ಮಹಿಳೆಯರ ಅನಿಯಮಿತ ಋತುಸ್ರಾವ ಸ್ತ್ರೀ ಶಕ್ತಿಹೀನತೆ ಅಲ್ಲ: ಮದ್ರಾಸ್ ಹೈಕೋರ್ಟ್

By Gowthami KFirst Published Aug 11, 2022, 7:43 PM IST
Highlights

ಹಾರ್ಮೋನ್ ಅಸಮತೋಲನ, ಅನಿಯಮಿತ ಋತುಸ್ರಾವ  ಮಹಿಳೆಯರ ದುರ್ಬಲತೆ ಎಂದು ಪರಿಗಣಿಸಲಾಗುವುದಿಲ್ಲ ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.
 

ಚೆನ್ನೈ (ಆ.11): ಹಾರ್ಮೋನುಗಳ ವ್ಯತ್ಯಾಸವಾಗುವುದು ಮತ್ತು ಅನಿಯಮಿತ ಮುಟ್ಟನ್ನು ಮಹಿಳೆಯರ ದುರ್ಬಲತೆ ಎಂದು ಪರಿಗಣಿಸಲಾಗುವುದಿಲ್ಲ ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.  ಈ ಮೂಲಕ ಪತ್ನಿಯ ಹಾರ್ಮೋನ್ ಅಸಮತೋಲನ, ಅನಿಯಮಿತ ಋತುಸ್ರಾವ ಮತ್ತು ಜನನಾಂಗಗಳನ್ನು ಪರೀಕ್ಷಿಸಲು ಪತ್ನಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆ ಕೋರಿ ಪತಿಯು ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಮದ್ರಾಸ್ ಹೈಕೋರ್ಟ್  ರದ್ದುಗೊಳಿಸಿದೆ. ಪತಿಯ ಅಸಹಕಾರದಿಂದ ಮದುವೆ ಎಂಬುದು ಸಂಪೂರ್ಣವಾಗಿಲ್ಲ  ಎಂದು ಪತ್ನಿ   ವಿವರಿಸಿದಾಗ, ವೈದ್ಯಕೀಯ ಪರೀಕ್ಷೆಗೆ ಆದೇಶ ಸರಿಯಾಗಿಲ್ಲ ಎಂದು ನ್ಯಾಯಮೂರ್ತಿ ಆರ್.ಎನ್.ಮಂಜುಳಾ ಅಭಿಪ್ರಾಯ ಪಟ್ಟರು. ಅರ್ಜಿದಾರರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವುದು ಮತ್ತು ಆಕೆಯ ಜನನಾಂಗಗಳನ್ನು ಪರೀಕ್ಷಿವುದು ಆಕೆಯ ಸ್ವಾಭಿಮಾನದ ಮೇಲೆ  ಪರಿಣಾಮ ಬೀರುತ್ತದೆ ಎಂದು ಏಕ ಸದಸ್ಯಪೀಠವು ಅಭಿಪ್ರಾಯಪಟ್ಟಿತು. ತನ್ನ ಪತ್ನಿ ವೈವಾಹಿಕ ಜೀವನಕ್ಕೆ ಅನರ್ಹಳು, ಸಂಭೋಗಕ್ಕೆ ಸಹಕರಿಸಲಿಲ್ಲ ಮತ್ತು ಹೀಗಾಗಿ ಮದುವೆಯನ್ನು ರದ್ದುಗೊಳಿಸುವಂತೆ ಪತಿ ವಿಚಾರಣಾ ನ್ಯಾಯಾಲಯದ ಮೊರೆ ಹೋಗಿದ್ದರು. 

ಅನಿಯಮಿತ ಪಿರಿಯಡ್ಸ್‌ನಿಂದ ಉಂಟಾಗುವ ಹಾರ್ಮೋನ್ ಅಸಮತೋಲನದಿಂದ ಅವಳು ಸಹಕರಿಸಲಿಲ್ಲ. ಈ ವಿಚಾರವನ್ನು ಬಹಿರಂಗಪಡಿಸದೆ ತನಗೆ ಪತ್ನಿ ಮೋಸ ಮಾಡಿದ್ದಾಳೆ ಎಂಬುದು ಪತಿಯ ವಾದವಾಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯ ಪತ್ನಿಯ ವೈದ್ಯಕೀಯ ಪರೀಕ್ಷೆಗೆ ಕರೆ ನೀಡಿತ್ತು.  ಆಕೆಯ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆದಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಪರೀಕ್ಷೆಯು ಮೂಲ ಅರ್ಜಿಯ ವ್ಯಾಪ್ತಿಯನ್ನು ಮೀರಿದೆ ಎಂಬ ಕಾರಣಕ್ಕಾಗಿ ಪತ್ನಿ ಇದನ್ನು ಪ್ರಶ್ನಿಸಿದ್ದಳು. 

