ಶೇಕಡಾ 70ರಷ್ಟು ಮಹಿಳೆಯರನ್ನು ಕಾಡುವ ರೋಗವೆಂದ್ರೆ ಪಿಸಿಓಡಿ. ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಮಹಿಳೆಯರು ಪಿಸಿಓಡಿಯಿಂದ ಹೊರಬರಲು ಸಾಕಷ್ಟು ಕಷ್ಟಪಡ್ತಿದ್ದಾರೆ. ಕೆಲವೇ ಕೆಲವು ಟ್ರಿಕ್ಸ್ ಮೂಲಕ ಈ ಸಮಸ್ಯೆಯಿಂದ ರಕ್ಷಣೆ ಪಡೆಯೋದು ಹೇಗೆ ಗೊತ್ತಾ?
ಪಿಸಿಓಡಿ ಮಹಿಳೆಯರನ್ನು ಕಾಡುವ ಬಹಳ ಸಾಮಾನ್ಯವಾದ ಕಾಯಿಲೆಗಳಲ್ಲಿ ಒಂದಾಗಿದೆ. ಪಿಸಿಓಡಿ ಸಮಸ್ಯೆಯಿಂದ ಮಹಿಳೆಯರು ಗರ್ಭ ಧರಿಸಲು ಸಾಧ್ಯವಾಗುವುದಿಲ್ಲ. ಶೇಕಡಾ 70ರಷ್ಟು ಮಹಿಳೆಯರಿಗೆ ತಾವು ಪಿಸಿಓಡಿಯಿಂದ ಬಳಲುತ್ತಿದ್ದೇವೆ ಎಂಬುದು ಮೊದಲು ತಿಳಿಯೋದೇ ಇಲ್ಲ. ಚಿಕಿತ್ಸೆ ನಂತ್ರ ಇದು ಪತ್ತೆಯಾಗುತ್ತದೆ. ಹಾಗೆಯೇ ಸರಿಯಾದ ಆಹಾರ ಮತ್ತು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡರೆ ಮಾತ್ರ ಪಿಸಿಓಡಿಗೆ ಚಿಕಿತ್ಸೆ ಸಾಧ್ಯ. ಪಿಸಿಓಡಿಗೆ ಸಂಬಂಧಿಸಿದ ಕೆಲವು ವಿಷಯಗಳು ಇಲ್ಲಿವೆ. ಪಿಸಿಓಡಿ (PCOD) ಅಂದರೆ ಪಾಲಿಸಿಸ್ಟಿಕ್ ಓವರಿ ಡಿಸಾರ್ಡರ್ ಒಂದು ರೀತಿಯ ಹಾರ್ಮೋನ್ ಡಿಸಾರ್ಡರ್. ಸ್ತ್ರೀ ದೇಹದಲ್ಲಿ ಪುರುಷ ಹಾರ್ಮೋನು (Hormone) ಗಳ (ಆಂಡ್ರೋಜೆನ್) ಮಟ್ಟವು ಹೆಚ್ಚಾಗುತ್ತದೆ. ವರದಿಯ ಪ್ರಕಾರ, ಪ್ರತಿ 10 ಮಹಿಳೆಯರಲ್ಲಿ ಒಬ್ಬರು ಈ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಇದನ್ನು ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್ (ಪಿಸಿಓಎಸ್) ಎಂದೂ ಕರೆಯುತ್ತಾರೆ. ಪಿಸಿಓಎಸ್‌ನಿಂದ ಪ್ರಭಾವಿತವಾಗಿರುವ ಮಹಿಳೆಯರ ಕಂಡುಬರುತ್ತವೆ.
ತಜ್ಞರ ಪ್ರಕಾರ, ಶೇಕಡಾ 5 ರಿಂದ 10 ರಷ್ಟು ಮಹಿಳೆಯರು 15 ರಿಂದ 44 ವಯಸ್ಸಿನ ನಡುವೆಯೇ ಪಿಸಿಓಡಿ ಸಮಸ್ಯೆಗೆ ಒಳಗಾಗ್ತಾರೆ. 20 ರಿಂದ 30 ವರ್ಷ ವಯಸ್ಸಿನ ಮಧ್ಯೆ ಬಹುತೇಕ ಮಹಿಳೆಯರಿಗೆ ತಾವು ಪಿಸಿಓಡಿ ಸಮಸ್ಯೆಗೆ ಒಳಗಾಗಿದ್ದೇವೆ ಎಂಬುದು ಗೊತ್ತಾಗುತ್ತದೆ. ಪಿಸಿಓಎಸ್ ಗೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಯಾವ ವಯಸ್ಸಿನಲ್ಲಾದ್ರೂ ಈ ಸಮಸ್ಯೆ ಮಹಿಳೆಯರನ್ನು ಕಾಡಬಹುದು.
ಪಿಸಿಓಡಿ ಲಕ್ಷಣ (Symptom) : ಮುಟ್ಟಿನಲ್ಲಿ ಏರುಪೇರು ಪಿಸಿಓಡಿ ಸಮಸ್ಯೆ ಇರುವವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮುಖದ ಮೇಲೆ ಮೊಡವೆ,ಕೂದಲು, ಭಾರೀ ರಕ್ತಸ್ರಾವ, ಚರ್ಮದ ಮೇಲೆ ಕಪ್ಪು ಕಲೆಗಳು, ಕೂದಲು ಉದುರುವುದು ಅಥವಾ ತೆಳುವಾಗುವುದು, ತಲೆನೋವು ಅಥವಾ ಕಿರಿಕಿರಿ ಇವೆಲ್ಲವೂ ಪಿಸಿಓಡಿ ಲಕ್ಷಣವಾಗಿದೆ.
