Beauty Tips in Kannada: ಕಾಂತಿಯುತ ತ್ವಚೆ ನಿಮ್ಮದಾಗಬೇಕೆ? ಬಳಸಿ ಐಸ್ ಕ್ಯೂಬ್

By Suvarna News  |  First Published Sep 24, 2022, 2:19 PM IST

Skin Care Tips in Kannada: ನಾವು ಸುಂದರವಾಗಿ ಕಾಣಲು ಚರ್ಮ ತುಂಬಾ ಮುಖ್ಯ. ನಮ್ಮ ಚರ್ಮ ಪಳಪಳನೆ ಹೊಳೆಯುತ್ತಿದ್ದರೆ ನಾವು ಬೆಳ್ಳಗೆ ಕಾಣುತ್ತೇವೆ. ಚರ್ಮದ ಮೃದುತ್ವಕ್ಕಾಗಿ ಜನರು ನಾನಾ ಟಿಪ್ಸ್ ಫಾಲೋ ಮಾಡ್ತಾರೆ. ಅದರಲ್ಲಿ ಐಸ್ ಕ್ಯೂಬ್ ಕೂಡ ಒಂದು.


ಐಸ್-ಕ್ಯೂಬ್ ( Ice cube) ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಇದು ನಮ್ಮ ಮಖದ ಹೊಳಪನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.  ಹಾಗೇ ಪಿಗ್ಮೆಂಟೇಶನ್ ಅನ್ನು ಸಹ ತೆಗೆದುಹಾಕುತ್ತದೆ.  ಸುಂದರ ತ್ವಚೆ ಪಡೆದುಕೊಳ್ಳಲು  ತ್ವಚೆಯ ಮೇಲೆ ಐಸ್ ಕ್ಯೂಬ್'ಗಳನ್ನು ಹಚ್ಚುವುದು ಪ್ರಸಿದ್ಧ ಮನೆಮದ್ದು. ಐಸ್ ಕ್ಯೂಬ್ ನಮ್ಮ ಚರ್ಮಕ್ಕೆ ವಿವಿಧ ರೀತಿಯಲ್ಲಿ ಪ್ರಯೋಜನಕಾರಿ. ಕಪ್ಪು ವಲಯಗಳು ಮತ್ತು ಇತರ ಚರ್ಮದ ತೊಂದರೆಗಳಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಅದಲ್ಲದೆ ಮುಖದ ( Face) ಮೇಲಿನ ರಕ್ತ ಪರಿಚಲನೆಯನ್ನು ಸುಗಮವಾಗಿಸುವುದರ ಜತೆ ಸ್ಕಿನ್ ಮೇಲಿನ  ಆಯಿಲಿನೆಸ್ (Oillines) ಅನ್ನು ಕಡಿಮೆ ಮಾಡುತ್ತದೆ. ಜೊತೆಗೆ ಬಿಸಿಲಿನ ಬೇಗೆಯನ್ನು ಶಮನಗೊಳಿಸುವುದು ಮತ್ತು ಮೇಕಪ್ ಗೆ ಒಳ್ಳೆ  ಲುಕ್ ನೀಡುತ್ತದೆ. 

ಆರೋಗ್ಯಕರ ಹೊಳಪು:

Tap to resize

Latest Videos

ಮುಖದ ಮೇಲೆ ಐಸ್ ಕ್ಯೂಬ್ ಉಜ್ಜುವುದರಿಂದ ಆಯಾಸ, ರಕ್ತದ ಹರಿವನ್ನು( Blood circulation) ಸುಧಾರಿಸುತ್ತದೆ ಮತ್ತು  ಮೈಬಣ್ಣಕ್ಕೆ  ಹೊಳಪು ನೀಡುತ್ತದೆ. ಇನ್ನು  ರಕ್ತ ಪರಿಚಲನೆಯಿಂದ ಮುಖಕ್ಕೆ ಆಮ್ಲಜನಕ( Oxygen), ಪೋಷಕಾಂಶಗಳು ಮತ್ತು ಜೀವಸತ್ವಗಳಲ್ಲಿ ಸುಧಾರಣೆ ಕಂಡು ಬಂದು ಮುಖವು ಸುಂದರ ಮತ್ತು ಆರೋಗ್ಯಕರ ಹೊಳಪನ್ನು ಪಡೆಯುತ್ತದೆ. ಹಾಗೆ  ಹೆಚ್ಚು-ಹೆಚ್ಚು  ಮುಖದ ಮೇಲೆ ಐಸ್ ಕ್ಯೂಬ್ ಉಜ್ಜುವುದರಿಂದ ತ್ವಚೆ  ಬಳಸಿದಂತ ಉತ್ಪನ್ನಗಳು ಚರ್ಮದ ಆಳವಾದ ಪದರಗಳನ್ನು ತಲುಪಲು ಹೀರಿಕೊಳ್ಳಲು ಹೆಚ್ಚು  ಸಹಾಯ ಮಾಡುತ್ತದೆ.

