ವಯಸ್ಸಿನ್ನೂ 35, ಆಗಲೇ ಮುಟ್ಟು ನಿಂತಾಯ್ತು! ಏಕೆ ಹೆಚ್ಚುತ್ತಿದೆ ಈ ಟ್ರೆಂಡ್?

By Suvarna News  |  First Published Feb 23, 2023, 11:38 AM IST

ಪ್ರತಿ ತಿಂಗಳು ಮೂರ್ನಾಲ್ಕು ದಿನ ನೋವು, ಮಾನಸಿಕ ಹಿಂಸೆ ಅನುಭವಿಸಿ ಮಹಿಳೆ ನೊಂದಿರುತ್ತಾಳೆ. ಇದ್ರಿಂದ ಮುಕ್ತಿ ಪಡೆಯಲು ಅನೇಕ ಮಹಿಳೆಯರು ಬಯಸ್ತಾರೆ. ಅನೇಕ ಕಾರಣಕ್ಕೆ ಈಗ ಮಹಿಳೆಯರು ಮುಟ್ಟು ನಿಗ್ರಹಿಸುವ ಕೆಲಸಕ್ಕೆ ಮುಂದಾಗಿದ್ದಾರೆ. 
 


ಆರೋಗ್ಯವಂತ ಮಹಿಳೆ ಸುಮಾರು 40 ವರ್ಷಗಳ ಕಾಲ ಪ್ರತಿ ತಿಂಗಳು ಮುಟ್ಟನ್ನು ಅನುಭವಿಸ್ತಾಳೆ. ಮುಟ್ಟಿನಿಂದಾಗಿ ಆಕೆಯ ಸಂತಾನೋತ್ಪತ್ತಿ ಹಾರ್ಮೋನುಗಳಲ್ಲಿ ಏರಿಳಿತಗಳಾಗುತ್ತವೆ. ಇದು ಆಕೆಯ ಶಾರೀರಿಕ ಮತ್ತು ಮಾನಸಿಕ ಆರೋಗ್ಯದ ಮೇಲೂ ಆಗುತ್ತದೆ. ಕೆಲವರಿಗೆ ಹೊಟ್ಟೆ ನೋವು ಕಾಣಿಸಿಕೊಂಡ್ರೆ ಮತ್ತೆ ಕೆಲವರಿಗೆ ಸೊಂಟ, ಕಾಲು ನೋವು ಕಾಡುತ್ತದೆ. ಪ್ರತಿ ತಿಂಗಳು ಈ ಸಮಸ್ಯೆ ಕಾಡೋದ್ರಿಂದ ಜನರು ಇದನ್ನು ಹೆಚ್ಚು ಗಂಭೀರವಾಗಿ ಪರಿಗಣಿಸೋದಿಲ್ಲ. ಇದೇ ಕಾರಣಕ್ಕೆ ಇತ್ತೀಚಿಗೆ ಮಹಿಳೆಯರು  ಮೆನ್ಸ್ಟ್ರುವಲ್ ಸಪ್ರೇಶನ್ ಮೊರೆ ಹೋಗ್ತಿದ್ದಾರೆ. ನಾವಿಂದು ಮೆನ್ಸ್ಟ್ರುವಲ್ ಸಪ್ರೇಶನ್ ಅಂದ್ರೇನು ಎನ್ನುವ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

ಮೆನ್ಸ್ಟ್ರುವಲ್ (Menstrual) ಸಪ್ರೇಶನ್ ಅಂದ್ರೇನು ? : ಇದನ್ನು ಕನ್ನಡದಲ್ಲಿ ಮುಟ್ಟಿನ ನಿಗ್ರಹ ಎನ್ನಬಹುದು. ಅಂದ್ರೆ ಮುಟ್ಟ (Periods) ನ್ನು ಕಡಿಮೆ ಮಾಡುವುದು ಅಥವಾ ಮುಟ್ಟನ್ನು ಸಂಪೂರ್ಣವಾಗಿ ನಿಲ್ಲಿಸುವುದಾಗಿದೆ. ಈ ಮೆಥೆಡ್ (Method) ನಲ್ಲಿ ಮಾತ್ರೆಗಳನ್ನು ನೀಡಿ ಮುಟ್ಟನ್ನು ನಿಗ್ರಹಿಸಲಾಗುತ್ತದೆ. ಇದ್ರಲ್ಲಿ ರಕ್ತದ ಫ್ಲೋ ಕೂಡ ಕಡಿಮೆ ಮಾಡಲಾಗುತ್ತದೆ. ವೈದ್ಯ (doctor) ರ ಸಲಹೆ ಮೇರೆಗೆ ಈ ಚಿಕಿತ್ಸೆ ಪಡೆಯಬೇಕು. 

