಳ್ಳಬೇಕು. ಕಬ್ಬಿಣ ಭರಿತ ಆಹಾರವನ್ನು ಸೇರಿಸಿಕೊಳ್ಳಬೇಕು. ಪಾಲಕ್, ಬೀನ್ಸ್, ಬಟಾಣಿ, ಕೋಸುಗಡ್ಡೆ ಮತ್ತು ಸಿಹಿ ಆಲೂಗಡ್ಡೆ ಇತ್ಯಾದಿಗಳಲ್ಲಿ ಕಬ್ಬಿಣದ ಅಂಶ ಕಂಡು ಬರುತ್ತದೆ. ಹಾಗಾಗಿ ಈ ಎಲ್ಲ ಆಹಾರವನ್ನು ಮಹಿಳೆಯರು ಮುಖ್ಯವಾಗಿ ಸೇವನೆ ಮಾಡ್ಬೇಕು.
ಹಾಲು : ಹಾಲಿನ ಹೆಸರು ಹೇಳಿದ್ರೆ ಮೂಗು ಮುರಿಯುವವರು ಅನೇಕರು. ಮಹಿಳೆಯರಂತೂ ಹಾಲನ್ನು ಕಡಿಮೆ ಪ್ರಮಾಣದಲ್ಲಿ ಕುಡಿಯುತ್ತಾರೆ. ಹಾಲಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮಹಿಳೆಯರು ದಿನದಲ್ಲಿ ಒಂದು ಸಮಯವಾದ್ರೂ ಹಾಲನ್ನು ಕುಡಿಯಬೇಕು. ಹಾಲು ಕುಡಿಯಲು ಆಗ್ತಿಲ್ಲ ಎನ್ನುವವರು ಮಜ್ಜಿಗೆ, ತುಪ್ಪ ಮತ್ತು ಮೊಸರನ್ನು ತಿನ್ನಬಹುದು. ಸ್ನಾಯುಗಳ ನೋವು ಕಡಿಮೆಯಾಗ್ಬೇಕೆಂದ್ರೆ ಹಾಲು ಕುಡಿಯೋದು ಬೆಸ್ಟ್ ಎನ್ನುತ್ತಾರೆ ತಜ್ಞರು. ಪ್ರತಿ ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದು ಬಹಳ ಪ್ರಯೋಜನಕಾರಿ. ಸದಾ ಸುಸ್ತು ಎನ್ನುವವರು ಹಾಲು ಕುಡಿದ್ರೆ ಶಕ್ತಿ ಹೆಚ್ಚಾಗುತ್ತದೆ.
ಸಂಗಾತಿ ಜೊತೆ ಗಟ್ಟಿ ಸಂಬಂಧ, ನಿಭಾಯಿಸೋದು ಹೇಗೆ?
ಬಾಳೆಹಣ್ಣು : ಬಾಳೆ ಹಣ್ಣಿನಲ್ಲಿ ಸಾಕಷ್ಟು ಪೌಷ್ಟಿಕಾಂಶವಿದೆ. ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ. ಬಾಳೆ ಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ ಇದೆ. ಇದು ದೇಹಕ್ಕೆ ಶಕ್ತಿ ನೀಡುತ್ತದೆ. ದೇಹದ ದಣಿವನ್ನು ಕಡಿಮೆ ಮಾಡುತ್ತದೆ. ಪ್ರತಿ ದಿನ ಬಾಳೆಹಣ್ಣು ತಿನ್ನುವುದರಿಂದ ದೇಹದ ಮೂಳೆಗಳು ಬಲಗೊಳ್ಳುತ್ತವೆ.