ಮೊಡವೆಗಳ ಶಮನ:

ನಿಯಮಿತವಾಗಿ ಐಸ್ ಕ್ಯೂಬ್ ಉಜ್ಜುವುದರಿಂದ ಆಗುವಂತ  ಪ್ರಯೋಜನವೆಂದರೆ ಮೊಡವೆಗಳನ್ನು ಗುಣಪಡಿಸುತ್ತದೆ ಮತ್ತು ಮೊಡವೆಗಳು( Acne) ಆಗದಂತೆ ತಡೆಗಟ್ಟುತ್ತದೆ.  ಮುಖದ ಮೇಲೆ ಐಸ್ ಅನ್ನು ಬಳಸುವುದರಿಂದ  ಐಸ್  ( Ice) ರಕ್ತದ ಹರಿವನ್ನು ಸುಧಾರಿಸಿ ಮುಖದ ಮೇಲಿನ ರಂಧ್ರಗಳನ್ನು ಕುಗ್ಗಿಸುವ ಮೂಲಕ ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೆ ಮೊಡವೆಯಿಂದ ಉಂಟಾಗುವ ಉರಿಯೂತವನ್ನು  ಗುಣಪಡಿಸುತ್ತದೆ. ಅದಲ್ಲದೆ ಹೆಚ್ಚುವರಿ ಮೇದೋಗ್ರಂಥಿಗಳ ಸ್ರಾವ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.

ಪ್ರೈಮರ್ ಆಗಿ ಕಾರ್ಯನಿರ್ವಹಿಸುತ್ತದೆ:

ಮೇಕಪ್ ( Makeup) ಮಾಡುವ ಮೊದಲು ಐಸ್ ಕ್ಯೂಬ್ ಅನ್ನು ಮುಖ ಮತ್ತು ಕುತ್ತಿಗೆಯ ಭಾಗದಲ್ಲಿ ಉಜ್ಜುವುದರಿಂದ, ಮುಖದಲ್ಲಿನ ರಂಧ್ರಗಳನ್ನು( Skin Pores) ಕಡಿಮೆ ಮಾಡಿ ಚರ್ಮವನ್ನು ಬಿಗಿಗೊಳಿಸುತ್ತದೆ. ಇದರಿಂದ ನೈಸರ್ಗಿಕ ಪ್ರೈಮರ್ ಆಗಿ ಐಸ್ ಕ್ಯೂಬ್ ಕಾರ್ಯನಿರ್ವಹಿಸುತ್ತದೆ.

ಕಣ್ಣಿನ ಊತ ಕಡಿಮೆ ಮಾಡುತ್ತದೆ:

ಐಸ್ ಕ್ಯೂಬ್ ಕಣ್ಣಿನ ಊತವನ್ನು( Puffy eyes)  ಕಡಿಮೆ ಮಾಡುತ್ತದೆ. ಗ್ರೀನ್ ಟೀ ಅಥವಾ ಕಾಫಿ ಐಸ್ ಕ್ಯೂಬ್'ಗಳನ್ನು ಊತಕ್ಕೆ ಬಳಸುವುದು ಹೆಚ್ಚು ಪರಿಣಾಮಕಾರಿ. ಇನ್ನು ವಿವಿಧ ಕಾರಣಗಳಿಂದ  ಕಣ್ಣುಗಳ ಉಬ್ಬು ಸಂಭವಿಸಬಹುದು, ಆದರೆ ಸಾಮಾನ್ಯವಾಗಿ ನಿದ್ರೆಯ ಕೊರತೆ ಮತ್ತು ಹೆಚ್ಚು ಲ್ಯಾಪ್ ಟಾಪ್ (Laptop) ಮುಂದೆ ಕುಳಿತುಕೊಳ್ಳುವುದರಿಂದ ಕಣ್ಣಿಗೆ ಆಯಾಸವಾಗುತ್ತದೆ.  ಕಣ್ಣಿನ ಒಳಗಿನ ಮೂಲೆಯಿಂದ ಮೇಲ್ಮಖವಾಗಿ ಹುಬ್ಬಿನ ಕಡೆಗೆ ವೃತ್ತಾಕಾರದಲ್ಲಿ ಐಸ್ ಕ್ಯೂಬ್ ಅನ್ನು ಉಜ್ಜುವುದರಿಂದ ಪ್ರಯೋಜನ ಕಾಣಬಹುದು.