Latest Videos

undefined

ಹೆಣ್ಣು ನಂಬಬಹುದಾದ ಗಂಡಸರು ನೀವಾದರೆ ಈ ಸ್ವಭಾವಗಳು ಇರಲೇಬೇಕು!

ಯಾರು ಈ ಸಪ್ರೇಶನ್ ವಿಧಾನ ಬಳಸಬಹುದು? : ಒಮ್ಮೆ ಮುಟ್ಟಾದ ಯಾವುದೇ ಮಹಿಳೆ ಈ ಚಿಕಿತ್ಸೆ ಪಡೆಯಬಹುದು. ಹೆಚ್ಚು ಬ್ಲೀಡಿಂಗ್ ಆಗುವ, ಅಸಹನೀಯ ನೋವು ತಿನ್ನುವ ಮಹಿಳೆಯರಿಗೆ ಈ ಸಪ್ರೇಶನ್ ವಿಧಾನ ಬಳಸುವಂತೆ ವೈದ್ಯರು ಸಲಹೆ ನೀಡ್ತಾರೆ. ಶಾರೀರಿಕ ಹಾಗೂ ಮಾನಸಿಕ ವಿಕಲಾಂಗ ಮಹಿಳೆಯರು, ಮುಟ್ಟಿನ ವೇಳೆ ಸ್ವಚ್ಛತೆ ಕಾಪಾಡಲು ಸಾಧ್ಯವಾಗದ ಮಹಿಳೆಯರು, ಆರ್ಮಿಯಲ್ಲಿರುವ ಅಥವಾ ಮುಟ್ಟಿನ ಸಮಯದಲ್ಲಿ ಕಾಡುವ ನೋವನ್ನು ಸಹಿಸಲು ತಾಳಲಾಗದ ಮಹಿಳೆಯರು ಇದರ ಸಹಾಯ ಪಡೆಯಬಹುದು.  ಸಪ್ರೇಶನ್ ಮೆಥೆಡ್ ಮೊದಲು ವೈದ್ಯರು ಸಂಪೂರ್ಣ ಪರಿಶೀಲನೆ ನಡೆಸ್ತಾರೆ. ಯಾವುದಾದ್ರೂ ಸಮಸ್ಯೆ ಇದ್ದಲ್ಲಿ ಇದನ್ನು ಮುಂದುವರೆಸದಂತೆ ವೈದ್ಯರು ಸಲಹೆ ನೀಡ್ತಾರೆ.

ಇದ್ರಲ್ಲಿದೆ ಅನೇಕ ವಿಧ : ಮೊದಲ ಹಂತವೆಂದ್ರೆ ಜನನ ನಿಯಂತ್ರಣ ಮಾತ್ರೆಗಳನ್ನು ನೀಡುವುದು. ಇದ್ರಲ್ಲಿ ಮುಟ್ಟು ಸಂಪೂರ್ಣವಾಗಿ ನಿಲ್ಲೋದಿಲ್ಲ. ಬದಲಾಗಿ ಕಡಿಮೆಯಾಗುತ್ತದೆ. ನೋವು ಕಡಿಮೆಯಾಗುತ್ತದೆ. ಇನ್ನೊಂದು ಸ್ಕಿನ್ ಪ್ಯಾಚ್. ಇದ್ರಲ್ಲಿ ನಾಲ್ಕು ತಿಂಗಳಿಗೊಮ್ಮೆ ಮಹಿಳೆ ಮುಟ್ಟಾಗ್ತಾಳೆ. ಡೆಪೋ-ಪ್ರೊವ್ರಾ ಕೂಡ ಈಗಿಗ ಜಾರಿಗೆ ಬಂದ ವಿಧಾನವಾಗಿದೆ. ಮೂರು ತಿಂಗಳಿಗೊಮ್ಮೆ ಶಾರ್ಟ್ ನೀಡಬೇಕಾಗುತ್ತದೆ. ಇದನ್ನು ಅನೇಕ ಮಹಿಳೆಯರು ಬಳಸ್ತಾರೆ. ಯಾಕೆಂದ್ರೆ ಇದ್ರಲ್ಲಿ ಮುಟ್ಟು ದೀರ್ಘ ಸಮಯ ಕಾಡೋದಿಲ್ಲ. ಬಹುತೇಕ ಬಾರಿ ಇದು ಸಂಪೂರ್ಣ ನಿಲ್ಲುತ್ತದೆ. ಇನ್ನೊಂದು ಐಯುಡಿ (IUD) ವಿಧಾನವಾಗಿದೆ. ಇದ್ರಲ್ಲಿ ಗರ್ಭಾಶಯಕ್ಕೆ ಸಾಧನವನ್ನು ಸೇರಿಸಲಾಗುತ್ತದೆ. ಐದು ವರ್ಷ ಮುಟ್ಟು ನಿಲ್ಲುತ್ತದೆ. ಇದ್ರಲ್ಲಿ ಪ್ರೊಜೆಸ್ಟಿನ್ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಗರ್ಭಾಶಯದ ಒಳಪದರ ತೆಳುವಾಗುತ್ತದೆ. ರಕ್ತದ ಹರಿವು ಕ್ರಮೇಣ ನಿಲ್ಲುತ್ತದೆ. ಇದು ಗರ್ಭಾಶಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. 

