ಸಂಗಾತಿ ಜೊತೆ ಗಟ್ಟಿ ಸಂಬಂಧ, ನಿಭಾಯಿಸೋದು ಹೇಗೆ?

By Suvarna News  |  First Published Sep 23, 2022, 5:25 PM IST

ಗಂಡ-ಹೆಂಡತಿ ಸಂಬಂಧ ಉತ್ತಮವಾಗಿದ್ದರೆ ಜೀವನ ಸುಂದರವಾಗಿರುತ್ತದೆ. ಸಂಸಾರದ ಹಳಿ ತಪ್ಪಿದರೆ ಬಾಳು ಗೋಳಾಗುತ್ತದೆ. ಅದು ಆಗುವ ಮೊದಲೇ ನಾವು ಎಚ್ಚರಿಕೆಯಿಂದ ಇರಬೇಕು. ಪ್ರೀತಿ ಜೊತೆಗೆ ಕೆಲ ವಿಚಾರಗಳನ್ನು ತಿಳಿದುಕೊಂಡರೆ ನಿಮ್ಮ ಸಂಗಾತಿಯ ಜೊತೆ  ಸುಖ ಜೀವನ ನಡೆಸಬಹುದು.


ಗಂಡ-ಹೆಂಡತಿ ನಡುವಿನ ಸಂಬಂಧಕ್ಕೆ ತುಂಬಾ ಮಹತ್ವವಿದ್ದು, ಪ್ರತಿಯೊಬ್ಬರ ಬಾಳಲ್ಲಿ ಜೀವನ ಸಂಗಾತಿಯ ಪಾತ್ರ ಪ್ರಮುಖವಾಗಿದೆ. ನೂರಾರು ಬಾರಿ ಯೋಚಿಸಿ ಒಬ್ಬರ ಬಾಳಲ್ಲಿ ಪ್ರವೇಶ ಮಾಡುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮೊದ-ಮೊದಲು ಪ್ರೀತಿ ಉಕ್ಕಿ ಹರಿಯುತ್ತಿರುತ್ತದೆ. ರೋಮಿಯೋ ಜೂಲಿಯೆಟ್ ತರ ಇದ್ದವರು ಬಳಿಕ ಹಾವು-ಮುಂಗುಸಿ ತರ ಕಚ್ಚಾಡುತ್ತಾರೆ. ತಮ್ಮ ಸಂಬಂಧ ಅನೋನ್ಯತೆಯಿಂದ ಕೂಡಿರಬೇಕು ಎಂದು ಪ್ರತಿಯೊಬ್ಬರು ಇಷ್ಟಪಡುತ್ತಾರೆ. ಆದರೆ ಅದು ಸುಲಭದ ವಿಚಾರ ಅಲ್ಲ. ಆದರೆ ಸದಾ ಪ್ರೀತಿಯ ಜೊತೆ ಕೆಲವು ಅಂಶಗಳನ್ನು ನೆನಪಿನಲ್ಲಿಟ್ಟುಕೊಂಡರೆ ಗಂಡ-ಹೆಂಡತಿ ಸಂಬಂಧ ಗಟ್ಟಿಯಾಗಿ ಉಳಿಯುತ್ತದೆ.

ಸಂಗಾತಿಯ ಭಾವನೆ ಗೌರವಿಸಿ.
ಪ್ರತಿಯೊಂದು ಸಂಬಂಧಗಳಲ್ಲಿ ಭಾವನೆಗಳು(Feelings) ತುಂಬಾ ಮುಖ್ಯ. ಅದರಲ್ಲಿ ದಂಪತಿಯ ನಡುವೆ ಇದು ತುಂಬಾ ಮಹತ್ವದ ಪಾತ್ರ ವಹಿಸುತ್ತದೆ. ನಿಮ್ಮ ಸಂಗಾತಿಯ ಭಾವನೆಗಳನ್ನು ಗೌರವಿಸುವುದನ್ನು ಮೊದಲು ಕಲಿಯಬೇಕು. ಒಂದು ವೇಳೆ ಅವರ ಭಾವನೆಯನ್ನು ನೋಯಿಸಿದರೆ ತಕ್ಷಣ ಕ್ಷಮೆ(Sorry) ಕೇಳಿ ಬಿಡಿ. ಹಾಗೂ ಯಾವುದೇ ಸಂದರ್ಭದಲ್ಲಿಯೂ ಸಹ ನಿಮ್ಮ ಸಂಗಾತಿಯೊಂದಿಗೆ ಪರವಾಗಿ ನಿಲ್ಲಿ, ಎಂದಿಗೂ ಅವರನ್ನು ಬಿಟ್ಟುಕೊಡಬೇಡಿ. ಇದರಿಂದ ನಿಮ್ಮ ಸಂಬಂಧವು (Relationship) ಮತ್ತಷ್ಟು ಬಲಗೊಂಡು ಪರಸ್ಪರ ಪ್ರೀತಿ(Love)ಹೆಚ್ಚಾಗುತ್ತದೆ.

