ಮದ್ವೆ ಮಂಟಪಕ್ಕೆ ಬರೋ ಮೊದ್ಲು ತಾಯಿ ಹಾಲು ಕುಡೀತಿದ್ದ ವರ, ಬೆಚ್ಚಿಬಿದ್ದ ವಧು!

Published : Feb 23, 2023, 01:00 PM ISTUpdated : Feb 23, 2023, 01:13 PM IST
ಮದ್ವೆ ಮಂಟಪಕ್ಕೆ ಬರೋ ಮೊದ್ಲು ತಾಯಿ ಹಾಲು ಕುಡೀತಿದ್ದ ವರ, ಬೆಚ್ಚಿಬಿದ್ದ ವಧು!

ಸಾರಾಂಶ

ತಾಯಿ ಹಾಲು ಮಗುವಿನ ಆರೋಗ್ಯಕ್ಕೆ ಅತ್ಯುತ್ತಮ. ಹೀಗಾಗಿ ಚಿಕ್ಕಂದಿನಲ್ಲಿ ಎಲ್ಲರೂ ತಾಯಿಯ ಎದೆಹಾಲು ಕುಡಿದು ಬೆಳೆಯುತ್ತಾರೆ. ಆದ್ರೆ ಮದ್ವೆ ವಯಸ್ಸಿಗೆ ಬಂದ ಮೇಲೂ ತಾಯಿ ಹಾಲು ಕುಡಿಯೋದು ಅಂದ್ರೆ..? ನಂಬೋಕೆ ಕಷ್ಟ ಅಲ್ವಾ..ಆದ್ರೆ ಇಲ್ಲೊಂದೆಡೆ ಇಂಥಾ ಘಟನೆ ನಡೆದಿದೆ.

ಮದುವೆ ಎಂಬುದು ಖುಷಿಯ ದಿನವಾಗಿದೆ. ಆದ್ರೆ ಕೆಲವೊಮ್ಮೆ ಯಾರ್ಯಾರೋ ಮಾಡೋ ಎಡವಟ್ಟಿನಿಂದಾಗಿ ಇದು ಅತ್ಯಂತ ಬೇಸರದ ದಿನವಾಗಿ ಬದಲಾಗುತ್ತದೆ. ಮದ್ವೆ ದಿನಾನೇ ಮೋಸ ಹೋಗಿರುವುದನ್ನು ತಿಳಿದುಕೊಂಡಿರೋ ಅದೆಷ್ಟೋ ಹುಡುಗ-ಹುಡುಗಿಯರಿದ್ದಾರೆ. ಕೊನೆಯ ಕ್ಷಣದಲ್ಲಿ ಅವರಿಗೆ ಹುಡುಗನ ಅಥವಾ ಹುಡುಗಿಯ ಇನ್ನೊಂದು ಸಂಬಂಧದ ಬಗ್ಗೆ ತಿಳಿಯುತ್ತದೆ. ಈ ಸಂದರ್ಭದಲ್ಲಿ ಮದುವೆಗಾಗಿ ಎಲ್ಲಾ ಸಿದ್ಧತೆ ಮಾಡಿದ್ದರೂ ಮದುವೆಯನ್ನು ನಿಲ್ಲಿಸಬೇಕಾಗುತ್ತದೆ. ಹಾಗೆಯೇ ಇಲ್ಲೊಬ್ಬಳು ಯುವತಿ, ಮದುವೆ ಮಂಟಪದಲ್ಲಿದ್ದ ಕೊನೆಯ ಕ್ಷಣದಲ್ಲಿ ತಾನು ಮದುವೆಯಾಗುವ ಹುಡುಗನ ಬಗ್ಗೆ ದೊಡ್ಡ ರಹಸ್ಯವನ್ನು ತಿಳಿದುಕೊಂಡಿದ್ದಾಳೆ.