ಇದನ್ನೂ ಓದಿ: Kitchen Tips: ಹೆಸರು ಬೇಳೆ ಖರೀದಿಸುವಾಗ ಈ ವಿಚಾರ ಗಮನದಲ್ಲಿರಲಿ
ಪಿಸಿಓಡಿಗೆ ಚಿಕಿತ್ಸೆ : ಈ ಮೇಲಿನ ಸಮಸ್ಯೆ ನಿಮಗೆ ಕಾಣಿಸಿಕೊಳ್ತಿದ್ದರೆ ಮೊದಲನೆಯದಾಗಿ, ಸ್ತ್ರೀರೋಗತಜ್ಞರನ್ನು ಸಂಪರ್ಕಿಸಿ. ಅವರು ನಿಮಗೆ ಕೆಲವು ಔಷಧಿಗಳನ್ನು ನೀಡಬಹುದು. ಆದರೆ ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡುವುದು ಬಹಳ ಮುಖ್ಯ.
ಪಿಸಿಓಡಿ ನಿಯಂತ್ರಣಕ್ಕೆ ನಿಮ್ಮ ಆಹಾರ ಹೀಗಿರಲಿ : ಡಯಟ್ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಹೆಚ್ಚು ಫೈಬರ್, ವಿಟಮಿನ್ ಇ ಮತ್ತು ಒಮೆಗಾ 3 ಮತ್ತು 6 ಕೊಬ್ಬಿನಾಮ್ಲ ಇರುವ ಆಹಾರವನ್ನು ನೀವು ಸೇವನೆ ಮಾಡಬೇಕಾಗುತ್ತದೆ. ಕೋಸುಗಡ್ಡೆ, ಪಾಲಕ್, ಸಿಹಿ ಗೆಣಸು, ಹಸಿರು ಬೀನ್ಸ್, ಹೂಕೋಸು, ಸೋರೆಕಾಯಿ, ಕ್ಯಾರೆಟ್, ಬಾಳೆಹಣ್ಣು, ಸೇಬು ಹಣ್ಣು, ನೇರಳೆ ಹಣ್ಣು, ಪೇರಲ ಹಣ್ಣು, ಅನಾನಸ್, ಪಪ್ಪಾಯಿ, ದಾಳಿಂಬೆ ಹಣ್ಣು ಮತ್ತು ಹೆಸರುಬೇಳೆ,ಸೋಯಾಬೀನ್, ಬ್ರೌನ್ ರೈಸ್ ಮತ್ತು ಕಡಲೆ ಇತ್ಯಾದಿ ಆಹಾರವನ್ನು ಸೇವನೆ ಮಾಡಬೇಕಾಗುತ್ತದೆ.
ಇದನ್ನೂ ಓದಿ: Kitchen Hacks: ಫ್ರೈಡ್ ಪನೀರ್ ಮೃದುವಾಗ್ಬೇಕೆಂದ್ರೆ ಈ ಟಿಪ್ಸ್ ಬಳಸಿ
ಪಿಸಿಓಡಿ ಸಮಸ್ಯೆಯಿರುವವರು ಇದ್ರಿಂದ ದೂರವಿರಿ : ಹೊರಗೆ ಸಿಗುವ ಆಹಾರದಿಂದ ದೂರ ಇರುವುದು ಬಹಳ ಒಳ್ಳೆಯದು. ಯಾವುದೇ ಕಾರಣಕ್ಕೂ ಪ್ಯಾಕ್ಡ್ ಫುಡ್ ಸೇವನೆ ಮಾಡಲು ಹೋಗ್ಬೇಡಿ. ಸಿಹಿ ಪದಾರ್ಥಗಳ ಸೇವನೆಯನ್ನು ತಪ್ಪಿಸುವುದು ಒಳ್ಳೆಯದು. ಒಂದೇ ಬಾರಿ ಅತಿಯಾಗಿ ಆಹಾರ ಸೇವನೆ ಮಾಡುವ ಬದಲು, ಆಗಾಗ ಸ್ವಲ್ಪ ಆಹಾರ ಸೇವನೆ ಮಾಡ್ತಿದ್ದರೆ ಒಳ್ಳೆಯದು. ತೂಕ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಇದಲ್ಲದೆ ದಿನಚರಿ ಬದಲಿಸಬೇಕು. ಬೇಗ ಏಳುವುದು ಹಾಗೂ ಬೇಗ ಮಲಗುವುದರ ಜೊತೆಗೆ ನೀವು ಯೋಗ ಅಥವಾ ವ್ಯಾಯಾಮವನ್ನು ನಿಯಮಿತವಾಗಿ ಮಾಡ್ಬೇಕು. ಹಾಗೆಯೇ ಒತ್ತಡದಿಂದ ದೂರವಿರುವುದು ಕೂಡ ಬಹಳ ಅವಶ್ಯಕ.
ನಿಮ್ಮ ಜೀವನ ಶೈಲಿ ಆರೋಗ್ಯಕರವಾಗಿದ್ದರೆ ರೋಗ ನಿಧನವಾಗಿ ಕಡಿಮೆಯಾಗುತ್ತದೆ. ಆಹಾರ ನಿಯಂತ್ರಣದ ಮೂಲಕವೇ ನೀವು ಪಿಸಿಓಡಿಯಿಂದ ಮುಕ್ತಿ ಪಡೆಯಬಹುದು. ಆದ್ರೆ ತಾಳ್ಮೆ ಹಾಗೂ ಒತ್ತಡ ರಹಿತ ಜೀವನ ಅವಶ್ಯಕ.