ಗಂಡ ಹೆಂಡತಿ ವಯಸ್ಸಿನ ಅಂತರ ಎಷ್ಟಿದ್ದರೆ ಚೆಂದ?

Tap to resize

Latest Videos

ಉತ್ತಮ ಸ್ನೇಹಿತರಾಗಿ
ನಿಮ್ಮ ಜೀವನದಲ್ಲಿ ನಿಮ್ಮ ಸಂಗಾತಿಯು ಪ್ರಮುಖ ಪಾತ್ರ ವಹಿಸುತ್ತಾರೆ. ನಿಮ್ಮ ಹೊಸ ಬಾಳಿನ ಹಾದಿಯಲ್ಲಿ ಅವರು ಸದಾ ಜೊತೆ ನಡೆಯುತ್ತಾರೆ. ಹೀಗಾಗಿ ಅವರಿಗೆ ತುಂಬಾ ಪ್ರಾಮುಖ್ಯತೆ ಕೊಡಿ.  ಅವರೊಂದಿಗೆ ಸ್ನೇಹಿತರಂತೆ (Friends) ಇದ್ದು, ನಿಮ್ಮ ಪ್ರತಿಯೊಂದು ಸಣ್ಣ-ಪುಟ್ಟ ವಿಚಾರಗಳನ್ನು ಅವರೊಂದಿಗೆ ಹಂಚಿಕೊಳ್ಳಿ. ಸಂತೋಷ ಮತ್ತು ದುಃಖವನ್ನು ಹಂಚಿಕೊಳ್ಳುತ್ತಿರಿ. ನಿಮ್ಮ ಚಿಂತೆಗೆ ಕಾರಣವಾದ ವಿಷಯಗಳನ್ನೂ ಸಹ ಅವರಿಗೆ ತಿಳಿಸಿ. ಇದು ನಿಮ್ಮ ಒತ್ತಡವನ್ನು (Stress)ಕಡಿಮೆ ಮಾಡುವುದರ ಜತೆ ಮತ್ತು ನೀವು ಅವರನ್ನು ಎಷ್ಟು ನಂಬಿದ್ದೀರಿ ಎಂದು ತಿಳಿಸುತ್ತದೆ.

ಪರಸ್ಪರ ನಂಬಿಕೆ (Trust) ಇರಲಿ
ಯಾವುದೇ ಸಂಬಂಧಗಳು ಗಟ್ಟಿಯಾಗಿರಬೇಕಾದರೆ ನಂಬಿಕೆ (Trust) ತುಂಬಾ ಮುಖ್ಯ. ಒಬ್ಬರು ಇನ್ನೊಬ್ಬರನ್ನು ನಂಬಿ ನಡೆದರೆ ಆರೋಗ್ಯಕರ (Healthy) ಸಂಬಂಧ ಉಳಿಯುತ್ತದೆ. ನಿಮ್ಮ ಸಂಗಾತಿಯು ಮುಕ್ತವಾಗಿ ಇರಲು ಬಿಡಿ. ಹಾಗೂ ನೀವು ಕೂಡ ಅವರೊಂದಿಗೆ ಮುಕ್ತವಾಗಿ ಮಾತನಾಡಿ(Open communication). ಏನೇ ವಿಚಾರ ಇದ್ದರೂ ಮೌನವಾಗಿ ಇರದೆ, ನೇರವಾಗಿ ಮಾತನಾಡಿ. ಪ್ರತಿಯೊಂದು ವಿಚಾರಲ್ಲಿಯೂ ಅವರನ್ನು ಬೆಂಬಲಿಸಿ, ಯಾವುದೇ ಕಾರಣಕ್ಕೂ ಇಬ್ಬರ ನಡುವೆ ಅನುಮಾನಕ್ಕೆ ಹಾದಿ ಮಾಡಿಕೊಡಬೇಡಿ. ಏನೇ ಭಿನ್ನಾಭಿಪ್ರಾಯ ಇದ್ದರೂ ಗೌರವಯುತವಾಗಿ ಮಾತನಾಡುವ ಮೂಲಕ ಮತ್ತು ಪರಸ್ಪರ ಅರ್ಥಮಾಡಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಿ.