ಮದುವೆಗೆ ಕೆಲವೇ ಕ್ಷಣಗಳ ಮೊದಲು ಬಯಲಾಯ್ತು ಹುಡುಗನ ರಹಸ್ಯ
ದಾಂಪತ್ಯ (Married life) ಅನ್ನೋದು ಜೀವನಪೂರ್ತಿ ಜೊತೆಯಾಗಿರೋ ವಾಗ್ದಾನ. ಹೀಗಾಗಿಯೇ ಮದುವೆಯಾಗೋ ಮೊದಲು ಹುಡುಗ-ಹುಡುಗಿಯ ಬಗ್ಗೆ ಎಲ್ಲಾ ವಿಚಾರವನ್ನು ತಿಳಿದುಕೊಳ್ಳುತ್ತಾರೆ. ಕುಟುಂಬ, ಸ್ನೇಹಿತರು, ಹವ್ಯಾಸಗಳು, ಅವರ ಹಿಂದಿನ ಜೀವನ ಹೇಗಿತ್ತು ಮೊದಲಾದ ವಿಚಾರಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ಹೀಗಿದ್ದೂ ಕೆಲವು ವಿಚಾರಗಳು ರಹಸ್ಯ (Secret)ವಾಗಿಯೇ ಉಳಿಯುತ್ತವೆ. ಮದುವೆಯಾಗುವ ಕೊನೆಯ ಕ್ಷಣದಲ್ಲಿ ಕೆಲವೊಂದು ವಿಚಾರಗಳು ಬಹಿರಂಗಗೊಂಡರೆ, ಇನ್ನು ಕೆಲವೊಮ್ಮೆ ಮದುವೆಯಾದ ನಂತರ ಹುಡುಗ-ಹುಡುಗಿಯ ಬಗ್ಗೆ ಕೆಲವೊಂದು ರಹಸ್ಯಗಳು ಬಯಲಾಗುತ್ತವೆ. ಹಾಗೆಯೇ ಇಲ್ಲೊಂದೆಡೆ ಇನ್ನೇನು ಮದುವೆ ನಡೆದೇ ಹೋಯ್ತು ಅನ್ನೋ ಹೊತ್ತಿಗೆ ಹುಡುಗಿಗೆ, ಹುಡುಗನ ಕುರಿತಾದ ಅತೀ ದೊಡ್ಡ ರಹಸ್ಯ ತಿಳಿದುಬಂದಿದ್ದು ಶಾಕ್ ಆಗಿದೆ.

ಪಟಾಕಿ ಸದ್ದಿಗೆ ಬೆಚ್ಚಿಬಿದ್ದ ವರ, ಏನಪ್ಪಾ ನಿನ್ ಅವಸ್ಥೆ ಅಂತ ಬಿದ್ದೂ ಬಿದ್ದೂ ನಕ್ಕ ಮಂದಿ

ವೆಡ್ಡಿಂಗ್ ಪ್ಲಾನರ್‌ ಒಬ್ಬರು ಸೋಷಿಯಲ್ ಮೀಡಿಯಾದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಯುಕೆಯಲ್ಲಿ ವೃತ್ತಿಪರ ವೆಡ್ಡಿಂಗ್ ಪ್ಲಾನರ್ ಆಗಿರುವ ಜಾರ್ಜಿ ಮಿಚೆಲ್, ತನ್ನ ಕೊಲೀಗ್ ಜೆನ್ನಿ ಎಂಬವರು ಹಂಚಿಕೊಂಡಿರುವ ಅನುಭವದ (Experience) ಬಗ್ಗೆ ಹೇಳಿಕೊಂಡಿದ್ದಾರೆ. ಈ ವಿಷಯ ಕೇವಲ ವಧುವಿಗೆ (Bride) ಮಾತ್ರವಲ್ಲ ಮನೆ ಮಂದಿ, ಸಂಬಂಧಿಕರನ್ನೂ ಯಾವ ರೀತಿ ದಿಗ್ಭ್ರಮೆಗೊಳಿಸಿತು ಎಂಬುದನ್ನು ವಿವರಿಸಿದ್ದಾರೆ.