ಇದನ್ನೂ ಓದಿ: 10 ವರ್ಷ ಚಿಕ್ಕವರಾಗಿ ಕಾಣ್ಬೇಕೆಂದ್ರೆ ವಾರಕ್ಕೊಮ್ಮೆ ಊಟ ಬಿಡಿ

ರಂಧ್ರಗಳ ನೋಟ ಕುಗ್ಗಿಸುವಿಕೆ:

ನೀವು ಎಣ್ಣೆಯುಕ್ತ ತ್ವಚೆ( Skin)  ಹೊಂದಿದ್ದರೆ, ಮುಖದ ಮೇಲೆ ಸಾಮಾನ್ಯವಾಗಿ ರಂಧ್ರಗಳು ಕಾಣುತ್ತವೆ. ಈ ರಂಧ್ರವನ್ನು ಶಮನಮಾಡಲು ಪ್ರತಿದಿನ  ಮುಖದ ಮೇಲೆ ಐಸ್ ಕ್ಯೂಬ್'ಗಳನ್ನು ಉಜ್ಜುವುದರಿಂದ ಪರಿಹಾರ ಕಂಡುಕೊಳ್ಳಬಹುದು.  ಐಸ್ ಕ್ಯೂಬ್'ಗಳು ಆ ರಂಧ್ರಗಳಲ್ಲಿ ಅಂಟಿಕೊಂಡಿರುವ ಕೊಳಕು ಮತ್ತು ಇತರ ಕಲ್ಮಶಗಳನ್ನು ತೆಗೆದು ಹಾಕುತ್ತದೆ. ಹಾಗೇ ತ್ವಚೆಯನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ.

ವಯಸ್ಸಾದ ಚಿಹ್ನೆಗಳನ್ನು ಕಡಿಮೆ ಮಾಡುತ್ತದೆ:

ಐಸ್ ಕ್ಯೂಬ್'ಗಳನ್ನು ಮುಖಕ್ಕೆ ಉಜ್ಜುವುದರಿಂದ ಮುಖದ ಮೇಲಿನ ನೆರಿಗೆಗಳು ವಯಸ್ಸಾದ ಚಿಹ್ನೆಗಳಂತಹ ಸಮಸ್ಯೆಗೆ( problem) ಪರಿಹಾರ ಕಂಡುಕೊಳ್ಳಬಹುದು.  ಐಸ್ ಕ್ಯೂಬ್'ಗಳು ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ಹೆಚ್ಚಾಗಿ  ಇವು ರಂಧ್ರಗಳು ಮತ್ತು ಚರ್ಮವನ್ನು ಬಿಗಿಗೊಳಿಸಲು ಸಹ ಸಹಾಯ ಮಾಡುವುದರಿಂದ, ಸುಕ್ಕುಗಳು( Wrinkle) ಮತ್ತು ಸೂಕ್ಷ್ಮ ರೇಖೆಗಳನ್ನು ಕಡಿಮೆ ಮಾಡಲು ಇದು ಉತ್ತಮ ಮಾರ್ಗವಾಗಿದೆ.

ಇದನ್ನೂ ಓದಿ: Beauty Tips: ವಾರಕ್ಕೊಮ್ಮೆ ಉಪ್ಪು ನೀರಿನಲ್ಲಿ ಸ್ನಾನ ಮಾಡಿ ನೋಡಿ

ಒಟ್ಟಿನಲ್ಲಿ ಐಸ್ ಕ್ಯೂಬ್ ನಮ್ಮ ಚರ್ಮದ ಆರೋಗ್ಯಕ್ಕೆ ತುಂಬಾ ಸಹಕಾರಿಯಾಗಿದ್ದು, ಇದರ ಲಾಭ ಪಡೆಯಬಹುದು.

click me!