ಅಡುಗೆಯಲ್ಲಿ ಎಷ್ಟೇ ಪರಿಣಿತಿ ಪಡೆದಿದ್ರೂ ಕೆಲವೊಮ್ಮೆ ಯಡವಟ್ಟಾಗುತ್ತದೆ. ಮನೆಗೆ ನೆಂಟರು ಬಂದಾಗ್ಲೇ ರುಚಿ ಕೆಡೋದು ಹೆಚ್ಚು. ಅಡುಗೆಗೆ ನಾಲ್ಕು ಕಾಳು ಉಪ್ಪು ಜಾಸ್ತಿ ಬಿದ್ದಿದೆ ಅಂದ್ರೆ ತಲೆಕೆಡಿಸಿಕೊಳ್ಬೇಡಿ. ಅದಕ್ಕೆ ಈ ಟಿಪ್ಸ್ ಫಾಲೋ ಮಾಡಿ.
ಆಹಾರ ತಯಾರಿಸೋದು ಕೂಡ ಒಂದು ಕಲೆ. ಅಡುಗೆಯಲ್ಲಿ ಆಸಕ್ತಿ ಇರೋದು ಬಹಳ ಮುಖ್ಯ. ಹಿಂಗು, ತೆಂಗು ಇದ್ರೆ ಮಂಗ ಕೂಡ ಅಡುಗೆ ಮಾಡುತ್ತೆ ಎಂಬ ಮಾತಿದೆ. ಅಡುಗೆಯನ್ನು ಎಲ್ಲರೂ ತಯಾರಿಸ್ತಾರೆ ಆದ್ರೆ ರುಚಿಯಾದ, ಮತ್ತೆ ಮತ್ತೆ ತಿನ್ನಬೇಕೆನ್ನಿಸುವ ಅಡುಗೆ ಮಾಡೋದು ಸುಲಭದ ಕೆಲಸವಲ್ಲ. ತರಕಾರಿ ಎಷ್ಟು ಬೇಯಬೇಕು, ತರಕಾರಿಗೆ ಎಷ್ಟು ಮಸಾಲೆ ಹಾಕ್ಬೇಕು, ಉಪ್ಪು, ಹುಳಿ, ಖಾರವನ್ನು ಎಷ್ಟು ಹಾಕ್ಬೇಕು ಮತ್ತೆ ಯಾವಾಗ ಹಾಕ್ಬೇಕು ಈ ಎಲ್ಲ ಸಂಗತಿ ತಿಳಿದಿರಬೇಕಾಗುತ್ತದೆ. ಅನೇಕ ಬಾರಿ ಸ್ನೇಹಿತರು ಹೇಳಿದ ರೀತಿಯಲ್ಲೇ ಅಡುಗೆ ಮಾಡಿರ್ತೇವೆ. ಆದ್ರೆ ಅವರು ಮಾಡಿದ ರುಚಿ ನಮ್ಮಡಿಗೆಯಲ್ಲಿ ಬಂದಿರೋದಿಲ್ಲ. ಇದಕ್ಕೆ ಅನೇಕ ಕಾರಣವಿದೆ. ತರಕಾರಿ ಫಟಾ ಫಟ್ ನೀರಿನಲ್ಲಿ ಬೆಂದಿರುತ್ತದೆ. ಆದ್ರೆ ರುಚಿ ಹಾಳಾಗಿರುತ್ತದೆ. ಉಪ್ಪು,ಖಾರದ ಬಗ್ಗೆ ಗೊಂದಲ ನಮಗಿರುತ್ತದೆ. ಇದೆಲ್ಲದಕ್ಕೂ ಪರಿಹಾರ ಇಲ್ಲಿದೆ. ಬಾಯಿ ಚಪ್ಪಿಸುವಂತಹ ಅಡುಗೆ ಹೇಗೆ ಮಾಡೋದು ಎನ್ನುವುದಕ್ಕೆ ಕೆಲವೊಂದು ಟಿಪ್ಸ್ ಇಲ್ಲಿದೆ.