ಇದಕ್ಕೆ ಪತಿಯು ವೈದ್ಯಕೀಯ ಪರೀಕ್ಷೆಯನ್ನು ಪತ್ನಿ ನಿರಾಕರಿಸಿದ್ದಾಳೆ ಮತ್ತು ಸ್ವತಃ ಅಸುರಕ್ಷಿತ ಭಾವನೆಯನ್ನು ಅನುಭವಿಸಿದ್ದಾಳೆ. ಎಂದು ಆಕೆಯ ಅಸಾಮರ್ಥ್ಯಕ್ಕಾಗಿ  ದೂಷಿಸಿದ. ವಾಸ್ತವಾಂಶಗಳನ್ನು ಪರಿಗಣಿಸಿ, ವಿಚಾರಣಾ ನ್ಯಾಯಾಧೀಶರು ಎರಡೂ ಕಡೆಯವರಿಗೆ ವೈದ್ಯಕೀಯ ಪರೀಕ್ಷೆ ನಡೆಸುವಂತೆ ಆದೇಶಿಸಿದ್ದರೆ ಉತ್ತಮ ಎಂದು ಮದ್ರಾಸ್ ನ್ಯಾಯಾಲಯ ಹೇಳಿದೆ. 

Relationship Tips: ನೀವಲ್ಲದಿದ್ದರೆ ಮತ್ತೊಬ್ಬರು ಎನ್ನುತ್ತಾರೆಯೇ ನಿಮ್ಮ ಸಂಗಾತಿ? ಚೆಕ್‌ ಮಾಡಿ

"ಮಹಿಳೆಯರ ಹಾರ್ಮೋನ್ ಅಸಮತೋಲನ ಅಥವಾ ಅನಿಯಮಿತ ಮುಟ್ಟನ್ನು ಸ್ತ್ರೀ ಶಕ್ತಿಹೀನತೆ ಎಂದು ಪರಿಗಣಿಸಲಾಗುವುದಿಲ್ಲ ಅಥವಾ ಅವಳು ಲೈಂಗಿಕತೆಯನ್ನು ಹೊಂದಲು ಅನರ್ಹಳು" ಎಂದು  ಪರಿಗಣಿಸಲು ಆಗುವುದಿಲ್ಲ ಎಂದು ನ್ಯಾಯಾಲಯ ಹೇಳಿತು. ಇದಲ್ಲದೆ, ಪತ್ನಿ ಈಗಾಗಲೇ ತನ್ನ ಅಫಿಡವಿಟ್‌ನಲ್ಲಿ ಆ ಸಂಗತಿಗಳನ್ನು ಹೇಳಿರುವುದರಿಂದ, ಅವಳನ್ನು ನ್ಯಾಯಾಲಯದ ಆದೇಶದ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವುದು ಅನಗತ್ಯ ಎಂದು ಅಭಿಪ್ರಾಯಪಟ್ಟಿತು.

Sexual Health: ಸಂಗಾತಿ ಜೊತೆ ಸಂಭೋಗದ ವೇಳೆ ಶಿಶ್ನ ಮುರಿತ, ವಿಚಿತ್ರ ನಡೆಯಲು ಇದೇ ಕಾರಣ

ಸಕ್ರಿಯ ಲೈಂಗಿಕ ಜೀವನವನ್ನು ಹೊಂದಲು ಸಹಕರಿಸದ ಕಾರಣ ಮಾನಸಿಕ ಕ್ರೌರ್ಯವನ್ನು ಆರೋಪಿಸಿ ಪತಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರೆ, ಅದು ವಿಭಿನ್ನವಾಗಿತ್ತು ಎಂದು ನ್ಯಾಯಾಲಯ ಹೇಳಿತು. ಆದ್ದರಿಂದ, ವಿಚಾರಣೆಯು ತೀರ್ಪು ಪ್ರಕಟಿಸುವ ಹಂತದಲ್ಲಿದೆ ಎಂದು ಕಂಡುಹಿಡಿದ ನ್ಯಾಯಾಲಯ, ಹಾರ್ಮೋನುಗಳ ಅಸಮತೋಲನದ ಬಗ್ಗೆ ಒಪ್ಪಿಕೊಂಡ ಸತ್ಯಗಳನ್ನು ದೃಢೀಕರಿಸಲು ಹೆಂಡತಿಯನ್ನು ವೈದ್ಯಕೀಯ ಪರೀಕ್ಷೆಗೆ ಹೋಗಲು ನಿರ್ದೇಶಿಸುವ ಬದಲು ಲಭ್ಯವಿರುವ ಸಾಕ್ಷ್ಯವನ್ನು ಅವಲಂಬಿಸಿ ಆದೇಶಗಳನ್ನು ನೀಡುವಂತೆ ವಿಚಾರಣಾ ನ್ಯಾಯಾಧೀಶರನ್ನು ಕೇಳಿತು.  ಅರ್ಜಿದಾರರ ಪರ ವಕೀಲ ವಿ ವಿಜಯಕುಮಾರ್ ವಾದ ಮಂಡಿಸಿದರೆ, ಪ್ರತಿವಾದಿ ಪರ ವಕೀಲ ಎಸ್ ಸಿತಿರೈ ಆನಂದನ್ ವಾದ ಮಂಡಿಸಿದ್ದರು.

click me!