ತಾಯಿ ಹಾಲನ್ನು ಕುಡಿಯುತ್ತಿದ್ದನಂತೆ ವರ, ಪೋಸ್ಟ್‌ ವೈರಲ್
ಮದುವೆಗೆ ಕೆಲವೇ ಕ್ಷಣಗಳ ಮೊದಲು ವರ, ತನ್ನ ತಾಯಿಯ ಎದೆಹಾಲು (Breastmilk) ಕುಡಿಯುತ್ತಿದ್ದದ್ದನ್ನು ವೆಡ್ಡಿಂಗ್ ಪ್ಲಾನರ್ ಗಮನಿಸಿದರು. ಮೇಕಪ್ ಆರ್ಟಿಸ್ಟ್ ಆಗಿರುವ ಜೆನ್ನಿ ವಧುವಿನ ಮೇಕಪ್‌, ಹೇರ್‌ ಸ್ಟೈಲ್‌ ಮಾಡಿಯಾದ ಬಳಿಕ ವಾಶ್‌ರೂಮ್‌ಗೆ ತೆರಳಿದರು. ಈ ಸಂದರ್ಭದಲ್ಲಿ ವರ, ತಾಯಿಯ ಹಾಲನ್ನು ಕುಡಿಯುತ್ತಿರುವುದನ್ನು ಗಮನಿಸಿ ಬೆಚ್ಚಿಬಿದ್ದರು. ಆ ನಂತರ ವಧು ಹಾಗೂ ಇತರರು ಈ ಬಗ್ಗೆ ತಿಳಿದು ಗಾಬರಿಗೊಂಡರು. ತಕ್ಷಣವೇ ಮದುವೆಯನ್ನು ನಿಲ್ಲಿಸಲಾಯಿತು ಎಂದು ತಿಳಿದುಬಂದಿದೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪೋಸ್ಟ್‌ಗೆ ಜನರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ವಿಧಿಯೇ ಎಷ್ಟು ಕ್ರೂರ..ಕಾಲಿಲ್ಲದವನ ಬಾಳಿಗೆ ಕಣ್ಣಾದಳು, ಕೈ ಬಿಟ್ಟು ಹೊರಟೇ ಹೋದ!

ಮದುವೆಯಾಗುವ ವಯಸ್ಸಿನಲ್ಲಿ ತಾಯಿಯ ಹಾಲು ಕುಡಿಯುವುದೇ ಎಂದು ಹಲವರು ಅಸಹ್ಯಪಟ್ಟುಕೊಂಡಿದ್ದಾರೆ. ಇನ್ನು ಕೆಲವರು 'ಇದಕ್ಕಿಂತ ವರನಿಗೆ ಬೇರೆ ಹುಡುಗಿಯ ಜೊತೆ ಸಂಬಂಧವಿದ್ದರೂ ಪರವಾಗಿರಲ್ಲಿಲ್ಲ' ಎಂದಿದ್ದಾರೆ. ಮತ್ತೆ ಕೆಲವರು 'ಆ ತಾಯಿಯ ಎದೆಯಲ್ಲಿ ಯಾಕೆ ಇನ್ನೂ ಹಾಲಿದೆ' ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬ ಬಳಕೆದಾರರು 'ಈತ, ಮಮ್ಮೀಕಾ ಬಾಯ್‌ ಎಂಬ ವಿಚಾರವನ್ನು ಮತ್ತೊಂದು ಲೆವೆಲ್‌ಗೆ ಕೊಂಡೊಯ್ದಿದ್ದಾನೆ' ಎಂದಿದ್ದಾರೆ. ಮತ್ತೊಬ್ಬರು 'ನಾನಾದರೆ ತಕ್ಷಣ ಮದುವೆ ಮಂಟಪದಿಂದ ಓಡಿ ಹೋಗುತ್ತಿದೆ' ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆ ಹುಡುಗನಲ್ಲಿ ಈ ಗುಣಗಳಿವೆಯಾ? ಮದ್ವೆಯಾಗಲು ಓಕೆ ಹೇಳ್ಬಹುದು ನೋಡಿ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಟಿಹಾರ್ ಜಂಕ್ಷನ್‌ನಲ್ಲಿ ಮಹಿಳೆಯ ಭಯಾನಕ ಅನುಭವ: 30-40 ಪುರುಷರು ನುಗ್ಗಲು ಯತ್ನ, ಶೌಚಾಲಯದಲ್ಲಿ ಸಿಲುಕಿದ ಮಹಿಳೆ!
ಈಕೆಯ ಮನೆ ಮುಖೇಶ್‌ ಅಂಬಾನಿ ಮನೆಗಿಂತ 62 ಪಟ್ಟು ದೊಡ್ಡದು! ಆದ್ರೂ ಬಸ್‌ನಲ್ಲಿ ಓಡಾಟ!