ಪ್ಲಾಸ್ಟಿಕ್ ಬಾಟಲ್‌ನಲ್ಲಿ ನೀರು ಕುಡಿಯೋದು ಅಪಾಯ, ಅದ್ರಲ್ಲೂ ಹೆಣ್ಮಕ್ಕಳು ಈ ಅಭ್ಯಾಸ ಬಿಟ್ಟರೊಳಿತು!

By Suvarna News  |  First Published Feb 23, 2023, 1:09 PM IST

ಪ್ಲಾಸ್ಟಿಕ್ ಯಾರಿಗೂ ಒಳ್ಳೆಯದಲ್ಲ. ಇದ್ರಿಂದ ಅನೇಕ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಮಹಿಳೆಯರು ಪ್ಲಾಸ್ಟಿಕ್ ಬಾಟಲ್ ನಿಂದ ದೂರವಿರಬೇಕು ಎನ್ನುತ್ತದೆ ಸಂಶೋಧನೆ. ಪ್ಲಾಸ್ಟಿಕ್ ಬಾಟಲ್ ನಲ್ಲಿ ನೀರು ಕುಡಿಯುವ ಮಹಿಳೆಯರಿಗೆ ಮಧುಮೇಹ ಕಾಡೋದು ನಿಶ್ಚಿತವಂತೆ. 
 


ಪ್ಲಾಸ್ಟಿಕ್ ಎಂಬ ರಾಕ್ಷಸ ತನ್ನ ಭದ್ರ ಮುಷ್ಟಿಯಲ್ಲಿ ಇಡೀ ದೇಶವನ್ನು ಹಿಡಿದಿದ್ದಾನೆ. ಪ್ಲಾಸ್ಟಿಕ್ ನಿಂದ ಉಂಟಾಗುತ್ತಿರುವ ದುಷ್ಟಪರಿಣಾಮಗಳು ಒಂದೆರಡಲ್ಲ. ಪ್ಲಾಸ್ಟಿಕ್ ತ್ಯಾಜ್ಯಗಳಿಂದ ನೀರು, ನೆಲ ಗಾಳಿ ಎಲ್ಲವೂ ಈಗಾಗಲೇ ಕಲುಷಿತಗೊಂಡಿದೆ. ದೇಶ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸುವ ಪಣ ತೊಟ್ಟರೂ ಅದರ ಭದ್ರ ಸಂಕೋಲೆಯಿಂದ ಬಿಡಿಸಿಕೊಳ್ಳಲು ಆಗುತ್ತಿಲ್ಲ. ಪ್ಲಾಸ್ಟಿಕ್ ನಲ್ಲಿರುವ ಹಾನಿಕಾರಕ ಕೆಮಿಕಲ್ ಗಳ ಬಗ್ಗೆ ತಿಳಿದಿದ್ದರೂ ಜನರ ಜೀವನದಲ್ಲಿ ಅದು ಹಾಸುಹೊಕ್ಕಾಗಿದೆ.

ಪ್ಲಾಸ್ಟಿಕ್ (Plastic) ಅನ್ನು ನಾವು ನಿತ್ಯದ ಎಲ್ಲ ಕೆಲಸಗಳಲ್ಲೂ ಬಳಸ್ತೇವೆ. ಕೆಲವೊಂದು ಮರುಬಳಕೆಯಾದರೆ ಇನ್ನು ಕೆಲವಷ್ಟು ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ ಗಳಾಗಿವೆ. ವೃತ್ತಿನಿರತ ಮಹಿಳೆ (Woman) , ಪುರುಷ, ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ಎಲ್ಲರೂ ಪ್ಲಾಸ್ಟಿಕ್ ಬಾಟಲ್, ಡಬ್ಬಗಳನ್ನು ಬಳಸುತ್ತಾರೆ. ಇಂತಹ ಪ್ಲಾಸ್ಟಿಕ್ ಬಾಟಲ್ (Bottle) ಗಳು ಎಲ್ಲರ ಆರೋಗ್ಯಕ್ಕೂ ಹಾನಿಕರ. ಅದರಲ್ಲೂ ಮಹಿಳೆಯರಿಗಂತೂ ಇದು ಅನೇಕ ರೀತಿಯಲ್ಲಿ ದುಷ್ಟಪರಿಣಾಮ ಬೀರುತ್ತದೆ. ಒಂದು ಅಧ್ಯಯನದ ಪ್ರಕಾರ ಮಹಿಳೆಯರು ನೀರು ಕುಡಿಯಲು ಪ್ಲಾಸ್ಟಿಕ್ ಬಾಟಲ್ ಗಳನ್ನು ಬಳಸಿದರೆ ಅದರಿಂದ ಮಧುಮೇಹ ಖಾಯಿಲೆ ಬರುತ್ತದೆ ಎಂಬುದು ತಿಳಿದುಬಂದಿದೆ.