ಅನೇಕ ಬಾರಿ ಅಡುಗೆ ಮಾಡುವಾಗ ನಾವು ಮಾಡುವ ಕೆಲವು ಸಣ್ಣ ತಪ್ಪುಗಳಿಂದ ನಮ್ಮ ಆಹಾರ ಬೇಗ ಬೆಂದಿರುತ್ತದೆ. ನೀವು ಈ ತಪ್ಪುಗಳನ್ನು ಸರಿಪಡಿಸಿದರೆ ನಿಮ್ಮ ಆಹಾರ ಎಂದಿಗೂ ರುಚಿ ಕಳೆದುಕೊಳ್ಳುವುದಿಲ್ಲ.
undefined
ಒಂದು ಸಬ್ಜಿ ಮಾಡ್ತಿದ್ದೇವೆ ಎಂದುಕೊಳ್ಳೋಣ. ಒಲೆ ಮೇಲೆ ತರಕಾರಿ (Vegetable) ಬೇಯಿಸಲು ಇಟ್ಟು ನಾವು ಉಳಿದ ಮಸಾಲೆ (Spice) ಗಳನ್ನು ಹುಡುಕ್ತಿರುತ್ತೇವೆ. ಮಸಾಲೆ, ಮೆಣಸು, ಈರುಳ್ಳಿ (Onion) ಹೀಗೆ ಒಂದೊಂದೇ ತಂದು ಮಿಕ್ಸ್ ಮಾಡುವ ವೇಳೆಗೆ ಇಲ್ಲಿ ತರಕಾರಿ ಅತಿಯಾಗಿ ಬೆಂದಿರುತ್ತದೆ. ಇನ್ನೂ ಕೆಲವೊಮ್ಮೆ ಈ ಎಲ್ಲ ಪದಾರ್ಥ ಹೊಂದಿಸುವ ಭರದಲ್ಲಿ ನಾವು ಗ್ಯಾಸ್ (Gas) ಒಲೆ ಉರಿಯನ್ನು ಸಣ್ಣ ಮಾಡಲು ಮರೆತಿರುತ್ತೇವೆ. ಇದ್ರಿಂದಲೂ ಆಹಾರ ಮಿತಿಗಿಂತ ಹೆಚ್ಚು ಬೆಂದಿರುತ್ತದೆ. ಈ ತಪ್ಪು ಆಗ್ಬಾರದು ಅಂದ್ರೆ ನಾವು ಮೊದಲೇ ಅಡುಗೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಯಾವ ಆಹಾರ ತಯಾರಿಸ್ತಿದ್ದೇವೆ, ಅದಕ್ಕೆ ಏನೇನು ಪದಾರ್ಥ ಬೇಕು ಎಂಬುದನ್ನು ಮೊದಲು ಪಟ್ಟಿ ಮಾಡಿ, ಅದನ್ನು ಗ್ಯಾಸ್ ಒಲೆ ಬಳಿ ಇಟ್ಟುಕೊಳ್ಳಬೇಕು. ಇದರ ಹೊರತಾಗಿ ಈರುಳ್ಳಿ-ಟೊಮೆಟೊ (Tomato) ಕತ್ತರಿಸಿ ಅದನ್ನು ನಮ್ಮ ಬಳಿ ಇಟ್ಟುಕೊಂಡಿರಬೇಕು.