ಚೆಂದದ ಕೂದಲು ನಿಮ್ಮದಾಗಬೇಕಾ? ಏನೇನೋ ಟ್ರೈ ಮಾಡೋ ಬದಲು ಇಲ್ಲಿವೆ ಈಸಿ ಟಿಪ್ಸ್

ಇದರ ಬಳಕೆ ನಂತ್ರವೂ ಅಮ್ಮನಾಗುವ ಭಾಗ್ಯ ಲಭಿಸುತ್ತಾ? : ಮಾತ್ರೆ ಸೇವನೆ ಮಾಡ್ತಿದ್ದರೆ ಅಥವಾ ಐಯುಡಿ ಬಳಸ್ತಿದ್ದರೆ ಸಂತಾನೋತ್ಪತ್ತಿ ಸಾಧ್ಯವಿಲ್ಲ. ಇದನ್ನು ನಿಲ್ಲಿಸಿದ ತಕ್ಷಣ, ಮಹಿಳೆ ಆರೋಗ್ಯವಾಗಿದ್ದರೆ ಮಗು ಪಡೆಯಲು ಸಾಧ್ಯವಾಗುತ್ತದೆ. ಆದ್ರೆ ಇದ್ರ ಬಗ್ಗೆ ಇನ್ನೂ ಅಧ್ಯಯನ ನಡೆಯುತ್ತಿದೆ. ಹದಿಹರೆಯದವರು ಇದ್ರಿಂದ ದೂರವಿರಬೇಕೆಂದು ವೈದ್ಯರು ಹೇಳ್ತಾರೆ. ಮಕ್ಕಳಾದ ಮಹಿಳೆಯರು ಇದನ್ನು ಅಳವಡಿಸಬಹುದು ಎನ್ನುತ್ತಾರೆ ವೈದ್ಯರು. ಆದ್ರೆ ಇನ್ನು ಕೆಲವರು ಇದನ್ನು ವಿರೋಧಿಸುತ್ತಾರೆ. ಮುಟ್ಟು ನೋವು, ಸಮಸ್ಯೆ ನೀಡ್ತಿದೆ ಎಂದ್ಮೇಲೆ ಅದನ್ನು ಸಹಿಸೋದ್ರಲ್ಲಿ ಅರ್ಥವಿಲ್ಲ ಎನ್ನುತ್ತಾರೆ. ಅನೇಕ ದೇಶದ ಮಹಿಳೆಯರು ಈ ಮಾರ್ಗ ಅನುಸರಿಸುತ್ತಿದ್ದಾರೆ. ಇದನ್ನು ಪಿರಿಯಡ್ಸ್ ಫಿಕ್ಸಿಂಗ್ ಎಂದೂ ಕರೆಯಲಾಗುತ್ತದೆ. ಆದ್ರೆ ಭಾರತದಲ್ಲಿ ಈ ಮೆಥೆಡ್ ಪಾಲನೆ ಮಾಡ್ತಿರುವವರ ಸಂಖ್ಯೆ ಕಡಿಮೆಯಿದೆ. 
 

click me!