ಟ್ರಾಫಿಕ್ ಕಿರಿ ಕಿರಿ, ಟೆನ್ಷನ್, ಸರಸಕ್ಕಿಲ್ಲ ದಾಂಪತ್ಯದಲ್ಲಿ ಜಾಗ!

ಉತ್ತಮ ಸಂವಹನ ರೂಢಿಸಿಕೊಳ್ಳಿ
ಗಂಡ-ಹೆಂಡತಿ ನಡುವೆ ಉತ್ತಮ ಸಂವಹನ (Good Communication) ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಮ್ಮ ಬೇಕು, ಬೇಡಗಳು, ಇಷ್ಟ, ಕಷ್ಟಗಳನ್ನು ಅವರಿಗೆ ಹೇಗೆ ತಿಳಿಸುವುದು ಎಂಬುದು ನಮ್ಮ ಕೈಯಲ್ಲಿದೆ. ನೀವು ಹೇಳಲು ಹೊರಟಿರುವ ವಿಚಾರವನ್ನು ಹೇಗೆ ಹೇಳುತ್ತೀರಿ ಎಂಬುದು ಮುಖ್ಯವಾಗುತ್ತದೆ. ನಿಮ್ಮ ಧಾಟಿ, ಮನಸ್ಸು ಹಾಳು ಮಾಡುವಂತಿದ್ದರೆ ಸಂಬಂಧದಲ್ಲಿ ಬಿರುಕು, ಭಿನ್ನಾಭಿಪ್ರಾಯ ಮೂಡಬಹುದು. ಹಾಗಾಗಿ ಪ್ರೀತಿಯಿಂದ ಮಾತನಾಡಿ. ಅದಲ್ಲದೆ ನಿಮ್ಮ ಸಂಗಾತಿಯೊಂದಿಗೆ ಪ್ರತಿಯೊಂದು ವಿಷಯದಲ್ಲೂ ಮನಸ್ಸು ಬಿಚ್ಚಿ ಮಾತನಾಡಿದರೆ ಸಂಬಂಧ ಮುರಿದು ಬಿಳುವ ಸಾಧ್ಯತೆಗಳೇ ಇರುವುದಿಲ್ಲ. ಮೊಬೈಲ್ ಕೈಯಲ್ಲಿ ಹಿಡಿದುಕೊಂಡರೆ ಸುತ್ತಲಿನ ಜಗತ್ತಿನ ಅರಿವೇ ಇಲ್ಲದಂತೆ ಇರುವುದು ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಇದ್ದ ಸಮಯದಲ್ಲಿ ನಿಮ್ಮ ಸಂಗಾತಿಗೆ ಸಮಯ ಕೊಡಿ.

ಒಟ್ಟಾರೆ ಹೇಳುವುದಾದರೆ ಏನೇ ಸಣ್ಣ-ಪುಟ್ಟ ಸಮಸ್ಯೆ ಇದ್ದರೂ ಅದು ನಿಮ್ಮ ನಡುವೆ ಪರಿಹರಿಸಿಕೊಂಡು ಜೀವನ ಸಾಗಿಸಬೇಕು. ಯಾವುದಕ್ಕೂ ಸಿಡುಕದೇ ಪ್ರೀತಿಯಿಂದ (Love) ಇದ್ದಾಗ ಇಬ್ಬರ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ.

click me!