ಇದನ್ನೂ ಓದಿ: ಕೆಟ್ಟ ಕೊಬ್ಬು ಬೇಡ ಅಂದ್ರೆ ಈ ಆಹಾರಗಳಿಗೆ ಬೈ ಬೈ ಹೇಳಿ
ಉಪ್ಪು (Salt) – ಖಾರ ಹೆಚ್ಚಾದ್ರೆ ಹೀಗೆ ಮಾಡಿ :
ಅಡುಗೆ ರುಚಿಯಾಗಿ ಆಗ್ಬೇಕೆಂದ್ರೆ ಏನು ಮಾಡ್ಬೇಕು ಎಂಬುದನ್ನು ತಿಳಿದ್ವಿ. ಅನೇಕ ಬಾರಿ ಅಡುಗೆ ಮಾಡುವಾಗ, ಉಪ್ಪು ಮತ್ತು ಮೆಣಸು ಆಹಾರ (Food) ದಲ್ಲಿ ಹೆಚ್ಚಾಗುತ್ತದೆ. ಇದರಿಂದ ಆಹಾರದ ರುಚಿ ಹಾಳಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ನಮಗೆ ತಿಳಿಯೋದಿಲ್ಲ. ಖಾರದ ಪದಾರ್ಥ ಸೇವನೆ ಮಾಡೋದು ಕಷ್ಟವಾಗುತ್ತದೆ. ಹಾಗಂತ ಎಸೆಯಲು ಮನಸ್ಸು ಬರೋದಿಲ್ಲ. ಒಂದ್ವೇಳೆ ನಿಮ್ಮ ಆಹಾರಕ್ಕೆ ಖಾರ ಹೆಚ್ಚಾಗಿದ್ದರೆ, ಮೆಣಸನ್ನು ಹೆಚ್ಚಿನ ಪ್ರಮಾಣದಲ್ಲಿ ಹಾಕಿದ್ದರೆ ಅದರ ಖಾರ ಕಡಿಮೆ ಮಾಡಲು ನಾವು ಸುಲಭ ಉಪಾಯ ಹೇಳ್ತೇವೆ. ನಿಮ್ಮ ಪದಾರ್ಥಕ್ಕೆ ನೀವು ಕೆನೆ, ಮೊಸರು ಅಥವಾ ಹಾಲನ್ನು ಸೇರಿಸಬಹುದು. ಡೈರಿ ಉತ್ಪನ್ನಗಳು ಮೆಣಸಿನಕಾಯಿಯ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ನಿಮ್ಮ ಆಹಾರದಲ್ಲಿರುವ ಖಾರ ಕಡಿಮೆಯಾಗುತ್ತದೆ.
ಇದನ್ನೂ ಓದಿ: KITCHEN HACKS: ಫ್ರೈಡ್ ಪನೀರ್ ಮೃದುವಾಗ್ಬೇಕೆಂದ್ರೆ ಈ ಟಿಪ್ಸ್ ಬಳಸಿ
ಇದಲ್ಲದೆ, ಆಹಾರದಲ್ಲಿ ಒಮ್ಮೊಮ್ಮೆ ಉಪ್ಪು ಹೆಚ್ಚಾಗಿರುತ್ತದೆ. ಆಹಾರಕ್ಕೆ ಉಪ್ಪು ಬೇಕು ನಿಜ. ಆದ್ರೆ ಉಪ್ಪು ಹೆಚ್ಚಾದ್ರೆ ತಿನ್ನೋದು ಕಷ್ಟ. ಆಹಾರಕ್ಕೆ ಉಪ್ಪು ಜಾಸ್ತಿಯಾಗಿದೆ ಅನ್ನಿಸಿದ್ರೆ ಆಲೂಗಡ್ಡೆ ತುಂಡುಗಳನ್ನು ಆಹಾರದಲ್ಲಿ ಹಾಕಿ. ಆಲೂಗಡ್ಡೆಯಲ್ಲಿರುವ ಪಿಷ್ಟವು ಸ್ಪಂಜಿನಂತೆ ಕಾರ್ಯನಿರ್ವಹಿಸುತ್ತದೆ ಮತ್ತು ಆಹಾರದಲ್ಲಿರುವ ಹೆಚ್ಚುವರಿ ಉಪ್ಪನ್ನು ಹೀರಿಕೊಳ್ಳುತ್ತದೆ. ಇದು ನಿಮ್ಮ ಆಹಾರದ ರುಚಿಯನ್ನು ಸುಧಾರಿಸುತ್ತದೆ.