Latest Videos

undefined

Fertility Food; ಗರ್ಭ ಧರಿಸಲು ಸಮಸ್ಯೆಯಿದ್ದರೆ ಅಂಡಾಣುವಿನ ಗುಣಮಟ್ಟ ಹೆಚ್ಚಿಸೋ ಈ ಆಹಾರ ಸೇವಿಸಿ

ಮನೆಯಿಂದ ಹೊರಗಡೆ ಹೋಗುವ ಪ್ರತಿಯೊಬ್ಬ ಮಹಿಳೆಯ ಬಾಗ್ ನಲ್ಲೂ ಪ್ಲಾಸ್ಟಿಕ್ ನೀರಿನ ಬಾಟಲ್ ಇದ್ದೇ ಇರುತ್ತೆ. ಈಗಾಗಲೇ ಜನರ ಅನಿಯಮಿತ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರದಿಂದ ಅನೇಕ ರೋಗಗಳು ಅವರನ್ನು ಮುತ್ತುತ್ತಿವೆ. ಇಂತಹ ಸಮಯದಲ್ಲಿ ಮಹಿಳೆಯರು ಈಗ ಹೆಚ್ಚು ಹೆಚ್ಚು ಪ್ಲಾಸ್ಟಿಕ್ ಬಾಟಲ್ ಗಳಿಂದ ನೀರು ಕುಡಿಯುವುದನ್ನು ಇಷ್ಟಪಡುತ್ತಾರೆ. ಪರಿಣಾಮವಾಗಿ ಮಹಿಳೆಯರು ಟೈಪ್ 2 ಡಯಾಬಿಟೀಸ್ ನಿಂದ ಬಳಲುವ ಸಂಭವ ಹೆಚ್ಚಾಗಿದೆ.

ಪ್ಲಾಸ್ಟಿಕ್ ಬಾಟಲ್ ನಲ್ಲಿ ಕೇವಲ ನೀರು ಕುಡಿಯುವುದರಿಂದ ಏನಾಗುತ್ತದೆ ಎಂಬ ಅಸಡ್ಡೆ ಬೇಡ. ಒಂದು ರಿಸರ್ಚ್ ನ ಪ್ರಕಾರ ಪ್ಲಾಸ್ಟಿಕ್ ಬಾಟಲಿಯ ನೀರು ಕುಡಿಯುವುದರಿಂದಲೇ ಮಹಿಳೆಯರು ಮಧುಮೇಹ ಖಾಯಿಲೆಗೆ ತುತ್ತಾಗುತ್ತಿದ್ದಾರೆ. ಸಧ್ಯಕ್ಕೆ ಭಾರತದಲ್ಲಿ ಸುಮಾರು ಎಂಟು ಕೋಟಿ ಜನರು ಇದಕ್ಕೆ ಬಲಿಯಾಗಿದ್ದಾರೆ. 2045ರ ಸುಮಾರಿಗೆ ಇದು ಹದಿಮೂರು ಕೋಟಿಗೆ ಏರಲಿದೆ ಎಂದು ಅಧ್ಯಯನ ಹೇಳಿದೆ.

ರಿಸರ್ಚ್ ಎನು ಹೇಳುತ್ತೆ ನೋಡಿ :  ಪ್ಲಾಸ್ಟಿಕ್ ಬಾಟಲಿಗಳಲ್ಲಿ ಥಾಲೆಟ್ ( Phthalates) ರಾಸಾಯನಿಕಗಳು ಇರುತ್ತವೆ. ಇದನ್ನು ಬಳಸುವುದರಿಂದ ಮಹಿಳೆಯರಲ್ಲಿ ಟೈಪ್ 2 ಮಧುಮೇಹದ ಅಪಾಯವನ್ನು ದುಪ್ಪಟ್ಟುಗೊಳಿಸುತ್ತದೆ. ಹಾಗಾಗಿ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಕುಡಿಯುವ ಮಹಿಳೆಯರಿಗೆ ಮಧುಮೇಹ ಕಟ್ಟಿಟ್ಟ ಬುತ್ತಿ ಎಂದು ಅಧ್ಯಯನ ಹೇಳುತ್ತದೆ. ಪ್ಲಾಸ್ಟಿಕ್ ನಲ್ಲಿ ಇರುವ ಈ ರಾಸಾಯನಿಕ ಮಹಿಳೆಯರ ಆರೋಗ್ಯದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಹಾಗಾಗಿ ಮಹಿಳೆಯರು ಪ್ಲಾಸ್ಟಿಕ್ ಬಾಟಲಿ ಮತ್ತು ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆಮಾಡಬೇಕು.

ಥಾಲೆಟ್ ಕೆಮಿಕಲ್ ಎಂದರೇನು? : ಗ್ಲೋಬಲ್ ಡಯಾಬಿಟಿಕ್ ಕಮ್ಯುನಿಟಿಯ ವೆಬ್ ಸೈಟ್ ಪ್ರಕಾರ ಮಹಿಳೆಯರು ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸುವುದರಿಂದ ಅಂತಃಸ್ರಾವಕ ಗ್ರಂಥಿಯಿಂದ ಬಿಡುಗಡೆಯಾಗುವ ಹಾರ್ಮೋನುಗಳನ್ನು ಥಾಲೆಟ್ ರಾಸಾಯನಿಕ ತಡೆಹಿಡಿಯುತ್ತವೆ. ಇದರಿಂದ ದೇಹದ ಕಾರ್ಯಗಳಲ್ಲಿ ಉತ್ಪಾದನೆ ಮತ್ತು ಸ್ರವಿಸುವಿಕೆಯ ಕಾರ್ಯಗಳು ಸ್ಥಗಿತವಾಗುತ್ತವೆ. ಗ್ಲೋಬಲ್ ಡಯಾಬಿಟಿಕ್ ಕಮ್ಯುನಿಟಿ ಅನೇಕ ದೇಶಗಳ ಸುಮಾರು 1300 ಮಹಿಳೆಯರಲ್ಲಿ ಸತತ ಆರು ವರ್ಷಗಳ ಕಾಲ ಸಂಶೋಧನೆ ನಡೆಸಿತು. ಈ ಸಂಶೋಧನೆಯ ಪ್ರಕಾರ ಥಾಲೆಟ್ ರಾಸಾಯನಿಕದಿಂದ ಪ್ರತಿಶತ 30 ರಿಂದ 63 ಮಹಿಳೆಯರು ಮಧುಮೇಹ ಖಾಯಿಲೆಗೆ ಒಳಗಾಗಿದ್ದಾರೆ.

7 ನೇ ತಿಂಗಳಲ್ಲಿ ಈ ಕೆಲಸ ಮಾಡಿದ್ರೆ ನಾರ್ಮಲ್ ಡೆಲಿವರಿ ಸಾಧ್ಯತೆ 70%

ಪ್ಲಾಸ್ಟಿಕ್ ಉತ್ಪನ್ನಗಳಲ್ಲಿರುವ ರಾಸಾಯನಿಕಗಳಿಂದ ಮನುಷ್ಯನ ಚಯಾಪಚಯ ಕ್ರಿಯೆಗೆ ತೊಡಕಾಗುತ್ತದೆ. ದೇಹದಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚುತ್ತದೆ. ಬಾಟಲಿಗಳಲ್ಲಿರುವ ರಾಸಾಯನಿಕದಿಂದ ತೂಕ ಹೆಚ್ಚಾಗುವುದು, ಕ್ಯಾನ್ಸರ್ ಮತ್ತು ಸ್ಥೂಲಕಾಯದದ ಸಮಸ್ಯೆ ಕೂಡ ಎದುರಾಗಬಹುದು. ಹೀಗೆ ಮನುಕುಲಕ್ಕೆ ಮಾರಕವಾಗಿರುವ, ನಮ್ಮ ಆಹಾರ ಚಕ್ರದೊಳಗೆ ಸಲೀಸಾಗಿ ಬೆರೆತುಹೋಗಿರುವ ಇಂತಹ ವಿಷಕಾರಿ ಪ್ಲಾಸ್ಟಿಕ್ ಅನ್ನು ನಮ್ಮ ಜೀವನಶೈಲಿಯಿಂದ ತೆಗೆದುಹಾಕುವ ದೃಢಸಂಕಲ್ಪ ಮಾಡಬೇಕಿದೆ.
 

click me!